ರೇಟಿಂಗ್ ಫಾರ್ ರೈಟಿಂಗ್

4.666665

ಬರಹದ ಮೌಲ್ಯವನ್ನು ಅಳೆಯಲು ನಾವು  ಬೇರೆ ಬೇರೆ ರೀತಿಯ ಮೌಲ್ಯಮಾಪನ, ಬಳಸುತ್ತೇವೆ. ಬರಹಗಳಲ್ಲಿ ಇದರ ಪ್ರಾಮುಖ್ಯತೆ ಬಹಳವಾದುದು. ಯಾವುದೇ ಬರಹಗಳು ಓದುಗನ ಮೇಲೆ ಯಾವ ರೀತಿಯಲ್ಲಾದರೂ ಪ್ರಭಾವ ಬೀರಬಹುದು. ಇದು ಓದುಗನ ಮನೋಸ್ಥಿತಿಯನ್ನು ಅವಲಂಬಿಸಿರುತ್ತದೆ.  ಹಾಗಾಗಿ ಇದು ಓದುಗ ಹಾಗೂ ಲೇಖಕನ ನಡುವಿನ ಭಾಂದವ್ಯವನ್ನು ಬೆಸೆಯುವ ಕೊಂಡಿಯೇ ಈ ಮೌಲ್ಯಮಾಪನ ಅಥವಾ ಪ್ರತಿಕ್ರಿಯೆ.
ಉಪಯೋಗ  ಏನು?
ಓದುಗನು ತಾನು ಓದಿದ ಬರಹದ ಬಗೆಗೆ ಆತನ ಅಭಿಪ್ರಾಯವನ್ನು, ಅನಿಸಿಕೆಯನ್ನು ವ್ಯಕ್ತಪಡಿಸಿದಾಗ ಲೇಖಕನಿಗೆ ತನ್ನ ಬರಹ ಹೇಗಿದೆ? ಉತ್ತಮವೇ ಆಥವಾ ಇನ್ನೂ ಬರಹದಲ್ಲಿ ಸುಧಾರಿಸಿಕೊಳ್ಳಬೇಕೇ? ಇತ್ಯಾದಿ ವಿಷಯಗಳನ್ನು ತಿಳಿದುಕೊಳ್ಳಲು ಸುಲಭವಾಗುತ್ತದೆ. ಇದರಿಂದಾಗಿ ಆತನ ಬರವಣಿಗೆಯ ಮಟ್ಟವೂ ಉತ್ತಮವಾಗುತ್ತದೆ. ಕೇವಲ ಬರಹ ರೂಪದಲ್ಲಿ ಅಭಿಪ್ರಾಯ ತಿಳಿಸುವುದು ಮಾತ್ರವಲ್ಲ ಇದು ಕಷ್ಟವೆನಿಸಿದಾಗ ಸಾಂಕೇತಿಕ ಚಿಹ್ನೆಗಳ ಮೂಲಕ ಅವುಗಳನ್ನು ಅಭಿಪ್ರಾಯಿಸಬಹುದು. ಸಂಪದದಲ್ಲಿ ಬರಹಗಳನ್ನು ಮೌಲ್ಯಮಾಪನ ಮಾಡಲು ನಕ್ಷತ್ರದ ಚಿಹ್ನೆಯನ್ನು ಬಳಸಲಾಗಿದೆ.

ಸಂಪದದಲ್ಲಿ ಲೇಖನಗಳನ್ನು ಓದಿದ ನಂತರ "ಈ ಬರಹ ನಿಮಗೆ ಇಷ್ಟವಾಯಿತೇ ಎಂಬ ಸಾಲುಗಳ ಎದುರು ನಕ್ಷತ್ರದ ಚಿಹ್ನೆಗಳು ಕಾಣಿಸುತ್ತವೆ. ಅದಕ್ಕೆ ಕ್ಲಿಕ್ ಮಾಡಬೇಕು.  ಆಗ ನಿಮ್ಮ ಪ್ರತಿಸ್ಪಂದನೆ ದಾಖಲಾಗಿರುತ್ತದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರತಿಸ್ಪಂದನೆಗಳು ದಾಖಲಾದ ಬರಹಗಳನ್ನು ಉತ್ತಮ ಬರಹಗಳೆಂದು ನಾವು ಪರಿಗಣಿಸಬಹುದು ಹಾಗೆಯೇ ಎಷ್ಟು ಮಂದಿಯಿಂದ ಓದಲ್ಪಟ್ಟಿದೆ ಎಂಬುದನ್ನೂ ತಿಳಿದುಕೊಳ್ಳಬಹುದು. ಹೆಚ್ಚು ಹೆಚ್ಚು ಪ್ರತಿಸ್ಪಂದನೆಗಳು ಬಂದಾಗ ಬರಹಗಾರರಿಗೂ ಅದು ಉತ್ತಮ ಸ್ಪೂರ್ತಿದಾಯಕವಾಗಿರುತ್ತದೆ. ಹಾಗಾಗಿ ಬರಹಗಳನ್ನು ಓದಿದ ಕೂಡಲೇ ಪ್ರತಿಸ್ಪಂದನೆಗಳನ್ನು ನೀಡುವ ಅವಕಾಶಗಳು ಇದ್ದಲ್ಲಿ ಅದನ್ನು ನಮ್ಮದಾಗಿಸಿಕೊಳ್ಳೋಣ, ಬರಹಗಾರರನ್ನು ಹುರಿದುಂಬಿಸೋಣ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಮತಾ ಕಾಪುರವರೆ ಉತ್ತಮ ವಿಷಯ ಹಾಗು ಬರಹ ಇದರ ಬಗ್ಗೆ ನಾನು ಒಮ್ಮೆ ಬರೆಯೋಣ ಅಂದುಕೊಳ್ಳುತ್ತಿದ್ದೆ ನೀವೆ ಬರೆದಿದ್ದು ಒಳ್ಳೆಯದಾಯಿತು. ತುಂಬಾ ಮೊದಲೆ ಇಲ್ಲಿರುವ ರೇಟಿಂಗ್ ವಿವರ ಇದ್ದಂತೆ ನೆನಪು ಅದರಂತೆ ೧=ಚೆನ್ನಾಗಿಲ್ಲ, ೨ ಪರವಾಗಿಲ್ಲ ೩ ಚೆನ್ನಾಗಿದೆ ೪ ಉತ್ತಮ ಈ ರೀತಿ ಏನೊ ಓದಿದ ನೆನಪು. ಈಗಿನ ರೇಟಿಂಗ್ ಹೇಗೆ ನನಗೆ ಗೊತ್ತಿಲ್ಲ. "1" ಕೊಟ್ಟರೆ ಜಾಸ್ತಿಯೊ "5" ಕೊಟ್ಟರೆ ಜಾಸ್ತಿಯೊ ಹೇಗೆ ತಿಳಿಸಿ. ೧ ರಿಂದ ೫ ಏರುಮುಖವೊ ಅಥವ ೫ ರಿಂದ ೧ ಏರು ಮುಖವೊ ತಿಳಿಸಿ. ಮತ್ತೆ ಒಂದು ಸಮಾಚಾರ ಲೇಖನವನ್ನು ಪೂರ್ಣ ಓದಿ ಅಂಕೆ ಕೊಟ್ಟಲ್ಲಿ ಪರವಾಗಿಲ್ಲ, ಆದರೆ ಕೆಲವೊಮ್ಮೆ ನಾನು ಲೇಖನ ಹಾಕುವಾಗಲೆ ಅದರಲ್ಲಿ "೧" ಕಾಣಿಸುತ್ತದೆ , ಮತ್ತೆ ಒಮ್ಮೆ ಕತೆ ಬರೆದಿದ್ದೆ, ಅದು ಸುಮಾರು ೬ ಪುಟಗಳನ್ನು ಮೀರಿತ್ತು. ಅದನ್ನು ಎಷ್ಟೆ ವೇಗವಾಗಿ ಓದಿದರು ಹತ್ತು ನಿಮಿಷ ಬೇಕಿತ್ತು, ಆದರೆ ನನಗೆ ಆಶ್ಚರ್ಯ ಕಾದಿತ್ತು, ನಾನು ಸಂಪದದಲ್ಲಿ ಲೇಖನ ಹಾಕಿ ೩೦ ಸೆಕೆಂಡ್ ಆಗಿತ್ತೇನೊ ಹೇಗೆ ಕಾಣಿಸುತ್ತಿದೆ ಎಂದು ಬರಹ ತೆರೆದುನೋಡಿದರೆ ಅದರಲ್ಲಿ "೧" ನಕ್ಷತ್ರ ಕಾಣಿಸಿತು, ಅದು ಚೆನ್ನಾಗಿ ಎಂದಾದರು ಇರಲಿ ಅಥವ ಚೆನ್ನಾಗಿಲ್ಲ ಎಂದಾದರು ಇರಲಿ ಅದು ಬೇರೆ ವಿಷಯ ಆದರೆ ಒಂದು ನಿಮಿಷದಲ್ಲಿ ಹೇಗೆ ಅಳೆದರು ಎಂದು ಮಾತ್ರ ತುಸು ಆಶ್ಚರ್ಯವಾಗಿತ್ತು. :-) ಈ ಪ್ರತಿಕ್ರಿಯೆಗೆ "೧" ಬರಬಹುದು ನೋಡಿ ! ನಿಮ್ಮ ಲೇಖನದ ಜೊತೆ ನಕ್ಷತ್ರಗಳ ವಿವರಗಳನ್ನು ತಿಳಿಸಿದರೆ ಎಲ್ಲರಿಗು ಸಂತಸವಾಗುತ್ತಿತ್ತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಪಾರ್ಥ ಸರ್, ಸಂಪದದಲ್ಲಿನ ನಕ್ಷತ್ರಗಳು ೧ ರಿಂದ ೫ ಏರುಮುಖ ಆಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.