ಸಂಪದ ಟೀಮೂ ಬೆಂಗ್ಳೂರ್ ರೌಂಡ್ಸೂ ಹಾಗೂ ಮೆಟ್ರೋ ರೈಡೂ

3
ಚಿತ್ರಕೃಪೆ: ಅಂತರ್ಜಾಲ . ಸಂಪದದಲ್ಲಿ ಒಂದು ಬ್ಲಾಗ್ ಹಾಕಿದ್ದೆ, ಶನಿವಾರಕ್ಕೆ ಯಾರ್ಯಾರು ಮೆಟ್ರೋ ರೈಡಿಗೆ ಬರ್ತೀರಾ ಅಂತ, ಎಲ್ಲರಿಂದಲೂ ಪ್ರತಿಕ್ರಿಯೆಗಳು ಬಂದ್ವು. ನಾವಡವ್ರು, ಕವಿ ನಾಗರಾಜವ್ರು ಸಹ ಬರ್ತೀವಿ ಊರಿಂದ ಅಂತ ಅಂದ್ರು. ಆಚಾರ್ಯರು ಅವತ್ತು ಬೆಂಗ್ಳೂರಿಗೆ ಬರ್ತಿದೀನಿ ನಂಗೊಂದು ಇಂಟರ್ವ್ಯೂ ಇದೆ ಅದಾದಮೇಲೆ ನಾನೂ ಜಾಯ್ನ್ ಆಗ್ತೀನಿ ಅಂದ್ರು. ಭಲ್ಲೆಯವ್ರು ದೂರದಿಂದಲೇ ವಿಶ್ ಮಾಡಿದ್ರು. ಹೆಗ್ಡೆಯವರು ಯಾಕೋ ಸೀನಲ್ಲೇ ಇರ್ಲಿಲ್ಲ. ನಾಡಿಗರು ಸಂಪದ ಯು ಐ ಚೇಂಜ್ ಮಾಡ್ಬೇಕು ನೀವೆಲ್ಲಾ ಹೋಗ್ಬನ್ನಿ ಅಂದ್ರು. ಸುಮಂಗಲಾವ್ರು ಅದಕ್ಕೋಸ್ಕರವೇ ಏನು ಬರೋದು ಅಂತ ಸುಮ್ನಾದ್ರು, ಪದ್ಮವ್ರು ಮತ್ತು ನೀಲಾವ್ರು ಬರ್ತೀವಿ ಅಂದ್ರು. ತೇಜಸ್ವಿಯರು ಬ್ಯುಸಿ ಇದ್ದೀನಿ ಜಾಯ್ನ್ ಆಗೋಕೆ ಆಗಲ್ಲ ಅಂದ್ರು. ರಾಯರು ಅವರ ಮನೆಯ ಶ್ವಾನಕ್ಕೆ ಚಿಕಿತ್ಸೆ ಕೊಡಿಸಬೇಕು ಹಾಗಾಗಿ ಬರುವುದಕ್ಕಾಗುವುದಿಲ್ಲ ಎಂದಿದ್ದರು. ಎಲ್ಲರೂ ಹೇಗೆ ಒಂದು ಕಡೆ ಸೇರೋದು ಅನ್ನೋ ವಿಷಯ ಬಂದಾಗ ಪಾರ್ಥವ್ರು ಚಿಕ್ಕು ನವರಂಗಿಂದ ನೀನೇ ಒಂದು ಫೋರ್ನಾಟ್ ಸೆವೆನ್ ಮಾಡ್ಕೊಂಡು ಎಲ್ರನ್ನೂ ಅವ್ರ ಏರಿಯಾದಿಂದ ಪಿಕಪ್ ಮಾಡ್ಕೋ ಬಾ ಅಂದಾಗ ನಾನು ಇದೊಳ್ಳೆ ಪೀಕ್ಲಾಟಕ್ಕೆ ಬಂತಲಪ್ಪ ಅದೇನೋ ಗಾದೆ ಹೇಳ್ತಾರಲ್ಲ ಹಾಗಾಯ್ತು ಅಂದ್ಕೊಂಡು ಪಾರ್ಥವ್ರಿಗೆ ಆಯ್ತು ಅಂದೆ. ಸರಿ ಟ್ರಾವೆಲ್ ಹುಡ್ಕೊಂಡು ಹೋಗಿ ಒಂದು ಫೋರ್ನಾಟ್ ಸೆವೆನ್ ಶನಿವಾರ ಬೇಕು, ನನ್ಮನೆ ಹತ್ರ ೯ಕ್ಕೆ ಬರ್ಬೇಕು ಅಂದು ಬಂದೆ. ಬ್ಲಾಗಲ್ಲಿ ಬರ್ತೀವಿ ಅಂದೋರು ಬರೋಲ್ಲ ಅಂದೋರು ಮನಸ್ಸು ಬದಲಾಯಿಸಿದವರು ಹೀಗೆ ಎಷ್ಟೋ ಜನ ಇದ್ರು, ಒಟ್ನಲ್ಲಿ ಫೋರ್ನಾಟ್ ಸೆವೆನ್ಗೆ ಬೇಜಾರಾಗೊಷ್ಟು ಕಡಿಮೆ ಏನೂ ಇರ್ಲಿಲ್ಲ. ಶನಿವಾರ ಡ್ರೈವರ್ ೯ಕ್ಕೆ ಬಂದು ನಮ್ಮನೆ ಮುಂದೆ ಗಾಡಿ ನಿಲ್ಸಿ ನಂಗೊಂದು ಕಾಲ್ ಮಾಡಿದ, ನಾನು ಗಾಡಿಗೆ ಹತ್ತಿ ಡ್ರೈವರ್ ಯೋಗಕ್ಷೇಮ ವಿಚಾರ್ಸಿ ಬೆಂಗ್ಳೂರ್ ರೌಂಡ್ಸ್ಗೆ ರೆಡಿಯಾದೆ. ಮೊದಲು ಮಲ್ಲೇಶ್ವರಂಗೆ ಹೋಗಿ ಗಣೇಶಣ್ಣನನ್ನ ಪಿಕಪ್ ಮಾಡ್ಬೇಕಿತ್ತು, ಅವ್ರಿಗೆ ಮೊದ್ಲೇ ಕಾಲ್ ಮಾಡಿದಾಗ ೧೮ನೇ ಕ್ರಾಸ್ ಬಸ್ಟಾಪ್ ಹತ್ರ ನಿಂತಿರ್ತೀನಿ ಅಂದಿದ್ರು, ಸರಿ ನಾನು ಅಲ್ಲಿ ಹೋಗಿ ನೋಡಿದ್ರೆ ಅಲ್ಲಿ ಗಣೇಶಣ್ಣ ಇರ್ಲಿಲ್ಲ, ಒಂದೈದು ನಿಮ್ಷ ಕಾಯ್ದು ಆಮೇಲೆ ಕಾಲ್ ಮಾಡಿದ್ರಾಯ್ತು ಅಂತ ಗಾಡಿಯಿಂದ ಇಳ್ದು ಅಲ್ಲೇ ಸ್ವಲ್ಪ ಹೊತ್ತು ತಿರುಗಾಡ್ತಿದ್ದೆ. ಅಷ್ಟೊತ್ತಿಗೆ ಅಮ್ಮಣ್ಣಿ ಕಾಲೇಜ್ ಕಡೆಯಿಂದ ಗಣೇಶಣ್ಣ ವೇಗವಾಗಿ ಬರ್ತಿದ್ರು, ಒಂದು ತೆಳು ಪಂಚೆ ಮತ್ತೆ ಮೈ ಮೇಲೆ ಒಂದು ಮೇಲುಹೊದಿಕೆ ಅವರ ಬಾಡಿಯನ್ನ ಮುಚ್ಚಿತ್ತು. ನನ್ನನ್ನ ನೋಡಿದ ಗಣೇಶಣ್ಣ, ಓ ನೀನಾಗ್ಲೇ ಬಂದ್ಬಿಟ್ಯಾ?? ಸರಿ ನಡಿ ಹೋಗೋಣ ಅಂದ್ರು, ಇಬ್ರೂ ಗಾಡಿ ಹತ್ತಿದ್ವಿ. ನಾನು ಕುತೂಹಲ ತಡೀಲಾರ್ದೆ 'ಗಣೇಶಣ್ಣ, ಈ ವಯಸ್ನಲ್ಲಿ ನಿಮಗ್ಯಾಕೆ ಈ ಚಪಲ??' ಯಾಕೋ ಏನಾಯ್ತೀಗ? ಅಲ್ಲ, ಮದ್ವೆಯಾಗಿದೆ ವಯಸ್ಸಿಗೆ ಬಂದ ಮಗಳಿದ್ದಾಳೆ, ಆದ್ರೂ ನಿಮ್ಗೆ ಆ ಕಾಲೇಜ್ಹತ್ರ ಹೋಗಿ ಅದೇನು ಹುಡ್ಗೀರ್ನ ನೋಡೋದು!? ಯಾಕಪ್ಪಾ ಬೆಳ್ಗ್ಬೆಳ್ಗೆ ನಾನೇ ಸಿಕ್ನಾ ನಿಂಗೆ? ಕಿತ್ತೋಗಿರೋ ಕತ್ತೆ ಥರಾ ಇದೀರಾ ನಿಮ್ನೆಲ್ಲಿ ಬೆಳ್ಗಿದೀರಾ ಅಂಥಾ ನಾನಂದೆ!? ನೋಡೋ ಇದ್ಯಾಕೋ ಅತಿಯಾಯ್ತು. ಅಯ್ಯೋ ಗಣೇಶಣ್ಣ ಅದಕ್ಯಾಕೆ ರಾಂಗ್ ಆಗ್ತೀರಾ ನಾನು ತಮಾಷೆಗೆ ಹೇಳಿದ್ನಪ್ಪ, ಹಾಗೊಂದು ವೇಳೆ ಸೀರಿಯಸ್ಸಾಗಿ ಹೇಳಿದ್ರೂ ನೀವೇನು ಕಪ್ಪುಗಿಲ್ವಲ್ಲ. ಅಲ್ವಾ ಮತ್ತೆ ನೀವ್ಯಾಕೆ ಕಾಲೇಜ್ಹತ್ರ ಹೋಗಿದ್ರಿ?? ನನ್ನ ಮಗಳನ್ನ ಕಾಲೇಜಿಗೆ ಬಿಡೋಕೆ ಹೋಗಿದ್ನಪ್ಪ, ಈಗ ಸಮಾಧಾನಾನಾ??? ಸರಿ ಒಂದು ಕ್ಲಿಯರ್ ಆಯ್ತು. ಇನ್ನೊಂದಿದೆ. ಏನದು? ಇದೇನು ಈ ಅವತಾರ?? ಅವರ ಬಟ್ಟೆ ಕಡೆ ಕೈ ತೋರಿಸಿ ಕೇಳಿದೆ. ಓ ಅದಾ, ಬೆಳ್ಗೆ ಪೂಜೆ ಮಾಡ್ತಾ ಕೂತಿದ್ದೆ. ಅಷ್ಟೊತ್ತಿಗೆ ಮಗಳು ಕಾಲೇಜಿಗೆ ಬಿಡಪ್ಪ ಅಂತ ಕೂಗ್ತಿದ್ಲು, ಅವಳನ್ನ ಕಾಲೇಜಿಗೆ ಬಿಟ್ಟು ಸ್ಕೂಟಿ ಅಲ್ಲೇ ನಿಲ್ಸಿ ಬಂದೆ. ಹಾಗಾಗಿ ಈ ಅವತಾರ. ಮತ್ತೆ ಮೆಟ್ರೋಗೆ ಕಾಸು?? ಓ ಮರ್ತುಬಂದ್ನಲ್ಲಾ ಚಿಕ್ಕು, ಹಿಂಗೆಹೋಗಿ ಬರ್ತೀನಿ ಅಂದ್ರು. ಏನ್ಬೇಡ, ನಮ್ಮ ರೌಂಡ್ಸ್ ತುಂಬಾ ಇದೆ ಬನ್ನಿ ಅದೂ ಅಲ್ದೆ ನಾವು ಮಲ್ಲೇಶ್ವರಂ ಬಿಟ್ಟು ೧೦ ನಿಮ್ಷ ಆಗ್ಲೇ ಆಗಿದೆ. ಹಂಗೂ ನಿಮ್ಗೆ ನಮ್ಕೈಲಿ ದುಡ್ಡು ಹಾಕಿಸ್ಬೇಕಲ್ಲಾ ಅಂತ ಅನ್ಸಿದ್ರೆ ಮೆಟ್ರೋಗೆ ಪೂಜೆ ಮಾಡೋಕೆ ಬಂದಿರೋ ಭಟ್ರು ನಾನು ಅನ್ನಿ ಆಗ ನಿಮಗ್ಯಾರು ಟಿಕೆಟ್ ಕೇಳೋಲ್ಲ. ನೋಡು ಇವೆಲ್ಲಾ ಬೇಡ ಅಂತಾನೇ ನಾನು ದುಡ್ಡು ತರ್ತೀನಿ ಅಂದೆ. ಅಯ್ಯೋ ಬನ್ನಿ, ನಾವು ಹಾಕಿದ್ರೂ ನೀವು ವಾಪಸ್ ಮಾಡೋ ಆಸಾಮಿಯಲ್ವ, ಸುಮ್ನೆ ನಡೀರಿ. ನಮ್ಮ ಮುಂದಿನ ಪಿಕಪ್ ಜಯಂತ್. ಶೇಷಾದ್ರಿಪುರಂನ ಅವ್ರ ಮನೆಹತ್ರ ಗಾಡಿ ನಿಲ್ಸಿ ಗಣೇಶಣ್ಣ ರಾಮಾಚಾರ್ರೆ, ರಾಮಾಚಾರ್ರೆ ಅಂತ ಕೂಗಿದಾಗ ಜಯಂತ್ ದಂಪತಿಗಳು ಹೊರಗೆ ಬಂದ್ರು. ಜಯಂತ್ ಸೈಡಿಗ್ಹೋಗಿ ಗಣೇಶಣ್ಣನ ಹತ್ರ ಏನೋ ಡೀಲ್ ಮಾಡ್ತಿದ್ರು. ಗಣೇಶಣ್ಣ ಆಗಲ್ಲ ಅಂತ ಕೈಯಾಡ್ಸ್ತಿದ್ರು. ಆಮೇಲೆ ಗಣೇಶಣ್ಣ ಗಾಡಿಲಿ ಬಂದು ಕೂತ್ರು, ಏನು ವಿಷ್ಯ ಅಂತ ಗಣೇಶಣ್ಣನ್ನ ಕೇಳ್ದಾಗ, ಮನೆಯವರೂ ಬರ್ಬೇಕು ಅಂತಿದ್ದಾರೆ ಅಂದ್ರು ನಾನು ಇಲ್ಲ ಸಂಪದದವ್ರು ಮಾತ್ರ ಅಂದಾಗ ಆಯ್ತು ಅಂದು ಈಗ ಬರ್ತೀನಿ ಅಂತ ಹೋದ. ಪಾಪ ಹೊಸದಾಗಿ ಮದ್ವೆಯಾಗಿದ್ದಾರೆ, ನಿಮ್ಹತ್ರ ರಿಕ್ವೆಸ್ಟ್ ಮಾಡ್ಕೊಂಡ್ರೆ ನೀವು ಹಿಂಗಾ ಮಾಡೋದು?? ನಿಮ್ಗೆ ಒಳ್ಳೆದಾಗಲ್ಲ ಬಿಡಿ!!! ಮುಚ್ಕೊಂಡು ಸ್ವಲ್ಪ ಹೊತ್ತು ಕೂತ್ಕೋ ಆಗ ಎಲ್ಲಾ ಒಳ್ಳೇದಾಗತ್ತೆ ಅನ್ನುವಾಗ ಜಯಂತ್ ಗಾಡಿಯೊಳಗೆ ಬಂದ್ರು. ಏನೋ ಹೇಳ್ತಿದ್ದ ಚಿಕ್ಕು, ಏನು ಗಣೇಶಣ್ಣ ಅಂದ ಜಯಂತ್ಗೆ 'ಏನಿಲ್ಲ, ಜೋಡಿ ಚೆನ್ನಾಗಿದೆ ಅಲ್ವ?' ಅಂತ ಹೇಳ್ತಿದ್ದ ಅಂದ್ರು ಗಣೇಶಣ್ಣ. ನಾನು ಸೈಲೆಂಟಾಗಿ ಕೇಳ್ಸ್ಕೊಂಡೆ. ನನ್ನ ಮೊಬೈಲಿಗೆ ಒಂದು ಕಾಲ್ ಬಂತು, ನೋಡಿದ್ರೆ ಕಾಮತವ್ರು. ಏನ್ರೀ ಹೈದರಬಾದ್ ನಿಜಾಮ್ರೆ?? ಯಾವ ನಿಜಾಮ ಚಿಕ್ಕು, ಹಾಗಿದ್ದಿದ್ರೆ ಆರಾಮಾಗಿ ರಾಜನಂಗೆ ಇರ್ಬಹುದಿತ್ತು ಈಗ ನೋಡಿ ಸಾಫ್ಟ್ವೇರ್ ಅಂತ ಸಾಯ್ತಿದೀವಿ. ಮತ್ತೆ ಏನು ವಿಷಯ? ಏನಿಲ್ಲ, ನಾನು ಬೆಂಗ್ಳೂರಿಗೆ ಬಂದಿದ್ದೆ. ನಿಮ್ಜೊತೆ ಜಾಯ್ನ್ ಆಗೋಣ ಅಂತ. ಸರಿ, ಎಲ್ಲಿ ಸಿಗ್ತೀರಾ? ಗಾಂಧೀ ಬಜ್ಹಾರ್ನಲ್ಲಿರೋ ಕಾಫೀ ಡೇ ಹತ್ರ ಇರ್ತೀನಿ. ಸರಿ ಗೋಪಾಲವ್ರು ಅಲ್ಲೇ ಇರ್ತೀನಿ ಅಂದಿದ್ದಾರೆ. ನಾವು ಸ್ವಲ್ಪ ಹೊತ್ತಲ್ಲಿ ಅಲ್ಲಿರ್ತೀವಿ ಅಂದು ಮಾತು ಮುಗ್ಸ್ದೆ. ಯಾರು? ಜಯಂತ್ ಕೇಳಿದ್ರು. ಕಾಮತವ್ರು, ಈ ವಯ್ಯಂಗೆ ಅಲ್ಲಿ ಕಾಫೀ ಡೇನಲ್ಲಿ ಸಿಪ್ ಹೀರ್ತಿರ್ತಾರಂತೆ, ಅಲ್ಲಿ ಹೋಗಿ ಪಿಕಪ್ ಮಾಡ್ಬೇಕು. ಸರಿ. ನೆಕ್ಸ್ಟ್ ಪಿಕಪ್ ರಾಮಮೋಹನವ್ರು. ಕುಮಾರಪಾರ್ಕ್ನಲ್ಲಿದ್ದ ಅವ್ರ ಮನೆಹತ್ರ ಗಾಡಿ ನಿಲ್ಸಿ ಗಣೇಶಣ್ಣ ಅವರನ್ನ ಕರೆಯೋಕೆ ಹೋದ್ರು. ಬಾಗಿಲು ತೆಗೆದಿತ್ತು, ರಾಮಮೋಹನವ್ರು ಪೇಪರ್ ಓದ್ತಾ ಕೂತಿದ್ರು, ಮುಖ ಬಾಗಿಲಿಗೆ ವಿರುದ್ಧವಾಗಿತ್ತು. ಏ ರಾಮ ಏನ್ಮಾಡ್ತಿದೇಯೋ?? ಇನ್ನೂ ಹೊರಟಿಲ್ವೇನೋ?? ಬೇಗ ಬಾರೋ ಅಂಥಾ ತುಂಬಾ ಸಲ ಕೂಗಿದ್ರು. ಆದ್ರೆ ಯಾಕೋ ಸದ್ದೇ ಇಲ್ಲ. ಇವರೇ ಹೋಗಿ ಬೆನ್ನು ತಟ್ಟಿದಾಗ ಹೊರ್ಗೆ ಬಂದ್ರು, ನಮ್ಗಾಗಿ ರೆಡಿಯಾಗಿ ಕಾಯ್ತಿದ್ರು, ಗಾಡಿ ಹತ್ತಿ ಕೂತ್ರು. ಅಲ್ರೀ ಅಷ್ಟೊತ್ತು ಕೂಗಿದ್ರೂ ಜಪ್ಪಯ್ಯ ಅನ್ಲಿಲ್ವಲ್ರೀ?? ಗಣೇಶಣ್ಣ ಕೇಳಿದ್ದಕ್ಕೆ ರಾಮಮೋಹನವ್ರು 'ಓ ನೀವಾ ಕೂಗಿದ್ದು, ನಾನು ನನ್ನ ಮೊಬೈಲ್ ಹೊಡ್ಕೊಳ್ತಿರ್ಬೇಕು ಯಾವ್ದೋ ಮಾರ್ಕೆಟಿಂಗ್ ಕಾಲ್ ಅಂತ ಸುಮ್ನಾದೆ, ನೀವು ಹೇಗಿದ್ರೂ ಬರ್ತೀರಲ್ಲ ಬಾಗಿಲು ಬೇರೆ ತೆಗೆದಿದೆಯಲ್ಲಾ ಅಂತ ಅಂದ್ಕೊಂಡು ಪೇಪರ್ ಓದ್ತಿದ್ದೆ. ಅಲ್ರೀ ನಿಮ್ಮ ರಿಂಗ್ಟೋನ್, ಏ ರಾಜ ಏನ್ಮಾಡ್ತಿದ್ಯೊ ಅಂತ ಅಲ್ವ?? ಜಯಂತ್ ಅವರನ್ನ ಕೇಳಿದ್ದಕ್ಕೆ ಅಷ್ಟೊಂದು ವ್ಯತ್ಯಾಸ ಇಲ್ವಲ್ಲ ಅಂತ ತಮ್ಮ ದಂತಪಂಕ್ತಿ ಪ್ರದರ್ಶಿಸಿದರು. ನಮ್ಮ ಮುಂದಿನ ಪಿಕಪ್ ಪಾಯಿಂಟ್ ಮೆಜೆಸ್ಟಿಕ್. ನಾವಡವ್ರು, ಕವಿ ನಾಗರಾಜವ್ರು ಅಲ್ಲಿ ಕಾಯ್ತಿದ್ರು. ಇಬ್ರನ್ನ ಗಾಡಿಗೆ ಹಾಕಿಕೊಂಡು ಜಯನಗರದತ್ತ ಪಾರ್ಥವ್ರನ್ನ ಕರ್ಕೊಬರೋದಕ್ಕೆ ಹೊರಟ್ವಿ. ಈ ನಡ್ವೆ ಗಾಡಿ ಲಾಲಭಾಗ್ ಹತ್ರ ಬರ್ತಿದ್ದಂತೆ ಜಯಂತವ್ರು ಡ್ರೈವರ್ ಹತ್ರ ಏನೋ ಹೇಳಿ ಗಾಡಿ ನಿಲ್ಸಿ ಕೆಳಗಿಳಿದು ಎಲ್ಲೋ ಹೋದ್ರು. ನಾವು ಇದೊಳ್ಳೆ ಕಥೆಯಾಯ್ತಲಪ್ಪ ಅಂತ ಡ್ರೈವರ್ ಕೇಳಿದ್ರೆ ಒಂದ್ಹತ್ನಿಮಿಷ ಬರ್ತೀನಿ ಇರಿ ಅಂತ ಹೋದ್ರು ಸಾರ್ ಅಂದ. ಅಷ್ಟೊತ್ತಿಗೆ ನಾವಡವ್ರು ಏನೋ ಯೋಚಿಸುತ್ತಾ, ೧೦ ನಿಮ್ಷ ಅಲ್ಲ ಇನ್ನೂ ೨೦ ನಿಮ್ಷ ಆಗ್ಬಹುದು ಅಲ್ಲಿ ನೋಡಿ ಗಣಪತಿ ದೇವಸ್ಥಾನ ಅಂತ ಆ ಕಡೆ ಕೈ ತೋರಿಸಿದಾಗ ಎಲ್ರಿಗೂ ವಿಷಯ ಮನದಟ್ಟಾಯಿತು. ೧೦೮ ಮುಗಿಯೋದ್ರೊಳಗೆ ಎಲ್ರೂ ಇಲ್ಲೇ ಮಾವಳ್ಳಿ ಟಿಫಿನ್ ರೂಮಲ್ಲಿ ಒಂದೊಂದು ಕಾಫಿ ಕುಡೀಬಹುದಲ್ಲ ಅಂತ ಕವಿ ನಾಗರಾಜವ್ರು ಅಂದಾಗ ಎಲ್ರಿಗೂ ಅದು ಸರಿ ಅನ್ಸಿ ಆಕಡೆ ಹೆಜ್ಜೆ ಹಾಕಿದ್ವಿ. ಕಾಫಿ ಕುಡಿದು ವಾಪಸ್ ಬರೋದ್ರೊಳಗೆ ಜಯಂತ್ ಗಾಡಿಯಲ್ಲಿ ಆಸೀನರಾಗಿದ್ರು. ಜಯನಗರದ ಪಾರ್ಥವ್ರ ಮನೆ ಹತ್ರ ಗಾಡಿ ಹೋಗಿ ನಿಲ್ತು. ನಮ್ಮನ್ನೇ ಕಾಯ್ತಿದ್ದ ಪಾರ್ಥವ್ರು ಗಾಡಿ ಹತ್ತಿ ನನ್ನ ಎದುರಿನ ಸೀಟಿಗೆ ಬಂದು ಕೂತ್ರು. ಪಾರ್ಥವ್ರೆ, ಅದೇನು ನಿಮ್ಮ ಮನೆಯ ಗೇಟಿನ ೨ ಪಿಲ್ಲರ್ ಮೇಲೆ ಬುರುಡೆ ಥರ ಮಾಡಿದ್ದೀರಾ?? ಅದಾ ಚಿಕ್ಕು, ಅದು ಅಣ್ಣಿಗೇರಿಗೆ ಹೋಗಿದ್ನಲ್ಲ ಅಲ್ಲಿಂದ ೨ ಬುರುಡೆ ಎತ್ಕೊಂಡು ಬಂದಿದ್ದೆ, ನಮ್ಮ ಮನೆಯವ್ರು ನೋಡೋಕೆ ಚೆಂದ ಇದೆ ಅಂತಿದ್ರು, ಹೊಸ ಗೇಟ್ ಮಾಡ್ಸ್ತಿದ್ವಿ ನೋಡೋಕೆ ಚೆನ್ನಾಗಿರತ್ತೆ ಅಂದು ಎರಡೂ ಕಡೆ ಹಾಕಿದ್ವಿ. ವಿಷಯ ಕೇಳಿದ ನಾನು ೩ ಸೀಟ್ ಹಿಂದೆ ಹೋಗಿ ಕೂತೆ. ಮುಂದೆ ಮಂಜಣ್ಣನ ಪಿಕಪ್. ಅಲ್ಲಿಂದ ಒಂದೆರಡು ಕ್ರಾಸ್ ಆದ್ಮೇಲೆ ಅವರ ಮನೆ. ಗಾಡಿ ಆ ಕ್ರಾಸ್ ಹತ್ತಿರ ಇದ್ದಾಗ ಆ ರಸ್ತೆಯಲ್ಲೊಂದು ಜಗಳ ನಡೆಯುತ್ತಿತ್ತು. ನಾವೆಲ್ಲರೂ ಇಳಿದು ಏನು ವಿಷಯ ಅಂತ ನೋಡೋಕೆ ಹೋದ್ವಿ. ನೋಡಿದ್ರೆ ಅಲ್ಲಿ ಮಂಜಣ್ಣನೇ ಜಗಳದ ಕೇಂದ್ರಬಿಂದುವಾಗಿದ್ದರು. ನಾವೆಲ್ಲಾ ಹೋಗಿ ಎಲ್ಲರಿಗೂ ಸಮಾಧಾನ ಮಾಡಿ ಮಂಜಣ್ಣನನ್ನು ಗಾಡಿಗೆ ಹತ್ತಿಸಿಕೊಂಡ್ವಿ. ಆಮೇಲೆ ಏನು ವಿಷಯ ಅಂದಾಗ 'ನಾನು ಈ ಕ್ರಾಸಲ್ಲಿ ಬಂದು ನಿಮ್ಗೆ ಕಾಯ್ತಿದ್ದೆ. ಅದೇ ನೀವು ಅಲ್ಲಿ ನೋಡಿದ್ರಲ್ಲ ಕೆಂಪು ಬಟ್ಟೆ ಹಾಕಿಕೊಂಡವನು ಅವ್ನು ಏನೋ ಮಾಟ ಮಾಡ್ತಿದ್ದ, ನಂಗೆ ಅದ್ನ ನೋಡಿ ಪಿತ್ತ ನೆತ್ತಿಗೇರಿತ್ತು ಅದ್ಕೆ ಹೋಗಿ ಜೋರು ಮಾಡ್ತಿದ್ದೆ ಅಷ್ಟೊತ್ತಿಗೆ ನೀವುಗಳು ಬಂದ್ರಿ'. ಏನು ಮಾಟ ಮಾಡ್ತಿದ್ನೋ?? ಪಾರ್ಥವ್ರು ಕೇಳಿದ್ರು. ತೆಂಗಿನಕಾಯಿ ಹಿಡ್ಕೊಂಡು ಅತ್ಲಾಗಿತ್ಲಾಗೆ ಹೋಗ್ತಿದ್ದ. ಗಣೇಶಣ್ಣ ಹೊಟ್ಟೆ ಹಿಡ್ಕೊಂಡು ನಗ್ತಿದ್ರು. ಮಂಜಣ್ಣ ಅದ್ನ ನೋಡಿ 'ನಂಗೆ ಅದ್ನ ನೋಡಿ ತಲೆಕೆಟ್ಟಿದೆ ನೀವು ನೋಡಿದ್ರೆ ನಗಾಡ್ತಿದೀರಲ್ರೀ?? ಹೆಂಗೂ ಕೆಂಪು ಬಟ್ಟೆ ಹಾಕಿದೀರಾ ಅವ್ನ ಸಿಟ್ಟು ನಿಮ್ಮೇಲೆ ತೀರಿಸ್ಬಿಡ್ತೀನಿ ಈಗ' ಅಂದಾಗ ಗಣೇಶಣ್ಣ 'ಅಲ್ಲ ಮಂಜಣ್ಣ, ಆ ಮನೆ ಓನರ್ ಬೋರ್ವೆಲ್ ತೆಗ್ಸೋಕೆ ನೀರು ಎಲ್ಲಿ ಬರತ್ತೆ ಅಂತ ಹೇಳಿ ಅಂತ ಅವನಿಗೆ ಕೇಳಿದ್ದಾರೆ ಪಾಪ ಅವ್ನು ಕೆಲಸ ಮಾಡ್ತಿದ್ದಾನೆ, ನೀವು ನೋಡಿದ್ರೆ..' ಅಂತ ನಗಾಡ್ತಿದ್ರು. ಎಲ್ರೂ ನಗಾಡೋಕೆ ಶುರು ಮಾಡಿದ್ರು,ಮಂಜಣ್ಣನಿಗೂ ವಿಷಯ ಕೇಳಿ ನಗು ಬಂತು. ಮುಂದೆ ಗಾಡಿ ಬನಶಂಕರಿಯ ಸತೀಶವ್ರ ಮನೆಯ ಹತ್ರ ನಿಲ್ತು. ಕರೆಯೋದಕ್ಕೆ ನಾನು ಹೋದೆ, ಸತೀಶವ್ರು ಬಾಗಿಲು ತೆಗೆದ್ರು, ತೆಗೆದ ತಕ್ಷಣ ಬಾಗಿಲ ಮೇಲಿದ್ದ ಹಲ್ಲಿಯೊಂದು ಅವರ ಮೈಮೇಲೆ ಬಿತ್ತು. ಅದನ್ನ ನೋಡಿದ್ದೇ ನಾನು ಇವತ್ತು ಬರೋಲ್ಲ ನೀವು ಹೋಗಿ ಅಂದ್ರು. ಯಾಕೆ ಏನಾಯ್ತು ಅಂದಿದ್ದಕ್ಕೆ 'ಕಾಣಲಿಲ್ವೇನ್ರೀ?? ಹಲ್ಲಿ ಬಿದ್ದಿದ್ದು'. ಅಯ್ಯೋ ನಮ್ಗಾಗಿದ್ದೇ ನಿಮಗೂ ಆಗತ್ತೆ ಬನ್ರೀ ಅಂದ್ರೂ ಆಸಾಮಿ ಜಗ್ಗಲಿಲ್ಲ. ಗಾಡಿ ಹತ್ರ ಹೋಗಿ ಎಲ್ರಿಗೂ ಹೇಳಿದಾಗ ಅವ್ರೆಲ್ಲಾ ಹೋಗಿ ಹೇಗೋ ಕನ್ವಿನ್ಸ್ ಮಾಡಿ ಕರ್ಕೊಂಡ್ಬಂದ್ರು. ಅಲ್ಲೇ ಹತ್ತಿರದಲ್ಲೇ ಶ್ರೀಧರವ್ರ ಮನೆ ಇದ್ದುದರಿಂದ ಅಲ್ಲಿಗೆ ಹೋದೆವು. ಅವ್ರು ನಮ್ಮನ್ನ ನೋಡಿದ್ರೂ ಬರೋ ತರ ಕಾಣಲಿಲ್ಲ. ಏನ್ರೀ ನಿಮ್ಕಥೆ ಅಂದಾಗ ' ಅಂಡಾಂಡ ಭಂಡ ಸ್ವಾಮಿಗಳು ಬರ್ತಾರೆ, ಗಾಡಿ ಪೂಜೆ ಮಾಡ್ಸೋಕೆ ಕರ್ಸಿದೀನಿ'. 'ನಾವೇನು ಡೆಲ್ಲಿ ಮೆಟ್ರೋ ಹತ್ತೋಕೆ ಹೋಗ್ತಿಲ್ಲ ಸುಮ್ನೆ ಹತ್ತುತೀರೋ ಹೆಂಗೆ?' ರಾಮಮೋಹನವ್ರು ಅಂದಾಗ ವಿಧಿಯಿಲ್ಲದೆ ಗಾಡಿ ಹತ್ತಿದ್ರು, ಹಾಗೆ ಸ್ವಾಮಿಗಳಿಗೆ ಕರೆ ಮಾಡಿ ಬರಬೇಡಿ ಅಂತ ಶ್ರೀಧರವ್ರು ಹೇಳ್ತಿದ್ರು. ಅಲ್ಲಿಂದ ಗಾಂಧೀ ಬಜ್ಹಾರಿಗೆ ನಮ್ಮ ಸವಾರಿ. ಗಾಡಿ ಒಂದು ಸಿಗ್ನಲಲ್ಲಿ ನಿಂತಾಗ ಗಣೇಶಣ್ಣ ಚಿಕ್ಕು ಬಾಯಿಲ್ಲಿ ಅಂದ್ರು. ಈ ವಯ್ಯ ಯಾಕೋ ಎಡವಟ್ಟು ಅನ್ಸಿ ಅವ್ರಿದ್ದಲ್ಲಿಗೆ ಹೋಗದೆ ಬಾಯಲ್ಲಿ ಏನೂ ಇಲ್ಲ ಅಂದೆ. ಅಯ್ಯೋ ನಿನ್ನ ತಲೆ, ನನ್ಹತ್ರ ಬಾ ಅಂದೆ ಅಂದಾಗ ಮನಸ್ಸಿಲ್ಲದೆ ಹೋದೆ. ಏನು ಕರೆದದ್ದು?? ಏನಿಲ್ಲ ಅಲ್ಲಿ ನೋಡಲ್ಲಿ ಅಂತ ಕೈ ಹೊರಗಡೆ ತೋರ್ಸಿದ್ರು. ನಾಯಿಯೊಂದು ಗಿಡದ ಮೇಲೆ ಕಾಲೆತ್ತಿ ಹನಿಗಳ ಪ್ರೋಕ್ಷಣೆ ಮಾಡುತ್ತಿತ್ತು. ನಿನ್ನ ಕ್ಯಾಮೆರಾ ಝೂಮ್ ಮಾಡಿ, ಅದರ ನೀರು ಮತ್ತೆ ಗಿಡ ಬಾರೋ ಹಾಗೆ ಒಂದು ಫೋಟೋ ತೆಗಿ ಆಮೇಲೆ ಸಂಪದದಲ್ಲಿ 'ಎಲೆಗಳ ಮೇಲೆ ಹನಿಗಳ ಸಿಂಚನ' ಅಂತ ಹಾಕ್ಬಿಡು, ಆಮೇಲೆ ನೋಡ್ತಾ ಇರು ಏನು ಹಿಟ್ಸ್ ಅಂತೀಯಾ??!!!!. ನನ್ನ ಕ್ಯಾಮೆರಾ ಎತ್ತಿ ಅವ್ರ ತಲೆ ಮೇಲೆ ಕುಟ್ಟಿ ಅವರನ್ನ ಹಿಟ್ ಮಾಡೋ ಮನಸ್ಸಾಯ್ತು ಆದ್ರೆ ನನ್ನ ಕ್ಯಾಮೆರಾನೇ ಹಾಳಾಗೋದು ಅಂತ ಅದ್ನ ಕವರ್ರಿಗೆ ಹಾಕಿ ನನ್ನ ಸೀಟಿಗೆ ಹೋಗಿ ಕೂತೆ. ಕಾಫೀ ಡೇ ಹತ್ರ ಗಾಡಿ ನಿಲ್ಸಿ ಕೆಳಗಿಳ್ದಾಗ ಗೋಪಾಲ್ವರು ಯಾರಿಗೋ ಜೋರು ಮಾಡ್ತಿದ್ರು. ಏನು ಅಂತ ನೋಡೋಕೆ ಹೋದ್ವಿ. ಹೋದ್ಮೇಲೆ ಗೊತ್ತಾಗಿದ್ದು ಅವ್ರು ತರ್ಲೆ ಮಂಜನ ಹತ್ರ ಏನೋ ವಿಷಯಕ್ಕೆ ಜೋರು ಮಾಡ್ತಿದ್ದಿದ್ದು ಅಂತ. ವಿಷಯ ಏನಂದ್ರೆ ಗೋಪಾಲವ್ರ ಮನೆಯವರು ಕಾಫೀ ಕುಡೀಬೇಕು ಅನ್ಸ್ತಿದೆ ೩೨೦ ರೂ ಕೊಟ್ಟು ೧ ಕೆ ಜಿ ಕಾಫಿಪುಡಿ ತಗೊಬಾರೋ ಅಂತ ಮಂಜಂಗೆ ಹೇಳಿದ್ರಂತೆ, ಗೋಪಾಲವ್ರು ಇವ್ನು ಇವತ್ತು ಬರೋಹಾಗೆ ಕಾಣ್ತಿಲ್ಲ ನಂಗೆ ಕಾಫಿ ಬೇಡ ನಾನು ಹೊರ್ಟೆ ಅಂತ ಬಂದ್ರಂತೆ, ಇಲ್ಲಿ ಮಂಜ ಸಿಕ್ಕಿದ್ದಾನೆ. ಕೈನಲ್ಲಿ ೨ ಗ್ಲಾಸ್ ಕಾಫಿ ಇತ್ತಂತೆ. ಏನೋ ಇದು ಅಂದ್ರೆ, ಅದೇ ಅಕ್ಕ ಕಾಫಿ ಕುಡೀಬೇಕು ಅಂದ್ರಲ್ಲ. ನಾನು ಇವತ್ತು ಕಾಫಿ ಕುಡಿಯೋಕೆ ಅಷ್ಟು ಯಾಕೆ ಖರ್ಚು ಮಾಡೋದು ಅಂತ ಒಂದು ಕಾಫಿ ಕುಡಿದು ಇನ್ನೆರಡು ಕಾಫಿ ಮನೆಗೆ ತಗೊಹೊಗ್ತಿದೀನಿ ಅಂದ್ನಂತೆ, ಜೊತೆಗೆ ೨೯೦ ರೂ ಬೇರೆ ಉಳೀತು ಅಂತಿದ್ನಂತೆ. ಅದ್ಕೆ ಗೋಪಾಲವ್ರಿಗೆ ಪಿತ್ತ ಏರಿ ಮಂಜಂಗೆ ಜೋರು ಮಾಡ್ತಿದ್ದಿದ್ದು. ನಾವು ಹೇಗೋ ಆ ಸಮಸ್ಯೆನಾ ಬಗೆಹರಿಸಿ ಕಾಮತವ್ರನ್ನ ಕರ್ಕೊಬರೋದಕ್ಕೆ ಹೋದ್ವಿ. ಕಾಮತವ್ರು ಕಾಫೀ ಡೇ ಹೊರಗಡೆ ಕಾಣ್ಲಿಲ್ಲ. ಅವ್ರ ಹುಡ್ಗಿಗೆ ಒಂದೊಂದೇ ಸಿಪ್ ಕುಡುಸ್ತಿರ್ಬೇಕು ಹೋಗಿ ಕರ್ಕೊಂಡು ಬನ್ನಿ ಅಂತ ಮಂಜಣ್ಣ ಹೇಳ್ತಿದ್ರು. ಹಂಗೆ ಹೋದ್ರೆ ಸರಿ ಇರಲ್ಲ, ಇಲ್ಲಿಂದಲೇ ಕಾಲ್ ಮಾಡಿ ಬರೋಕೆ ಹೇಳಿದ್ರಾಯ್ತು ಅಂದು ಕಾಲ್ ಮಾಡಿದ್ರೆ ಒಂದೈದು ನಿಮ್ಷ ಅಂದ್ರು. ಐದು ನಿಮ್ಷ ಆದ್ಮೇಲೆ ಬಂದು ಗಾಡಿಗೆ ಹತ್ತಿದ್ರು. ಆಮೇಲೆ ಕಾಮತವ್ರನ್ನ ಕೇಳಿದಾಗ ಮಂಜಣ್ಣ ಹೇಳಿದ್ದು ಸರಿ ಇತ್ತು!!. ಕಾರ್ಪೋರೇಶನ್ ಹತ್ರ ಕಾಯ್ತಿದ್ದ ಪದ್ಮವ್ರು ಮತ್ತು ನೀಲಾವ್ರನ್ನ ಪಿಕಪ್ ಮಾಡಿದ್ವಿ, ಯು ಬಿ ಸಿಟಿಯಲ್ಲಿ ಇಂಟರ್ ವ್ಯೂ ಮುಗಿಸಿ ಆಚಾರ್ಯರು ನಮಗೆ ಕಾಯ್ತಿದ್ರು. ಅವರನ್ನ ಹಾಕಿಕೊಂಡ ನಮ್ಮ ಗಾಡಿ ಎಂ ಜಿ ರೋಡ್ ಕಡೆ ಸಾಗ್ತು. ಗಾಡಿ ನಿಲ್ಸಿ ಎಲ್ಲ ಮೆಟ್ರೋ ಸ್ಟೇಶನ್ ಕಡೆ ಹೋದ್ವಿ, ಟಿಕೆಟ್ ತಗೊಂಡು ಟ್ರೈನಿಗೆ ಕಾದು ಬಂದ್ಮೇಲೆ ಎಲ್ಲಾ ಹತ್ತಿ ಕೂತು ಬಯ್ಯಪ್ಪನಹಳ್ಳಿಗೆ ಹೋಗಿ ಮತ್ತೆ ವಾಪಸ್ ಬಂದ್ವಿ. ಇಳಿಯೋವಾಗ ಗಣೇಶವ್ರು ಆಚೆ ಈಚೆ ನೋಡ್ತಾ ನಿಧಾನಕ್ಕೆ ಇಳೀತಿದ್ರು, ಇವ್ರು ಇನ್ನೇನು ಇಳೀಬೇಕು ಬಾಗಿಲು ಕ್ಲೋಸ್ ಆಗ್ಬೇಕು ಅಷ್ಟರಲ್ಲಿ ಅವ್ರ ಮೇಲು ಹೊದಿಕೆ ಅರ್ಧ ಟ್ರೈನ್ ಒಳಗಿತ್ತು. ನಾನು ಸಡನ್ನಾಗಿ ಹೋಗಿ ಅರ್ಧಕ್ಕೆ ಕಟ್ ಮಾಡಿದೆ. ಗಣೇಶವ್ರು ಗಾಬರಿಯಾಗಿದ್ರು, ಎಲ್ಲಾ ಸಮಾಧಾನ ಆದ್ಮೇಲೆ ನನ್ನ ಕಡೆ ತಿರುಗಿ ಬಟ್ಟೆ ಹರ್ದ್ಯಲ್ಲೋ ಅದ್ನ ನಮ್ಮ ಅತ್ತೆ ಕೊಟ್ಟಿದ್ದು. (ಅತ್ತೆ ಕೊಡ್ಸಿದ್ದು ಅನ್ನೋ ಖುಷಿಯಿತ್ತೋ ಅಥವಾ ಅವರ ಮೇಲಿನ ಹೆದರಿಕೆಯೋ!!!) ನಾನು ಏನು ಹೇಳಬೇಕೆಂದು ತೋಚದೆ ಸುಮ್ಮನಾದೆ. ಎಲ್ಲರೂ ಗಾಡಿಯ ಕಡೆ ಹೊರಟೆವು. ಅಂತೂ ನಮ್ಮ ಮೆಟ್ರೋ ರೈಡ್ ಗಣೇಶವ್ರ ಬಟ್ಟೆ ಕಟ್ ಮಾಡುವುದರ ಮೂಲಕ ಮುಕ್ತಾಯವಾಗಿತ್ತು!. ವಿ.ಸೂ: ಎಲ್ಲಾ ಸಂಪಂದಿಗರನ್ನ ಈ ರೈಡಿನಲ್ಲಿ ಸೇರಿಸಿಕೊಳ್ಳಲಾಗಲಿಲ್ಲ ಅದಕ್ಕಾಗಿ ವಿಷಾಧಿಸುತ್ತೇವೆ, ಮುಂದೆ ಫೇಸ್ ೧ ಕಂಪ್ಲೀಟಾದಾಗ ಬಿ ಎಂ ಟಿ ಸಿಯ ವೋಲ್ವೋ ಬಾಡಿಗೆ ಪಡೆದು ಎಲ್ಲರನ್ನೂ ರೈಡಿಗೆ ಕರೆದುಕೊಂಡು ಹೋಗುವ ಯೋಚನೆಯಿದೆ!!!.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೂಪರ್ರಾಗಿದೆ ಮೆಟ್ರೋ ರೈಡ್.. ಮು0ದೆ ಬನ್ನೆರುಘಟ್ಟ ನ್ಯಾಶನಲ್ ಪಾರ್ಕು ಮತ್ತು ಪರಪ್ಪನ ಅಗ್ರಹಾರಕ್ಕೂ ಹೋಗಿಬರಬಹುದು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪರಪ್ಪನ ಅಗ್ರಹಾರಕ್ಕೂ ಹೋಗಿಬರಬಹುದು... +1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಸನ್ನವ್ರೆ, ಹೀಗೆ ಆದ್ರೆ ನೆಕ್ಸ್ಟ್ ಫೇಸ್ ಅಲ್ಲಿಗೆ ಅಂಥಾ ಕಾಣ್ಸತ್ತೆ!! ಮೆಚ್ಚುಗೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚೇತನ್ ಅವ್ರೆ ನಿಮ್ಮ ಬರಹ ಓದಿ ಹೊಟ್ಟೆ ಹುಣ್ಣು ಆಗೋಹಾಗೆ ನಕ್ಕಿದ್ದಯ್ತು!! ಪ್ರತಿ ಸಾಲಲ್ಲಿಯೂ ನಗೆ ಉಕ್ಕಿಸುವ ಅದೆಸ್ಟೋ ವಿಷಯಗಳಿವೆ... ಅವುಗಳಲ್ಲಿ ಕೆಲವನ್ನ ಇಲ್ಲಿ ಹೆಕ್ಕಿ ಇಕ್ಕಿದ್ದೇನೆ. 1.ನಾನು ಇದೊಳ್ಳೆ ಪೀಕ್ಲಾಟಕ್ಕೆ ಬಂತಲಪ್ಪ ಅದೇನೋ ಗಾದೆ ಹೇಳ್ತಾರಲ್ಲ ಹಾಗಾಯ್ತು ಅಂದ್ಕೊಂಡು ಪಾರ್ಥವ್ರಿಗೆ ಆಯ್ತು ಅಂದೆ. 2. ಒಟ್ನಲ್ಲಿ ಫೋರ್ನಾಟ್ ಸೆವೆನ್ಗೆ ಬೇಜಾರಾಗೊಷ್ಟು ಕಡಿಮೆ ಏನೂ ಇರ್ಲಿಲ್ಲ. 3. ಕಿತ್ತೋಗಿರೋ ಕತ್ತೆ ಥರಾ ಇದೀರಾ ನಿಮ್ನೆಲ್ಲಿ ಬೆಳ್ಗಿದೀರಾ ಅಂಥಾ ನಾನಂದೆ!? 4. ಹಂಗೂ ನಿಮ್ಗೆ ನಮ್ಕೈಲಿ ದುಡ್ಡು ಹಾಕಿಸ್ಬೇಕಲ್ಲಾ ಅಂತ ಅನ್ಸಿದ್ರೆ ಮೆಟ್ರೋಗೆ ಪೂಜೆ ಮಾಡೋಕೆ ಬಂದಿರೋ ಭಟ್ರು ನಾನು ಅನ್ನಿ ಆಗ ನಿಮಗ್ಯಾರು ಟಿಕೆಟ್ ಕೇಳೋಲ್ಲ. 5. ಅಯ್ಯೋ ಬನ್ನಿ, ನಾವು ಹಾಕಿದ್ರೂ ನೀವು ವಾಪಸ್ ಮಾಡೋ ಆಸಾಮಿಯಲ್ವ, ಸುಮ್ನೆ ನಡೀರಿ. 6. ಜಯಂತ್ ಸೈಡಿಗ್ಹೋಗಿ ಗಣೇಶಣ್ಣನ ಹತ್ರ ಏನೋ ಡೀಲ್ ಮಾಡ್ತಿದ್ರು. 7. ಹಾಗಿದ್ದಿದ್ರೆ ಆರಾಮಾಗಿ ರಾಜನಂಗೆ ಇರ್ಬಹುದಿತ್ತು ಈಗ ನೋಡಿ ಸಾಫ್ಟ್ವೇರ್ ಅಂತ ಸಾಯ್ತಿದೀವಿ. 8. ರಾಮಮೋಹನವ್ರು ಪೇಪರ್ ಓದ್ತಾ ಕೂತಿದ್ರು, ಮುಖ ಬಾಗಿಲಿಗೆ ವಿರುದ್ಧವಾಗಿತ್ತು. 9. ಯಾವ್ದೋ ಮಾರ್ಕೆಟಿಂಗ್ ಕಾಲ್ ಅಂತ ಸುಮ್ನಾದೆ,!! 10. ಅದು ಅಣ್ಣಿಗೇರಿಗೆ ಹೋಗಿದ್ನಲ್ಲ ಅಲ್ಲಿಂದ ೨ ಬುರುಡೆ ಎತ್ಕೊಂಡು ಬಂದಿದ್ದೆ, ನಮ್ಮ ಮನೆಯವ್ರು ನೋಡೋಕೆ ಚೆಂದ ಇದೆ ಅಂತಿದ್ರು, ಹೊಸ ಗೇಟ್ ಮಾಡ್ಸ್ತಿದ್ವಿ ನೋಡೋಕೆ ಚೆನ್ನಾಗಿರತ್ತೆ ಅಂದು ಎರಡೂ ಕಡೆ ಹಾಕಿದ್ವಿ. ವಿಷಯ ಕೇಳಿದ ನಾನು ೩ ಸೀಟ್ ಹಿಂದೆ ಹೋಗಿ ಕೂತೆ. 11. ತೆಂಗಿನಕಾಯಿ ಹಿಡ್ಕೊಂಡು ಅತ್ಲಾಗಿತ್ಲಾಗೆ ಹೋಗ್ತಿದ್ದ. 12. ಸತೀಶವ್ರು ಬಾಗಿಲು ತೆಗೆದ್ರು, ತೆಗೆದ ತಕ್ಷಣ ಬಾಗಿಲ ಮೇಲಿದ್ದ ಹಲ್ಲಿಯೊಂದು ಅವರ ಮೈಮೇಲೆ ಬಿತ್ತು. 13. ಏನ್ರೀ ನಿಮ್ಕಥೆ ಅಂದಾಗ ' ಅಂಡಾಂಡ ಭಂಡ ಸ್ವಾಮಿಗಳು ಬರ್ತಾರೆ, ಗಾಡಿ ಪೂಜೆ ಮಾಡ್ಸೋಕೆ ಕರ್ಸಿದೀನಿ'. 14. ನಾಯಿಯೊಂದು ಗಿಡದ ಮೇಲೆ ಕಾಲೆತ್ತಿ ಹನಿಗಳ ಪ್ರೋಕ್ಷಣೆ ಮಾಡುತ್ತಿತ್ತು. ನಿನ್ನ ಕ್ಯಾಮೆರಾ ಝೂಮ್ ಮಾಡಿ, ಅದರ ನೀರು ಮತ್ತೆ ಗಿಡ ಬಾರೋ ಹಾಗೆ ಒಂದು ಫೋಟೋ ತೆಗಿ ಆಮೇಲೆ ಸಂಪದದಲ್ಲಿ 'ಎಲೆಗಳ ಮೇಲೆ ಹನಿಗಳ ಸಿಂಚನ' ಅಂತ ಹಾಕ್ಬಿಡು, ಆಮೇಲೆ ನೋಡ್ತಾ ಇರು ಏನು ಹಿಟ್ಸ್ ಅಂತೀಯಾ??!!!!. 15. ಗಣೇಶವ್ರು ಆಚೆ ಈಚೆ ನೋಡ್ತಾ ನಿಧಾನಕ್ಕೆ ಇಳೀತಿದ್ರು, ಇವ್ರು ಇನ್ನೇನು ಇಳೀಬೇಕು ಬಾಗಿಲು ಕ್ಲೋಸ್ ಆಗ್ಬೇಕು ಅಷ್ಟರಲ್ಲಿ ಅವ್ರ ಮೇಲು ಹೊದಿಕೆ ಅರ್ಧ ಟ್ರೈನ್ ಒಳಗಿತ್ತು. ನಾನು ಸಡನ್ನಾಗಿ ಹೋಗಿ ಅರ್ಧಕ್ಕೆ ಕಟ್ ಮಾಡಿದೆ. 16. (ಅತ್ತೆ ಕೊಡ್ಸಿದ್ದು ಅನ್ನೋ ಖುಷಿಯಿತ್ತೋ ಅಥವಾ ಅವರ ಮೇಲಿನ ಹೆದರಿಕೆಯೋ!!!) 17. ವಿ.ಸೂ: ಎಲ್ಲಾ ಸಂಪಂದಿಗರನ್ನ ಈ ರೈಡಿನಲ್ಲಿ ಸೇರಿಸಿಕೊಳ್ಳಲಾಗಲಿಲ್ಲ ಅದಕ್ಕಾಗಿ ವಿಷಾಧಿಸುತ್ತೇವೆ, ಮುಂದೆ ಫೇಸ್ ೧ ಕಂಪ್ಲೀಟಾದಾಗ ಬಿ ಎಂ ಟಿ ಸಿಯ ವೋಲ್ವೋ ಬಾಡಿಗೆ ಪಡೆದು ಎಲ್ಲರನ್ನೂ ರೈಡಿಗೆ ಕರೆದುಕೊಂಡು ಹೋಗುವ ಯೋಚನೆಯಿದೆ!!!. ನಿಮ್ನ ನಂಬಿದ್ದೇನೆ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಓಹೋಹೋ ಎಲ್ಲವನ್ನೂ ಲಿಸ್ಟ್ ಮಾಡ್ಬಿಟ್ಟಿದ್ದೀರಾ!!! ಅವೆಲ್ಲ ಅವರು ಬರೆದ ಆರ್ಟಿಕಲ್ ಹಿಡ್ಕೊಂಡು ಲಿಂಕ್ ಮಾಡಿ ಬರೆದೆ, ಎಲ್ಲರದ್ದೂ ಬರೀತಿದ್ದೆ ಆದ್ರೆ ತುಂಬಾ ದೊಡ್ಡದಾಗತ್ತೆ ಅಂತ ಅಷ್ಟಕ್ಕೆ ಬಿಟ್ಟೆ. ನಿಮ್ಮ ಮೆಚ್ಚುಗೆಗೆ ಧನ್ಯವಾದ ಸಪ್ತಗಿರಿಯವ್ರೆ ಮುಂದಿನ ಸಲ ಪ್ಲಾನ್ ಮಾಡಿದ್ರೆ ಗ್ಯಾರಂಟಿ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೂ೦೦೦೦೦ ...ಮು೦ದ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮುಗೀತು ನಾವಡವ್ರೆ ಅಷ್ಟೇ, ಇಷ್ಟಕ್ಕೇ ಸುಸ್ತಾಗಿಹೋಗಿದ್ದೇನೆ ನೀವು ಮುಂದ ಬೇರೆ ಅಂತಿದೀರಾ!! ಪ್ರತಿಕ್ರಿಯೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚೇತನ್ ರವರೇ ನಿಮ್ಮ ಮೆಟ್ರೋ ರೈಡ್ ನ ಸಂಘಟನೆ ಚನ್ನಾಗಿದೆ, ಭಾರಿಮುತ್ತು ಎಂಟ್ರಿಯಾಗಿದ್ರೆ ಚನ್ನಾಗಿರುತ್ತಿತ್ತು ಯಾಕೆಂದರೆ ಭಾರಿಮುತ್ತು ಗಣೇಶ್ ಅವರ ಫ್ರೆಂಡ್ ಅಲ್ವಾ ...!!!!! ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:) ಬಾರಿಮುತ್ತು ಅಡ್ಡಾ ಮಲ್ಲೇಶ್ವರಂ ಅವ್ಳೆನಾದ್ರೂ ಬೇರೆ ಏರಿಯಾಕೆ ಹೆಜ್ಜೆ ಇಟ್ರೆ ಜೈಲೇ. ಮೆಚ್ಚುಗೆಗೆ ಧನ್ಯವಾದ ಸತೀಶವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಎಲ್ಲರೂ ಟೇಪು ಕತ್ತರಿಸಿ ಕಾರ್ಯಕ್ರಮ ಆರಂಭಿಸಿದರೆ ನೀವು ಗಣೇಶರು ಹಾಕಿದ್ದ ಬಟ್ಟೆ ಕತ್ತರಿಸಿ ಪ್ರಯಾಣ ಪ್ರಾರಂಭಿಸಿದ್ದೀರಿ. ಶುಭಾರಂಭ!?!?!!!!! ಪ್ರಯಾಣ ಸಾಗಲಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇಲ್ಲ ಸರ್ ಪ್ರಯಾಣ ಮುಗಿದುಹೋಯ್ತು ಗಣೇಶವ್ರ ಬಟ್ಟೆಗೆ ಕತ್ತರಿ ಬಿದ್ದದ್ದೇ ಕ್ಲೈಮ್ಯಾಕ್ಸ್ ಪ್ರತಿಕ್ರಿಯೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಏಕೊ ಎಲ್ಲರು ತಮ್ಮ ಶೈಲಿ ಬದಲಿಸುತ್ತಿದ್ದಾರೆ ! ನಾನು ನಿಮ್ಮ ಶೈಲಿಯ ಅಣಕ ಬರೆದರೆ ನೀವು ಗಣೇಶರ ಹಿ0ದೆ ಹೊರಟಿರಿ ! ನಿಮ್ಮ ಮೆಟ್ರೊ ರೌ0ಡ್ ಚೆನ್ನಾಗಿದೆ ! ಹೊಸ ಅಲೋಚನೆ ಚೆನ್ನಾಗಿದೆ ! ಮನೆಮು0ದಿನ ಗೇಟಿಗೆ ಎರಡು ಬುರುಡೆ ಸಿಕ್ಕಿಸಿದರೆ ನೋಡಲು ಚೆನ್ನಾಗಿ ಇರುತ್ತೆ ಅನ್ನಿಸುತ್ತೆ ! ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇಲ್ಲ ಪಾರ್ಥವ್ರೆ, ಯಾರೂ ಯಾರ ಶೈಲಿಯನ್ನ ಅನುಸರಿಸುತ್ತಿಲ್ಲ. ನೀವು ಡಾಟ್ಸ್ ಯೂಸ್ ಮಾಡಿದೀರಾ ಅಷ್ಟೇ ಇನ್ನೆಲ್ಲಾ ನಿಮ್ಮದೇ. ಎಲ್ಲರ ಲೇಖನಗಳನ್ನ ಹಿಡ್ಕೊಂಡು ಈ ರೀತಿ ಬರೆದ್ರೆ ಹೇಗೆ ಅಂಥಾ ಶುರು ಮಾಡಿದೆ, ನೀವು ಹೇಳಿದ್ಮೇಲೆ ಗಣೇಶಣ್ಣನ ಶೈಲಿ ಜ್ಞಾಪಕ ಬಂತು. <ಮನೆಮು0ದಿನ ಗೇಟಿಗೆ ಎರಡು ಬುರುಡೆ ಸಿಕ್ಕಿಸಿದರೆ ನೋಡಲು ಚೆನ್ನಾಗಿ ಇರುತ್ತೆ ಅನ್ನಿಸುತ್ತೆ !> ಹೌದ್ಹೌದು, ನಾವ್ಯಾರೂ ಬರಬಾರದು ಅಂತ ಈ ಪ್ಲಾನಾ?? ಮೆಚ್ಚುಗೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚೇತನ್ ಸಾರ್ ಹೀಗಾ ಬರೆಯುವುದು ನಕ್ಕು ನಕ್ಕು ಹೊಟ್ಟೆ ಹುಣ್ಣಾಗೊದು ಬಾಕಿ ನೀಳಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:) :) ಮೆಚ್ಚುಗೆಗೆ ಧನ್ಯವಾದ ನೀಳಾವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚೇತನ್ ಅಲ್ಲೆಲ್ಲೂ ಕೆಂಪು ಮಣ್ಣು ಸಿಗಲ್ವಾ.? ಇದ್ರೆ ಹೇಳಿ ಚೀಲ ಎತ್ತಾಕಂಡು ಬರ್ತೀನಿ. ಟ್ರೈನ್ ಜೆರ್ನಿ ಚೆನ್ನಾಗಿದೆ. ಮುಂದುವರೀಲಿ. -ರಾಮಮೋಹನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಯ್ಯಪ್ಪನಹಳ್ಳಿ ಲಾಸ್ಟ್ ಸ್ಟಾಪಲ್ಲಿ ಹಾರಿದ್ರೆ ನೆಕ್ಸ್ಟ್ ಫೇಸ್ಗೆ ಗುಂಡಿ ತೆಗೀತಿದ್ದಾರಲ್ಲ ಅಲ್ಲಿಗೆ ಲ್ಯಾಂಡ್ ಆಗ್ತೀರ, ಅಲ್ಲೇ ಸಿಗತ್ತೆ ನೋಡಿ!!!!! ಟ್ರೈನ್ ಜರ್ನಿ ಮುಗೀತು ಕಣ್ರೀ ಮೆಚ್ಚುಗೆಗೆ ಧನ್ಯವಾದ ರಾಮಮೋಹನವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮುಂದಿನಸಲ ನಾನು ಪಾಟೀಲರೊಂದಿಗೆ ಮೆಟ್ರೋ ರೈಡಿಗೆ ಬರಲು ನಿರ್ಧರಿಸಿದ್ದೇವೆ ಚೇತನ್ ರವರೆ. ತಮ್ಮ ಈ ಮೆಟ್ರೋ ಪ್ರಹಸನ ಬಹಳ ಸೊಗಸಾಗಿತ್ತು. ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

<ಮುಂದಿನಸಲ ನಾನು ಪಾಟೀಲರೊಂದಿಗೆ ಮೆಟ್ರೋ ರೈಡಿಗೆ ಬರಲು ನಿರ್ಧರಿಸಿದ್ದೇವೆ ಚೇತನ್ ರವರೆ> ಸರಿ ಹಾಗಿದ್ರೆ ವೋಲ್ವೋ ಬಸ್ ರೆಡಿ ಮಾಡುವ! ಮೆಚ್ಚುಗೆಗೆ ಧನ್ಯವಾದ ರಮೇಶವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚೇತನ್, ಮೆಟ್ರೋ ರೈಡ್ ಗೆ ಕರುದ್ರೆ ಖಂಡಿತ ಬರ್ತಿನ್ರಿ. ಮುಂದಿನ ಸಲ ವೋಲ್ವೋ ಬಸ್ನಲ್ಲಿ ಹೋಗೋಣ. ಒಳ್ಳೆಯ ಕಲ್ಪನೆ ಹಾಗು ಒಳ್ಳೆಯ ಹಾಸ್ಯ ಚೇತನ್ . ಮಸ್ತಿತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮುಂದಿನಸಲ ಖಂಡಿತ ನೀವು ಇನ್!!!. ಮೆಚ್ಚುಗೆಗೆ ಧನ್ಯವಾದ ತೇಜಸ್ವಿಯವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚಿಕ್ಕು ಮೆಟ್ರೋ ರೈಡ್ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಜಯಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚೆನ್ನಾಗಿದೆ ನಿಮ್ಮ ಮೆಟ್ರೋ ರೈಡ್ ... ಮೆಟ್ರೋ'ದಲ್ಲಿ ಸಾಕಷ್ಟು ಜನರನ್ನು ಮೆಟ್ಟಿಸಿದ್ದೀರಿ ... ಹಿಮ್ಮೆಟ್ಟಿದವರನ್ನೂ ಬಿಡದೆ ಸೇರಿಸಿದ್ದೀರಿ ... ದೂರದಿ0ದಲೇ ನಿಮಗೆ ಮು0ದಿನ ಬಾರಿಯ ಪಯಣಕ್ಕೂ ವಿಷ್ ಮಾಡಿಬಿಡುತ್ತೇನೆ :‍))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:) :) :) ನೋಡೋಣ ಫೇಸ್ ೧ ಜರ್ನಿಯಲ್ಲಿ ಅಕಸ್ಮಾತ್ ನೀವು ಇಲ್ಲಿಗೆ ಬಂದಿದ್ರೆ ಆಗ ಬರೋವ್ರಂತೆ ಮೆಚ್ಚುಗೆಗೆ ಧನ್ಯವಾದ ಭಲ್ಲೆಯವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವ್ಹಾವ್ಹಾ..ಚಿಕ್ಕೂ ಸೂಪರ್. ಫ್ರೀ :) ಬೆಂಗಳೂರು ರೌಂಡ್ ಹಾಗೂ ಮೆಟ್ರೋ ರೈಡ್ ಮಾಡಿಸಿದ್ದಕ್ಕೆ ಧನ್ಯವಾದಗಳು. ೧. ಗಣೇಶ ಕರಿವದನ ಅಂತಾರೆ ಕತ್ತೆವದನ ಮಾಡಿಬಿಟ್ಯಲ್ಲೋ.. :) ೨.>>>ಪಾಪ ಹೊಸದಾಗಿ ಮದ್ವೆಯಾಗಿದ್ದಾರೆ, ನಿಮ್ಹತ್ರ ರಿಕ್ವೆಸ್ಟ್ ಮಾಡ್ಕೊಂಡ್ರೆ ನೀವು ಹಿಂಗಾ ಮಾಡೋದು?? ನಿಮ್ಗೆ ಒಳ್ಳೆದಾಗಲ್ಲ ಬಿಡಿ!!! -ಜಯಂತ್ ಪತ್ನಿಯನ್ನು ಬಿಟ್ಟು ಬಂದರೆ ಒಂದೆರಡು ವಿರಹ ಗೀತೆ ಬರೆದು ಸಂಪದದಲ್ಲಿ ಹಾಕಿಯಾನು ಎಂದು ಹಾಗೆ ಮಾಡಿದೆ. :) ೩.>>>ಏ ರಾಮ ಏನ್ಮಾಡ್ತಿದೇಯೋ?? :) :) - ರಾಮ ಮೋಹನರು ಬಾಗಿಲಿಗೆ ವಿರುದ್ಧವಾಗಿ ಅಡುಗೆ ಕೋಣೆಗೆ ಮುಖಮಾಡಿ ಕಾಯುತ್ತಿದ್ದರು.. ಬೆಳಗ್ಗಿನ ಕಾಫಿಗಾಗಿ :) ೪.>>>ನಮ್ಮ ಮುಂದಿನ ಪಿಕಪ್ ಪಾಯಿಂಟ್ ಮೆಜೆಸ್ಟಿಕ್. ನಾವಡವ್ರು, ಕವಿ ನಾಗರಾಜವ್ರು ಅಲ್ಲಿ ಕಾಯ್ತಿದ್ರು. ಇಬ್ರನ್ನ ಗಾಡಿಗೆ ಹಾಕಿಕೊಂಡು.. -ನಾವಡವ್ರು ನಾಗರಾಜವ್ರು ಭಾರೀ ಭಯಂಕರ ಚರ್ಚೆ(ವಿಷಯ ನನಗೆ ಗೊತ್ತಿಲ್ಲ-ಬಹುಷಃ ದೇವರು ಧರ್ಮದ ಬಗ್ಗೆ) ನಡೆಸುತ್ತಿದ್ದರು. ಕರೆದೂ ಕರೆದೂ ಸಾಕಾಗಿ ಕೊನೆಗೆ ಚಿಕ್ಕು,ಜಯಂತ್ನೊಂದಿಗೆ ಸೇರಿ ಅವರಿಬ್ಬರನ್ನೂ ಎತ್ತಿ ಗಾಡಿಗೆ ಹಾಕಿಕೊಂಡೆವು. ಅಲ್ಲೂ ಚರ್ಚೆ ಮುಂದುವರಿಯಿತು. ಕೊನೆಗೆ ನಮ್ಮ ಮೆಟ್ರೋ ರೈಡೂ ಮುಗಿದದ್ದೂ ಅವರಿಗೆ ಗೊತ್ತಿಲ್ಲ!!! ಅವರಿಬ್ಬರ ಪ್ರತಿಕ್ರಿಯೆ ನೋಡಿ :) ೫.>>>ಅದೇನು ನಿಮ್ಮ ಮನೆಯ ಗೇಟಿನ ೨ ಪಿಲ್ಲರ್ ಮೇಲೆ ಬುರುಡೆ ಥರ ಮಾಡಿದ್ದೀರಾ?? -ಪಾರ್ಥ ಅವರೆ.. ಕೈ ಎಳೆಯುವುದು..ಕಾಲು ಎಳೆಯುವುದು ಬಿಡಿ.. ನಾನಿನ್ನು ನಿಮ್ಮ ಸುದ್ದಿಗೆ ಬರುವುದಿಲ್ಲ. :) -ಚಿಕ್ಕು ಆ ಬುರುಡೆಗಳು ೩ ಸೀಟು ಹಿಂದೆ ಹೋಗಿ ಕೂತವನನ್ನೇ ಕೆಕ್ಕರಿಸಿ ನೋಡುತ್ತಿದ್ದವು... ೬.>>>ಇವ್ರು ಇನ್ನೇನು ಇಳೀಬೇಕು ಬಾಗಿಲು ಕ್ಲೋಸ್ ಆಗ್ಬೇಕು ಅಷ್ಟರಲ್ಲಿ ಅವ್ರ ಮೇಲು ಹೊದಿಕೆ ಅರ್ಧ ಟ್ರೈನ್ ಒಳಗಿತ್ತು -ನಾನು ಎಳೆದ ರಭಸಕ್ಕೆ ಟ್ರೈನು ಪ್ಲಾಟ್‌ಫಾರ್ಮ್ ಹತ್ತಿ..ಪುಣ್ಯಕ್ಕೆ(ಟ್ರೈನಿದ್ದು) ಸರಿಯಾದ ಸಮಯಕ್ಕೆ ಚಿಕ್ಕು ಕಟ್ ಮಾಡಿದ. (ಸಪ್ತಗಿರಿವಾಸಿ ಸ್ಟೈಲ್ ಪ್ರತಿಕ್ರಿಯೆ) ಚೇತನ್‌ಗೆ ಸೂಪರ್ ಹಾಸ್ಯಕ್ಕಾಗಿ ಧನ್ಯವಾದಗಳು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶಣ್ಣ <ಗಣೇಶ ಕರಿವದನ ಅಂತಾರೆ ಕತ್ತೆವದನ ಮಾಡಿಬಿಟ್ಯಲ್ಲೋ.. :)> ಆಮೇಲೆ ಅಲ್ಲ ಅಂತ ಹೇಳಿದೀನಲ್ಲ!!! <ಜಯಂತ್ ಪತ್ನಿಯನ್ನು ಬಿಟ್ಟು ಬಂದರೆ ಒಂದೆರಡು ವಿರಹ ಗೀತೆ ಬರೆದು ಸಂಪದದಲ್ಲಿ ಹಾಕಿಯಾನು ಎಂದು ಹಾಗೆ ಮಾಡಿದೆ. :)> :) :) :) ನಿಜ ನಿಜ ಒಳ್ಳೆಯ ಕೆಲಸ <ವಿಷಯ ನನಗೆ ಗೊತ್ತಿಲ್ಲ-ಬಹುಷಃ ದೇವರು ಧರ್ಮದ ಬಗ್ಗೆ) ನಡೆಸುತ್ತಿದ್ದರು. ಕರೆದೂ ಕರೆದೂ ಸಾಕಾಗಿ ಕೊನೆಗೆ ಚಿಕ್ಕು,ಜಯಂತ್ನೊಂದಿಗೆ ಸೇರಿ ಅವರಿಬ್ಬರನ್ನೂ ಎತ್ತಿ ಗಾಡಿಗೆ ಹಾಕಿಕೊಂಡೆವು. ಅಲ್ಲೂ ಚರ್ಚೆ ಮುಂದುವರಿಯಿತು. ಕೊನೆಗೆ ನಮ್ಮ ಮೆಟ್ರೋ ರೈಡೂ ಮುಗಿದದ್ದೂ ಅವರಿಗೆ ಗೊತ್ತಿಲ್ಲ!!! ಅವರಿಬ್ಬರ ಪ್ರತಿಕ್ರಿಯೆ ನೋಡಿ :> ನಾನೂ ಅವರ ಪ್ರತಿಕ್ರಿಯೆಗಳನ್ನ ನೋಡಿ ಅವ್ರೆಲ್ಲೋ ಕಳೆದುಹೋಗಿದ್ರೆನೋ ಅಂದ್ಕೊಂಡಿದ್ದೆ, ಈಗ ಅರ್ಥವಾಯ್ತು!! <-ಪಾರ್ಥ ಅವರೆ.. ಕೈ ಎಳೆಯುವುದು..ಕಾಲು ಎಳೆಯುವುದು ಬಿಡಿ.. ನಾನಿನ್ನು ನಿಮ್ಮ ಸುದ್ದಿಗೆ ಬರುವುದಿಲ್ಲ. :)> :) :) <-ಚಿಕ್ಕು ಆ ಬುರುಡೆಗಳು ೩ ಸೀಟು ಹಿಂದೆ ಹೋಗಿ ಕೂತವನನ್ನೇ ಕೆಕ್ಕರಿಸಿ ನೋಡುತ್ತಿದ್ದವು..> ಯಪ್ಪಾ, ಬೇಡ ಅಂದ್ರೂ ಬಿಡೋ ಹಾಗಿಲ್ಲ. ಮೆಚ್ಚುಗೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>> ೫.>>>ಅದೇನು ನಿಮ್ಮ ಮನೆಯ ಗೇಟಿನ ೨ ಪಿಲ್ಲರ್ ಮೇಲೆ ಬುರುಡೆ ಥರ ಮಾಡಿದ್ದೀರಾ?? -ಪಾರ್ಥ ಅವರೆ.. ಕೈ ಎಳೆಯುವುದು..ಕಾಲು ಎಳೆಯುವುದು ಬಿಡಿ.. ನಾನಿನ್ನು ನಿಮ್ಮ ಸುದ್ದಿಗೆ ಬರುವುದಿಲ್ಲ. :) ಅವೆಲ್ಲ ಬಿಟ್ಟುಬಿಟ್ರೆ ಮು0ದೆ ಬರಹಗಳಿಗೆ ಸ್ಪೂರ್ತಿನೆ ಇರಲ್ಲ :)))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:) :) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚೇತನ್, ಸ೦ಪದ ಟೀಮಿನ ಬೆ೦ಗ್ಳೂರು ರವು೦ಡು ಮತ್ತೆ ಮೆಟ್ರೋ ರೈಡು ಸಕತ್ತಾಗಿದೆ.>>><<ಅದೇ ನೀವು ಅಲ್ಲಿ ನೋಡಿದ್ರಲ್ಲ ಕೆಂಪು ಬಟ್ಟೆ ಹಾಕಿಕೊಂಡವನು ಅವ್ನು ಏನೋ ಮಾಟ ಮಾಡ್ತಿದ್ದ, ನಂಗೆ ಅದ್ನ ನೋಡಿ ಪಿತ್ತ ನೆತ್ತಿಗೇರಿತ್ತು ಅದ್ಕೆ ಹೋಗಿ ಜೋರು ಮಾಡ್ತಿದ್ದೆ >>><<<< ಇದು ಮಾತ್ರ ಸೂಪರ್ರೋ ಸೂಪರ್ರು!! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:) :) :) ಮಂಜಣ್ಣ ಮೆಚ್ಚುಗೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚಿಕ್ಕು ಅವರೆ, ಅಂತೂ ಇಂತೂ ಸಂಪದಿಗರೆಲ್ಲರಿಗೂ ರೈಲು ಹತ್ತಿಸಿದಿರಿ:))). ಮೊನ್ನೆ ನಿಮಗೆ ಸಿಟಿ ಬಸ್ಸಿನಲ್ಲಿ ಮುದುಕಿಯೊಬ್ಬಳು ಮುಂದಿನ ಸೀಟಿನಲ್ಲಿ ಕೂಡೋ ಹಾಗೆ ಮಾಡಿದ್ದು ಗಣೇಶಣ್ಣ ಅಂತಾ ತಿಳ್ಕೊಂಡು ನೀವು ಅವರ ಮೇಲುಹೊದಿಕೆ ಹರಿದುಹೋಗುವ ಹಾಗೆ ತಂತ್ರ ಮಾಡಿದ್ದು ಮಾತ್ರ ಸರಿಯಿಲ್ಲ ಮಾರಾಯ್ರೇ! ಅವರ ಪೋಷಾಕು ಸರಿಯಿದ್ದಿದ್ದರೆ ಅಂಡಾಂಡ ಭಂಡ ಸ್ವಾಮಿಗಳ ಬದಲಾಗಿ ನನ್ನ ಗಾಡಿ ಪೂಜೆಗೆ ಅವರನ್ನು ಕರೆದುಕೊಂಡು ಹೋಗುವಾ ಅಂತಾ ಇದ್ದೆ; ಅದನ್ನೂ ನೀವು ಹಾಳು ಮಾಡಿಬಿಡೋದ...ಛೇ...ಛೇ... ;)) ನಿಮಗೆ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಅ0ತಾ ಸ್ವಾಮಿಗಳು ಆಶೀರ್ವಾದ ಮಾಡಿಬಿಟ್ಟಾರು ಜೋಕೆ ;)))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆಗ್ಲಿ ಆಗ್ಲಿ ಅದೇನೇನು ಆಗಬೇಕೋ ಎಲ್ಲಾ ಆಗ್ಲಿ ಶ್ರೀಧರವ್ರೆ!! ಅಷ್ಟು ಸಣ್ಣ ವಿಷಯಕ್ಕೆ ಗಣೇಶಣ್ಣಗೆ ಹಾಗೆ ಮಾಡೋಕಾಗತ್ತಾ??!! ಮೆಚ್ಚುಗೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅ0ತೂ ಶಿಕ್ಷೆ ಅಲ್ಲಲ್ಲ ಆಶೀರ್ವಾದ ಪಡೆಯೋಕೆ ಸಿದ್ಧರಾಗಿದ್ದೀರ! ಹೌದು ಚಿಕ್ಕುರವರೆ ನನಗೆ ಬೆ0ಗಳೂರಿನಲ್ಲಿ ಕೂಡ ಮನೆ ಇರುವುದನ್ನು ನೀವು ಹೀಗೆ ಜಗಜ್ಜಾಹೀರು ಮಾಡಿದರೆ ಹೇಗೆ? ಸಧ್ಯ ಹೈದರಾಬಾದಿನಲ್ಲಿರೋಳು ಸ0ಪದ ಓದೋದಿಲ್ಲವಾದ್ದರಿ0ದ ನಾನು ಬಚಾವ್ ;)) ಹೀಗೆಯೇ ಒಳ್ಳೆಯ ಹಾಸ್ಯ ಲೇಖನಗಳನ್ನು ಮು0ದುವರೆಸಿ ಎ0ದು ಶುಭ ಹಾರೈಸುತ್ತಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೌದ್ಹೌದು ಯಾರಿಗೊತ್ತು ಅವ್ರು ಓದಿರಬಹುದು, ಸೈಲೆಂಟಾಗಿ ಕಣ್ಣಿಟ್ಟಿರಬಹುದು :) ನಿಮ್ಮಗಳ ಪ್ರೋತ್ಸಾಹ ಹೀಗೇ ಇರಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚಿಕ್ಕು ಸಕತ್ತಾಗಿದೆ !!! ಒಂದುವಾರ ರಜೆ ಹಾಕಿ ನನ್ನ ಹುಡುಗಿಗೆ ಸಿಪ್ ಕುಡಿಸಲು ಹೋದ ಕಥೆ ಹಾಕಿ ಬಿಟ್ರಲ್ರಿ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅದ್ಹೇಗೆ ಬಿಡೋಕಾಗತ್ತೆ ಕಾಮತವ್ರೆ, ಸಿಕ್ಕಿದ ಚಾನ್ಸ್ ಯಾರಾದ್ರೂ ಮಿಸ್ ಮಾಡ್ತಾರಾ?? ಮೆಚ್ಚುಗೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.