ರಾಜಕೀಯ

4

ಏನಂತ್ತ ಹೇಳಲಿ ರಾಜಕೀಯ ಚಿತ್ರಣ

ಎಲ್ಲಾ ಅಲ್ಲೋಲ ಕಲ್ಲೋಲ ಚಿತ್ರಣ

ಬರಿ ಮಾತುಗಳ ಮಹಾಪರ್ವ

ಓಟಿಗಾಗಿ ನೋಟುಗಳ ಹಾವಳಿ .

 

ಗೆದ್ದಿಲು ಹಿಡಿದ ಭರಮಸೆ ಆಸ್ವಾಸನೆಗಳು

ಗೆದ್ದ ಮೇಲೆ  ಜನರ ಮೇಲೆ ದಬ್ಬಾಳಿಕೆಗಳು

ಹೆಂಡ ಸಾರಾಯಿ ಕುಡಿಸಿ ಒಂದು ದಿನ

ಐದು ವರ್ಷ ರಾಜಕೀಯ ಮಾಡುವ ನಾಯಕರು.

 

ದೇಶ ಮಾರಿ ರೈತರ ಜೀವ ಹಿಂಡಿ

ತಮಗೆ ತಾವು ಬೆಳೆಯುವರು

ಕೊನೆಗೊಂದು ದಿನ ಹಗರಣ ಮಾಡಿ

ಜೈಲಿಗೆ ಸೇರಿ ಕೊನೆ ದಿನ ಕಳೆಯುವರು.

                                                ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.

                                       

 

 

 

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.