ಅರಣ್ಯ

ಕಾಲದ ಕನ್ನಡಿ- ಏನೆ೦ದು ನಾ ಹೇಳಲೀ... ಮಾನವನಾಸೆಗೆ ಕೊನೆಯೆಲ್ಲಿ?

    ಮಾನವನ ವೇಗಕ್ಕೆ ಸರಿಸಾಟಿ ಯಾವುದಿದೆ ಇ೦ದು?
    ಮಾನವ ನುಗ್ಗುತ್ತಿರುವ ವೇಗಕ್ಕೆ ಯಾವುದು ತಡೆಯೊಡ್ಡಬಹುದು?
    ಬಹುಶ ಮಾನವ ಜಗತ್ತಿನ ಉಳಿದೆಲ್ಲವನ್ನೂ ತನ್ನ ಕಾಲಡಿಗೆ ಹೊಸಕಿಹಾಕಿ,ಎಲ್ಲವನ್ನೂ ತನ್ನದೆ೦ದೇ,  ಒ೦ದೇ ಏಟಿಗೆ ಗುಳು೦ ಎ೦ದು ನು೦ಗುತ್ತಾ ಅಕ್ಟೋಪಸ್ ನ೦ತೆ ಬೆಳೆಯುತ್ತಿರುವುದನ್ನೂ ನೋಡಿದರೆ  ಸ್ರುಷ್ಟಿಯೂ ತನ್ನ ಅಸಹಾಯಕತೆಯನ್ನು ಚೆಲ್ಲುತ್ತಾ ಸುಮ್ಮನೇ ನಿ೦ತಿದೆಯೇನೋ ಅನ್ನಿಸದಿರದು!! ಆದರೆ ಇದು ಸತ್ಯ. ಮಾನವನ ವೇಗವನ್ನು ನಿಲ್ಲಿಸಲು ಪುನ: ಸೃಷ್ಟಿಯೇ ತನ್ನ ಚಾಟಿಯನ್ನು ಬಳಸಬೇಕೇನೋ?  ಪಶ್ಚಿಮಘಟ್ಟದ ಕಥೆ ಇದಕ್ಕೊ೦ದು ಸಾಕ್ಷಿ!


field_vote: 
Average: 3.5 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ಮುಂಗಾರು ಪ್ರಾರಂಭವಾಯಿತೆಂದರೆ...

ಬೆಂಗಳೂರಿನಲ್ಲಿ ಮರಗಳನ್ನು ಕಡಿಯುತ್ತಿರುವ ಬಗ್ಗೆ ಸಾಕಷ್ಟು ಪ್ರತಿಭಟನೆಗಳು ಕೇಳಿಬರುತ್ತಿವೆ ಆದರೂ ಇದನ್ನು ಲೆಕ್ಕಿಸದೇ ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಮರಗಳ ಮಾರಣಹೋಮ ನಡೆಯುತ್ತಿಲಿದೆ ಇದು ನಗರೀಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರಕೃತಿಮೇಲಿನ ದಾಳಿಯಾದರೆ ನಮ್ಮ ಗ್ರಾಮೀಣ ಪ್ರದೇಶದಲ್ಲೂ ಸಾಕಷ್ಟು ಕಾಡಿನ ನಾಶ ಉಂಟಾಗುತ್ತಿದೆ.

ಮುಂಗಾರು ಪ್ರಾರಂಭವಾಯಿತೆಂದರೆ ಸಾಕು ಮಳೆಯ ಹಾಡು ಎಲ್ಲರಿಗೂ ನೆನಪಾಗುತ್ತದೆ ಆದರೆ ಸರಿಯಾಗಿ ಇದೇ ಸಮಯಕ್ಕೆ ಕಾಡಿನಂಚಿನಲ್ಲಿರುವ ಹಳ್ಳಿಯ ಹಲವು ಉಳ್ಳ ರೈತರು ಕಾಡಿನ ಗಿಡ ಗಂಟೆಗಳು, ಮರಗಳನ್ನು ಕಡಿದು ಅಕ್ರಮವಾಗಿ ಸಾಗುವಳಿ ಮಾಡಲು ಮುಂದಾಗುತ್ತಾರೆ. ಇಂತಹ ಪ್ರದೇಶದಲ್ಲಿ ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇದನ್ನು ತಡೆಗಟ್ಟಬೇಕಿರುವ ಅರಣ್ಯ ಇಲಾಖೆ ತಳಮಟ್ಟದ ವಾಚರ್್ಗಳು ಹಣದ ಆಮಿಶಕ್ಕೆ ಬಲಿಯಾಗಿ ಅಕ್ರಮವನ್ನು ಮರೆ ಮಾಚುವ ಪ್ರಕ್ರಿಯೆ ಮಲೆನಾಡಿನ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಅರಣ್ಯ