ಶಿಕ್ಷಕರ ದಿನಾಚರಣೆ ಎಂದರೇನಮ್ಮ ?

4.058825

೧೯೬೨ ನೇ ಇಸವಿಯಿಂದ  "ಶಿಕ್ಷಕರ ದಿನಾಚರಣೆ" ಯು ಭಾರತದಲ್ಲಿ ಆಚರಣೆಯಲ್ಲಿದೆ. ಶಿಕ್ಷಕರ ದಿನವಾದ ಸೆಪ್ಟೆಂಬರ್ ೫ ದನೇ ತಾರೀಖು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ ಕೂಡ ಎಂಬುದು ಎಲ್ಲರಿಗೂ ತಿಳಿದ ವಿಷಯ. ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಒಬ್ಬ ತತ್ವಜ್ಞಾನಿಅತ್ಯುತ್ತಮ ಶಿಕ್ಷಕ ಹಾಗು ನಮ್ಮ ಈ ದೇಶದ ಶಿಕ್ಷಣದ ವ್ಯವಸ್ಥೆಗೆ ಇವರ ಕೊಡುಗೆ ಅಪಾರವಾದುದು. ಸ್ವತಂತ್ರ ಭಾರತದ ಮೊಟ್ಟಮೊದಲ ಉಪರಾಷ್ಟ್ರಪತಿ ಹಾಗು ಭಾರತದ ಎರಡನೇ ರಾಷ್ಟ್ರಪತಿ ಯಾಗಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್  'ಭಾರತಿಯ ತತ್ವಜ್ಞಾನ' ವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ತಂದವರು. 
 
ಒಮ್ಮೆ ಡಾ.ರಾಧಾಕೃಷ್ಣನ್ ರವರ ಕೆಲವು ವಿದ್ಯಾರ್ಥಿಗಳು ಹಾಗು ಸ್ನೇಹಿತರು ಡಾ.ರಾಧಾಕೃಷ್ಣನ್ ರವರ ಹುಟ್ಟುಹಬ್ಬವನ್ನು ಆಚರಿಸಲು ಅವರ ಅನುಮತಿ ಪಡೆಯಲು ಹೋದಾಗ ಅವರು 'ನನ್ನ ಜನ್ಮದಿನ ಆಚರಿಸುವ ಬದಲು, ಶಿಕ್ಷಕರ ದಿನ ವೆಂದು ಆಚರಿಸಿ, ಅದಕ್ಕಿಂತ ಹೆಮ್ಮೆ ಹಾಗು ಗೌರವ ಬೇರೊಂದಿಲ್ಲ ನನಗೆ' ಎಂದರಂತೆ. ಅಂದಿನಿಂದ ಇಂದಿನವರೆಗೆ ಸೆಪ್ಟೆಂಬರ್ ೫ ದನೇ ತಾರೀಖು ಶಿಕ್ಷಕರ ದಿನಾಚರಣೆ ಯಾಗಿ ನಡೆದುಬಂದಿದೆ. 
 

 ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ - 

                                          http://www.uramamurthy.com/srk_phil.html

http://en.wikipedia.org/wiki/Sarvepalli_Radhakrishnan 

 

 

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಡಾ! ಸರ್ವೇಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಏಕೆ ಆಚರಿಸುತ್ತಾರೆ ಎಂದು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇಂತಹ ಮಹನೀಯರ ಹುಟ್ಟುಹಬ್ಬದ ದಿನವನ್ನು ಸ್ವತ: ಶಿಕ್ಷಕರೇ "ಕರಾಳ ದಿನಾಚರಣೆ"ಯನ್ನಾಗಿ ಆಚರಿಸುವುದು ನಿಜಕ್ಕೂ ದುರಂತ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸುಮಾ ಕುಲಕರ್ಣಿಯವರೇ <<ಇಂತಹ ಮಹನೀಯರ ಹುಟ್ಟುಹಬ್ಬದ ದಿನವನ್ನು ಸ್ವತ: ಶಿಕ್ಷಕರೇ "ಕರಾಳ ದಿನಾಚರಣೆ"ಯನ್ನಾಗಿ ಆಚರಿಸುವುದು ನಿಜಕ್ಕೂ ದುರಂತ.>> ಅತ್ಯುತ್ತಮ ಪ್ರತಿಕ್ರಿಯೆ " ಮಾದರಿಯ ಮಾಸ್ತರು ಮೌಲ್ಯ ಮರೆತರೇ ? "- 11-10-2011 ರ ತಮ್ಮ ಲೇಖನ. ನೆನಪಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಹಳ ದಿನಗಳ ನಂತರ ಭಾಗ್ವತ ಮಾಸ್ತರರು ಸಂಪದದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಂತಸ ತರುತ್ತಿದೆ. ಕಾಕತಾಳೀಯವಾಗಿ ಅದೂ ಶಿಕ್ಷಕರ ದಿನಾಚರಣೆಯ ಮುನ್ನಾ....ದಿನ. ನಿಮ್ಮಿಂದ ಬರಹಗಳನ್ನು ನಿರೀಕ್ಷಿಸುತ್ತಾ, ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಿಕ್ಷಕರ ದಿನಾಚಾರಣೆಯನ್ನು ಕರಾಳ ದಿನವಾಗಿ ಆಚರಿಸುವ ಈ ಬೇಜವಬ್ದಾರಿ ಅಶಿಸ್ತಿನ ದೂರ್ತ ಶಿಕ್ಷಕರಿಂದ ಪಾಠ ಕೇಳುವ ದೌಭಾರ್ಗ್ಯ ನಮ್ಮ ರಾಜ್ಯದ ಮಕ್ಕಳದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.