ಸಂಕ್ರಾಂತಿ ಹಬ್ಬದ ಶುಭಾಶಯಗಳು !

1

ಎಲ್ಲ ಸಂಪದೀಯರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು.  ಸಂಕ್ರಾಂತಿ, ಸುಗ್ಗಿಯ ಕಾಲ. ಅಕ್ಕಿ, ಎಳ್ಳು, ಕಬ್ಬು, ಅರಿಶಿಣ, ನೆಲಗಡಲೆ, ಕೊಬ್ಬರಿ, ಚಳಿಗಾಲದ ಬೆಳೆಗಳು. ಚಳಿಗಾಲದಲ್ಲಿ ದೇಹಕ್ಕೆ ಜಿಡ್ಡಿನ ಆವಶ್ಯಕತೆ ಹೆಚ್ಚು. ಅವನ್ನೂ ಕೊಡುವುದು ವಾಡಿಕೆ.

ದಕ್ಷಿಣಾಯಣ ಪುಣ್ಯಕಾಲ :

ದಕ್ಷಿಣಾಯಣ ಪುಣ್ಯಕಾಲದಲ್ಲಿ ಹಗಲು ಕಡಿಮೆ, ಶಾಖ ಕಡಿಮೆ, ಶೀತ ಹೆಚ್ಚು. ಪ್ರಕೃತಿ ಮತ್ತು ಮಾನವನ ಬದುಕಿನಲ್ಲಿ ಪರ್ವಕಾಲ, ಹೊಸಭರವಸೆಯ ವಸಂತನ ಆಗಮನವಿದೆ. ಭರವಸೆ, ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಹೀಗೆ ಸೂರ್ಯನ ಪಥದಲ್ಲಿ ಬದಲಾವಣೆ ಕಾಣಿಸುತ್ತದೆ. ಒಂದು ಸೌರವರ್ಷದಲ್ಲಿ ೧೨ ಸೌರಮಾಸಗಳಿವೆ. ಆಯಾರಾಶಿಗಳ ಹೆಸರಿನ ಒಂದು ರಾಶಿಯಿಂದ ಮತ್ತೊಂದು ರಾಶಿಯ ವ್ಯಾಪ್ತಿಗೆ ಉಪಕ್ರಮಿಸುವ ಹಂತವನ್ನು

* ಸಂಕ್ರಮಣ,

* ಮಕರ ಸಂಕ್ರಮಣ,

* ಸಂಕ್ರಾಂತಿ

* ಇಲ್ಲವೇ ಉತ್ತರಾಯಣ

ವೆಂದು ಗುರುತಿಸುತ್ತಾರೆ.

 ಉತ್ತರಾಯಣ ಪರ್ಯಕಾಲ :

ಉತ್ತರಾಯಣ ಪರ್ಯಕಾಲದಲ್ಲಿ ಹಗಲು ಹೆಚ್ಚು ಬೆಚ್ಚನೆಯ ವಾತಾವರಣ ಪ್ರಖರತೆ ಮಕರ ಸಂಕ್ರಾತಿಯಲ್ಲಿ ಭೀಷ್ಮ ಪಿತಾಮಹರು ಶರಶಯ್ಯೆಯಮೇಲೆ ಮಲಗಿ ಉತ್ತರಾಯಣದ ಬರುವಿಕೆಗೆ ಕಾದಿದ್ದು, ಪ್ರಾಣ ತ್ಯಜಿಸಿದರು. ಭಗೀರಥ ಮಹಾರಾಜನೂ ಸಹಿತ ಉತ್ತರಾಯಣದಲ್ಲಿ ಗಂಗೆಯನ್ನು ಭೂಮಿಗೆ ತಂದು ಪಿತೃಗಳಿಗೆ ಗಂಗಾಜಲದ ತರ್ಪಣವನ್ನು ಕೊಟ್ಟ ಸಂಗತಿ ಎಲ್ಲರಿಗೂ ತಿಳಿದಿದೆ.

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.