ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿರುವ ಬಿಜೆಪಿ

1

ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿರುವ ಬಿಜೆಪಿ.

ಕೇಂದ್ರದಲ್ಲಿ ಬಿ.ಜೆ.ಪಿ.(NDA) ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಿದ್ದಾರೆ. ಹಿಂದೆ ಇವರು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಇದೆ ಪ್ರಯತ್ನಗಳಿಗೆ ಕೈ ಹಾಕಿದ್ದರು. ಇತ್ತಿಚೆಗೆ ಬಿಜೆಪಿ ಸಂಸದರು ತಮ್ಮ ಅಜೆಂಡದ ಜಾರಿಗಾಗಿ ಕಸರತ್ತು ನಡೆಸುತ್ತಿರುವುದು ಆಘಾತಕಾರಿ ಸಂಗತಿ. ಹಿಂದು ರಾಷ್ಟ್ರ ನಿರ್ಮಾಣ ಮಾಡಲು RSS ನವರು ಪಣತೊಟ್ಟು ಕೆಲಸಕ್ಕಿಳಿದಿದ್ದಾರೆ. ಹಿಂದು ರಾಷ್ಟ್ರ ನಿರ್ಮಾಣವೇ ಅವರ ಜನ್ಮ ಸಿದ್ದ ಹಕ್ಕು ಎಂದು ಹೇಳುವ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳನ್ನು ನಾಶ ಮಾಡಲು ಮುಂದಾಗುತ್ತಿದೆ. ಸಂವಿಧಾನ ರಚನೆಯಾಗುವಾಗಲೂ ಇದೇ ರೀತಿಯ ಪಟ್ಟು ಹಿಡದಿದ್ದ ಇವರಿಗೆ ಬಹು ದೊಡ್ಡ ಸೋಲಾಗಿರುವುದರ ಸೇಡನ್ನು ತೀರಿಸಿಕೊಳ್ಳಲು ಹವಣಿಸಿದಂತೆ ಕಾಣುತ್ತಿದೆ. ಸಂವಿಧಾನದಲ್ಲಿನ ಜಾತ್ಯಾತೀತ ಮೌಲ್ಯಗಳನ್ನು ಎತ್ತಿ ಹಿಡಿಯಲು ನಾವು ಮುಂದಾಗಬೇಕಿದೆ. ಇನ್ನಿಲ್ಲದ ವಿವಾದ ಎಬ್ಬಿಸಿ ದೇಶದ ಸಾಮರಸ್ಯಕ್ಕೆ ದಕ್ಕೆ ತರುತ್ತಿರುವ ಇವರ ವಿರುದ್ದ ಪ್ರಭಲ ಜನಾಂದೋಲನಕ್ಕೆ ಮುಂದಾಗಬೇಕಿದೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ‌ ಲೇಖನ‌ ಓದಿ ಬಹಳ‌ ಬೇಸರವಾಯಿತು. RSS ಕೆಲಸಗಳನ್ನು ನೀವು ಸರಿಯಾಗಿ ತಿಲಿದಿದ್ದರೆ ಈ ಲೇಖನ‌ ಬರೆಯುತ್ತಿರಲಿಲ್ಲವೇನೋ? ಜಾತ್ಯಾತೀತದ‌ ಅರ್ಥವೇ ಬಲ್ಲದ‌ ನೀವು ಜಾತ್ಯಾತೀತದ‌ ಮೌಲ್ಯಗಳನ್ನು ಎತ್ತಿ ಹಿಡಿಯುವ‌ ಮಾತನಾಡುತ್ತಿದ್ದಿರಿ. ನಮ್ಮ‌ ದೇಶದಲ್ಲಿ ಪ್ರತಿಯೊಂದು ಧರ್ಮಕ್ಕೂ ಸ್ವೇಚ್ಚೆಯಿಂದ‌ ಧರ್ಮಾಚರಣೆ ಮಾಡುವ‌ ಅಧಿಕಾರ‌ ಇದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.