ಸಂವಹನ

2
ಸಂವಹನ
 
ಸಂವಹನ , ವೆಂಕಟಸುಬ್ಬಯ್ಯನವರ ಕನ್ನಡ ಕನ್ನಡ ನಿಘ್ಹಂಟು ತೆರೆದು ನೋಡಿದಲ್ಲಿ,  ತಿಳಿಸುವುದು, ಸಂಪರ್ಕಿಸುವುದು, ಸಂವಾದ ಮಾಡುವುದು, ಮನಮುಟ್ಟಿಸುವುದು ಹೀಗೆ ನಾನ ಅರ್ಥಗಳಿವೆ. ಅಂಗ್ಲದಲ್ಲಿ ಕಮ್ಯೂನಿಕೇಶನ್ ಎನ್ನುವ ಏಕ ಪದ ಅದಕ್ಕೆಸಂವಹನಕ್ಕೆ ಸರಿಸಮಾನವೇನೊ. 
ಸಂವಹನದ ಅರ್ಥ ಹೀಗೆ ಹೇಳಬಹುದು , ಒಬ್ಬರು ತಮ್ಮ ಮನಸಿನ ಭಾವನೆಗಳನ್ನು, ಅಭಿಪ್ರಾಯಗಳನ್ನು , ಉಪಾಯಗಳನ್ನು , ಉದ್ದೇಶಗಳನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳುವುದು ಸಂವಹನ ಅನ್ನಬಹುದೇನೊ. ಸಾಮಾನ್ಯವಾಗಿ ಸಂವಹನ ಎಂದರೆ ಇಬ್ಬರು ಅಥವ ಹೆಚ್ಚು ಜನರ ನಡುವೆ ನಡೆಯುವ ದ್ವಿಮುಖ ಕ್ರಿಯೆ. ಅಂದರೆ ಪರಸ್ಪ್ರರ ಹಂಚಿಕೊಳ್ಳುವ ಕ್ರಿಯೆ.  ಇವುಗಳು ವಿದಾನವು ಅನೇಕ ರೀತಿ, ಇಬ್ಬರ ನಡುವೆ ಮುಖಾಮುಖಿ, ಸಣ್ಣ ಗುಂಪಿನಲ್ಲಿಯ ಚರ್ಚೆ. ಹಲವಾರು ಜನರು ಸೇರಿ ಮೀಟಿಂಗ್ ಮಾಡಿ ಚರ್ಚಿಸುವುದು, ಅಥವ ಪತ್ರಿಕೆ, ಟೀವಿ ಮಾಧ್ಯಮಗಳ ಮೂಲಕ, ಅಂತರ್ಜಾಲದ ಮೂಲಕ ಪರಸ್ಪರ ಭಾವನೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಕ್ರಿಯೆಯೆ ಆಗಬಹುದು. ಹಾಗೆ ಭೋದನೆ, ಮನೋರಂಜನೆ ಎಲ್ಲವು ಸಂವಹನವೆ.
 
ಸಂವಹನವನ್ನು  ಹೊರರೂಪದಲ್ಲಿ ಮೂರು ವಿದವಾಗಿ ಗುರ್ತಿಸಬಹುದು
 
೧) ಶಬ್ದಗಳ (ಮಾತಿನ) ಮೂಲಕ 
೨) ಶಬ್ದ ಅಥವ ಪದಗಳಿಲ್ಲದೆ ಹಾವಭಾವಗಳ ಮೂಲಕ 
೩)ಬರವಣಿಗೆಯ ಮೂಲಕ
 
ಶಬ್ದರೂಪ : ವ್ಯಕ್ತಿಯು ತನ್ನ ಅಭಿಪ್ರಾಯವನ್ನು ಮಾತುಗಳ ಮೂಲಕ ನೇರವಾಗಿ, ಅಥವ ಟೆಲಿಪೋನ್ ಮುಂತಾದ ಮಾಧ್ಯಮದ ಮೂಲಕ ಮತ್ತೊಬ್ಬರಿಗೆ ಅಥವ ಗುಂಪಿಗೆ, ಬಾಷಣ ರೂಪದಲ್ಲಿ ಹೀಗೆ ನಾನಾ ರೂಪದಲ್ಲಿ ವ್ಯಕ್ತಪಡಿಸುವ ವಿಧಾನ
 
ಆದರೆ ಕೆಲವೊಮ್ಮೆ  ನಾವು ಆಡುವ ಮಾತು ಮತ್ತೊಬ್ಬರಿಗೆ ತಲುಪುವಾಗ, ನಾವು ವ್ಯಕ್ತ ಪಡಿಸುವ ರೂಪದಲ್ಲಿಯೆ ತಲುಪುವದಿಲ್ಲ ಅಲ್ಲವೆ, ಅವುಗಳು ವಿಕಾರಗೊಳ್ಳುತ್ತವೆ, ಅಥವ ಅರ್ಥಕೆಡುತ್ತದೆ, ಹೀಗಾಗಲು ಹಲವು ಕಾರಣಗಳನ್ನು ಗುರುತಿಸಬಹುದು
 
 * ಕೇಳುತ್ತಿರುವ ವ್ಯಕ್ತಿ , ಮಾತುಗಳು ಗಮನವಿಟ್ಟು ಕೇಳುವುದಿಲ್ಲ ಆಗ ನಾವಾಡುವ ಮಾತುಗಳು ಅವನನ್ನು ಸರಿಯಾಗಿ ತಲುಪಲಾರವು
*ಹೊರಗಿನ ಶಬ್ದ, ಬೆಳಕು ವಾಸನೆ ಇಂತಹ ಅಡೆತಡೆಗಳು ಸಹ ನಮ್ಮ ಮಾತನ್ನು ವ್ಯಕ್ತಿಗೆ ಸರಿಯಾದ ರೀತಿಯಲ್ಲಿ ತಲುಪದಂತೆ ಮಾಡಬಲ್ಲವು
*ಅಥವ ಕೆಲವೊಮ್ಮೆ ನಮ್ಮ ಮಾತುಗಳು ಸ್ವಷ್ಟವಾಗಿಲ್ಲದೆ ಹೋಗಬಹುದು ಆಗ ಸಹ ಸಂವಹನ ಕ್ರಿಯೆ ಅಪೂರ್ಣವಾಗಬಹುದು
*ಕೇಳುತ್ತಿರುವ ವ್ಯಕ್ತಿ, ನಮ್ಮ ಮಾತು ಪೂರ್ಣವಾಗುವ ಮೊದಲೆ, ಮನಸಿನಲ್ಲಿ ಆ ಬಗ್ಗೆ ನಿರ್ದಾರಕ್ಕೆ ಬರುವದರಿಂದ ನಮ್ಮ ಮಾತನ್ನು ಪೂರ್ಣ ಕೇಳುವದಿಲ್ಲ
*ಕೆಲವೊಮ್ಮೆ ಅತಿಯಾದ ಭಾವುಕತೆ , ಕಣ್ಣೀರು, ನಗು ಇಂತವು ಸಹ ನಮ್ಮ ಮಾತನ್ನು ಅರ್ಥಪೂರ್ಣವಾಗದಂತೆ ಮಾಡುತ್ತವೆ, ಉದಾ : ನೀವು ನಗುತ್ತ ಮಾತನಾಡಿದರೆ ಎದುರಿಗೆ ಇರುವವರಿಗೆ ಅರ್ಥವಾಗುವದಿಲ್ಲ
*ಮದ್ಯವರ್ತಿಗಳು ಅಂದರೆ ನಮ್ಮ ಮಾತನ್ನು ಬೇರೊಬ್ಬರ ಮೂಲಕ ತಲುಪಿಸುವುದು ಆಗ ಸಹ ಸಂವಹನ ಅರ್ಥಕಳೆದುಕೊಳ್ಳಬಹುದು, 
*ಒಮ್ಮೆ ಆ ಮದ್ಯವರ್ತಿ ಒಬ್ಬರಿಗಿಂತ ಹೆಚ್ಚು ಜನರಿದ್ದಲ್ಲಿ ಆಗ ನಮ್ಮ ಮಾತುಗಳು  ಬೇಕಾದವರಿಗೆ ತಲುಪದೆ ಬೇರೆ ಅರ್ಥ ಪಡೆದುಕೊಳ್ಳಬಹುದು (ಗಾಸಿಪ್ ಗಳು)
*ಮಾತು ಕೇಳಲು ನಿರಾಕರಣೆ ಅಂದರೆ ಎದುರಿನ ವ್ಯಕ್ತಿ ನಮ್ಮ ಮಾತು ಕೇಳಿಸಿಕೊಳ್ಲಲು ಸಾದ್ಯವಿಲ್ಲದ ಸ್ಥಿಥಿಯಲ್ಲಿರುವುದು, ನಿರಾಕರಿಸುವುದು ಸಹ ಸಂವಹನವನ್ನು ಮುರಿಯಬಲ್ಲದು
*ಕೆಲವೊಮ್ಮೆ  ನಮಗೆ ಅರ್ಥವಾಗದಿದ್ದರು ಸಹ , ಪ್ರಶ್ನೆಗಳ ಮೂಲಕ ಅನುಮಾನ ಪರಿಹರಿಸಿಕೊಳ್ಳಬಹುದು, ಒಮ್ಮೆ ಆ ಪ್ರಶ್ನೆಮಾಡುವ ಶ್ರದ್ದೆ ಇಲ್ಲದಿದ್ದರು ಸಹ ಸಂವಹನ ಅರ್ದವೆ 
 
ಶಬ್ದರಹಿತ (ಪದಗಳಿಲ್ಲದ) ಸಂವಹನ
====================
 
ಹೌದಲ್ಲವೆ, ಮಾತುಗಳಿಲ್ಲದೆ ಸಹ ನಮ್ಮ ಭಾವನೆಗಳು ಎದುರಿನ ವ್ಯಕ್ತಿಗೆ ತಲುಪಬಲ್ಲದು, ಆಕಳಿಕೆ (ನಿರಾಸಕ್ತಿ) ಕಣ್ಣೀರು (ದುಖಃ) ಈ ರೀತಿ ವಿವಿದ ಭಾವಗಳು, ಶಬ್ದರಹಿತ ಸಂವಹನವನ್ನು ಆರು ವಿಭಾಗವಾಗಿ ನೋಡಬಹುದೇನೊ
 
೧)ದೈಹಿಕ ಭಾಷೆ,   ೨) ವ್ಯಕ್ತಿಯ ಹೊರರೂಪ ೩)ದ್ವನಿ  ೪) ವ್ಯಕ್ತಿಗಳ ನಡುವಿನ ದೂರ ೫)ವಾತವರಣ ‍ ಹಾಗು ೬) ಸಮಯ 
 
ದೈಹಿಕ ಬಾಷೆ ಎಂದರೆ ಮುಖಭಾವ, ಕೈಕಾಲುಗಳ ಚಲನೆ, ದೈಹಿಕ ಚಲನೆ ಎಲ್ಲವು ಸಂವಹನಗಳಾಗಬಹುದು, ಎದುರಿನ ವ್ಯಕ್ತಿ ಆಡುತ್ತಿರುವ ಮಾತುಗಳು ಕೇಳಲು ಇಷ್ಟವಿಲ್ಲದಿದ್ದರೆ ಅದನ್ನು ಆಕಳಿಕೆ ಮೂಲಕ, ಅಥವ ಕುಳಿತುಕೊಳ್ಳುವ ಬಂಗಿಗಳ ಮೂಲಕವು ತೋರಿಸಬಹುದು. ಶಾಲೆಗಳಲ್ಲಿ ಕಡೆಯ ಗಂಟೆಯ ಭೋದನೆ ಉಪಾದ್ಯಾಯರಿಗೆ ಸದಾ ಸವಾಲೆ, ಅವರಿಗೆ ವಿಧಾರ್ಥಿಗಳ ದೈಹಿಕ ಚಲನವಲನಗಳೆ ತಿಳಿಸುತ್ತವೆ , ಅವರ ಭೋದನೆ ಕೇಳಲು ಯಾರಿಗು ಆಸಕ್ತಿ ಇಲ್ಲವೆಂದು. ಹಾಗೆ ನಮ್ಮ ಹೊರರೂಪ, ಅಂದರೆ ಬಟ್ಟೆ, ತಲೆ ಬಾಚಿಲ್ಲದೆ ಇರುವುದು, ಕೊಳಕಾಗಿರುವುದು ಸಹ ನಮ್ಮ ಬಗ್ಗೆ ಮತ್ತೊಬ್ಬರಿಗೆ ಅಭಿಪ್ರಾಯ ದಾಟಿಸುತ್ತೆ, ಉದಾ : ಗಡ್ಡ ಬಿಟ್ಟಲ್ಲಿ ವ್ಯಕ್ತಿ ವಿರಹಪೀಡಿತನೆ ?? 
 
ಹಾಗೆ ನಮ್ಮ ದ್ವನಿ , ಸೂಸುವ ಆತ್ಮೀಯತೆ, ಕ್ರೋದ, ಸಂತಸ, ಎಲ್ಲವು ಪದಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮತ್ತೊಬ್ಬರಿಗೆ ತಲುಪುವುವು.  ಹಾಗೆ ಮಾತುಗಳ ನಡುವಿನ ಒತ್ತುಗಳು ಹೆಚ್ಚು ಅರ್ಥಪೂರ್ಣ ಅನಿಸುವುದು ಅಂದರೆ, ಹ್ಮೂ, ಆಯಿತು, ಒಕೆ, ಹ್ಹಾ, , ಊಹೂ, ಇಂತ ಮಾತುಗಳೆಲ್ಲ ಸಂಭಾಷಣೆಯನ್ನು ಪೂರ್ಣಮಾಡಬಲ್ಲವು. 
 
 ಒಬ್ಬನೆ ವ್ಯಕ್ತಿಯನ್ನು ನೀವು ಸಾರ್ವಜನಿಕ ಸ್ಥಳದಲ್ಲಿ, ಶಾಲೆಯಲ್ಲಿ ಅಥವ ಮನೆಯಲ್ಲಿ ನೋಡುವಾಗ ದೂರದ ವ್ಯತ್ಯಾಸ ಕಾಣುವುದು, ಹಾಗೆ ಹೊರಗಿನ ವಾತವರಣ ಅಂದರೆ ಬೆಳಕು, ವಾಸನೆ,  ರಾತ್ರಿ ಹಗಲು, ಸಂಜೆ ಇಂತವೆಲ್ಲ ನಮ್ಮ ಅಭಿಪ್ರಾಯ ತಲುಪಿಸುವಲ್ಲಿ ಸಹಾಯಕ. ನೀವು ಮಾತನಾಡುತ್ತಿರುವಲ್ಲಿ, ಎಂತದೋ ಕೆಟ್ಟ ವಾಸನೆ ರೂಮಿನಲ್ಲಿ ತುಂಬಿದೆ ಎಂದರೆ, ಕೇಳುವವರಿಗೆ ಆ ಕಡೆ ಗಮನ ಹೊರತಾಗಿ ನಮ್ಮ ಮಾತಿನ ಕಡೆಗಲ್ಲ. 
 
 ಅಲ್ಲದೆ ನಾವು ತಿಳಿಸುವ ವಿಷಯ ಎಷ್ಟು ಕ್ಲುಪ್ತವಾಗಿ, ಆಕರ್ಷಕವಾಗಿ ಹೇಳುತ್ತೇವೆ ಅನ್ನುವುದು ಮುಖ್ಯ,  ದೀರ್ಘ ಮಾಡಿದರೆ, ಕನ್ನಡ ದಾರವಾಹಿಗಳಂತೆ ಅರ್ಥ ಕಳೆದುಕೊಳ್ಳುವುವು.
 
ಬರವಣಿಗೆ ಮೂಲಕ
===============
ಬರವಣಿಗೆ ಹೆಚ್ಚು ಪರಿಣಾಮಕಾರಿ ಕೆಲವೊಮ್ಮೆ.  ಬರವಣಿಗೆ ಕೆಲವೊಮ್ಮೆ ಮುಂದಿನ ದಾಖಲೆಯು ಆಗಬಲ್ಲದು. ನಾವು ಹೆಚ್ಚು ಎಚ್ಚರ ವಹಿಸಿ ಮಾಡುವ ಕ್ರಿಯೆ ಬರವಣಿಗೆ, ಬರೆಯುವ ಮುಂಚೆ ನಮ್ಮ ಚಿಂತನೆಯಿರುತ್ತದೆ ಹಾಗಾಗಿ, ಅವು ನಮ್ಮ ಅಭಿಪ್ರಾಯಗಳನ್ನು ಹೆಚ್ಚು ಸ್ವಷ್ಟವಾಗಿ ವ್ಯಕ್ತಪಡಿಸಬಲ್ಲದು ಬರವಣಿಗೆ. ಇದು ಪತ್ರವಾಗಬಹುದು, ಲೇಖನವಾಗಬಹುದಿ, ಪುಸ್ತ್ಕಕ ಅಥವ ಈ ಮೈಲ್ ಮುಂತಾದ ಮಾಧ್ಯಮಗಳಾಗಬಹುದು. ಬರವಣಿಗೆ ಮಾತಿಗಿಂತ ಹೆಚ್ಚು ಅಧಿಕಾರಯುಕ್ತವಾಗಬಲ್ಲದು 
 
 
ಸಂವಹನದ ಕೊರತೆಗಳು 
================
೧)ಗೊಂದಲಕಾರಿ ಹೇಳಿಕೆಗಳು : ಕೆಲವೊಮ್ಮೆ ನಮ್ಮ ಮಾತುಗಳು ಗೊಂದಲಕಾರಿಯಾಗಿದ್ದು ಅರ್ಥಕಳೆದುಕೊಳ್ಳವದರ ಜೊತೆ ವಿಚಿತ್ರ ಅರ್ಥಗಳು ಹೊಮ್ಮುವುವು, ಇಲ್ಲಿ ನೋಡಿ ಉದಾಹರಣೆಗೆ ಒಂದು ಪೇಪರ್ ಪ್ರಕಣಣೆ "ನಾಯಿ ಮಾರಾಟಕ್ಕಿದೆ,  ಆಕರ್ಷಕ ಬಣ್ಣ, ಎನನ್ನಾದರು ತಿನ್ನುತ್ತದೆ, ಮಕ್ಕಳೆಂದರೆ ಹೆಚ್ಚು ಇಷ್ಟ " .  ಇಲ್ಲಿ ನಾಯಿ ಮಗುವನ್ನು ತಿನ್ನುತ್ತದೆ ಎನ್ನುವ ಅರ್ಥಕೊಡುತ್ತದೆ.   ಹಾಗಾಗಿ ನಮ್ಮ ಮಾತುಗಳು ಹೆಚ್ಚು ಅರ್ಥಪೂರ್ಣವಾಗಿರಬೇಕಾಗುತ್ತದೆ ಹಾಗು ತರ್ಕಬದ್ದವಾಗಿರಬೇಕಾಗಿರುತ್ತದೆ
 
೨)ಪೂರ್ವಗ್ರಹ ಪೀಡಿತವಲ್ಲದ ಅಭಿಬ್ರಾಯಗಳು, ನಮ್ಮ ಮಾತಿನಲ್ಲಿ ಕೆಲವೊಮ್ಮೆ ಮೊದಲೆ ನಿರ್ದರಿಸಿದ ಅಭಿಪ್ರಾಯಗಳಿರುತ್ತವೆ, ಉದಾ : ಬಾಸ್ಕೆಟ್ ಬಾಲ್ ಆಟಗಾರರು ಎಲ್ಲರಿಗಿಂತ ಉದ್ದ, ಪೆಟ್ರೋಲ್ ವಾಹ ಡೀಸಲ್ ವಾಹನಕ್ಕಿಂತ ಉತ್ತಮ ಈ ರೀತಿಯಾಗಿ 
 
೩) ಕೆಲವೊಮ್ಮೆ ನಮ್ಮ ಅಭಿಪ್ರಾಯ ವ್ಯಕ್ತ ಪಡಿಸಲು ತಪ್ಪು ಮಾದ್ಯಮ ಆರಿಸಿಕೊಳ್ಳುವೆವು, ಉದಾ : ಉಪಾದ್ಯಾಯರು ಹುಡುಗರಿಗೆ ಬಾಯಲ್ಲಿ ಗುಡ್ ಮಾರ್ನಿಂಗ್ ಹೇಳಿದರೆ ಹೆಚ್ಚು ಪರಿಣಾಮಕಾರಿ ಬದಲಿಗೆ, ಬೋರ್ಡಿನ ಮೇಲೆ ಗುಡ್ ಮಾರ್ನಿಂಗ್ ಎಂದು ಬರೆದರು ಸರಿಯಾಗದು, ಹಾಗೆಯೆ ದಿನನಿತ್ಯ ತಡವಾಗಿ ಬರುವ ನಿಮ್ಮ ಕೈಕೆಳಗಿನ ಅಧಿಕಾರಿಗೆ ತಡವಾಗಿ ಬರಬೇಡವೆಂದು ಬಾಯಲ್ಲಿ ಹೇಳುವ ಎಚ್ಚರಿಕೆಗಿಂತ , ಬರವಣಿಗೆಯಲ್ಲಿನ ಮೆಮೊ ಹೆಚ್ಚು ಪರಿಣಾಮಕಾರಿ, ಹಾಗಾಗಿ ನಾವು ನಮಗೆ ಸರಿಯಾಗಿ ಹೊಂದುವ ಮಾಧ್ಯಮವನ್ನೆ ಆರಿಸಿಕೊಳ್ಳಬೇಕು. ನಿಮ್ಮ ಸ್ನೇಹಿತರ ಪುಟ್ಟ ಮಗುವಿನೆ ’ಹ್ಯಾಪಿ ಬರ್ತ್ ಡೇ" ಎಂದು ಹರಸುವದಕ್ಕಿಂತೆ , ಬಣ್ಣದ ಒಂದು ಶುಭಾಷಯ ಪತ್ರ ಅವನಿಗೆ ಹೆಚ್ಚು ಸಂತಸ ತರಬಲ್ಲದು
 
೪)ನಾವು ಆಡುವ ಮಾತಿನ ಸರಾಸರಿ ವೇಗ ಸುಮಾರು ನಿಮಿಶಕ್ಕೆ 120 ಪದಗಳು, ಆದರೆ ಕೇಳುವವರ ವೇಗ ಸಾಮಾನ್ಯವಾಗಿ ನಿಮಿಷಕ್ಕೆ 400-600 ರವರೆಗು ಇರಬಲ್ಲದು. ಅಂದರೆ ಕೇಳುವಾಗ ಬಹಳ ಸಮಯ ಖಾಲಿ ಉಳಿಯುತ್ತದೆ, ಅನ್ನುವಾಗ ಮಾತನ್ನು ಕೇಳಿಸುಕೊಳ್ಳುವುದು ಸಹ ಒಂದು ಕಲೆ ಹಾಗು ಹೆಚ್ಚು ಸಹನೆ ನಿರೀಕ್ಷಿಸುತ್ತದೆ. ಅದಕ್ಕಾಗಿ ಕೆಲವೊಮ್ಮೆ ನಮ್ಮ ಮಾನಸಿಕ ಸಿದ್ದತೆ ಇರಬೇಕಾಗುತ್ತದೆ. ಕೇಳುವಾಗ ಮನಸನ್ನು ಹೆಚ್ಚು ಕೇಂದ್ರಿಕರಿಸಬೇಕಾಗುತ್ತದೆ
 
೫)ಹೊರಗಿನ ಅಡೆತಡೆಗಳು ಸಹ ನಮ್ಮ ಕೇಳುವಿಕೆ ಮೇಲೆ ಪರಿಣಾಮ ಬೀರುತ್ತದೆ.  
 
 
ಹಾಗಾಗಿ ನೀವು ಉತ್ತಮ ಸಂವಹನಕಾರರಾಗಬೇಕಿದ್ದಲಿ ಉತ್ತಮ ಕೇಳುಗರಾಗಿ. ಸಹನೆ ಬೆಳೆಸಿಕೊಳ್ಳಿ,  ಯಾವ ಮಾತುಗಳನ್ನು ಋಣಾತ್ಮಕವಾಗಿ ಚಿಂತಿಸದೆ ಧನಾತ್ಮಕವಾಗಿ ತೆಗೆದುಕೊಳ್ಳಿ. ಎದುರಿನ ವ್ಯಕ್ತಿಯ ಮಾತುಗಳನ್ನು ಸುಮ್ಮನೆ ಕೇಳದೆ ಉತ್ತಮವಾಗಿ ಸ್ಪಂದಿಸಿ. ಅವನನ್ನು ಮಾತನಾಡಲು ಉತ್ತೇಜಿಸಿ. ಉತ್ತಮ ಸಂವಹನಕಾರರಾಗುವುದು ಸಹ ಒಂದು ಕಲೆ. 
 
--------------------------------------------------------------------------------------------------
ಈಚೆಗೆ ಓದಿದ 
communication skill 
ಎಂಬ ಆಡಳಿತ್ಮಾಮಕ ವಿಷಯದ ಕನ್ನಡ ರೂಪ 
 
 
 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಸರಣಿ: 
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪಾರ್ಥರೆ, ಉತ್ತಮ ವಿಚಾರ. >>ಉತ್ತಮ ಕೇಳುಗರಾಗಿ. ಸಹನೆ ಬೆಳೆಸಿಕೊಳ್ಳಿ, ..ಇದೇ ಕಷ್ಟ. ವಿಷಯ ಗೊತ್ತಿರಲಿ ಇರದಿರಲಿ ನಿಮ್ಮ "ಲೈಟ್‌ಕಂಬಮತ್ತು ಹಸು" ಕತೆಯ ಹಾಗೆ, ಹೇಳುಗರ ಮಾತನ್ನು ಅರ್ಧಕ್ಕೆ ನಿಲ್ಲಿಸಿ, ತಮ್ಮ ವಿಚಾರ ಹೇಳಲು ಪ್ರಾರಂಭಿಸುವರು. ತಾಳ್ಮೆ ಸುತರಾಂ ಇಲ್ಲ...(ನನ್ನನ್ನೂ ಸೇರಿಸಿ).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಲೇಖನ ಚೆನ್ನಾಗಿದೆ.ಉತ್ತಮ ಸಂವಹನ ಕಲೆಯನ್ನು ನಮ್ಮದಾಗಿಸಿಕೊಳ್ಳಬೇಕು.ಅದಕ್ಕೆ ಸಹನೆ, ದೃಢತೆ, ಏಕಾಗ್ರತೆಯ ಅಗತ್ಯವಿದೆ. ಆದರೆ ಹೆಚ್ಚಾಗಿ ನಾವು ಇನ್ನೊಬ್ಬರು ಹೇಳುವುದನ್ನು ಪೂರ್ತಿಯಾಗಿ ಕೇಳಿಸಿಕೊಳ್ಳದೆ ,ಅರ್ಧದಲ್ಲೇ ನಮ್ಮಅಭಿಪ್ರಾಯ ಹೇಳತೊಡಗುತ್ತೇವೆ. ಅಥವಾ ಕೇಳಿಸಿಕೊಂಡವರಂತೆ ಕಂಡರೂ,ಮನವು ಮಾತ್ರ‌ ವಿಚಾರದ ಎಳೆಯೊಂದನ್ನು ಹಿಡಿದು ತನ್ನ ಯೋಚನಾ ಲಹರಿಯನ್ನು ಮುಂದುವರಿಸಿರುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕೇಳಿಸಿಕೊಂಡವರಂತೆ ಕಂಡರೂ,ಮನವು ಮಾತ್ರ‌ ವಿಚಾರದ ಎಳೆಯೊಂದನ್ನು ಹಿಡಿದು ತನ್ನ ಯೋಚನಾ ಲಹರಿಯನ್ನು ಮುಂದುವರಿಸಿರುತ್ತದೆ. >>> ಈ ಮಾತು ನಿಜ ಹಾಗಾಗಿ ನಮ್ಮ ಮಾತು ಕೇಳಿಸಿಕೊಳ್ಳುವಾಗ ನಮ್ಮ ಮನಸಿನ ಏಕಾಗ್ರತೆ ಹಾಳಾಗುತ್ತದೆ, ಮಾತು ಪೂರ್ತ ಕೇಳಿಸಿಕೊಳ್ಲಲು ಸಾದ್ಯವಾಗುವದಿಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶರೆ ನಿಜ , ನಾವು ಮೊದಲು ಉತ್ತಮ ಕೇಳುಗರಾಗಬೇಕು ನಂತರವೆ ನಮ್ಮ ವಿಚಾರ ಹೇಳಬಹುದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥ ಸಾರಥಿಯವರಿಗೆ ವಂದನೆಗಳು ' ಸಂವಹನ ' ಒಂದು ಧ್ವನಿಪೂರ್ಣ ಬರಹ, ಅದರ ವಿವಿಧ ಆಯಾಮಗಳ ಕುರಿತು ಅರ್ಥಪೂರ್ಣವಾಗಿ ದಾಖಲಿಸಿದ್ದೀರಿ, ಉತ್ತಮ ಲೇಖನ ನೀಡಿದ್ದೀರಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರಿಗೆ ವಂದನೆಗಳು, ತಮ್ಮಮೆಚ್ಚುಗೆ ಸಂತಸ ತಂದಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.