ಯೋಧ ನಮನ

5

ಹುತಾತ್ಮರಾದ ನಮೆಲ್ಲ ಯೋಧ ಬಾಂಧವರೆ
ನಿಮಗೆಲ್ಲ ನಮ್ಮ ಕೋಟಿ ಕೋಟಿ ನಮನ
ದೇಶ ಜನತೆಯ ಬಾಳು ಬೆಳಕಾಗಿರೆ
ನಿಮ್ಮ ತ್ಯಾಗ ಬಲಿದಾನಕೆಲ್ಲಿದೆ ಸರಿಸಮಾನ

ಹಿಂದೂ, ಮುಸಲ್ಮಾನ , ಸಿಖ್ ಜಾತಿ ಎಲ್ಲೆ ಮೀರಿ
ಧೀರ ಯೋಧರ ಹೆತ್ತ ಕುಟುಂಬಕೆ ಅಭಾರಿ
ಈ ಧೀಮಂತ ಕೊಡುಗೆ ನಿಮ್ಮ ಮನೆಗಲ್ಲ ಮಿತಿ
ಧ್ರುವ ತಾರೆಯೆಂತೆ ಈ ದೇಶದ ಅಮೂಲ್ಯ ಅಸ್ತಿ.

ನಮೆಲ್ಲಾ ನೆಮ್ಮದಿ ಸುಖ ನಿದ್ರೆಗೆ ಕಾರಣ
ನಿಮ್ಮ ಧೀರೋತ್ಸಾಹ ಪಹರೆಯ ಗಡಿ ತಾಣ
ನಿಮ್ಮ ನಿಸ್ವಾರ್ಥ ಸೇವೆ ಬದ್ದ ಕಂಕಣ
ನೂರು ಜನ್ಮಕೂ ತೀರಿಸಲಾಗದ ಋಣ .

ಶ್ರೀ ನಾಗರಾಜ್ . 17/3/19

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.