ಶ್ರೀ ರಾಘವೇಂದ್ರ- ದಾರಿ ದೀಪ

0

ಕರೆದೊಡನೆ ಬಂದು ನಿಂದು
ಹರಸುವ ಶ್ರೀ ಗುರುರಾಯನೇ
ಸಾದಾ ನನ್ನ ಹೃದಯದಲಿ
ವಾಸ ಮಾಡೋ ಶ್ರೀ ರಾಘವೇಂದ್ರನೇ

ಬಾಳಿನ ಏರು ಪೇರಲಿ
ಜೀವದ ಜಂಜಾಟದಲಿ
ನಿನ್ನ ಧ್ಯಾನಾಮೃತವೊಂದೇ
ಆಶಾದೀಪ
ತಾಮಸವೆಲ್ಲ ಕರಗಿಸುವ ನಂದಾದೀಪ

ಅರಿಷಡ್ವರ್ಗ ಧಾಳಿಯಲಿ
ಹೃದಯ ಜ್ವಾಲಾಮುಖಿಯಾಗಲು
ನಿನ್ನ ನಾಮಾಮೃತವೊಂದೇ
ಶಾಂತಿಮಂತ್ರ
ದುಗುಡವೆಲ್ಲ ತಿಳಿಯಾಗಿಸುವ ಯಂತ್ರ

ಓ ಮಂತ್ರಾಲಯ ವಾಸಿಯೇ
ಆಗಿರು ಎಂದೆಂದಿಗೂ
ನನ್ನ ಬಾಳ ಹಣತೆಯ ದಾರಿ ದೀಪ
ತಮಸೋಮಾ ಜ್ಯೋತಿರ್ಗಮಯ .

ಶ್ರೀ ನಾಗರಾಜ್ ,20/08/19

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.