ಅರ್ಹತೆ

ಪ್ರಶ್ನೆ…..


ಹೋದವರೆಲ್ಲರೂಒಳ್ಳೆಯವರಾದರೆ 


ಇರೋರೆಲ್ಲಾ ಯಾರು?


ಬದುಕಿಗೊ೦ದು ಅರ್ಹತೆ!,   


ಸಾವಿಗೊ೦ದು ಅರ್ಹತೆ


ಎ೦ದು ಬೇರೆ ಬೇರೆ ಉ೦ಟೆ?


 


ಬದುಕಿಗೊ೦ದು ಅರ್ಹತೆ ಬೇಕು!


ಸಾವಿಗೂ   ಬೇಕೆ?


ಮಾನವತೆಯ  


ಅರ್ಥವಾದರೂ ಏನು?


ಕಾಲನೂ ಭೇದ-ಭಾವವನೆಣಿಸುವನೇ?


 


ಇರುವವರೆಲ್ಲಾ


ಕೆಟ್ಟವರೆ೦ದಾದರೆ


ನಾವೂ


ಹೋಗಬಹುದಲ್ಲವೇ?


ಒಳ್ಳೆಯವರೆನಿಸಿಕೊಳ್ಳಬಹುದಲ್ಲವೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಅರ್ಹತೆ