ಸಮಾಜದ ಕಣ್ಣಿನ ಕಣ್ಣಾದ ಹೆಣ್ಣು ...ಬಲು ಚೆನ್ನು...

4.333335

ಸಮಾಜದ ಕಣ್ಣಿನ ಕಣ್ಣಾದ ಹೆಣ್ಣು ...ಬಲು ಚೆನ್ನು....
 
 

ಮೆಚ್ಚಿನ ಮಗುವಾಗಿ ಕೆಚ್ಚಿನ ಮಗಳಾಗಿ 
ಕಣ್ಮಣಿ ಕುಮಾರಿಯಾಗಿ ನಾಚುವ ವಧುವಾಗಿ
ಸಹನೆಯ ಸೊಸೆಯಾಗಿ ಇಚ್ಚೆಯ ಸತಿ ತಾನಾಗಿ
ಮುದ್ದು ಮಗುವಿನ ಮಮತೆಯ ತಾಯಾಗಿ 
ಮನ್ನಣೆಯ ಮಹಿಳೆಯಾಗಿ ಅರಿವಿನ ಅತ್ತೆಯಾಗಿ 
ಮೊಮ್ಮಕ್ಕಳ ಅಕ್ಕರೆಯ ಅಜ್ಜಿಯಾಗಿ 
ಹಿತಮಿತ ಗುಣದ ಖನಿ ವನಿತೆಯಾಗಿ 
ನಡೆಸುವಳಲ್ಲವೆ ಬಾಳಿನ ಈ ನೌಕೆಯನು ಸರಿಸಮವಾಗಿ ನಾರಿ 
ಗೃಹವನು  ಓರಣವಾಗಿಸುವ ಗೃಹಿಣಿ 
ಸಿರಿ ನಗೆಯ ಸರಳೆ ಸ್ತ್ರೀ ...
ಸೌಟು ಹಿಡಿವ ಕೈ ದೇಶದ ಚುಕ್ಕಾಣಿ ಹಿಡಿಯುವುದೆಂದು ತೋರಿದ ಇಂದಿರಾ 
ಕಲ್ಪನೆಗೂ ಹೋಗದ ಅಂತರಿಕ್ಷಯಾನದಿ ಮಿನುಗಿದ ಕಲ್ಪನಾ ಕಂದನ ಬೆನ್ನಿಗಿಟ್ಟುಕೊಂಡು ಇನಿತೂ ಕುಂದದೆ ಜರೆದ ವೈರಿಗಳ ತರಿದ ಝಾನ್ಸಿ 
ಬೆರಳ ತುದಿಯಲಿ ಲೋಕಜ್ಞಾನದ ಅರಿವನ್ನು  ತಿಳಿಯುವಂತೆ ಮಾಡಿದ ಸುಧಾ  
ರವಿ ಮುಳುಗದ ನಾಡೆಂದು ಬೀಗುತ್ತಿದ್ದವರಿಗೆ ಕಿರುಚಿ ನಡುಗಿಸಿದ ಚನ್ನಮ್ಮ 
ಚೈತ್ರದ ಕೋಗಿಲೆಯನ್ನು ನಾಚಿಸಿದ ಮಧುರ ಕಂಠದ ಲತಾ 
ನೆರಿಗೆ ತೀಡುವ ನೀರೆಯ ಪ್ರಗತಿಯು ಧಾರೆಯಾಗಿರಲಿ ನಿರಂತರ 
——Rukku

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.