ಶೂದ್ರ

ಭಾಗ - ೧೨ ಮನುವಿನ ಧರ್ಮ: ಹಂತಕ ರಾಮನ ಪಿತ!

       ಶ್ರೀರಾಮ ಇನ್ನೂ ಜನಿಸಿರಲೇ ಇಲ್ಲ, ಅವನ ತಂದೆ ದಶರಥನಿಗೆ ಇನ್ನೂ ವಿವಾಹವಾಗಿರಲಿಲ್ಲ. ಅವನು ಸಿಂಹಾಸನವನ್ನೂ ಅಧಿರೋಹಿಸಿರಲಿಲ್ಲ. ಯುವರಾಜನಾಗಿದ್ದ ಹದಿಹರೆಯದ ದಶರಥನು ಧನುರ್ಬಾಣಗಳನ್ನು ಧರಿಸಿ ಕತ್ತಲಿನ ಸಮಯದಲ್ಲಿ ಸರಯೂ ನದಿ ತಟಕ್ಕೆ ಹೋದ. ದೂರದಲ್ಲಿ ನೀರಿನಲ್ಲಿ ಕಮಂಡಲವನ್ನು (ಬಿಂದಿಗೆ) ಮುಳುಗಿಸಿದ ಬುಳುಬುಳು ಶಬ್ದವು ಕೇಳಿಬಂದಿತು. ಅದು ಕಾಡು ಪ್ರಾಣಿಗಳು ನೀರು ಕುಡಿಯಲು ಬರುವ ಸಮಯ. ಬಹುಶಃ ಆನೆಯೊಂದು ನೀರು ಕುಡಿಯುತ್ತಿರಬಹುದು ಎಂದು ಭಾವಿಸಿದ ದಶರಥನು; ಶಬ್ದವನ್ನು ಅನುಸರಿಸಿ ಎಷ್ಟು ದೂರದಲ್ಲಿರುವ ಲಕ್ಷ್ಯವನ್ನಾದರೂ ಬಾಣದಿಂದ ಭೇದಿಸಬಹುದಾದ, ತಾನು ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನುಪಯೋಗಿಸಿ ಬಾಣವನ್ನು ಬಿಟ್ಟ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಭಾಗ - ೧೧ ಮನುವಿನ ಧರ್ಮ: ಮನು ಶೂದ್ರ ದ್ವೇಷಿಯೇ?

        ಇಂತಹ ಜಾತಿಯಲ್ಲಿ ಹುಟ್ಟಿರುವುದರಿಂದ ಇವರು ಉತ್ತಮರು, ಅವರು ನೀಚರು........ ಇವರದು ಉನ್ನತವಾದ ಜಾತಿ, ಅವರದು ಹೀನವಾದ ಜಾತಿ.....  ಎನ್ನುವ ಜಾತಿ ಅಹಂಕಾರವಿರುವವರು ಎಷ್ಟು ಕೀಳಾಗಿ ಆಲೋಚಿಸಿ ಪ್ರಚಾರ ಮಾಡಿದರೂ ಸಹ...... 
        ವಾಸ್ತವವಾಗಿ ಮನುಷ್ಯರೆಲ್ಲರದೂ ಒಂದೇ ಜಾತಿ. ಭರತಖಂಡದಲ್ಲಿ ಜನಿಸಿದವರೆಲ್ಲರದೂ ಒಂದೇ ವಂಶಾವಳಿ! ಒಂದೇ ರಕ್ತ (ಡಿ.ಎನ್.ಎ)! ಆ ಜನಾಂಗಕ್ಕೆ ನಮ್ಮ ಪೂರ್ವಿಕರು ಇಟ್ಟ ಹೆಸರು "ಶೂದ್ರ" ಎಂದು. 
ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಛತೇ l
ವೇದ ಪಠಣಾತ್ ಭವೇತ್ ವಿಪ್ರಃ ಬ್ರಹ್ಮ ಜಾನಾತಿ ಬ್ರಾಹ್ಮಣಃ ll

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
Subscribe to ಶೂದ್ರ