ಕನ್ನಡ

ಸಂಬಂಧಗಳು! ಸಂಬಂಧಗಳು!

ಈಚೆಗೆ ಏನೋ ಯೋಚಿಸುತ್ತಾಗ ಕನ್ನಡದಲ್ಲಿ ಹತ್ತಿರದ ಸಂಬಂಧಗಳನ್ನು ತೋರಿಸುವ ಪದಗಳನ್ನು ನೋಡುತ್ತಿದ್ದಾಗ ಹೊಳೆದಿದ್ದಿದು:
 
ಕನ್ನಡದಲ್ಲಿ ಗಂಡು ಸಂಬಂಧಗಳಿಗಿರುವ ಪದಗಳನ್ನು ನೋಡಿ:- ಅಪ್ಪ, ಅಣ್ಣ, ತಮ್ಮ, ಮೈದುನ, ಮಾವ, ಚಿಕ್ಕಪ್ಪ, ಗಂಡ, ಮಗ, ಅಜ್ಜ - ಇವೆಲ್ಲವೂ ’ಅ’ಕಾರದಲ್ಲಿ ಕೊನೆಗೊಳ್ಳುತ್ತವೆ.ಇನ್ನು ಹೆಣ್ಣು ಸಂಬಂಧಿಗಳಿಗೆ ತಂಗಿ, ನಾದಿನಿ, ಓರಗಿತ್ತಿ , ಹೆಂಡತಿ, ನೆಗೆಣ್ಣಿ, ಚಿಕ್ಕಿ (ಚಿಕ್ಕಮ್ಮನಿಗೆ) - ಇವೆಲ್ಲವೂ ಇಕಾರದಲ್ಲಿ ಮುಗಿಯುತ್ತವೆ. ಎಲ್ಲವೂ ಹೀಗೇ ಇದ್ದರೆ ಎಷ್ಟು ಸೊಗಸಲ್ಲವೇ ? ಕನ್ನಡವನ್ನು ಕಲಿಯುವವರಿಗೆ, ಕನ್ನಡ ಒಂದೇ ಏಕೆ, ಯಾವ ಭಾಷೆಯನ್ನಾದರೂ ಕಲಿಯುವವರಿಗೆ ಇಂತಹ ಸರಳವಾದ ಕಟ್ಟುಪಾಡುಗಳು ಇದ್ದರೆ ಎಷ್ಟು ಸಲೀಸು ಅಂತ ಅನ್ನಿಸೋದೇನೋ ನಿಜ. 
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಪುಟ್ಟಮಲ್ಲಿಗೆ ಎಸ್ಟೇಟ್

ಎಷ್ಟೋ ದಿನಗಳಿಂದ ಇಲ್ಲಿ ಏನೂ ಬರೆದಿರಲಿಲ್ಲ. ಅದಕ್ಕೊಂದು ಒಳ್ಳೆಯ ಕಾರಣವೂ ಇದೆ :-)

2014ರ ಜನವರಿ ಮೊದಲವಾರದಲ್ಲಿ ರಂಗದ ಮೇಲೆ ಮೂಡಲಿದೆ

ನಾನು ಬರೆದು ಆಡಿಸುತ್ತಿರುವ ಒಂದು ಕುತೂಹಲಕಾರಿ ಪತ್ತೇದಾರಿ ನಾಟಕ

ಪುಟ್ಟಮಲ್ಲಿಗೆ ಎಸ್ಟೇಟ್

ಸ್ಯಾನ್ ಹೊಸೆ-ಸ್ಯಾನ್ ಫ್ರಾನ್ಸಿಸ್ಕೋ ಪ್ರದೇಶದಲ್ಲಿರುವ ಕನ್ನಡಿಗರೆ, ಬಂದು ನಾಟಕವನ್ನ ನೋಡಿ ಆನಂದಿಸಿ.

ಹಂಸನಾದದ ಬೇರೆಲ್ಲ ಓದುಗರೆ - ನಿಮ್ಮ ಹರಕೆ ನಮ್ಮ ಪ್ರಯತ್ನದ ಮೇಲಿರಲಿ!

 -ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಕನ್ನಡದಲ್ಲಿ ಗುಣಸಂಧಿ ಇದೆಯೇ?

ಈ ಉದಾಹರಣೆ ಗಮನಿಸಿ:
ಶುಕನೋದಿಂಗುರೆ ಚೆಲ್ವೆ ಕಾಕರವ (ಶುಕನ ಊದಿಂಗೆ
ಉರೆ ಚೆಲುವೆ ಕಾಕರವ - ಗುಣ ಸಂಧಿ)
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಶೀನ, ಕನ್ನಂತರು ಹಾಗೂ ಹಂಸಾ ನಂದಿಯವರ ಹಂಸನಾದದ ಬಿಡುಗಡೆ

ಬೆಳಗಿನ ಬೆಂಗಳೂರಿನ ಚಳಿಯ ಹಿನ್ನೆಲೆಯಲ್ಲಿ ಮನದನ್ನೆ ಕೊಟ್ಟ ಮನೆಯಲ್ಲಲ್ಲದೇ ಬೇರೆಲ್ಲೂ ಸಿಗದ ಸೊಗಸಾದ ಕಾಫಿಯನ್ನು ಗುಟುಕರಿಸುತ್ತಿದ್ದೆ. ನಿನ್ನೆಯ ಕುವೆಂಪುರವರ ಉದಯರವಿ ದರ್ಶನಮ್ ನ ಅಭ್ಯಾಸದ ಗುಂಗಿನಲ್ಲಿ ಪ್ರಭು ಶಂಕರರವರು ತಮ್ಮ ಮರೆವಿನ ಪ್ರಸಂಗವನ್ನು ತನ್ನ ಮೇಲೆಯೇ ಹಾಸ್ಯ ಮಾಡಿಕೊಂಡು ನಗುವುದನ್ನು ನೆನಪಿಸಿಕೊಂಡು.


ಬೆಳಿಗ್ಗೆಯೇ ಅವರನ್ನು ಮನೆಯವರು ಜ್ಞಾಪಿಸಿದರಂತೆ. ಇವತ್ತು ನಿಮಗೆ ಒಂದು ಕಾರ್ಯಕ್ರಮವಿದೆ,ಎಚ್ಚೆಸ್ವೀಯವರೂ ನರಹಳ್ಳಿಯವರೂ ಬರ್ತಾರೆ, ಅಂತ ಇಲ್ಲ ನನಗೆಲ್ಲ್ಯೂ ಹೋಗಲಿಕ್ಕಿಲ್ಲ ಎಂದರಂತೆ ಇವರು.ಇಲ್ಲ ನಿಮಗೊಂದು ಕಾರ್ಯಕ್ರಮವಿದೆ ಅವರೇ ಬಂದು ನಿಮಗೆ ಕಾಯುತ್ತಿದ್ದಾರೆ ಹೊರಗೆ ಎಂದು ಇನ್ನೊಮ್ಮೆ ಜ್ಞಾಪಿಸಿದರಂತೆ. ನನ್ನ ಪ್ರಕಾರ ಏನೂ ಇಲ್ಲ ಆದರೂ ಬಂದವರು ಯಾರು ಎಂದು ನೋಡಲು ಹೊರಗೆ ಬಂದರೆ ಶ್ರೀಯುತ ಮಹೇಶರು ಕಂಡರು.( ಇವರ ಮನೆಯಲ್ಲೇ ಮೊನ್ನೆಯ ಅಭ್ಯಾಸ ಆಗಿದ್ದುದು,) ಆಗ ನೆನಪಾಯಿತಂತೆ ಹೌದು ಅಂತ. ಹೀಗೆ ತನ್ನ ಮರೆಗುಳಿತನ ತನಗೇನೂ ತೊಂದರೆ ಕೊಡೋದಿಲ್ಲ ತೊಂದರೆಯೆಲ್ಲ ಉಳಿದವರಿಗೆ ಎಂದು ಹೇಳಿ ನಕ್ಕಿದ್ದರು.
ಏನೂ ಇದೂ ಶುರುವಾಯ್ತಾ ಏನು ಒಬ್ಬರೇ ನಗಾಡ್ತಾ ಇದ್ದೀರಲ್ಲಾ, ಕಾಫಿಯಲ್ಲಿ ನನಗೂ ಪಾಲು ಉಳಿದಿದೆಯಾ ಅಥವಾ ಅದೂ ನೈವೇಧ್ಯವಾ? ಎನ್ನುತ್ತಾ ಬಂದಳು ಮಡದಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಭಾರತೀಯರಿಂದ ಭಾರತೀಯರಿಗಾಗಿ ಒಂದು ಉಚಿತ ವೆಬ್ ಬ್ರೌಸರ್

ಎಲ್ಲಾ ಕನ್ನಡಿಗರಿಗೂ ಹಾಗೂ ಭಾರತೀಯರಿಗೂ ಒಂದು ಖುಷಿಯ ವಿಚಾರ.

ಹೀಗೆಯೇ ಅಂತರ್ಜಾಲದಲ್ಲಿ ಜಾಲಾಡುತ್ತಿರುವಾಗ ಸಿಕ್ಕಿದ ಸುದ್ದಿ. ನನಗಂತೂ ಹೊಸದು. ಹೀಗಾಗಿ ಸಂಪದದಲ್ಲಿ ಹಂಚಿಕೊಳ್ಳುವ ಮನಸ್ಸು ಮಾಡಿದ್ದೇನೆ.

ಬೆಂಗಳೂರು ಮೂಲದ ಹಿಡನ್ ರಿಫ್ಲೆಕ್ಸ್ ಎಂಬ ಕಂಪನಿಯು "ಎಪಿಕ್" ಹೆಸರಿನ ವೆಬ್ ಬ್ರೌಸರ್ ಅನ್ನು ಅಭಿವೃದ್ಧಿಪಡಿಸಿದೆ. ಆಂತರಿಕವಾಗಿ ಅಳವಡಿಸಿದ anti-virus, ಭಾರತೀಯ ಭಾಷೆಗಳಲ್ಲಿ ಬರೆಯುವ transliteration ಸೌಲಭ್ಯ, ಸೈಡ್ ಬಾರ್ ಐಕನ್, ಇತ್ಯಾದಿ ಆಕರ್ಷಣೆಗಳಿವೆ. ಇದೊಂದು open source (ಹಾಗೂ ಉಚಿತ) ತಂತ್ರಾಂಶವಾಗಿದ್ದು ವಿಶೇಷವಾಗಿ ಭಾರತೀಯ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ.
field_vote: 
Average: 3 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡ ಬಳಕೆಯಲ್ಲೇಕೆ ಕೀಳರಿಮೆ?

ಈಗೀಗ ಪತ್ರಿಕೆಗಳಲ್ಲಿ ಬರುವ ಕೆಲವು ಪದಗಳನ್ನ ನೋಡಿದ್ರೆ ಇದು ಕನ್ನಡವಾ ಅಂತ ಅನುಮಾನ ಬರೋದು ಸಹಜ.

’ಪಠಣ ಅಕ್ಷಮತೆ’ ’ಕಲಿಕಾ ನ್ಯೂನತೆ’ – ಇದ್ಯಾವ್ ಸೀಮೆ ಕನ್ನಡ ಪದಗಳು ರೀ? ಈ ರೀತಿಯ ಪದಗಳನ್ನ ನೀವು ಓದಿಲ್ದಿದ್ರೆ, ಇಲ್ಲಿ ಚಿಟಕಿಸಿ.

ಈಗ ಡಿಸ್ಲೆಕ್ಸಿಯಾಗೆ ಓದುವಲ್ಲಿ ತೊಡಕು – ಓದುವುದರಲ್ಲಿ ತೊಡಕು – ಅಥವಾ ’ತೊಡಕೋದು’ ಅಂತ ಒಂದು ಹೊಸ ಪದವನ್ನು ಹುಟ್ಟಿಸಬಹುದು. ಯಾಕಂದ್ರೆ ಆ ಪದಗಳೇ ಹೇಳುತ್ತೆ - ಓದುವುದರಲ್ಲಿ ತೊಡಕಾಗುತ್ತೆ ಅಂತ. ಅದನ್ನ ಬಿಟ್ಟು ಪಠಣ ಅಕ್ಷಮತೆ ಅಂತೆ ಪಠಣ ಅಕ್ಷಮತೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕನ್ನಡ ನುಡಿಯ ಪ್ರಾಚೀನತೆ

http://sampada.net/blog/savithru/24/04/2010/25029  "ಕನ್ನಡ ಭಾಷೆಯ "ಅಸ್ತಿತ್ವ" ವನ್ನು "ಖಚಿತ" ವಾಗಿ ತಿಳಿಸುವ ಮೊದಲ  ಆಧಾರ ಯಾವುದು? ಅದರ ವಿಷಯಯವೇನು?"
ಎಂಬ ಪ್ರಶ್ನೆಗೆ ಕೆಲವರು ಆಸಕ್ತಿ ವಹಿಸಿದರು. ಇದನ್ನೇ ನೆಪವಾಗಿಟ್ಟುಕೊಂಡು ಕನ್ನಡ ಅದೆಷ್ಟು ಕಾಲದ ಹಿಂದೆ ಅಸ್ತಿತ್ವದಲ್ಲಿತ್ತು, ಅದರ ಇತಿಹಾಸಕ್ಕೆ ದಾಖಲೆಗಲೆನಿರಬಹುದು, ಅನ್ನುವ ಬಗ್ಗೆ ಈ ಲೇಖನ.

೧. ಕ್ರಿಸ್ತ ಪೂರ್ವ ೩ ನೆ ಶತಮಾನಕ್ಕೆ ಸೇರಿದ ಬ್ರಹ್ಮಗಿರಿ ಶಾಸನ ( ಚಿತ್ರದುರ್ಗ ಜಿಲ್ಲೆಯ ಸಿದ್ದಾಪುರ) ದಲ್ಲಿ "ಇಸಿಲ" ಎಂಬ ಪದ ಇದೆ. ಡಿ ಎಲ್ ನರಸಿಂಹಚಾರ್ ಅವರು ಈ ಇಸಿಲ ಪದ ಕನ್ನಡ ( ಸ್ಥಳನಾಮ) ಎಂದಿದ್ದಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.
ಸರಣಿ: 

ಅಗ್ಮೆಂಟೆಡ್ ರಿಯಾಲಿಟಿ – ರಿಯಲ್ ಪ್ರಪಂಚಕ್ಕೊಂದು ವರ್ಚುಅಲ್ ಟಚ್

ಟರ್ಮಿನೇಟರ್ ನನ್ನೂ ಮೀರಿಸುವ ದೃಷ್ಟಿ ಬೇಕೆ? ಇನ್ನು ಕೆಲವೇ ವರ್ಷಗಳಲ್ಲಿ ನಿಮ್ಮ ಕಣ್ಣಿನಲ್ಲಿರು ಸಾಮಾನ್ಯ ಕಾಂಟ್ಯಾಕ್ಟ್ ಲೆನ್ಸ್ ಗಳು ಸೋಲಾರ್ ಪವರ್ ನಿಂದ ಶಕ್ತಿಪಡೆಯಬಲ್ಲ ವಿಶಿಷ್ಟ ಆಗ್ಮೆಂಟೆಡ್ ಲೆನ್ಸ್ ಗಳಿಂದ ಬದಲಾಯಿಸಲ್ಪಡುತ್ತವೆ. ಯುನಿವರ್ಸಿಟಿ ಆಫ್ ವಾಶಿಂಗ್ಟನ್ ಪ್ರೊಫೆಸರ್ ಬಬಕ್ ಅಮಿರ್ ಪರ್ವಿಜ್ ಮತ್ತು ಅವರ ಶಿಷ್ಯರು ಆಗ್ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನದ ಉಪಯೋಗವನ್ನು ಮೊಬೈಲ್ ಇತ್ಯಾದಿಗಳಿಂದ ಹೊರತಾಗಿ ಮನುಷ್ಯನ ಕಣ್ಣಿನಲ್ಲೂ ಬಳಸಬಹುದಾದ ಯೋಜನೆಯ ಮೇಲೆ ಕೆಲಸ ಮಾಡುತ್ತಿರುವುದೇ ಇದರ ಹಿಂದಿನ ರಹಸ್ಯವಾಗಿದೆ. ಈ ತಂತ್ರಜ್ಞಾನ ನೂರಾರು ಸೆಮಿಟ್ರಾನ್ಸ್ಪರಂಟ್ ಎಲ್.ಇ.ಡಿ ಗಳನ್ನು ಒಂದು ಸಣ್ಣ ಲೆನ್ಸ್ ನ ಮೇಲೆ ಸೇರಿಸಿ, ಅದನ್ನು ಧರಿಸುವ ಮನುಷ್ಯನಿಗೆ ಆಗ್ಮೆಂಟೆಡ್ ರಿಯಾಲಿಟಿಯ ಅನುಭವವನ್ನು ಅವನ ಕಣ್ಣುಗಳಿಂದಲೇ ಪಡೆಯುವ ಅವಕಾಶ ಮಾಡಿಕೊಡುತ್ತದೆ.

ಕಂಪ್ಯೂಟರಿನ ಸಹಾಯದಿಂದಭೌತಿಕ ಪ್ರಪಂಚದ ಚಿತ್ರವನ್ನು ಬಹು ನೈಜವೇ, ಸಹಜವೇ ಆದಂತೆ ತೋರುವ ವರ್ಚ್ಯಲ್ ದೃಶ್ಯಗಳನ್ನು, ನೇರವಾಗಿ ಅಥವಾ ಕಂಪ್ಯೂಟರಿನ ಸಹಾಯದಿಂದ ಇತರರಿಗೆ ದೊರೆಯುವಂತೆ ಮಾಡುವುದೇ ಆಗ್ಮೆಟೆಂಡ್ ರಿಯಾಲಿಟಿ ತಂತ್ರಜ್ಞಾನ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

'ಮಹಾರಾಷ್ಟ್ರಕ್ಕೆ ಬೆಳಗಾವಿ,ಕೇರಳಕ್ಕೆ ಕಾಸರಗೋಡು,ಕರ್ನಾಟಕಕ್ಕೆ...!?

'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕಿ ಬಲುಹಿನ ನಿಧಿಯು ಸದಾಭಿಮಾನದ ಗೂಡು'
ಅಂತ 'ಹುಯಿಲಗೋಳ ನಾರಾಯಣರಾಯ'ರು ಏಕೀಕರಣಕ್ಕೆ ಮೊದಲು ಬರೆದಿದ್ದರು.

'ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ'
ಅಂತ ಏಕೀಕರಣದ ನಂತರ ಬರೆದವರು 'ಸಿದ್ದಯ್ಯ ಪುರಾಣಿಕ್'.
field_vote: 
Average: 5 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡ ಯುನಿಕೋಡನ್ನು ನಿಮ್ಮ ಕಂಪ್ಯೂಟರನಲ್ಲಿ ಬಳಸಿ

ಮೊದಲಿಗೆ start > control panel

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಫೈರ್ಫಾಕ್ಸ್ ಗೆ ೫ನೇ ಹುಟ್ಟುಹಬ್ಬದ ಸಡಗರ

ಇಂದು ಇಂಟರ್ನೆಟ್ ಬದುಕಿನ ಒಂದು ಭಾಗವಾಗಿದೆ, ಇದೇ ಒಂದು ಜೀವನವೂ ಆಗಿದೆ ಎನ್ನಬಹುದು. ಗೆಳೆಯರೊಂದಿಗೆ ಮಾತನಾಡುವುದರಿಂದ ಹಿಡಿದು, ಕೆಲಸ, ಮನೋರಂಜನೆ, ಕಲಿಕೆ, ಮಾಹಿತಿವಿನಿಮಯ, ವ್ಯಾಪಾರ, ವ್ಯವಹಾರ ಹೀಗೆ ಹತ್ತು ಹಲವು ಕೆಲಸಗಳು ನೆಡೆಯುತ್ತಿರುವುದು ಇಲ್ಲಿಯೇ...

field_vote: 
Average: 4.3 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಕನಕದಾಸರು

ಕನಕದಾಸರು (ಕ್ರಿ. ಶ. ೧೪೮೬-೧೫೮೦)

ಕನಕದಾಸರು

field_vote: 
Average: 3.9 (10 votes)
To prevent automated spam submissions leave this field empty.

ಸಮುದಾಯ ಚಿತ್ರೋತ್ಸವ - ೨೦೦೯

ಎಪ್ಪತ್ತರ ದಶಕದಲ್ಲಿ ಸಾಹಿತಿಗಳು, ರಂಗಕಲಾವಿದರು, ಚಿತ್ರ ಕಲಾವಿದರು ಒಂದೆಡೆ ಸೇರಿ ಹುಟ್ಟಿಕೊಂಡ ಸಂಸ್ಥೆಯೇ ಸಮುದಾಯ. ಕಳೆದ ಮೂವತ್ನಾಲ್ಕು ವರ್ಷಗಳಿಂದ ನಾದಿನಾದ್ಯಂತ ಬೀದಿ ನಾಟಕ ಮತ್ತಿ ರಂಗಚಳುವಳಿಯ ಮೂಲಕ ಮನೆ ಮಾತಾಗಿರುವ ಸಮುದಾಯ ಸಮಾಜಮುಖಿ ಚಿತ್ರಗಳನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಚಿತ್ರ ಸಮುದಾಯ ಎಂಬ ಉಪ ಸಮಿತಿಯ ಮೂಲಕ ಜನರಿಗೆ ಸದಭಿರುಚಿಯ ಚಿತ್ರಗಳನ್ನು ನೋಡುವ ಹವ್ಯಾಸ ಬೆಳೆಸುವ ದಿಕ್ಕಿನಲ್ಲಿ ಈ ಪ್ರಯತ್ನ ಸಾಗಿದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಹೀಗೊಂದು “ರಕ್ಷಿತ ಸ್ಮಾರಕ ಫಲಕ”

smaraka

ಚಿತ್ರದುರ್ಗದ ಚಂದವಳ್ಳಿಯ ಗುಹೆಗಳ ಬಳಿ ತೆಗೆದದ್ದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪಾರಿವಾಳದ ಜೊತೆಗೊಂದು ಸಂವಾದ

ParivaLa

ಸ್ಯಾನ್ ಅನ್ಟೋನಿಯೋ ದಲ್ಲಿ ವಿನುತ ಎಂ.ವಿ ತೆಗೆದ ಚಿತ್ರ...

ಸ್ಯಾನ್ ಅನ್ಟೋನಿಯೋ ದ ಪಾರಿವಾಳದೊಡಗಿನ ಸಂವಾದದ ಸಮಯದಲ್ಲಿ -
ಪಾರಿವಾಳ ಹೇಳಿದ್ದು…

ಸ್ಯಾನ್ ಅನ್ಟೋನಿಯೋ ದಲ್ಲಿ ನನ್ನ ಮನೆ…
ಇಲ್ಲೇ ಪಕ್ಕದಲ್ಲಿ…..
ಟ್ರಾಫಿಕ್ ಕಮ್ಮಿ ಕಣ್ರೀ….
ಅದಕ್ಕೇ ನಡೆದು ಹೋಗ್ತಿದ್ದೇನೆ…

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಂತರಿಕ್ಷದಲ್ಲಿ ಸೌರಶಕ್ತಿ ಘಟಕ – ಜಪಾನ್ ನ ಹೊಸ ಸಂಶೋದನೆ

spacesolar1

ಚಿಕ್ಕವನಿದ್ದಾಗ ರಿಮೋಟ್ ಕಂಟ್ರೋಲ್ ಗಳ ಬಳಕೆ ಶುರುವಾದಾಗಿನಿಂದ ಮನಸ್ಸಿನಲ್ಲಿದ್ದ ಪ್ರಶ್ನೆಯೊಂದು ಆಗಾಗ ತಲೆ ಕೊರೆಯುತ್ತಿತ್ತು..  ವಿದ್ಯುತ್ ಅನ್ನು ನಿಸ್ತಂತು ಮೂಲದಿಂದ ಪಡೆಯ ಬಹುದೇ, ಹೌದಾದರೆ ಹೇಗೆ? ಇತ್ಯಾದಿ.. ಅದು ಈಗ ಸಾಧ್ಯವಿದೆ ಎಂದು ಜಪಾನ್ ನ ಹೊಸದೊಂದು ಯೋಜನೆ ಹೇಳುತ್ತಿದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕಾಲದ ನದಿಯ ಹರಿವು

ನಿಲ್ಲದು ಕಾಲದ ನದಿಯು ಯಾರಿಗೂ
ನಿಗೂಢ ಬೆಟ್ಟದಿ ಭೋರ್ಗರೆದು
ಝುಳುಝುಳುನೆ ರಭಸದಿ ಹರಿದು
ಮುನ್ನುಗ್ಗುವುದು ಅಗೋಚರ ಸಾಗರದೆಡಗೆ..

field_vote: 
Average: 3.8 (20 votes)
To prevent automated spam submissions leave this field empty.
ಲೇಖನ ವರ್ಗ (Category): 

ಈಗ ಕನ್ನಡ ಬರೆಯಿರಿ ಯಾವುದೇ ವೆಬ್ ಸೈಟ್ನಲ್ಲಿ... ಇಚ್ಛೆ ಬಂದಲ್ಲಿ..

ಸ್ನೇಹಿತರೆ,

ಎಲ್ಲಾ ಕನ್ನಡಿಗರಿಗೆ...ವಿಶೇಷ ಸುದ್ದಿ..

ಇನ್ನೂ ಕನ್ನಡದಲ್ಲಿ ಪ್ರತಿಕ್ರಿಯಿಸುವುದು, ಲೇಖನ ಬರೆಯುವುದು, ವ್ಯಾಕರಣದ (spelling
ವಿಚಾರದಲ್ಲಿ) ತಪ್ಪನ್ನು ಕಡಿಮೆ ಮಾಡಿಕೊಂಡು ಬರೆಯುವುದು, ಇನ್ನೂ ಬಾಳೆಹಣ್ಣು
ಸುಲಿದಷ್ಟೇ ಸುಲಭ..

ಈ ಕೆಳಗಿನ ಲಿಂಕ್ ಗಮನಿಸಿ.. ಪೂರ್ಣ, ಸಂಪೂರ್ಣ ವಿವರವಾದ ಲೇಖನ ಇಲ್ಲಿದೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
Subscribe to ಕನ್ನಡ