ಸಬ್ಬಕ್ಕಿ ಸೊಪ್ಪಿನ ಚಪಾತಿ

3.666665
ಬೇಕಿರುವ ಸಾಮಗ್ರಿ: 

ಗೋಧಿ ಹಿಟ್ಟು – 2 ಕಪ್, ಸಣ್ಣಗೆ ಕತ್ತರಿಸಿದ ಸಬ್ಬಕ್ಕಿ ಸೊಪ್ಪು – ½ ಕಪ್, ಎಣ್ಣೆ – 10 ಚಮಚ, ಉಪ್ಪು – ರುಚಿಗೆ ತಕ್ಕಂತೆ, ಸಕ್ಕರೆ – 2 ಚಮಚ.

ತಯಾರಿಸುವ ವಿಧಾನ: 

ಅಗಲ ಬಾಯಿಯ ಪಾತ್ರೆಯಲ್ಲಿ ಗೋಧಿ ಹಿಟ್ಟು, ಉಪ್ಪು, ಸಕ್ಕರೆ ಮತ್ತು ಸಬ್ಬಕ್ಕಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ನೀರು ಹಾಕಿ ಚೆನ್ನಾಗಿ ಕಲೆಸಿ. ಎರಡು ಚಮಚ ಎಣ್ಣೆ ಹಾಕಿ ಚೆನ್ನಾಗಿ ನಾದಿ ತಟ್ಟೆಯಿಂದ ಮುಚ್ಚಿ ಅರ್ಧ ಗಂಟೆ ಹಾಗೇ ಬಿಡಿ. ನಂತರ ಪುಟ್ಟ ಪುಟ್ಟ ಉಂಡೆಗಳನ್ನಾಗಿ ಮಾಡಿ ಚಪಾತಿ ಲಟ್ಟಿಸಿ ಬೇಯಿಸಿ. ಬಿಸಿ ಬಿಸಿ ಚಪಾತಿಯನ್ನು ಕಾಯಿ ಚಟ್ನಿಯೊಂದಿಗೆ ತಿನ್ನಲು ಬಲು ರುಚಿಯಾಗಿರುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಶೋಭಾ ಅವರೆ,
ಬಿಸಿ ಬಿಸಿ, ರುಚಿ ರುಚಿ ಯಾಗಿರುವ ಚಪಾತಿಯ ಚಿತ್ರ ಹಾಕಬಹುದಿತ್ತು.... :-)

ಸಬಸ್ಕೆ ಸೊಪ್ಪು, ಸಬ್ಬಕ್ಕಿ ಸೊಪ್ಪು ಎರಡೂ ಒಂದೇನಾ, ಶೋಭಾ ಮೇಡಂ? ನಾನು ತರಕಾರೀ ಕೊಳ್ಳುವ ಮಾರುಕಟ್ಟೆಯಲ್ಲಿ ಸಬಸ್ಕೆ ಸೊಪ್ಪು ಎಂದು ಕರೆಯುವುದನ್ನು ಕೇಳಿದ್ದೇನೆ.

ಅಬ್ದುಲ್ ರವರೆ, ಸಬ್ಬಕ್ಕಿ ಸೊಪ್ಪು ಮತ್ತು ಸಬ್ಬಸ್ಕೆ ಸೊಪ್ಪು ಎರಡೂ ಒಂದೇ. ಇಲ್ಲಿ ಅಂದರೆ ಬೆಂಗಳೂರಿನಲ್ಲಿ..ಅಲ್ಲಲ್ಲ‌ ತಲಘಟ್ಟ‌ ಪುರದಲ್ಲಿ ಸಬಕ್ಕಿ ಸೊಪ್ಪು ಎನ್ನುತ್ತಾರೆ. ತಡ ಏಕೆ? ಸಬಸ್ಕೆ ಸೊಪ್ಪಿನ ಚಪಾತಿ ಮಾಡಿ ಸವಿಯಿರಿ.

ನಿಜ ಹೇಳಬೇಕೆಂದರೆ ಸಬ್ಬಕ್ಕಿ ಸೊಪ್ಪಿನ ಚಪಾತಿ ಯನ್ನು ತಿಂದಿದ್ದೇನೆ, ಚಿಕ್ಕಂದಿನಲ್ಲಿ. ನನ್ನ ಅಜ್ಜಿ ಪಾಕ ಶಾಸ್ತ್ರ ಪ್ರವೀಣೆಯಾ ಗಿದ್ದರು. ಕನ್ನಡದ ವಾರಪತ್ರಿಕೆ, (ಸುಧಾ, ಮಯೂರ, ಕಸ್ತೂರಿ, ಮಲ್ಲಿಗೆ) ಮಾಸ ಪತ್ರಿಕೆಗಳನ್ನ ಓದುತ್ತಿದ್ದ ಅವರಿಗೆ ಪಾಕಶಾಸ್ತ್ರ, ಮನೆ ಔಷಧಿ, ಇವು ಕರಗತ. ನಿಮ್ಮ ಕೈಯ ಸಬ್ಬಕ್ಕಿ ಚಪಾತಿ ಚೆನ್ನಾಗಿರಲೇಬೇಕು. -)

ಹಾಂ ... ಹಾಂ... ನನ್ನ ಸ್ನೇಹಿತೆಯರು ಸವಿದು ಚೆನ್ನಾಗಿದೆ ಎಂದು ಹೇಳುತ್ತಾರೆ... ಮನೆಯವರಲ್ಲ..!

ಫೋಟೋ ಅಪ್ಲೋಡ್ ಮೊದಲು ಇನ್ನೂ ಕಷ್ಟವಿತ್ತು. ಫೋಟೋ ಗಳನ್ನು "ಪಿಕಾಸವೆಬ್ ಗೆ ಅಪ್ಲೋಡ್ ಮಾಡಿ, ಅಲ್ಲಿಂದ ಒಂದಿಷ್ಟು ಸರ್ಕಸ್ ಮಾಡಿದ ನಂತರ ಸಂಪದದಲ್ಲಿ ಹಾಕಬೇಕಿತ್ತು. ಈಗ ಹಾಗಿಲ್ಲ. ನಿಮಗೆ ಆಗುತ್ತಿರುವ ತೊಂದರೆ ಎಲ್ಲಿ?

ಲೇಖನ ಸೇರಿಸುವಾಗ ಚಿತ್ರ ಸೇರಿಸಲು ವ್ಯವಸ್ಥೆಯುಂಟು. ಲೇಖನ ಸೇರಿಸಿದ ನಂತರ ಅದನ್ನು ಎಡಿಟ್ ಮಾಡಲಾಗದು.

ಚಿತ್ರ ಬ್ಯಾಕೆಂಡ್ ತಂಡಕ್ಕೆ ಕಳುಹಿಸಿಕೊಡಿ. ಈ ಪುಟಕ್ಕೆ ಹಾಕುವಲ್ಲಿ ಸಹಾಯ ಮಾಡುವರು.