ಕಥೆ

ಅನ್ವೇಷಣೆ ಭಾಗ ೨೭

ಭಾಸ್ಕರನ್ ಬಂದು ಕೊಟ್ಟು ಹೋದ ಊಟ ಮುಗಿಸಿ ಸ್ವಲ್ಪ ಹೊತ್ತು ಅಲ್ಲೇ ಮನೆಯ ಹಿಂಭಾಗದಲ್ಲಿ ಇದ್ದ ಹೂದೋಟದಲ್ಲಿ ಸುತ್ತಾಡಿ ಒಳಗೆ ಬರುವಷ್ಟರಲ್ಲಿ ಮತ್ತೆ ಕಾಲಿಂಗ್ ಬೆಲ್ ಸದ್ದಾಯಿತು. ಬಹುಶಃ ತ್ರಿವಿಕ್ರಂ ಬಂದಿರಬಹುದು  ಎಂದು ಬಾಗಿಲು ತೆರೆದಾಗ ತ್ರಿವಿಕ್ರಂ ಮತ್ತು ಭಾಸ್ಕರನ್ ನಿಂತಿದ್ದರು. ನಾನಿನ್ನು ಆಮೇಲೆ ಬರುತ್ತೇನೆ ಎಂದು ಭಾಸ್ಕರನ್ ಹೊರಟು ತ್ರಿವಿಕ್ರಂ ಒಳಬಂದರು.

ಜಾನಕಿಯನ್ನು ಅವರಿಗೆ ಪರಿಚಯ ಮಾಡಿಕೊಟ್ಟು ಮಾತಾಡಲು ಶುರುಮಾಡಿದೆವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಅನ್ವೇಷಣೆ ಭಾಗ ೨೬

ಜಾನಕಿಯ ಮಾತು ನಿಜ ಎನಿಸಿತು.... ಏಕೆಂದರೆ ಯಾರನ್ನೂ ನಂಬುವ ಸ್ಥಿತಿಯಲ್ಲಿರಲಿಲ್ಲ.... ಸರಿ ಸರಿ ಎಂದು ಸುಮ್ಮನಾದೆ. ಕೂಡಲೇ ನನ್ನ ಮೊಬೈಲ್ ನೆನಪಿಗೆ ಬಂದು ಮೊಬೈಲ್ ಸ್ವಿಚ್ ಆನ್ ಮಾಡಿದೆ. ಆದರೆ ಅದರಲ್ಲಿದ್ದ ಸಿಮ್ ಕಿತ್ತೆಸೆದು ಬಿಟ್ಟಿದ್ದರು. ಅಷ್ಟರಲ್ಲಿ ಆಟೋ ಸಿಟಿ ಪ್ರವೇಶಿಸಿತು. ಯಾಕೋ ಬಸ್ ಸ್ಟಾಂಡ್ಗೆ ಹೋಗುವುದು ಸೇಫ್ ಎನಿಸಲಿಲ್ಲ. ಬಸ್ ನಿಲ್ದಾಣಕ್ಕೆ ಮುಂಚೆಯೇ ಆಟೋದವನಿಗೆ ನಿಲ್ಲಿಸಲು ಹೇಳಿದೆ. ಅವನು ಇನ್ನು ಬಸ್ ಸ್ಟಾಂಡ್ ವರ್ಲೆಯೇ.... ಎಂಗೆ ಎರಂಗಿನಾಲು ನೂತ್ತಿ ಅಂಬದುದಾ ಎಂದ. ನಾನು ಪರ್ವಾಯಿಲ್ಲೇ ಎಂದು ಅಲ್ಲೇ ಇಳಿದು ಅವನಿಗೆ ನೂರಾ ಐವತ್ತು ಕೊಟ್ಟು ಅಲ್ಲೇ ಎದುರಿಗಿದ್ದ ಫೋನ್ ಬೂತಿಗೆ ಹೋಗಿ ತ್ರಿವಿಕ್ರಂಗೆ ಕರೆ ಮಾಡಿದೆ. ಮೊದಲನೇ ರಿಂಗಿಗೆ ಫೋನ್ ಎತ್ತಿದವರು ನನ್ನ ಧ್ವನಿ ಕೇಳಿದೊಡನೆ... ಅರ್ಜುನ್ ಎಲ್ಲಿದ್ದೀರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಸರಣಿ: 

ತಂಬೂರಿ ಮೀಟಿದವ .. ಭವಾಬ್ದಿ ದಾಟಿದವ

(ಈ ದಿನ ಪುರಂದರ ದಾಸರ ಆರಾಧನೆ, ಪುಷ್ಯ ಬಹುಳ ಅಮಾವಾಸ್ಯೆ - ಆ ಸಂದರ್ಭಕ್ಕೆಂದು ಹಿಂದೆ ಬರೆದಿದ್ದ ಈ ಕಿರುಕಾವ್ಯವನ್ನು ಇಲ್ಲಿ ಹಂಚಿಕೊಂಡಿದ್ದೇನೆ)

ಕ್ಷೇಮಪುರದಲಿ ಇದ್ದನೊಬ್ಬನು ಶ್ರೀನಿವಾಸನ ನಾಮದಿ
ಹೇಮದಾಭರಣಗಳ ಮಾಡುತ ಮಾರಿ ಗಳಿಸುತ ನೆಮ್ಮದಿ
ನಾಮಮಾತ್ರಕು ದಾನವೆಂಬುದನಾತ ಸ್ವಲ್ಪವು ನೀಡದೆ
ನೇಮದಿಂದಲಿ ದುಡ್ಡುಮಾಡುವ ದಾರಿಯೊಂದನೆ ಕಂಡನು || ೧||

ಶ್ರೀನಿವಾಸನು ಸತ್ಯದಲಿ ಬೇರೆಲ್ಲ ವಿಷಯದಿ ಯೋಗ್ಯನು ||
ಗಾನವಿದ್ಯೆಯ ಪದ್ಧತಿಯಲಿ ಸಮಾನರಾರನು ಕಾಣೆನು
ಸಾನುರಾಗದಿ ಚಿಣ್ಣರಿಗೆ ಸಂಗೀತವಿದ್ಯೆಯ ಪೇಳ್ವನು
ಕಾನುಮಲೆಯ ಕ್ಷೇಮಪುರದಲ್ಲವನೆ ಬಲುಸಿರಿವಂತನು ||೨||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಂದು ಊರಿನ ಕಥೆ

ಒಂದೂರಿತ್ತಂತೆ.  ಅಲ್ಲಿ ಹಲವು ಬಗೆಯ ಜನರು ಇದ್ದರು, ಒಬ್ಬರಿಗೆ ಹುಣಿಸೇ ಹಣ್ಣಿನ ಗೊಜ್ಜು ಇಷ್ಟ ಆದರೆ ಇನ್ನೊಬ್ಬರಿಗೆ ಬದನೇಕಾಯಿ ಪಲ್ಯ ಇಷ್ಟ. ಒಬ್ಬರಿಗೆ ಚಿತ್ರಾನ್ನ ಇಷ್ಟ ಆದರೆ ಮತ್ತೊಬ್ಬರಿಗೆ ಗೊಡ್ಡುಸಾರು. ಲೋಕೋ ಭಿನ್ನ ರುಚಿಃ ಅಂತ ಅದೇನೋ ಹೇಳ್ತಾರಲ್ಲ ಹಾಗೆ.  ಎಲ್ರೂ ಅವರವರ ಮನೆಯಲ್ಲಿ ಅಡಿಗೆ ತಕ್ಕ ಮಟ್ಟಿಗೆ ಚೆನ್ನಾಗೇ ಮಾಡಿ ಊಟ  ಬಡಿಸ್ತಿದ್ದರಂತೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆ ರಾತ್ರಿ...(ಸಣ್ಣ ಕಥೆ)

"ಬೇಡಾ ಅಂದ್ರೆ ಬೇಡ!!! ಅಲ್ಲೇ ಇರು ಪರವಾಗಿಲ್ಲ...ನಾಳೆ ಬೆಳಗ್ಗೆ ಎದ್ದು ಬಾ!"
"ಹೋಗಮ್ಮ...ನಿಂದು ಒಂದು ಯಾವಾಗ್ಲೂ ಗೋಳು..."
"ನಾನು ಎಷ್ಟು ಸರತಿ ಹೇಳಿದ್ರೂ ಕೇಳಲ್ಲ...ಅಮ್ಮನ ಮಾತು ನಿನಗೆಲ್ಲಿ ಪಥ್ಯ? ಏನಾದ್ರೂ ಮಾಡ್ಕೋ ಹೋಗು" ಎಂದು ಕೋಪದಲ್ಲಿ ಫೊನ್ ಕುಕ್ಕಿದರು ಅಮ್ಮ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಸರಣಿ: 

ಮುಚ್ಚಿದ ಬಾಗಿಲು

ವನ ಕೋಣೆಯ ಬಾಗಿಲು ಮುಚ್ಚಿಯೇ ಇರುತ್ತಿತ್ತು. ಬೆಳಗ್ಗೆ ಸುಮಾರು ಏಳು ಗಂಟೆಯ ಹೊತ್ತಿಗೆ ಯಶು ಆತನ ಕೋಣೆಯ ಬಳಿ ಹಾಲು ತೆಗೆದುಕೊಂಡು ಬರುತ್ತಿದ್ದಳು. ಅವನ ಕೋಣೆಯ ಬಾಗಿಲು ತೆರೆಯಲು ಯಾವುದೇ ಕಾಲಿಂಗ್ ಬೆಲ್‌ನ ಆವಶ್ಯಕತೆ ಇರುತ್ತಿರಲಿಲ್ಲ. ಯಶು ಧರಿಸಿದ್ದ ಕಾಲ್ಗೆಜ್ಜೆಯ ಸದ್ದು ಕೇಳಿದರೆ ಸಾಕು ಬಾಬು ಬಾಗಿಲು ತೆರೆಯುತ್ತಿದ್ದ. ಯಶುವಿನ ಕೈಯಿಂದ ಹಾಲಿನ ಪಾತ್ರೆ ತೆಗೆದುಕೊಂಡು ಅದನ್ನು ಇನ್ನೊಂದು ಪಾತ್ರೆಗೆ ಹಾಕಿ ಖಾಲಿ ಬಾಟಲಿಯನ್ನು ಆಕೆಗೆ ಕೈಗಿತ್ತು ಮತ್ತೆ ಬಾಗಿಲು ಮುಚ್ಚಿಕೊಳ್ಳುತ್ತಿದ್ದ. ಸುಮಾರು 25ರ ಹರೆಯದ ಆ ಯುವಕ ಏನು ಮಾಡುತ್ತಿದ್ದಾನೆ?  ಎಂದು ಯಾರಿಗೂ ಗೊತ್ತಿರಲಿಲ್ಲ. ಯಶು ಏನಾದರೂ ಪ್ರಶ್ನೆ ಕೇಳಿದರೆ 'ಹಾಂ.. ಹೂಂ' ಎಂಬ ಉತ್ತರವನ್ನು ಮಾತ್ರ ನೀಡುತ್ತಿದ್ದ.

ಅಂದ ಹಾಗೆ ಬಾಬು 'ಕಯ್ಯೂರ್‌' ಎಂಬ ಈ ಗ್ರಾಮಕ್ಕೆ ಯಾಕಾಗಿ ಬಂದನೆಂದು ಯಾರಿಗೂ ಈವರೆಗೆ ಗೊತ್ತಿಲ್ಲ. ಮಾತಿಗೆ ಸಿಗುವ ಹುಡುಗ ಅವನಲ್ಲ. ಕಾಣಲು ಸ್ಪುರದ್ರೂಪಿ, ಉದ್ದನೆಯ ಪೈಜಾಮ ಹಾಕಿ ಎಡ ತೋಳಲ್ಲಿ ಒಂದು ಜೋಳಿಗೆ ಸಿಕ್ಕಿಸಿ ಕೆಲವೊಂದು ದಿನ ಆ ಊರಲ್ಲಿ ಒಂದಿಷ್ಟು ತಾಸು ಸುತ್ತಾಡುವುದನ್ನು ಬಿಟ್ಟರೆ ಬೇರೇನು ಮಾಡುತ್ತಿದ್ದಾನೆ ಎಂದು ಯಾರೂ ಕೇಳುತ್ತಿರಲಿಲ್ಲ. ಇರಲಿ ಬಿಡಿ, ನಮಗೆ ಯಾಕೆ ಈ ಉಸಾಬರಿ ಎಂದು ಹೇಳುವವರೇ ಬಹುತೇಕ ಮಂದಿ. ಏನೋ ಪ್ರಾಜೆಕ್ಟ್ ಮಾಡಲಿಕ್ಕೆ ಬಂದಿದ್ದಾನಂತೆ ಅವ ಎಂದು ಯಾರೋ ಹೇಳಿದ್ದರು.

ಆದರೆ ಬಾಬು ಇಲ್ಲಿಗೆ ಬಂದು ತಿಂಗಳಾಯ್ತು. ಯಾರಲ್ಲೂ ಹೆಚ್ಚಿಗೆ ಮಾತುಕತೆಯಿಲ್ಲ. ಆತನ ಕೋಣೆಯ ಕಿಟಿಕಿ ಬಾಗಿಲು ಸದಾ ಮುಚ್ಚಿಕೊಂಡೇ ಇರುತ್ತದೆ. ಯಶು ಹಾಲು ತಂದಾಕ್ಷಣ ಮಾತ್ರ ಒಂದೆರಡು ನಿಮಿಷ ಬಾಗಿಲು ತೆರೆದು ಕೊಳ್ಳುತ್ತದೆ. ಮತ್ತೆ...ಅದೇ ಮುಚ್ಚಿದ ಬಾಗಿಲು.

ಅಪರೂಪಕ್ಕೊಮ್ಮೆ ಕಣ್ಣೇಟ್ಟನ್‌ರ  ಚಹಾದಂಗಡಿಗೆ ಬಂದು ಕಟ್ಟನ್ ಚಾಯ ಕುಡಿಯುವುದನ್ನು ಬಿಟ್ಟರೆ ಆತ ಬೇರೆ ಕಡೆಯಿಂದ ಯಾವುದೇ ವಸ್ತು ಖರೀದಿಸುವುದನ್ನು ಈವರೆಗೆ ಯಾರೂ ಕಂಡವರಿಲ್ಲ. ಇವನೇನು ಗಾಳಿ ಮಾತ್ರ ಸೇವಿಸಿ ಬದುಕುತ್ತಾನೆಯೇ? ಅಥವಾ ಮನೆಯೊಳಗೆಯೇ ಎಲ್ಲಾ ವಸ್ತುಗಳನ್ನು ಉತ್ಪಾದಿಸುವ ಯಂತ್ರವಿದೆಯೇ? ಎಂದು ಜನರಾಡಿಕೊಳ್ಳುತ್ತಿದ್ದರು. ಆತನ ಕೋಣೆಯ ಬಳಿ ಯಶು ಬಿಟ್ಟರೆ ಬೇರೆ ಯಾರೂ ಸುಳಿದಾಡುತ್ತಿರಲಿಲ್ಲ. ಯಶು ಅಂದರೆ ಬಾಬು ಬಾಡಿಗೆಗೆ ಇದ್ದಾನಲ್ಲಾ ಆ ಮನೆಯ ಮಾಲೀಕರ ಮಗಳು. ಇಗಷ್ಟೇ ಹತ್ತನೇ ಕ್ಲಾಸು ಮುಗಿಸಿದ್ದಾಳೆ. ಯಶುಗೆ ಬಾಬುವನ್ನು ಕಂಡರೆ ಏನೋ ಆಕರ್ಷಣೆ. ಆದರೆ ಅವನು ಒಂದು ದಿನವಾದರೂ ಯಶುವಿನ ಮುಖ ಸರಿಯಾಗಿ ನೋಡಿರಲೇ ಇಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.9 (7 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಹೊಸ ವರ್ಷದ ಹೊಸ್ತಿಲಿನಲ್ಲಿ ಒಂದು ಸಮ್ಮೇಳನ

೨೦೧೦ರ ಕೊನೆ ದಿನದಂದು ವಿಶ್ವ ಸಂಕೇತಿ ಸಮ್ಮೇಳನ ಆರಂಭವಾಗಲಿದೆ. ಮೂರು ದಿನದ ಈ ಸಮ್ಮೇಳನಕ್ಕೆ ನಾಲ್ಕೈದು ಸಾವಿರ ಜನ ಬಂದು ಸೇರುವ ನಿರೀಕ್ಷೆ ಇದೆಯಂತೆ!

ಶಿವಮೊಗ್ಗ ಜಿಲ್ಲೆಯ ಮತ್ತೂರು-ಹೊಸಳ್ಳಿಗಳಲ್ಲಿ ನಡೆಯುತ್ತಿರುವ ಈ ಮೂರು ದಿನದ ಸಮ್ಮೇಳನ, ಕರ್ನಾಟಕವನ್ನು ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಬಂದು ತಮ್ಮ ಮನೆಯಾಗಿಸಿಕೊಂಡ ಎಲ್ಲ ಸಂಕೇತಿಗಳಿಗೂ ಒಂದು ಸಂಭ್ರಮದ ಆಚರಣೆಯೇ ಸರಿ.

ಸಮ್ಮೇಳನದ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ: www.sankethi.net/

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)

ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ ಕತ್ತಲ್ ರಾತ್ರಿ

ಕಥೆ

ಕತ್ತಲ್ ರಾತ್ರಿ

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಪುಟವನ್ನು ರದ್ದು ಮಾಡಲಾಗಿದೆ.

ಈ ಪುಟವನ್ನು ರದ್ದು ಮಾಡಲಾಗಿದೆ. ದಯಮಾಡಿ ಇದೇ ಬರಹವನ್ನು ಬೇರೊಂದು ಪುಟದಲ್ಲಿ ಬರೆಯಲಾಗಿದೆ. ದಯಮಾಡಿ ತೊಂದರೆಯಾದುದಕ್ಕೆ ಸಹಕರಿಸಿ.

ಮಾನ್ವಿ.,,, ,,, ,,, ,, ,,, ,,, ,, ,,,, ,,, ,,,, ,,, ,,, ,,, ,, ,,, ,,,, ,,,,  ,, ,, ,,,, ,,,, ,,,, ,,,,, ,,, ,, ,,,,,, ,,,,,,,,, ,,,,,,,, ,,,,,,, ,,,,,, ,,,,, ,,,, ,,, ,,,, ,

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಕಥೆ