ವಾಸ್ತವ...

0

ಒಬ್ಬ ಬಡ ಹುಡುಗ ಒಂದು ಶ್ರೀಮಂತ ಹುಡುಗಿಯನ್ನ ಪ್ರೀತಿಸುತ್ತಿದ್ದ. ಒಂದು ದಿನ ಹುಡುಗ ತನ್ನ ಪ್ರೇಮ ನಿವೇದನೆಯನ್ನು ಪ್ರಸ್ತಾಪಿಸಲು., ಹುಡುಗಿ ಈ ರೀತಿ ಕೇಳಿದಳು "ನಿನ್ನ ಮಾಸಿಕ ವೇತನ ನನ್ನ ದಿನದ ವೆಚ್ಚಕ್ಕೆ ಸಮಾ. ನಾನು ನಿನ್ನ ಪ್ರೀತಿಸಿ ಏನು ಮಾಡಬೇಕು? ನೀನು ಅದರ ಬಗ್ಗೆ ಹೇಗಾದರೂ ಯೋಚಿಸಿದೆ?? ನಾನು ನಿನ್ನ ಎಂದಿಗೂ ಲವ್ ಮಾಡುವುದಿಲ್ಲ. ಆದ್ದರಿಂದ ನನ್ನ ಮರೆತು ನಿನಗೆ ಸರಿಸಮನಾದ ಹುಡುಗಿಯ ಜೊತೆ ಮದುವೆಯಾಗು..." ಎಂದು ಹೇಳಿ ಹೊರಟುಹೋದಳು...

ಆದರೆ ಆ ಹುಡುಗ ಅಷ್ಟು ಸುಲಭವಾಗಿ ತನ್ನ ಪ್ರೀತಿಯನ್ನು ಮರೆಯಲು ಸಾಧ್ಯವಿರಲಿಲ್ಲ...!!

10 ವರ್ಷಗಳ ನಂತರ.

ಒಂದು ದಿನ ಶಾಪಿಂಗ್ ಸೆಂಟರ್ ರಲ್ಲಿ ಅವರಿಬ್ಬರ ಮುಖಾಮುಖಿಯಾಯಿತು. "ಹೇ, ನಿನ್ನ ಮದುವೆ ಆಯ್ತಾ?, ಬೈ ದ ವೇ  ನನ್ನ ಗಂಡನ ತಿಂಗಳ ಸಂಬಳ 50,000 ರೂ. ಗೊತ್ತಾ... ಮತ್ತೆ ಅವರು ನಿಂಗಿಂತಲೂ ತುಂಬಾ ಸ್ಮಾರ್ಟ್ ಕಣೋ..." ಎಂದಳು...

ಹುಡುಗನು ಆ ಪದಗಳನ್ನು ಕೇಳುತ್ತ  ಕಂಗಳು ತುಂಬಿ ಬಂದವು...

ಕೆಲವು ನಿಮಿಷಗಳ ನಂತರ ಅವಳ ಪತಿ ಬಂದು ಎದುರು ನಿಂತಾಗ, ಈ ವ್ಯಕ್ತಿಯ ನೋಡಿ ಮಾತನಾಡಲು ಪ್ರಾರಂಭಿಸಿದನು...

"ಸರ್! ನೀವ್ ಇಲ್ಲಿ? ಚಿನ್ನು, ಇವರೆ ನೋಡು ನನ್ನ ಕ್ಲೈಂಟ್.... ಇವರ ೨,೦೦,೦೦,೦೦೦ ರೂ. ಮೊತ್ತದ ಪ್ರಾಜೆಕ್ಟ್ ನಾನೇ ಮಾಡ್ತಾ ಇದ್ದೀನಿ. ನಿಂಗೆ ಒಂದು ವಿಷಯ ಗೊತ್ತಾ... ಅವರು ಇನ್ನೂ ಅವಿವಾಹಿತ... ಒಬ್ಬ ಹುಡುಗಿಯನ್ನ ಇಷ್ಟಪಟ್ಟಿದ್ರಂತೆ, ಆದ್ರೆ ಅವಳು ಬಿಟ್ಠೋಗ್ಬಿಟ್ಟ್ಳಂತೆ... ಆ ಹುಡುಗಿ ಎಷ್ಟು ದುರಾದೃಷ್ಟವಂತೆ ನೋಡು... ಇವರಂತ ಮನಸಾರೆ ಪ್ರೀತಿಸುವ ಹುಡುಗನ್ನ ಬಿಟ್ಟು ಹೋಗೋಕೆ....!!

ಈಗ ಕಣ್ಣೀರ್ ಹಾಕುವ ಸರದಿ ಹುಡುಗಿಯದಾಯಿತು...!!!

 

================================

ಜೀವನ ಕೆಲವು ದಿನಗಳ ಪಯಣ... ಆದ್ದರಿಂದ ನಿಮ್ಮದೇ ಹೆಮ್ಮೆ ಮತ್ತು ಹಂಗಿನಲ್ಲಿ ಇತರರನ್ನು ಕಡೆಗಾಣಿಸಬೇಡಿ... ಸಂದರ್ಭಗಳು ಸಮಯ/ಕಾಲಾಂತರದಲ್ಲಿ ಬದಲಾಗುತ್ತಿರುತ್ತದೆ.... ಪ್ರತಿಯೊಬ್ಬರು ನ(ತ)ಮಗೆ ಕೊಡುವ ಪ್ರೀತಿ-ಗೌರವ ಸರಿಯಾದ ರೀತಿಯಲ್ಲಿ ಮನ್ನಿಸುವುದ ಕಲಿತರೆ ಬಾಳು ಎಷ್ಟು ಚೆನ್ನ ಅಲ್ಲವೇ...!

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):