ರಾಷ್ಟ್ರೀಯತೆ

ಭಾಗ - ೮: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

        ೧೯೪೭ರಲ್ಲಿ ಕಮ್ಯೂನಿಷ್ಟ್ ದೇಶವಾಗಿ ಮಾರ್ಪಟ್ಟ ನಂತರ ಎಂಟು ವರ್ಷಗಳಿಗೇ ಹಂಗೇರಿ ದೇಶದ ಪ್ರಜೆಗಳು ದೊಡ್ಡ ಪ್ರಮಾಣದಲ್ಲಿ ದಂಗೆ ಎದ್ದರು. ವಿದೇಶಿಯರು ತಮ್ಮ ಮೇಲೆ ಹೇರಿದ ಕಮ್ಯೂನಿಷ್ಟ್ ವ್ಯವಸ್ಥೆಯನ್ನು ಅಲ್ಲಿನ ಸ್ಥಳೀಯ ಜನಾಂಗವು ವಿರೋಧಿಸಿತು. ೧೯೫೬ರ ನವೆಂಬರ್ ೪ರಂದು ಎರಡು ಲಕ್ಷ ಸೋವಿಯತ್ ಸೈನಿಕರು ಮತ್ತು ೨೫೦೦ ಸೋವಿಯತ್ ಯುದ್ಧ ಟ್ಯಾಂಕರುಗಳು ಹಂಗೇರಿಯೊಳಗೆ ನುಗ್ಗಿದವು. ೩೨,೦೦೦ ಜನ ಚಳವಳಿಕಾರರನ್ನು, ರಾಷ್ಟ್ರೀಯ ಕ್ರಾಂತಿಕಾರರನ್ನು ಸೋವಿಯತ್ ಸೈನಿಕರು ಹತ್ಯೆಗೈದರು. ಎರಡು ಲಕ್ಷ ಹಂಗೇರಿ ದೇಶಸ್ಥರು ದೇಶ ಬಿಟ್ಟು ಪಾರಾಗಿ ಹೋದರು. ಇದು ಕೇವಲ ಹಂಗೇರಿಯಲ್ಲಿ ಮಾತ್ರವೇ ಅಲ್ಲ, ಯೂರೋಪಿನಲ್ಲಿರುವ ಕಮ್ಯೂನಿಷ್ಟ್ ದೇಶಗಳ ಪ್ರಜೆಗಳೆಲ್ಲರೂ ಕಳೆದ ೪೦ ವರ್ಷಗಳಿಂದಲೂ ರಾಷ್ಟ್ರೀಯ ಚಳವಳಿಗಳನ್ನು ಮಾಡುತ್ತಲೇ ಇದ್ದಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ರಾಷ್ಟ್ರೀಯತೆ