ಶ್ರೀ ಸಾಯಿನಾಥ -ಅಭಯಂಕರ !

5

ಶ್ರೀ ಸಾಯಿನಾಥ ಬಾಳಿನ ಆಶಾದೀಪ
ಮನ ಮನೆಗೆಲ್ಲ ನೀವೇ ನಂದಾದೀಪ
ಎಲ್ಲೆಡೆಯಲ್ಲೂ ನಿಮ್ಮದೇ ಸುಪ್ರತಾಪ
ಕರುಣಿಸಿ ಎಮಗೆ ನಿಮ್ಮ ದಿವ್ಯಸ್ವರೂಪ .

ಹೇ ಶಿರಡಿವಾಸ ದುಃಖ ವಿನಾಶಕ
ಹೇ ದಯಾನಿಧೇ ಸುಖ ಸಂಪತ್ತಿ ವರ್ಧಕ
ಹೇ ದೀನ ಬಂಧುವೇ ಪರಿಹರಿಸೆಲ್ಲಾ ಕಂಟಕ
ಈ ಯುಗದಿ ನೀವೇ ಭಕ್ತ ಪರಿಪಾಲಕ .

ಸಾಯಿರಾಂ ಸಾಯಿಶಾಂ ತಾರಕ ಮಂತ್ರ
ಜಪಿಸಲಿ ನಮ್ಮ ಮನ ನಿರಂತರ
ಈ ಜಗಕೆ ನೀವೇ ರಾಜಾಧಿರಾಜ ಅಭಯಂಕರ
ಸದ್ಗುರುವೇ ನಿಮ್ಮೆಡೆಯೆಲ್ಲೇ ಸಚ್ಚಿದಾನಂದ .

ಶ್ರೀ ನಾಗರಾಜ್ . 4/4/19

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.