ಸಖ ಗೀತ...

5
 
ನೋಡಿಲ್ಲಿ ನಿನಗಾಗಿ ಹೂವೊಂದು ಅರಳಿದೆ 
ನೋಡಿಲ್ಲಿ ನಿನಗಾಗಿ ಹೂಮುಡಿದ ಹೆಣ್ಣಿದೆ 
 
ಗಂಡು ಹೆಣ್ಣು ಆಗಿ ನಾವ್ ಬಂದೆವು ಈ ಮಣ್ಣಿಗೆ 
ಗಂಡ ಹೆಂಡಿರು ಈಗ ಈ ಜಗದ ಕಣ್ಣಿಗೆ 
 
ಎತ್ತಲೋ ಹಾರಿ ಹೋದ ಹಕ್ಕಿಗಿಲ್ಲ ಬಂಧನ 
ಮತ್ತೆ ಅಲ್ಲಿ ಹರಿವ ಆ ನೀರಿಗೆ ಸ್ವಚ್ಛಂದನ 
(ಹೊತ್ತು ತುತ್ತಿಗೆಂದು ದುಡಿವುದೇ ಏನು ಜೀವನ!)
 
ಹತ್ತು ದಿಕ್ಕು ಹಾರಿ ಹಕ್ಕಿ ಬಂತೆ ಮತ್ತೆ ಗೂಡಿಗೆ
ಕತ್ತಲಾಯಿತು ಎಂದೇ ಚಿಕ್ಕೆ ಬಂತೆ ಬಾನಿಗೆ!
 
ನಿನ್ನನೆಲ್ಲೋ ಕರೆದೊಯ್ವ ಬೆಳಗಿಗೆ ನಾ ಕ್ಷಮಿಸುವೆ 
ಮತ್ತೆ ನಿನ್ನ ನನಗೀವ ಆ ಇರುಳಿಗೆ ನಾ ನಮಿಸುವೆ! 
 
ನೋಡಿಲ್ಲಿ ನಿನಗಾಗಿ ಹೂವೊಂದು ಅರಳಿದೆ 
ನೋಡಿಲ್ಲಿ ನಿನಗಾಗಿ ಹೂಮುಡಿದ ಹೆಣ್ಣಿದೆ 
-ಮಾಲು 
 
  
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.