ಕನಸು

ಮಾನಿನಿಯ ಮಹದಾಸೆ!

ಅದ್ಯಾಕೋ ಗೊತ್ತಿಲ್ಲ, ಕಾಯುವಾಗ ಸಮಯ ನಿಂತೇ ಬಿಟ್ಟಿದೆ ಅಂತ ಅನ್ಸತ್ತೆ. 10 ನಿಮಿಷದಿಂದ ಕೂತಿರುವ ನನಗೆ ಯುಗವೇ ಕಳೆದಂತೆ ಅನ್ನಿಸುತ್ತಿದೆ. ಕಾಯುವಿಕೆ ಕಷ್ಟವಪ್ಪ!!
ಕಾಯ್ತಾ, ಸೆಕೆಂಡುಗಳ ಲೆಕ್ಕವನ್ನು ವರ್ಷಗಳ ಲೆಕ್ಕದಲ್ಲಿ ಎಣಿಸುತ್ತಾ ಇದ್ದೆ...

'10 ನಿಮಿಷದಿಂದ ಆ ಪುಟ್ಟು ಕಂದನ ಮುಖ ನೋಡುತ್ತಿದ್ದೆ. ಅಂತೂ ಸ್ವಲ್ಪ ಕಣ್ಣು ಬಿಟ್ಟ ಹಾಗೆ ಮಾಡಿದಳು ಮಗಳು. ಒಮ್ಮೆ ಅತ್ತರೆ, ಮಗಳು ಎದ್ದಳೆಂಬ ಖುಷಿ ವರ್ಣನೆಗೆ ನಿಲುಕದ್ದು. ಒಂದು ನಗು ಕಂಡರೆ ಪ್ರಪಂಚವೇ ಸುಂದರ ಅನ್ನಿಸುವಷ್ಟು ಆನಂದ. ಜೀವನ ಸಾರ್ಥಕ್ಯ ತಾಯ್ತನದಲ್ಲಿ ಎಂದು ಎಲ್ಲರಿಗೂ ಅನ್ನಿಸುವುದು ಅದೆಷ್ಟು ಸತ್ಯ ಎಂದು ಈಗ ತಿಳಿಯುತ್ತಿದೆ. ಎಂದು ಅಮ್ಮಾ ಎನ್ನುವಳೋ, ಅದೆಂದು ತನ್ನ ಪುಟ್ಟ ಪಾದಗಳ ಬಳಸಿ ನನ್ನ ಬಳಿ ಸಾರುವಳೋ ಎಂಬ ತವಕ ದಿನೇ ದಿನೇ ಕೆಚ್ಚುತ್ತಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (13 votes)
To prevent automated spam submissions leave this field empty.

ಕಂಡೆನಾ ಕನಸಿನಲಿ! ಗೋವಿಂದನ!

ಸಿಂಗರದಿ ನವಿಲುಗರಿ ಮೆರೆದಿದ್ದ ಸಿರಿಮುಡಿಯ

ಕಾರ್ಮೋಡದಂತೆಸೆವ ದಟ್ಟಕೂದಲಿಗೆ

ಮಿಂಚಿನೊಡ್ಯಾಣವನೆ ತೊಡಿಸಿದಂತಿತ್ತಮ್ಮ

ಕಟ್ಟಿದ್ದ ರೇಸಿಮೆಯ ನವಿರು ದಟ್ಟಿ!

 

ಪಚ್ಚೆಮಣಿಗಂಬಗಳ ಪೋಲ್ವನಿಡುತೋಳ್ಗಳಲಿ

ತಬ್ಬಿಹಿಡಿದಿರಲೆನ್ನನೆಚ್ಚೆತ್ತೆನಮ್ಮ!

ಮುದ್ದು ತರಳನ್ನೀಗ ಕಂಡೆನಾ ಕನಸಿನಲಿ

ಇಟ್ಟ ತುಳಸಿಯಮಾಲೆಯೊಡವೆಯವನ!

 

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ, ಎರಡನೇ ಆಶ್ವಾಸದ ಏಳನೇ ಪದ್ಯ):

 

ವೇಣೀಮೂಲೇ ವಿರಚಿತಘನಶ್ಯಾಮ ಪಿಂಛಾವಚೂಡೋ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಕನಸು ಕರಗುವುದಿಲ್ಲ...

ಕನಸು ಕರಗುವುದಿಲ್ಲ...


ಮನಸು ಎಷ್ಟು  ಹಳೆಯದಾದರೇನು?


ದು:ಖ ದುಮ್ಮಾನಗಳಿ೦ದ ತು೦ಬಿದ್ದರೇನು


ವಯಸ್ಸು ಎಷ್ಟಾದರೇನು?


ಎಲ್ಲವನೂ ಅನುಭವಿಸಿ ಕುಳಿತಿದ್ದರೇನು?


ಕಾಣುವ ಕನಸುಗಳೆ೦ದಿಗೂ ನವನವೀನ!


ಉರಿದಷ್ಟೂ ಕರಗುವ ಕರ್ಪೂರದೊ೦ದಿಗೆ


ಹಠಕ್ಕೆ ಬಿದ್ದವರ೦ತೆ ದಹಿಸಿಕೊಳ್ಳುವ


ಜೀವನವಲ್ಲ ಇದು!ಕನಸುಗಳ ಸ೦ತೆ...


 


ಒಬ್ಬೊಬ್ಬರಿಗೂ ಒ೦ದೊ೦ದು ಕನಸು


ಎಲ್ಲರಿಗೂ ಪುಕ್ಕಟೆ ಸಿಗುವ ಸಿಹಿಯಾದ ತಿನಿಸು


ಅಣೆಕಟ್ಟಿನ ನೀರು ಒಮ್ಮೆಲೇ ಭೋರ್ಗರೆಯುವ೦ತೆ,


ಮನಸು ಕಾಣುವ ಕನಸಿಗೆ ಇದೆಯೇ ಅಣೆಕಟ್ಟು?


ಕನಸು ಕರಗುವುದಿಲ್ಲ, ಉರಿದು ಬೂದಿಯಾಗುವುದಿಲ್ಲ!


ಕ್ಷಣಕ್ಕೊ೦ದು,ದಿನಕ್ಕೊ೦ದು ಬದುಕಿನಲಿ


ಸದಾ ಕನಸುಗಳ ದ೦ಡು!ಕನಸು ಕರಗುವುದಿಲ್ಲ..


 


ಕನಸು ಕರಗುವುದಿಲ್ಲ... ಇದು ಹತಾಶೆಗಳ


ಮೆಟ್ಟಿ ನಿಲ್ಲಲು ಕಲಿಸುವ ಮಾರ್ಗದರ್ಶಿನಿ,


ಆಸೆಗಳ ಟಿಸಿಲೊಡೆಸುವ ಸ೦ಜೀವಿನಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸ೦ದೇಶ ವಾಹಕ..

ಅವತ್ತೇ ಹೇಳ್ಬಿಟ್ಟಿದ್ದಿದ್ದ್ರೆ ಆಗೋಗ್ತಿತ್ತು!
ಸುಮ್ಮನೇ ಕಾದಿದ್ದೇ ಬ೦ತು!
ಇವತ್ತು ಹೇಳೋಣ, ಅವಳೇ ಹೇಳಲಿ ನೋಡೋಣ
ನಾಳೆ ಹೇಳೋಣ, ನಾಳೆಯಾದ್ರೂ
ಅವಳೇ ಹೇಳ್ತಾಳೋ ನೋಡೋಣ!
ಹೀಗೆ ಯೋಚಿಸಿ,ಯೋಚಿಸಿ, ದಿನದೂಡಿದ್ದೇ ಬ೦ತು.
ಕ೦ಡಿದ್ದೇ ಕ೦ಡಿದ್ದು ಒ೦ದಕ್ಕಿ೦ತ ಮತ್ತೊ೦ದು
ಸು೦ದರವಾದ ಕನಸುಗಳ!
ಬರೆದಿದ್ದೇ ಬರೆದಿದ್ದು ಒ೦ದರ ಮೇಲೊ೦ದು
ಹೃದಯವನ್ನೇ ಬಗೆದು ಇಟ್ಟ ಪ್ರೇಮದ ಪತ್ರಗಳ!
ಕೆಲಸ ಕಾರ್ಯಗಳನ್ನು ಬಿಟ್ಟು
ತಿರುಗಿದ್ದೇ ತಿರುಗಿದ್ದು,  ನನ್ನದಲ್ಲದ ಕಾರನ್ನು
ನನ್ನದೆ೦ದು ಹೇಳಿ, ಜೊತೆ-ಜೊತೆಗೆಯೇ
ಕುಳಿತ  ಕನಸುಗಳು ಕ೦ಡದ್ದು ನೂರಾರು
ಕಟ್ಟಿದ ಗೋಪುರಗಳು ಹಲವಾರು
ಆ ನನ್ನ ಸ್ನೇಹಿತನಿ೦ದ ಎಲ್ಲವೂ ಮುರಿದು ಬಿತ್ತಲ್ಲ!
ಧೈರ್ಯ ಸಾಕಾಗದೇ, ಉಗುಳು ನು೦ಗುತ್ತಾ,
ಅವನ ಹತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇರುಳಾವರಿಸಿತು ಇಳೆಯ

 

ಇರುಳಾವರಿಸಿತು ಇಳೆಯ
ಮಿಲನದ ನಶೆ ನನ್ನ,
ಕಣ್ಣಾಲಿಯೇ ಬಾ
ಆಲಂಗಿಸು
ನಿಶೆಯಿರುಳ ಅಪ್ಪಿದಂತೆ
ನಮ್ಮ ಕನಸಿನ ಲೋಕಕ್ಕೆ
ಆ ಬಿಗಿಯಲಿ ಮರೆಯುವ ಈ ಜಗವ
ಈ ಸಮಾಗಮದ ಆಲಿಂಗನ
ಬದುಕಿನ ನಾಳೆಯ ನಮ್ಮ
ಹೊಸಮಜಲಿನ
ಹರಹಿಗೆ
ಹೊಸ ರಮ್ಯ
ಬೆಳಕಿನ
ಲೋಕದೆಡೆಗಿನ
ಮಹಾ ಯಾನದ
ಆರಂಭಕ್ಕೆ

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮನಸೇ, ನೀ ಒಮ್ಮೊಮ್ಮೆ ನಿಲ್ಲು!,

ಮನಸೇ ನೀ ಒಮ್ಮೊಮ್ಮೆ ನಿಲ್ಲು,


ನೀ ಹಾರುತಿರಲೇ ಬೇಡ!.


ನೀ ಹಾರುತಲೇ ಇದ್ದರೆ  ಅರುಣ ಮುನಿದಾನು!


ರೆಕ್ಕೆಗಳು ಸುಟ್ಟು ಹೋದೀತು!


ನೀ ದಬಕ್ಕನೆ ಬುವಿಗೆ ಬೀಳುವೆ.


ಸತತವಾಗಿ ನಿಲ್ಲುತ್ತಿರಬೇಡ!


ನಿ೦ತೇ ಇದ್ದರೆ, ನಿನ್ನ ಕಾಲುಗಳಿಗೆ


ಜೊ೦ಪು ಹಿಡಿದಾವು, ಬುವಿಯ ತ೦ಪಿಗೆ!


ನಿ೦ತಲ್ಲೇ ಇದ್ದರೆ, ಬುವಿಯೇ ಟಾ೦ಗು ಕೊಟ್ಟೀತು!


ಯಾರನೂ ಆರಿಸದಿರು, ಎಲ್ಲರನೂ ಆರಿಸು.


ಆರಿಸು ಕನಸುಗಳನು.


ನಿಲ್ಲು ನೀ ಜೀವ೦ತಿಕೆ ಇರುವಲ್ಲಿ,


ರೋಮಾ೦ಚನವಿರುವಲ್ಲಿ,


ಮಾನವತೆಯ ಸ್ಪಶ೯ವಿರುವಲ್ಲಿ.


ಹಾರು ನೀ ಅಮೃತತ್ವದೆಡೆಗೆ,


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೀಗೂ ಆಗುವುದು ಉಂಟೆ ??

  ಬಕ್ರೀದ್ ಹಬ್ಬ ಹಾಗೂ ಯುಎಇ ರಾಷ್ಟ್ರೀಯ ದಿನದ ಅಂಗವಾಗಿ ಸಿಗಲಿದ್ದ ಸುಮಾರು ಹತ್ತು ದಿನಗಳ ರಜೆಗೆ ಅರ್ಜಿ ಗುಜರಾಯಿಸಿ, ಎಂಡಿಯವರಿಗೆ ಸಾಕಷ್ಟು ಬೆಣ್ಣೆ ಹೊಡೆದು ಅದನ್ನು ಗಿಟ್ಟಿಸುವಲ್ಲಿ ಸಫಲನಾಗಿದ್ದೆ. ಬುಧವಾರ, ವಾರಾಂತ್ಯದ ಕೆಲಸಗಳನ್ನೆಲ್ಲಾ ತರಾತುರಿಯಲ್ಲಿ ಮುಗಿಸಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 
Subscribe to ಕನಸು