ವಿಶ್ವಪರಿಸರ ದಿನಾಚರಣೆ

4

ವಿಶ್ವಮನೆಗಾಗಿ...
---------------------
ಬಾ ಪ್ರಾರ್ಥಿಸೋಣ
ದ್ವೇಷ ಹಗೆತನ ಜಾತಿ ವಿಜಾತಿಗಳ
ಒಳ ಜಗಳಗಳೆಲ್ಲವ ಮರೆತು
ಭೂಮಿ ಬಿಸಿಲ ತಾಪದಿಂದ
ಉರಿದು ಹೋಗದಿರಲೆಂದು!!

ಉಳಿಯಲೀ ಭೂಮಿ
ನಮ್ಮೆಲ್ಲರ ನಾಳಿನವರಿಗಾಗಿ!
ಬೆಳೆಯಲಿ ಹಸಿರಿಲ್ಲಿ
ಎಲ್ಲರಾ ಉತ್ತಮ ಉಸಿರಿಗಾಗಿ
ಬೆಳೆಯಲೆಲ್ಲರು ಇಲ್ಲಿ ಆರೋಗ್ಯವಂತರಾಗಿ!!

ಪ್ರಾರ್ಥನೆಯ ಕೈಯಿಂದ
ಗಿಡ ಮರ ಬೆಳೆಸೋಣ
ನೀರೆರೆದು ಪೋಷಿಸೋಣ
ಕಡಿಯದಂತೆ ಕಾಪಾಡೋಣ!
ನಗರ ಸ್ವಚ್ಛ ವಾಗಿಡೋಣ
ಕೆರೆಯ ಅಂದಗೊಳಿಸೋಣ!!

ಕಸಕಡ್ಡಿಯ ಬೇರ್ಪಡಿಸಿಡೋಣ
ಒಣ ಹಸಿ ಕಸವ ಬೇರಿಡೋಣ
ಪ್ಲಾಸ್ಟಿಕ್ ಔಷಧೀಯ ತ್ಯಾಜ್ಯವ
ಸುಟ್ಟುಬಿಡೋಣ ಕರಗಿಸೋಣ!
ಶಾಂತಿಯ ಸಾರೋಣ ಒಗ್ಗಟಲಿ
ಸರ್ವರಲಿ ಒಂದಾಗಿ ಬಾಳೋಣ!!

*ಜಾನಕಿತನಯಾನಂದ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.