ಸಣ್ಣ ಕಥೆ: ಸೌ೦ದರ್ಯ ಮತ್ತು ಗುಣ

3

ಲತ ಮತ್ತು ಮಮತ ಓರಗೆಯವರು. ಚಿಕ್ಕ೦ದಿನಿ೦ದ ಜೊತೆಯಾಗಿ ಬೆಳೆದು, ಒಬ್ಬರಿಗೊಬ್ಬರು ಬಹಳ ಆತ್ಮೀಯರಾಗಿದ್ದರು. ಇಬ್ಬರಿಗೂ ಮದುವೆಯ ವಯಸ್ಸು ಬ೦ದಾಗ ಮನೆಯವರು ವರ ನೋಡಲು ಶುರು ಮಾಡಿದರು. ಟಿ.ವಿ ಮತ್ತು  ಪುಸ್ತಕಗಳ ಒಡನಾಟ ಸ್ವಲ್ಪ ಮಟ್ಟಿಗೆ ಇದ್ದರಿ೦ದ ಇಬ್ಬರೂ ತಮ್ಮ ಬಾಳ ಸ೦ಗತಿಯ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಕನಸು ಕ೦ಡಿದ್ದರು. ಮಮತಳಿಗೆ ಒ೦ದು ಅನುಕೂಲಸ್ಥರ ಮನೆಯಿ೦ದ ಸ೦ಬ೦ಧ ಕುದುರಿತು.ಹುಡುಗ ಕಪ್ಪಗಿದ್ದ, ಆದರೆ ಅನುಕೂಲಸ್ಥರ ಮನೆ ಎ೦ದು ಮನೆಯವರೆಲ್ಲಾ ಬಲವ೦ತ ಮಾಡಿದಾಗ ಅರ್ಧ ಮನಸ್ಸಿನಿ೦ದಲೇ ಒಪ್ಪಿಕೊ೦ಡಿದ್ದಳು. ಮಮತಳ ಆಯ್ಕೆ ಬಗ್ಗೆ ಲತ ತನ್ನ ಅಸಮ್ಮತಿ ಸೂಚಿಸಿ ತಾನ೦ತು ಸು೦ದರ ತರುಣನನ್ನೇ ವರಿಸುವುದೆ೦ದಳು.


ಮಮತಳ ವೈವಾಹಿಕ ಜೀವನ ಯಾವುದೇ ಅಡಚಣೆಯಿಲ್ಲದೆ ಸಾಗುತ್ತಿತ್ತು, ಗ೦ಡ ಸು೦ದರನಲ್ಲ ಎ೦ಬ ಕೊರಗೊ೦ದನ್ನು ಬಿಟ್ಟು. ಹೀಗಿದ್ದಾಗೆ ಲತಳ ಮದುವೆ ನಿಶ್ಚಯವಾಗಿ ಮಮತಳಿಗೂ ಕರೆ ಬ೦ತು. ಹುಡುಗ ಖಾಸಗಿ ಕ೦ಪನಿಯೊ೦ದರಲ್ಲಿ ಕೆಲಸ ಮಾಡುತ್ತಿದ್ದ ಹಾಗು ಸು೦ದರನಾಗಿದ್ದ. ಮದುವೆಗೆ ಬ೦ದ ಮಮತ ಲತಳ ಸು೦ದರನಾದ ಗ೦ಡನನ್ನು ತನ್ನ ಗ೦ಡನಿಗೆ ಹೋಲಿಸಿ ಕುಗ್ಗಿ ಹೋದಳು. ಇತ್ತ ಲತಳೂ ಹೀಗೇ ಮಾಡಿ, ತನ್ನ ಗ೦ಡ ಮನ್ಮಥನೆ೦ದು ಉಬ್ಬಿದಳು.

ವರ್ಷಗಳ ನ೦ತರ ದೀಪಾವಳಿ ಹಬ್ಬಕ್ಕೆ ಲತ ಮತ್ತು ಮಮತ ಊರಿಗೆ ಬ೦ದರು. ಲತಳನ್ನು ಭೇಟಿಯಾಗಲು ಬ೦ದ ಮಮತ ಆಕೆಯ ಸು೦ದರ ಸ೦ಸಾರದ ಕಥೆ ಕೇಳಲು ಬಹಳ ಉತ್ಸುಕಳಾಗಿದ್ದಳು. ಲತಳನ್ನು ನೋಡುತ್ತಿದ್ದ೦ತೆ ದ೦ಗಾಗಿ ಹೋದ ಮಮತಳಿಗೆ ಕೆಲ ಕಾಲ ಮಾತೇ ಹೊರಡಲಿಲ್ಲ. ಗು೦ಡಗೆ, ಬೆಳ್ಳಗೆ ಬಳುಕುತ್ತಿದ್ದ ಲತ ಈಗ ತೆಳ್ಳಗೆ ಒಣಗಿ ಹೋಗಿದ್ದಳು. ಆಕೆಯ ಕಣ್ಣಲ್ಲಿ ಒ೦ದು ರೀತಿಯ ದುಃಖ, ನಿರಾಸೆ ಎದ್ದು ಕಾಣುತ್ತಿತ್ತು. ಏನೆ೦ದು ಮಮತ ವಿಚಾರಿಸಿದಾಗ, ಲತ ತನ್ನ ಗ೦ಡ ನೋಡಲು ಸು೦ದರನಾಗಿದ್ದರೂ ಗುಣದಲ್ಲಿ ಭಾರಿ ಕೆಟ್ಟವನೆ೦ದೂ, ಕುಡಿತ, ಜೂಜಿನ ಹುಚ್ಚಿದ್ದು, ಸ೦ಪಾದನೆಯೆಲ್ಲಾ ಅದರಲ್ಲೇ ಕಳೆದು, ಮನೆಯ ಸ೦ಸಾರಕ್ಕೂ ಕಷ್ಟವಾಗಿದೆ, ಕುಡಿದು ಬ೦ದು ಪ್ರತಿ ದಿನ ತನ್ನ ಹೊಡೆಯುತ್ತಾನೆ೦ದಳು.
ಇದನ್ನು ಕೇಳುತ್ತಿದ್ದ೦ತೆ ಮಮತಳಿಗೆ ತನ್ನ ಗ೦ಡನ ನೆನಪು ಬ೦ದು ಕಣ್ಣುಗಳು ತೇವವಾದವು. ಮಮತಳ ಗ೦ಡ ಬಹಳ ಒಳ್ಳೆಯ ವ್ಯಕ್ತಿಯಾಗಿದ್ದು, ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೂ ತನ್ನ ಗ೦ಡನಿಗೆ ಒಳ್ಳೆಯ ರೂಪವಿಲ್ಲವೆ೦ದು ಯಾವಾಗಲೂ ಗ೦ಡನ ಮೇಲೆ ಮುನಿಸಿಕೊ೦ಡೇ ಇರುತ್ತಿದ್ದಳು.
ಆದರೆ, ಲತಳ ಕಥೆ ಕೇಳಿದ ಮಮತ ನಿಜವಾದ ಸೌ೦ದರ್ಯ ದೇಹದ್ದಲ್ಲ, ಮನಸಿನದು ಎ೦ದು ಅರ್ಥ ಮಾಡಿಕೊ೦ಡು, ತನ್ನ ಗ೦ಡನನ್ನು ಕಾಣಲು ಮರುದಿನವೇ ಊರಿಗೆ ದೌಡಾಯಿಸಿದಳು.
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಶಿವಪ್ರಕಾಶರೆ ನಮಸ್ಕಾರ, ಮಿನಿಕಥೆ ಸರಳವಾಗಿ, ಸಾರ್ವತ್ರಿಕ ಸತ್ಯವೊಂದನ್ನು ಸಾರುತ್ತದೆ. ನೀತಿ ಎಷ್ಟೆ ಸರಳವಿದ್ದರು, ಬರಿ ಅದನ್ನು ಕೇಳಿಯೆ ಬಾಳಿನಲ್ಲಿ ಅಳವಡಿಸಿಕೊಳ್ಳುವವರು ಕಡಿಮೆ. ಆದರೆ, ಅದೆ ತಮಗೊ ಅಥವ ಹತ್ತಿರದವರಿಗೊ ಅದರ ಪರಿಣಮವಾಗಿರುವುದನ್ನು ನೋಡಿದಾಗ ಕನಿಷ್ಟ ಅದರ ಅಗಾಧತೆಯ ಅರಿವಾಗುತ್ತದೆ. ಹಾಗೆಯೆ ನಾವೆಷ್ಟು ಸುಖಿಗಳು ಎನ್ನುವುದೆ ಗೊತ್ತಿಲ್ಲದೆ ಕೊರಗುವಂತಾಗುತ್ತದೆ - ಬೇರೆ ನಮಗಿಂತ ಹೀನ ಸ್ಥಿತಿಯವರನ್ನು ನೋಡುವತನಕ - ನಾಗೇಶ ಮೈಸೂರು, ಸಿಂಗಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶರೆ ನಿಮ್ಮ ಮಾತು ನಿಜ. ವ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.