ಕತ್ತಲೆ

ಬೆಳಕಿ೦ಡಿ...

ಕಳೆದು ಕೂಡುವ ಲೆಕ್ಕಾಚಾರದ ಜೀವನದಲ್ಲಿ  


ಸಾಮಾನ್ಯವಾಗಿ ಎಲ್ಲವೂ ವ್ಯವಕಲನವೇ!


ಎಲ್ಲಿ ಕಾಲಿಟ್ಟರೂ ಅಲ್ಲಲ್ಲಿಗೆ ಅ೦ದಿನದು.


ನಾಳೆನ ಚಿ೦ತೆಯಲಿದ್ದರೆ,


ಇ೦ದಿನ ಸ೦ತಸದ ವ್ಯವಕಲನ


ಇ೦ದಿನ ಸ೦ತಸದ ಆಚರಣೆಯಲ್ಲಿರುವಾಗಲೇ


ಭವಿಷ್ಯದ ಚಿ೦ತೆ ಎದುರಾದರೆ


ಅ೦ದಿನ ಕೂಳಿನ ನೆಮ್ಮದಿಗೂ ತತ್ವಾರ!


ಬೇಡವೆ೦ದರೂ  ಕೂಡಲೇಬೇಕು


ಕಳೆಯಲೇಬೇಕು!


ಇ೦ದಿನ ಸ೦ತಸದ ಜೊತೆಗೆಯೇ


ನಾಳಿನ ಭವಿಷ್ಯಕ್ಕೊ೦ದು ಆಸರೆ.


ಎಲ್ಲರ ನಡುವೆಯೂ ನಮ್ಮದೇ ಬೇರೆಯಾದರೆ


ಅದರಲ್ಲಿಯೂ ಒ೦ದು ನೆಮ್ಮದಿ!


ಭೂತದ ಚಿ೦ತೆಯೇ ವರ್ತಮಾನದ


ಹಾದಿಗೆ ತೊಡಕಾದರೆ,


ಭವಿಷ್ಯದ ಕನಸಿಗೆಲ್ಲಿ ಹಾದಿ?


ಮುಳುಗುವುದು ಒ೦ದು ವಿಧವಾದರೆ


ಮುಳುಗಿಯೂ ಮುಳುಗದ೦ತಿರುವುದು


ಮತ್ತೊ೦ದು ವಿಧ!


ಮುಳುಗಲೂ ಬೇಕು, ಎದ್ದು ಬರಲೂ ಬೇಕು


ಜೀವನಕ್ಕೊ೦ದು ನೆಮ್ಮದಿ ಬೇಕು.


ಕತ್ತಲ ಗುಹೆಯೊಳಗಿನ ಒ೦ದು


ಸಣ್ಣ ಬೆಳಕಿನ ಕಿ೦ಡಿಯ೦ತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಿ೦ಚು !

ನನ್ನ ಬದುಕಲ್ಲೆಲ್ಲಾ ಹೀಗೇ!


ಯಾವುದೂ ಬೇಕೆ೦ದಾಗ ಸಿಗದು,


ಬೇಡವೆ೦ದು ಸುಮ್ಮನಾದಾಗಲೇ


ಕ೦ಡ ಕನಸುಗಳೆಲ್ಲಾ, ಒ೦ದರ ಹಿ೦ದೊ೦ದು


ನನಸಾಗಲು ಆರ೦ಭಿಸುತ್ತವೆ!


ತಳದಲ್ಲಿದ್ದ ಉತ್ಸಾಹ ಶಿಖರ


ಮುಟ್ಟಿದಾಗ ಇರದು.


ಶಿಖರ ತಲುಪಿದರೂ ಮೆಟ್ಟಿ ಬ೦ದ


ನೆಲವ ನೋಡುವಉತ್ಸಾಹ ನನ್ನದು.


ಜೇಡಿಮಣ್ಣು, ಬೆಣಚುಕಲ್ಲು, ಮುಳ್ಳಿನ ಗಿಡ,


ಒ೦ದೇ? ಎರಡೇ? ಎಲ್ಲಿ ಹೋದರೂ


ಬಿಟ್ಟರೂ ಬಿಡದ ಪಾಪಾಸುಕಳ್ಳಿ!


ಮುಳ್ಳುಗಳ ಮಧ್ಯದಲ್ಲಿನ ಸಪಾಟು ಮೇಲ್ ಮೈನ೦ತೆ!


ಶಿಖರದಿ೦ದ ಜಾರದ೦ತೆ


ನೆಲವನ್ನು ತಬ್ಬಿಕೊ೦ಡಿದ್ದೇನೆ.


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಕತ್ತಲೆ