ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು

ಇಡಗುಂಜಿ ಗಣಪತಿ ದೇವಸ್ಥಾನ

ಕರಾವಳಿಯ ಪ್ರಸಿದ್ಧ ಆರು ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿಗೆ ವಿಶೇಷ ಸ್ಥಾನ. ಏಕೆಂದರೆ ಇಲ್ಲಿಗೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಚೌತಿಯಂದು ಹಾಗೂ ಸಂಕಷ್ಟಿಯಂದು ೫೦೦೦೦ ಕ್ಕೂ ಮೇಲ್ಪಟ್ಟಿನ ಜನಸಾಗರ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಿಂದ ೧೪ ಕಿ.ಮೀ ದೂರವಿರುವ ನಿಸರ್ಗ ರಮಣೀಯ ಕ್ಷೇತ್ರ. ಹಿಂದೆ ಈ ಕ್ಷೇತ್ರಕ್ಕೆ ಇಡಕುಂಜಾವನ, ಕುಂಜವನ, ಗುಂಜಾವನ ಎಂಬ ಪುರಾತನ ಹೆಸರುಗಳಿವೆ. ಕರಾವಳಿಯ ಹಲವು ಕ್ಷೇತ್ರಗಳಂತೆ ಈ ಕ್ಷೇತ್ರಕ್ಕೂ ಪುರಾತನ ಹೆಸರುಗಳಿವೆ.

field_vote: 
Average: 3 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು: ಹಟ್ಟಿಯಂಗಡಿ (ಹಟ್ಟಿಅಂಗಡಿ)

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳಲ್ಲಿ ಒಂದಾದ ಹಟ್ಟಿಯಂಗಡಿ ಗಣಪತಿ ದೇವಸ್ಥಾನವು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿದೆ. ಕುಂದಾಪುರದಿಂದ ಸುಮಾರು ೮ ಕಿ.ಮೀ ದೂರದಲ್ಲಿರುವ ನಿಸರ್ಗ ರಮಣೀಯ ಕ್ಷೇತ್ರವಿದು. ಹಟ್ಟಿಯಂಗಡಿ ಒಂದು ಸಣ್ಣ ಹಳ್ಳಿ. ಇಲ್ಲಿ ಗಣಪನ ವಾಸ. ದೇವಸ್ಥಾನ ಸಣ್ಣವಾಗಿ ಕಂಡರೂ ಬಹಳ ಪ್ರಸಿದ್ಧಿ ಪಡೆದಿದೆ. ಈ ದೇವಳದಲ್ಲಿ ನವಗ್ರಹ ಮಂದಿರ ಕೂಡ ಇದೆ. ಗರ್ಭಗುಡಿಯ ಸುತ್ತಲೂ ವಿವಿಧ ಭಂಗಿಯ ಗಣಪತಿ ಮೂರ್ತಿಗಳಿವೆ (ಊರ್ಧ್ವ, ಹೇರಂಬ, ನೃತ್ಯ ಮುಂತಾದವು).

 


ಹಿನ್ನೆಲೆ:
ಪಶ್ಚಿಮಾಭಿಮುಖವಾಗಿ ಹರಿಯುವ ವರಾಹಿ ನದಿ ಉತ್ತರ ದಂಡೆಯ ಮೇಲೆ ಇರುವ ಪುಟ್ಟ ಗ್ರಾಮ ಹಟ್ಟಿಯಂಗಡಿ. ಸುಮಾರು ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ. ’ಹಟ್ಟಿಯಂಗಡಿ’ ಎಂಬ ಹೆಸರಿನ ಗ್ರಾಮಕ್ಕೆ ಹಿಂದೆ ’ಪಟ್ಟಿ-ಪಟ್ಟಿಯ’ನಗರ ಎಂಬ ಹೆಸರಿತ್ತು. ಇದಕ್ಕೆ ಶಾಸನಾಧಾರಗಳಿವೆ. ತುಳುನಾಡು ಆಳಿದ ಪ್ರಪ್ರಥಮ ರಾಜವಂಶದ ಆಳುಪ ರಾಜರ ಹೆಸರಿನಲ್ಲಿ ’ಪಟ್ಟಿ’ ಪ್ರಮುಖವಾಗಿ ಕಾಣಿಸಿಕೊಂಡಿದೆ. ಪಟ್ಟಿ ಅಥವಾ ಹಟ್ಟಿ ಎಂದರೆ ಒಂದು ಕಿರುಗ್ರಾಮ, ಒಂದು ಗುಂಪಿನವರು ವಾಸಿಸುವ ಸ್ಥಳ, ಮನೆ, ಬೀಡು ಎಂಬಿತ್ಯಾದಿ ಅರ್ಥಗಳು ಇವೆ. ಹಟ್ಟಿಯಂಗಡಿಯಲ್ಲೇ ಎರಡು ಪ್ರಾಚೀನವಾದ ಗಣಪತಿ ವಿಗ್ರಹಗಳಿವೆ. ಒಂದು ಲೋಕನಾಥೇಶ್ವರ ದೇವಸ್ಥಾನದಲ್ಲಿ (ಈ ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ) ಮತ್ತೊಂದು ಸಿದ್ಧಿವಿನಾಯಕ ದೇವಸ್ಥಾನದಲ್ಲಿದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು: ಕುಂಭಾಸಿ

ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕುಂಭಾಸಿ ಗಣಪತಿ ದೇವಸ್ಥಾನವು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿದೆ. ಇದು ಕರಾವಳಿಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು. ಉಡುಪಿಯಿಂದ ಸುಮಾರು ೩೦ ಕಿ.ಮೀ ಮತ್ತು ಕುಂದಾಪುರದಿಂದ ಸುಮಾರು ೭ ಕಿ.ಮೀ ದೂರದಲ್ಲಿರುವ ನಿಸರ್ಗ ರಮಣೀಯ ಕ್ಷೇತ್ರವಿದು. ಈ ಕ್ಷೇತ್ರ ರಾಹೆ-೧೭ರ ಬಳಿಯಿದೆ. ದೇವಸ್ಥಾನದ ಬಳಿ ಇರುವ ಮೆಟ್ಟಿಲುಗಳಲ್ಲಿ ಇಳಿದು ಹೋದರೆ ಶಿವನ ದೇವಸ್ಥಾನವೂ ಇದೆ. ಈ ದೇವಸ್ಥಾನದಲ್ಲಿ ಪುಷ್ಕರಿಣಿ ಕೂಡ ಇದೆ. ಕರಾವಳಿಯ ಅನೇಕ ದೇವಸ್ಥಾನಗಳು ಒಂದೋ ನದಿಯ ಬಳಿ ಇರುತ್ತವೆ ಇಲ್ಲವಾದಲ್ಲಿ ಪುಷ್ಕರಿಣಿ ಇರುತ್ತದೆ. ಪರಶುರಾಮ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದ ಕರಾವಳಿಯ ಕನ್ನಡ ಜಿಲ್ಲೆಗಳಿರುವ ಉಡುಪಿ, ಸುಬ್ರಹ್ಮಣ್ಯ, ಕುಂಭಾಸಿ, ಕೋಟೇಶ್ವರ, ಶಂಕರನಾರಾಯಣ, ಗೋಕರ್ಣ, ಕೊಲ್ಲೂರು- ಹೀಗೆ ಸಪ್ತಕ್ಷೇತ್ರಗಳು ಪವಿತ್ರ ಸ್ಥಳಗಳಾಗಿವೆ. ಕುಂಭಾಸಿ ಪೇಟೆಯ ಬೆಟ್ಟದ ಮೇಲೆ (ಆನೆಗುಡ್ಡೆಯಲ್ಲಿ) ಶ್ರೀ ವಿನಾಯಕ ವಿರಾಜಿಸುತ್ತಿರುವನು. ಆನೆಗುಡ್ಡೆಗೆ ವೇಲಾವನದ ಭಾಗವಾದ ಮಧುವನವೆಂದೂ, ನಾಗಾಚಲವೆಂದೂ ಹೆಸರು ಪಡೆದಿದೆ. ದೇವಸ್ಥಾನ ಬಹಳ ಪುರಾತನವಾಗಿದ್ದು, ಜೀರ್ಣಾವಸ್ಥೆಯಲ್ಲಿದ್ದ ದೇವಳವನ್ನು ೧೯೮೫ರಲ್ಲಿ ಉದ್ದಾರ ಮಾಡಲಾಗಿದೆ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು

ಮಧೂರುಗಣೇಶ ಚತುರ್ಥಿಯಂದು ಕರಾವಳಿಯ ಅನೇಕ ಕಡೆ ಒಂದು ಹಾಡು ಕೇಳಿಬರುತ್ತದೆ. ಇದರ ಸಾಹಿತ್ಯ ಸರಿಯಾಗಿ ತಿಳಿದಿಲ್ಲ. ಆ ಹಾಡಿನಲ್ಲಿ ಕೆಳಗಿನ ಚರಣ ಬರುತ್ತದೆ. ಈ ಚರಣದಲ್ಲಿ ಕರಾವಳಿಯ ಪ್ರಸಿದ್ಧ ಗಣಪತಿ ದೇವಾಲಯಗಳ ಹೆಸರುಗಳಿವೆ.

"ಮಧೂರು ಗಣಪತಿ ಶರವು ಗಣಪತಿ ಕುಂಭಾಸಿ ಗಣಪತಿ ಶರಣಂ
ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ ಗೋಕರ್ಣ ಗಣಪತಿ ಶರಣಂ"

ಈ ದೇವಸ್ಥಾನಗಳ ವಿಶೇಷತೆಯೆಂದರೆ (ಒಂದೆರಡು ಬಿಟ್ಟು) ಅಪಾರ ಪ್ರಕೃತಿ ಸೌಂದರ್ಯದಿಂದ ಆವರಿಸಿದೆ. ಇಲ್ಲಿ ನಾನು ಸಂಕ್ಷಿಪ್ತ ವಿವರಣೆಯನ್ನು ನೀಡಿದ್ದೇನೆ. ವಿಸ್ತಾರವಾಗಿ ಸಮಯವಿದ್ದಾಗ ಬರೆಯುತ್ತೇನೆ. ಈ ದೇವಸ್ಥಾನಗಳು ಎಷ್ಟು ಪ್ರಸಿದ್ಧಿ ಎಂದರೆ ಕರಾವಳಿಯ ಬಿರುಸಿನ ಮಳೆಗಾಲದ ಮಧ್ಯೆಯೂ ಗಣೇಶ ಚತುರ್ಥಿಯಂದು ಬಹಳ ಜನ ಸೇರುತ್ತಾರೆ. ಗಣಪತಿ ದೇವಸ್ಥಾನ ಎಂದು ಎಲ್ಲೂ ಇಲ್ಲ. ಗಣಪತಿ ಜೊತೆಗೆ ಶಿವನೂ ಇರುವನು. ಹಾಗೆ ಈ ಎಲ್ಲಾ ದೇವಸ್ಥಾನಗಳಿಗೂ ಐತಿಹಾಸಿಕ ಹಿನ್ನೆಲೆ ಇದೆ.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು