ಲೈಫ್ ಚುಟುಕಗಳು - ೨ - ಮೆಡಿಕಲ್ ಸೀಟು

4.333335

ಪ್ರತಿಷ್ಟಿತ ಇಂಜಿನೀಯರಿಂಗ್ ಕಾಲೇಜೊಂದರ ಪ್ರಾಂಶುಪಾಲರಾದ ಗೆಳೆಯರೊಬ್ಬರು ತಮ್ಮ ಮಗಳಿಗೆ ಮೆಡಿಕಲ್ ಸೀಟು ಕೊಡಿಸಲೆಂದು ಆ ದಿನ ಊರಿಗೆ ಬಂದಿದ್ದರು.   ಅವರು ಲೆಕ್ಕಕ್ಕೆ ಗೆಳೆಯರ ಬಳಗದಲ್ಲಿ ಎಲ್ಲರಿಗೂ “ಮೇಷ್ಟ್ರು”. 
ಸಂಜೆ ಕಾಫಿಗೆ ಸಿಕ್ಕಾಗ ಮೇಷ್ಟ್ರು ತುಂಬಾ ಆಲೋಚನೆಯಲ್ಲಿ ಮುಳುಗಿದ್ದರು. ಜೊತೆಗೇ ಇದ್ದ ಇಂಜಿನೀಯರ್ ಸಾಹೇಬ್ರು, "ಏನ್ ಮೇಷ್ಟ್ರೇ, ಸಿಕ್ತಾ ಸೀಟು?" ಎಂದು ಇವರಿಗೆ ಕೇಳಿದರು. 
"ಹೂಂ, ಸೀಟು ಸಿಗ್ತು. ಮಾಮೂಲಿಗಿಂತ ತುಂಬಾ ಜಾಸ್ತಿ ಕೊಡ್ಬೇಕಾಯ್ತು" ಎಂದರು. 
“ಮತ್ತೇನು ಪ್ರಾಬ್ಲಂ? ಸೀಟಾಯ್ತಲ್ಲ.” 
“ಸೀಟಾಯ್ತು.  ಈಗ ನಾನೂ ಜಾಸ್ತಿ ತಗೋಬೇಕು. ಎಲ್ಲೆಲ್ಲಿಂದಾ ತೆಗೆಯೋದೂಂತ ಯೋಚ್ನೆ ಮಾಡ್ತಿದ್ದೆ” ಅಂದರು.  

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಜ ಸರ್, ಇದಕ್ಕೇ ಹೇಳೋದು, ಒಂದು ಗುಂಡಿ ತೆಗೆದು ಇನ್ನೊಂದು ಗುಂಡಿ ಮುಚ್ಚೋದು ಅಂತ!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇದರದ್ದೇ ಇನ್ನೊಂದು ಕೊನೆ (ಎಂಡಿಂಗ್) ...
“ಸೀಟಾಯ್ತು. ಇನ್ನು ಪಾಸ್ ಮಾಡ್ಸೋದಕ್ಕೆ ಎಲ್ಲಿಂದ ಕೊಡೋದು ಅಂತ ಯೋಚನೆ” ಅಂದರು. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.