ಅಮೃತತ್ವ

ಮನಸೇ, ನೀ ಒಮ್ಮೊಮ್ಮೆ ನಿಲ್ಲು!,

ಮನಸೇ ನೀ ಒಮ್ಮೊಮ್ಮೆ ನಿಲ್ಲು,


ನೀ ಹಾರುತಿರಲೇ ಬೇಡ!.


ನೀ ಹಾರುತಲೇ ಇದ್ದರೆ  ಅರುಣ ಮುನಿದಾನು!


ರೆಕ್ಕೆಗಳು ಸುಟ್ಟು ಹೋದೀತು!


ನೀ ದಬಕ್ಕನೆ ಬುವಿಗೆ ಬೀಳುವೆ.


ಸತತವಾಗಿ ನಿಲ್ಲುತ್ತಿರಬೇಡ!


ನಿ೦ತೇ ಇದ್ದರೆ, ನಿನ್ನ ಕಾಲುಗಳಿಗೆ


ಜೊ೦ಪು ಹಿಡಿದಾವು, ಬುವಿಯ ತ೦ಪಿಗೆ!


ನಿ೦ತಲ್ಲೇ ಇದ್ದರೆ, ಬುವಿಯೇ ಟಾ೦ಗು ಕೊಟ್ಟೀತು!


ಯಾರನೂ ಆರಿಸದಿರು, ಎಲ್ಲರನೂ ಆರಿಸು.


ಆರಿಸು ಕನಸುಗಳನು.


ನಿಲ್ಲು ನೀ ಜೀವ೦ತಿಕೆ ಇರುವಲ್ಲಿ,


ರೋಮಾ೦ಚನವಿರುವಲ್ಲಿ,


ಮಾನವತೆಯ ಸ್ಪಶ೯ವಿರುವಲ್ಲಿ.


ಹಾರು ನೀ ಅಮೃತತ್ವದೆಡೆಗೆ,


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಅಮೃತತ್ವ