ಶೈವ ಸಿದ್ಧಾಂತಿ " ಮಹಾತ್ಮ ರಾವಣ "

3

 

ಶೈವ ಸಿದ್ಧಾಂತಿ " ಮಹಾತ್ಮ ರಾವಣ "
 
                      ಜಗತ್ ಪ್ರಸಿದ್ಧವಾದ ದ್ರಾವಿಡ ವಂಶದಲ್ಲಿ ಹುಟ್ಟಿದ ಪುಲಸ್ಯ ಬ್ರಹ್ಮನ ಮಮ್ಮಗನೂ ರಾವಣನೂ ಅತ್ಯಂತ ಸೌಮ್ಯಕಾರ ಸೃಜನಶೀಲ ದಯಾಶೀಲ ಕ್ಷಮಾಗುಣ ಸಂಪನ್ನ ಕರುಣೆ ಧರ್ಮಬೀರುತ್ವ ಗಾಂಬೀರ್ಯ ಮುಂತಾದ ಸದ್ಗುಣಹೊಂದಿದು, ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ನಾಶಮಾಡಿ ಅವುಗಳ ಜಾಗದಲ್ಲಿ ಕ್ಷಮೇ ದಯೇ ಶಾಂತಿ ಸೈರಣೆ ನಿತ್ಯಸತ್ಯವೆಂಬ ಸದ್ಗುಣ ಸಂಪದಗಳನ್ನು ಇಟ್ಟುಕೊಂಡಿದ್ದ ಪ್ರಸಿದ್ಧ ರತ್ನಶ್ರವ ( ವಿಶ್ರವಸ್ಸಿ ) ಕೈಕಸಿಯರು ಇವನ ತಂದೆ ತಾಯಿಗಳು. ಬಾನುಕರ್ಣ ವಿಭೀಷಣ ಸೋದರು ಚಂದ್ರನಖಿ ಸೋದರಿ ಮಂಡೋದರಿ ಪಟ್ಟದ ಮಹಿಷಿ ಇಂದ್ರನನ್ನೇ ಗೆದ್ದಿದ್ದ ಇಂದ್ರಜಿತ್‍ನೂ ಮೇಘನಾಥ-ಇಂದಗಿ ಮಕ್ಕಳು ಈತ ಪರಂಗನಾವಿರತ ವ್ರತವನ್ನು ಆಚರಿಸುವ ಪರನಾರಿ ಸೋದರನು. ಶೈವ ಸಿದ್ಧಾಂತಿ ಆರ್ಯರ ವೈಷ್ಣವರ ವಿಧಿಯಾಟಕೆ ಸಿಕ್ಕಿ ತನ್ನ ಶ್ರೇಯಸ್ಸು ಅಯಸ್ಸು ಕಳೆದು ಸಂಚಿಗೆ ಬಲಿಯಾಗಬೇಕಾಯಿತು.
                     ಯಙ್ಞಯಾಗಾದಿಗಳಲ್ಲಿ ಪ್ರಾಣಿ ಹಿಂಸೆಯನ್ನು ತಡೆಯುವುದೇ ತನ್ನ ಆಧ್ಯಕರ್ತವ್ಯವೆಂದು ಭಾವಿಸಿರುತ್ತಾನೆ. ಮರುತ್ತಾ ರಾಜನು ಪ್ರಾಣಬಲಿಯಿಂದ ಯಙ್ಞ ಯಾಗದಿಗಳನ್ನು ನಡೆಸುತ್ತಿರುವುದ ಕೇಳಿದ ರಾವಣನೂ ಅಲ್ಲಿಗೆ ಬಂದು ಯಙ್ಞಕ್ಕಾಗಿ ತಂದಿದ್ದ ಅನೇಕ ಪ್ರಾಣಿಗಳನ್ನು ಮುಕ್ತಿಗೊಳಿಸುತ್ತಾನೆ. ಹಾಗೇಯೇ ಪ್ರಾಣಿವಧೆಯಿಂದ ನಡೆಯುವ ಯಙ್ಞ ವಿರೋಧಿ ನಿಲುವನ್ನು ವ್ಯೆಕ್ತಪಡಿಸುತ್ತಾನೆ. ಈತ ಸಕಲ ಜೀವಿಗಳಮೇಲೆ ಕರುಣೆಯನ್ನು ಹೊಂದಿದ್ದು ಅಹಿಂಸೆಯ ಪರನಿಲ್ಲುತ್ತಾನೆ. ಅದೇ ಅವನು ಮಾಡಿದ ತಪ್ಪಾಗಿ ಪರಿಣಮಿಸಿ ಆರ್ಯರು ಅವನನ್ನು ಕ್ರೂರಿಯಾಗಿ ಚಿತ್ರಿಸಲ್ಪಟ್ಟಿದೆ ದೇವತೆಗಳಿಗೆ ಯಙ್ಞಯಾಗಗಳಿಂದ ಹವಿಸ್ಸು ದೊರಕದಂತೆ ಮಾಡಿದನೆಂಬ ಕಾರಣಕ್ಕೆ ರಾವಣನ್ನು ಬಲಿತೆಗೆದುಕೊಳ್ಳಲು ಹವಣಿಸುತ್ತಾರೆ. ಆರ್ಯರು ಬರೆದಂತಾ ನಮ್ಮ ವಾಲ್ಮೀಕಿ ರಾಮಾಯಣ ಕಥೆಗಳಲ್ಲಿ.
                      ಸೀತೆಯನ್ನು ಮುಟ್ಟದೆಯೇ ತನ್ನ ತೇಜೋಬಲದಿಂದ ಪುಷ್ಪಕ ವಿಮಾನದಲ್ಲಿ ಕುಳ್ಳಿರಿಸಿ ತನ್ನ ಅರಮನೆಗೆ ತಂದು ತನ್ನ ಅಶೋಕವನದಲ್ಲಿ ತನ್ನ ಅನುಚರರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿರುತ್ತಾನೆ. ಒಂದು ದಿನವೂ ಕೆಟ್ಟದೃಷ್ಟಿಯಲ್ಲಿ ನೋಡಿರುವುದಿಲ್ಲ. ಸೋದರಿ ಚಂದ್ರನಖಿಗೆ ಮಾಡಿದ ತಪ್ಪಿಗೆ ಸೀತೆಯನ್ನು ಅಪಹರಿಸಬೇಕಾದ ಸಂದರ್ಭವನ್ನು ಕುರಿತು ಬಹಳ ನೊಂದುಕೊಳ್ಳುತ್ತಾನೆ. ತಂದ ಸೀತೆಯ ಈಗಿನ ಸ್ಥಿತಿಯನ್ನು ಕಂಡು ಕಳವಳಗೊಂಡು ಮರುಗುತ್ತಾನೆ. ಪತಿಯನ್ನು ಅಗಲಿದ ಕಳಂಕ ಇಡೀ ತನ್ನ ವಂಶವನ್ನು ಅಂಟಿಕೊಳ್ಳುತ್ತದೆಂಬ ಆರ್ತತೆಯಲ್ಲಿ ಬೇಯುತ್ತಾನೆ. ರಾಮ ಲಕ್ಷ್ಮಣರನ್ನು ಗೆದ್ದು ಸೀತಾಮಾತೆಯನ್ನು ಅವರಲ್ಲಿ ಒಪ್ಪಿಸುವೆ ಎಂಬ ಮಾನವೀಯ ತೀರ್ಮಾನಕ್ಕೆ ಬರುತ್ತಾನೆ.
                         ತನ್ನ ದಿಗ್ವಿಜಯ ಯಾತ್ರೆಯಲ್ಲಿ ಅನೇಕ ರಾಜರನ್ನು ಆಧೀನತೆಮಾಡಿಕೊಳ್ಳುತ್ತಾನೆಯೇ ಹೊರತು ಯಾರನ್ನು ಹಿಂಸಿಸುವುದಿಲ್ಲ ಮತ್ತು ಯಾರನ್ನು ಕೊಲ್ಲುವುದಿಲ್ಲ. ಇಂದ್ರಜಿತ್ ಕುಮಾರ ಇಂದ್ರನ ಮಗ ಜಯಂತನನ್ನು ಕೂಡ ಸೆರೆಹಿಡಿದು ತಂದಾಗ ಶ್ರೀಲಂಕೆಯಲ್ಲಿ ಸುಖ ಸಂತೋಷದಿಂದಿರುತ್ತಾನೆ. ಇಂದ್ರನ ತಂದೆ ವಯೋವೃದ್ಧ ಸಹಸ್ರಾರನೂ ಪರಿವಾರ ಜನರೊಡನೇ ರಾವಣನ ಕಾಣಲು ಬಂದಾಗ ವಿನಯದಿಂದಲೀ ವಯೋವೃದ್ಧ ಸಹಸ್ರಾರನಿಗೆ ನಮಸ್ಕರಿಸಿ ಇಂದ್ರನನ್ನೂ ಕರೆಸಿ ಇಂದ್ರನ ಮಗನನ್ನು ಬಿಡುಗಡೆಮಾಡಿ ಕಳಿಹಿಸಿ ಕೊಡುತ್ತಾನೆ. ನಂತರ ಎದುರು ಬಿದ್ದ ವರುಣನನ್ನು ಸೋಲಿಸಿ ಸೆರೆಹಿಡಿಯುತ್ತಾನೆ. ಮನ್ನಿಸಿ ಮತ್ತೇ ಬಿಡುಗಡೆ ಮಾಡುತ್ತಾನೆ. ಯುದ್ಧ ಭೂಮಿಯಲ್ಲಿ ರಾವಣನ ದಿವ್ಯಶಕ್ತಾಯುಧಕ್ಕೆ ಲಕ್ಷ್ಮಣನೂ ಮೂರ್ಛಿತನಾಗಿ ನೆಲಕ್ಕೆ ಕುಸಿದು ಬಿದ್ದಾಗಲು ಸುಲಭವಾಗಿ ಗೆಲ್ಲಬಹುದಿದ್ದರೂ ನೆಲಕೆ ಬಿದ್ದ ಮೂರ್ಛಿತ ಲಕ್ಷ್ಮಣನೂ ಎಚ್ಚರಗೊಳ್ಳುವರಿವಿಗೂ ಬಹಳ ಕಾಲ ಕಾಯುತ್ತಾನೆ.  ಹೀಗೆ ಹೇಳುತ್ತಲೇ ಹೋಗಬಹುದು ದಲ್ಲಿ
                         ತನ್ನ ಸ್ವಂತ ತಮ್ಮ ವಿಭೀಷಣ ( ವೈಷ್ಣವ ಪ್ರಿಯ ) ರಾಜ್ಯಾಭಿಲಾಷೆಯಿಂದ ರಾಮನಲ್ಲಿ ಸೇರಿ ತಮ್ಮಲ್ಲಿರುವ ಸೈನ್ಯದ ಬಲಾಬಲ ರಾವಣನ ದೌರ್ಭಲ್ಯಗಳು ದೇಶನಕ್ಷೇ ಗೆಲ್ಲಲು ಇರುವ ದಾರಿಯನ್ನು ತೋರಿ ರಾಮನ ಗೆಲುವಿಗೆ ಶ್ರಮಿಸುತ್ತಾನೆ ಅದರಂತೆಯೇ ರಾಮನೂ ಅವನಿಗೆ ಪಟ್ಟಾಭಿಷೇಕವನ್ನು ಮಾಡುತ್ತಾನೆ.
 
ರಾವಣನ ಬಗ್ಗೆ ಹೆಚ್ಚಿಗೆ ತಿಳಿಯಲು "ದ್ರಾವಿಡ ರಾಮಾಯಣವನ್ನು" ಓದಿ ಇದೇ ನನ್ನ ಬ್ಲಾಗ್‍ನಲ್ಲಿ ಮುಂದೆ ನೋಡಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.