ಯಶಸ್ಸಿನ ದಾರಿ

5

ಯಶಸ್ಸಿನ ದಾರಿಗಳು ಹಲುವು ಬಗೆ, ಗೊತ್ತೋ ಇಲ್ಲವೋ ನಿಮಗೆ    ?
ಪ್ರತಿ ಯಶಸ್ವಿಯಾದವನ ದಾರಿಯೂ ನೂತನ ಅನಿಸುತ್ತೆ, ನನಗೆ
ಯೋಗ ಇದ್ದೋನು ಗೆಲ್ಲುತಾನ, ಯೋಗ್ಯತೆ ಇರೋನು ಗೆಲ್ಲುತಾನ, ಗೊತ್ತು ಯಾರಿಗೆ?
ಬಿಡಿ ಯಾರಾದ್ರೂ ಗೆಲ್ಲಲಿ, ಅದರ ಗೊಡವೆ ಏಕೆ ಜಗದ ಜನಗಳಿಗೆ.
ಆದ್ರೆ ಗೆದ್ಡೋನಿಗೆ ಕಾಡುತ್ತೆ ಏಕಾಂತ ಸಂಜೆಗೆ,
ಏನು ತಪ್ಪು ಮಾಡಿದ ಅಂತ ಸಿಕ್ಕಿಹಾಕಿಕೊಂಡನೋ ಈ ಸಜೆಗೆ,
ಯಶಸ್ಸಿನ ಶೃಂಗದಲ್ಲಿ ಜನರಿಲ್ಲ, ಭಾವನೆಗಳಿಲ್ಲ , ಅಂತ ತಿಳಿಯಬೇಕಲ್ಲ ಅವನಿಗೆ,
ತುದಿ ತಲುಪಲು ಸಂಬಂಧಗಳ ಶವದ ಮೇಲೆ ನಡೆದು ಬಂದವನಿಗೆ,
ಸ್ವಲ್ಪ ನಿಲ್ಲು, ಸ್ವಲ್ಪ ಅರಿತುಕೋ, ಉಸಿರಾಡು, ಬಾಯಾರಿದ್ದೀಯ ದುಡ್ಡಿನ ಬೇಗೆಗೆ,
ತಿಳಿಯಾಗಲಿ ಮನಸ್ಸು, ಹಿತವಾದ ಸಂಬಂಧಗಳು ಸೂಸೋ ಮಧುರ ಜೇನಿಗೆ.
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.