ರೂಪಕಗಳ ಆಸ್ಪೋಟ

0

 ಒಂದೆರಡು ವಾರಗಳ ಹಿಂದೆ.

 
"ಹೂಮ್....ಹೇಳಿ"
"ಹೆಳೋದೆಲ್ಲ ನನ್ನ ಅಪ್ಪ ಅಮ್ಮ ಹೇಳ್ಬೇಕು, ಅವರೆ ತಾನೆ ನನ್ನನ ಇಲ್ಲಿಗೆ ಕರ್ಕೊಂಡು ಬಂದಿರೋದು, ಐ ಥಿಂಕ್ ಐಮ್ ನಾರ್ಮಲ್"
ಡಾಕ್ಟರ್ ಅಪ್ಪ ಅಮ್ಮನ ಕಡೆ ನೋಡುತ್ತ.
"ಡಾಕ್ತರ್ ಇವನು ಸ್ಮೋಕ್ಮಾಡ್ತಾನೆ, ಡ್ರಿಂಕ್ಸ್ಮಾಡ್ತಾನೆ. ಈ ನಡುವೆ ಒಂಥರಾ ಆಡ್ತಾನೆ, ಓದಲ್ಲ ಬರ್ಯೊಲ್ಲ, ರಾತ್ರಿಯೆಲ್ಲ ಮನೇಲಿ ಇರಲ್ಲ ಊರು ತಿರುಗಿಕೊಂಡು ಬರುತ್ತನೆ ಎಕ್ಸಾಮ್ನಲ್ಲಿ ಮಾರ್ಕ್ಸ್ ಕೂಡಾ ಕಡಿಮೆ ತಂದಿದ್ದಾನೆ. ಹೀ ಇಸ್ ನಾಟ್ ನಾರ್ಮಲ್"
"ಡಾಕ್ಟರ್, ಆಕೆ ಟ್ರೇನೀ ಇರಬಹುದು, ಅವಳು ಕೂತಿರುವ ಟೇಬಲ್ ಸುತ್ತ ತರುಣ ವೈದ್ಯರುಗಳು ರೋಗಿಗಳಿಗೆ ತಪಾಸನೆಮಾಡುತ್ತಿದ್ದಾರೆ".
ನನ್ನನು ತಪಾಸನೆ ಮಾಡುತ್ತಿದ್ದ ಆಕೆ ನೋಡಲು ಚನ್ನಾಗಿದ್ದಾಳೆ, ಬೇರೆ ಯಾವ ಕಾರಣಕ್ಕು ಮತ್ತೆ ಈ ಮನೋತಗ್ನರ ಬಳಿ ಬರಲು ಮನಸಿಲ್ಲ. ಇದೂ ಕೂಡಾ ಮನೋರೋಗದ ಒಂದು ಚಿಂಹೆ ಎಂದು ನಾನು ಭಾವಿಸಿದ್ದೀನಿ. ಆದರೆ ಬಹಳ ಮನೋರೋಗಿಗಳು ಹೀಗೆ ಯೋಚಿಸೋದು ಅಲ್ಲವೆ "ನನ್ನ ಯೋಚನಾ ಕ್ರಮವು ಸರಿ ಇದೆ, ನನಗೆ ಮನೋರೋಗವಿಲ್ಲ ನಾನು ಮನೋತಗ್ನರ ಬಳಿ ಹೋಗುವುದಿಲ್ಲ" ಹೀಗಂದುಕೊಂಡು ಇರುವ ರೋಗ ಹೆಚ್ಚಿರುವ ಸಂದರ್ಭಗಳೂ ಇವೆ.
ನನಗೆ ಐಸ್ಯೂ ಮಾಡಿದ ಓ.ಪಿ.ಡಿ ಬುಕ್ನಲ್ಲಿ ಅವಳು ನನ್ನ ಯೆಲ್ಲಾ ಸಂಸಾರಿಕ ವಿಷಯಗಳನ್ನು ಹಾಗು ಸಿಂಪ್ಟ್ಂಗಳನ್ನು ಬರೆದು ಹಿರಿಯ ವೈದ್ಯರ ಬಳಿ ಕರೆದುಕೊಂಡು ಹೋಗುವರು.
 
ಸ್ವಲ್ಪ ಸಮಯದ ನಂತರ.
 
ನಾವೆಲ್ಲರು ಹಿರಿಯ ವೈದ್ಯರ ಕೋಣೆಯೊಳಗೆ ಕೂತಿದ್ದೇವೆ, ಅವರು ನಮ್ಮ ತಂದೆತಾಯಿಯರನ್ನು ಹೊರಗಿರಲು ಹೇಳುತ್ತಾರೆ. ಈ ಹಿರಿಯ ಡಾಕ್ಟರಿಗೆ ಟ್ರೇನಿ ಡಾಕ್ಟರ್ ವಿದ್ಯಾರ್ಥಿ, ನಾನು ಮನೋರೋಗಕ್ಕೆ ಬಳಸುವ ಒಂದು ಉದಾಹರಣೆ ಹಾಗು ಒಬ್ಬ ತರುಣ ಯುವಕನಂತೆ ನನಗರಿಯದೆಯೇ ದ್ವಿಪಾತ್ರಾಭಿನಯವನ್ನು ಮಾಡುತ್ತಿದ್ದೇನೆ.
"ಯೇನು ಬಂದಿರೋದು" ಗಾಂಭೀರ್ಯದಿಂದ ಹಿರಿಯ ಡಾಕ್ಟರು ಕೇಳಿದರು.
"ಐಮ್ ಫ಼ೈನ್" ಎಂದೆ.
"ಮತ್ತೆ ಸುಮ್ಮನೆ ಬಂದಿರ?", ಅಧಿಕಾರದಿಂದ ನನ್ನನು ಪ್ರಶ್ನಿಸಿದರು.
"ಮ್ಯಾಮ್" ಅಥವ "ಮೇಡಮ್" ಎಂದು ಅವರನ್ನು ಉದ್ಧರಿಸಿ ನನ್ನನು ಕರೆದುಕೊಂಡು ಬಂದ ಡಾಕ್ಟರ್ ನನ್ನ ವಿಷಯವನ್ನು ಅವರಿಗೆ ಹೀಳಿದರು. ನಮ್ಮೆಲ್ಲರನ್ನು ಅವರವರ ಹುದ್ದೆಗೆ ಮತ್ತು ನನ್ನ ಸ್ಥಿಥಿಗೆ ಅಂಟುವಂತೆ ಮಾಡಿದ್ದು ನಮ್ಮ ಮಧ್ಯೆ ಇದ್ದ ಬೋಡಾದ ಟೇಬಲ್ ಒಂದೆ. ನಾನು ಹೇಳಿದನ್ನೆಲ್ಲ ಹಿರಿಯ ವೈದ್ಯರಿಗೆ ಟ್ರೇನೀ ಡಾಕ್ಟರ್ ಒಪ್ಪಿಸಿದರು, ಕ್ಷಮಿಸಿ, ಆಕೆ ತಂದೆತಾಯಿಯವರು ಹೇಳಿದ್ದನ್ನು ಮಾತ್ರ ಬರೆದಿದ್ದರು, ಆದ್ದರಿಂದ ನಾನು ಹೇಳಿದ್ದು ಅವರಿಗೆ ಅನವಷ್ಯಕ. 
"ಓಕೆ, ಮಿಸ್ಟರ್, ಯೇನು ಮಾಡುತ್ತಿದ್ದೀರ."
"ನಾನು ಚಿತ್ರಕಲ ಪರಿಷತ್ತಿನಲ್ಲಿ ಮಾಸ್ಟರ್ಸ್ ಮಾಡುತ್ತಿದ್ದೇನೆ, ವಿಷುಯಲ್ ಆರ್ಟ್ಸ್ನಲ್ಲಿ."
"‘ಫ಼ೈನಾನ್ಸಾ?"
"ಅಲ್ಲ ಫ಼ೈನ್ ಆರ್ಟ್ಸ್"
ಈ ರೀತಿಯ ಪ್ರಶ್ನೆ ಕೇಳಲಿಲ್ಲವೆಂದು ಸಂತೋಷವಾಯಿತು.
"ಐ ಎಮ್ ‘ಫ಼ೈನ್" ಈ ರೀತಿ ಸುಮಾರು ಐದು ಬಾರಿ ಹೇಳಿದ್ದೆ, ಇದು ಸಿಂಪ್ಟಮ್ಮೋಯೇನೇ ಗೊತ್ತಿಲ್ಲ, 
ತಿರ್ಗ ಅದೆ ಪುರಾನೆ ಹಳೆ ಪ್ರಷ್ನೆಗಳನ್ನು ಉತ್ತರಗಳನ್ನು ಮುಗಿಸಿ ನನ್ನನು ಮುಂದುವರಿಸಲು ಹೇಳಿದರು,"ನಾನು ಓದುತ್ತಿರುವ ಕಥೆ ಕವನಗಳು ನನ್ನನು ಪ್ರಭಾವಿಸಿದೆ, ದೇವರಲ್ಲಿ ನಂಬುತ್ತಿದ್ದ ನಾನು ಗೂಗಲ್ ಅರ್ಥ್ ನೋಡಿದ ಮೇಲೆ ದೇವರನ್ನು ನಂಬಲು ಬೇಕಾದ ಆಕಾಶ, ಭೂಮಿ ಮತ್ತು ಪಾತಾಳಗಳು ಕುಸಿದುಹೋಯಿತು. ನನ್ನ ತಲೆಯಲ್ಲಿ ನಡೆಯ ಬೇಕಾದ ಯೆಲ್ಲ ನೈಸರ್ಗಿಕ ದುರಂತಗಳು ನಡೆದು ಹೋಗಿತ್ತು."
"ಮುಂದೆ" ಡಾಕ್ಟರುಗಳಿಗೆ ಇರಬೇಕಾದ ಸಹಜ ಗಾಂಭೀರ್ಯದಿಂದ ತಮ್ಮ ಕುರ್ಚಿಯ ಮೇಲೆ ಒರಗಿದ್ದ ಅವರು ಮುಂದಿನ ಟೇಬಲ್ಗೆ ಒರಗಿ ಕೇಳಿದರು. ಹೀಗೆ ಈ ರೀತಿಯ ಪ್ರಷ್ನೋತ್ತರಗಳನ್ನು ನಡೆಸುತ್ತ ನಾನು ಸ್ವಲ್ಪ ಬೇಸರಗೊಂಡೆ.
"ಡಾಕ್ಟರ್ ನನ್ಗೆ ಯಾವ ಮನೋರೋಗವು ಇಲ್ಲ, ಐ ಎಮ್ ಲಾಸ್ಟ್, ಅಷ್ಟೆ. ಒಂದೆರಡು ದಿನ ನನಗೆ ಓದಲು ಬರೆಯಲು ಷುರುಮಾಡಿದರೆ ಯಲ್ಲ ಸರಿ ಹೋಗುತ್ತದೆ, ಇಷ್ಟೂ ಮಾಡಿದರೆ ಐ ವಿಲ್ ಬಿ ಗುಡ್."
"ಸರಿ ಹೊರಗಡೆ ಹೋಗಿರಿ, ನಿಮ್ಮ ತಂದೆ ತಾಯಿಯರನ್ನು ಕಳುಹಿಸಿ."
"ಅವರೊಡನೆ ಯೇನು ಹೇಳಿದರೋ ತಿಳಿಯದು, ನನ್ನನು ಒಳ್ಗೆ ಕರ್ದು ನನ್ನ ದೇಹಕ್ಕೆ ದಿನ ರಾತ್ರಿ ಒಂದು ಚಂಚ ಬೇಕೆಂದು ಹೇಳಿಕಳಿಸಿದರು."
"ಅದನ್ನು ತೆಗದುಕೊಂಡು ಹೋಗಿ, ನಾವು ಮೊದಲು ಹೋದ ಟ್ರೇನೀ ಡಕ್ಟರ್ಗಳ ಕೊಠಡಿಗೆ ಹೋಗಿ ನನ್ನ ಓ.ಪಿ.ಡಿ ಬುಕ್ ಅವರಿಗೆ ಕೊಟ್ಟೆ, ಅದರಲ್ಲಿ ಬರೆದಿದ್ದ ಸಿರಪನ್ನು ನೋಡಿ ಅಲಿದ್ದ ಡಾಕ್ಟರ್ ದಿಗ್ಭ್ರಾಂತಿಗೊಂಡರು."ನಾನು ಮನೆಯಲ್ಲಿ ನೋಡಿದಾಗ ಆ ಔಷದಿಯು ದೆಮೆಂಷೆಯಾಗೆಂದು ತಿಳಿದು ನಾನು ಮತ್ತು ಅಮ್ಮ ಮತ್ತಷ್ಟು ದಿಗ್ಭ್ರಾಂತಿಗೊಂಡೆವು.
 
***
 ಹಿರಿಯ ಡಾಕ್ಟರ್ ಕೇಳಿದ ಮತ್ತಷ್ಟು ಪ್ರಶ್ನೆಗಳು-
 
"ಓ ಚಿತ್ರಕಲ ಪರಿಷತ್ತಾ ...ಅಜಿತ್ ಗೊತ್ತಾ?"
"ಹಾ... ಸಿಗುತ್ತಿರುತ್ತಾನೆ ಒಂದೊಂದುಸಲ"
"ಓಕೆ"
"ಡಿಪ್ರೆಸ್ ಆಗಿದ್ದೀಯಾ, ಯಾಕೆ, ಮಾರ್ಕ್ಸು ಕಮ್ಮಿ ಅಂತಾರೆ, ಲವ್ ಡಿಸಪ್ಪೋಯಿಂಟ್ಮೆಂಟಾ"
"ಹ..ಹಾ..ಹ್.." ಇನ್ನಷ್ಟು ಮನಸಲ್ಲಿ ನಕ್ಕಿ, "ಇಲ್ಲ" ಎಂದೆ. 
"ಮತ್ತೆ ಯಾಕೆ ಓದಲ್ಲ?"
ದೇವದಾಸ ಆಗೋದು ಮನೋರೋಗಾನಾ ಗುರು, ಹಾಗಾದರೆ ಭಾರತದ ಚಲನಚಿತ್ರಗಳ ಇತಿಹಾಸದಲ್ಲಿ ಬಹಳ ಸಲ ಚಿತ್ರಿತಗೊಂಡಿರುವ ವ್ಯಕ್ತಿತ್ವಗಳಲ್ಲಿ ಒಂದೆಂದರೆ ದೇವದಾಸ.
"ನಿದ್ದೆ ಬರುತ್ತಾ?"
"ಬರುತ್ತೆ."
"ನಿನಗೆ ಬರುವ ಕನಸುಗಳನ್ನು ಒಂದು ಬುಕ್ಕಿನಲ್ಲಿ ಬರೆದುಕೊಂಡು ಬಾ."
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):