ಸಂಪದ ಸಮ್ಮಿಲನಕ್ಕೆ ಮಾರ್ಗಸೂಚಿ

3

ಸಂಪದ ಸಮ್ಮಿಲನಕ್ಕೆ ಸಂಪದಿಗರಿಗೆ ಆತ್ಮೀಯ ಸ್ವಾಗತ, ದೂರದ ಊರುಗಳಿಂದ ಸಂಪದ ಸಮ್ಮಿಲನಕ್ಕೆ ಬರುವವರಿಗೆ ಸಹಾಯವಾಗಲೆಂದು ಈ ಮಾರ್ಗಸೂಚಿಯನ್ನು ಪ್ರಕಟಿಸುತ್ತಿದ್ದೇವೆ.

ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಾಗಡಿ ಮುಖ್ಯ ರಸ್ತೆಯಲ್ಲಿ ಸಂಚರಿಸುವ ಬಸ್ಸುಗಳ ಫ್ಲಾಟ್ ಪಾರಂ ಗೆ ಬಂದು 26, 27 , 28, 29 ಈ ಅಂಕಣಗಳಲ್ಲಿರುವ - ಜನಪ್ರಿಯ, ತಾವರೆಕೆರೆ, ಬ್ಯಾಡರಹಳ್ಳಿ, ಗೊಲ್ಲರಹಟ್ಟಿ, ಭಾರತ್ ನಗರ ಬಸ್ಸುಗಳಲ್ಲಿ ಬಂದು ಸುಮಾರು ಮುಕ್ಕಾಲು ಗಂಟೆ ಪ್ರಯಾಣದ ನಂತರ ಸಿಗುವ ಬ್ಯಾಡರಹಳ್ಳಿ ಅಥವಾ ಅದರ ನಂತರದ ಕಾಲೇಜ್ ಸ್ಟಾಪ್ ನಲ್ಲಿ  ಇಳಿಯಬೇಕು. ಈ ಎರಡೂ ನಿಲ್ದಾಣಗಳಲ್ಲಿ ಇಳಿದುಕೊಂಡರೂ ಸಾರಂಗ ಕಚೇರಿಗೆ ಬರಬಹುದು. ಬ್ಯಾಡರಹಳ್ಳಿಯಲ್ಲಿ ಇಳಿದುಕೊಂಡರೆ ಮುಖ್ಯರಸ್ತೆಯ ಎಡಭಾಗದಲ್ಲೇ 3ನಿಮಿಷಗಳಷ್ಟು ಸಮಯ ನಡೆದುಕೊಂಡು ಬಂದರೆ ಭಾರತ್ ನಗರ ಎಂಬ ನಾಮಫಲಕ (board) ಕಾಣಿಸುತ್ತದೆ ಅಲ್ಲಿಂದ ಎಡಕ್ಕೆ ತಿರುಗಿ. ಕಾಲೇಜ್ ಸ್ಟಾಪ್ ನಲ್ಲಿ ಇಳಿದುಕೊಂಡರೆ ಮುಖ್ಯರಸ್ತೆಯಲ್ಲೇ ಹದಿನೈದು ಹೆಜ್ಜೆ ಹಿಂದೆ ಬಂದರೆ ಇದೇ ಬೋರ್ಡ್ ಕಾಣಿಸುತ್ತದೆ ಅಲ್ಲಿಂದ ಬಲಕ್ಕೆ ತಿರುಗಿ. ಅದೇ ರಸ್ತೆಯಲ್ಲಿ ನೇರವಾಗಿ ಸಾಗಿದರೆ ಸಾರಂಗ ಕಚೇರಿಗೆ ಸುಮಾರು ಐದು ನಿಮಿಷಗಳ ಹಾದಿ. ಕರ್ನಾಟಕ ಬ್ಯಾಂಕ್ ನ ನಂತರ ಸಾರಂಗ ಕಚೇರಿ.

ನಕ್ಷೆಗಾಗಿ ಇಲ್ಲಿ ಕ್ಲಿಕ್ಕಿಸಿ: http://www.saaranga.com/map

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಮ್ಯಾಪ್ ಸಹಿತ ಮಾಹಿತಿ ಅತ್ಯುಪಯುಕ್ತವಾಗಿದೆ.. ಹೇಗೆ ಬರುವದು ಎಂದು ಗೊಂದಲದಲ್ಲಿದ್ದ ನನಗೆ ಈಗ ದಾರಿ ಸಿಕ್ಕಿತು..!! ಸಹ ಸಂಪದಿಗರು ಎಲ್ಲರನ್ನು ಅಲ್ಲಿ ನೋಡಲು ಭಲೇ ಖುಷಿಯಾಗುತ್ತಿದೆ.. ಶುಭವಾಗಲಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.