ಮೋನಿಯ ಜೋಕುಗಳು

...ಫೈರ್ ಎಕ್ಸ್ಟಿಂಗ್ವಿಷರ್

 

     ಮೋನಿ ಒಂದು ಪುಟ್ಟ ಕಾರ್ಖಾನೆಯ ಮಾಲೀಕ.  ಅವನ ಹೆಂಡತಿ ಪದ್ದಿಯೇ ಅವನ ಸೆಕ್ರಟರಿ.  ಪದ್ದಿಗೆ ಕಾಮನ್ ಸೆನ್ಸ್ ಸ್ವಲ್ಪ ಕಡಿಮೆ.  ಏನೋ ಮಾಡಲು ಹೋಗಿ ಇನ್ನೇನೋ ಮಾಡಿ ಬಿಡುತ್ತಿದ್ದಳು. ಅದೇ ಗಣೇಶನನ್ನು ಮಾಡಲು ಹೋಗಿ ಅವರ ಅಪ್ಪನನ್ನು ಮಾಡಿದ ಹಾಗೆ.  ಬಜಾರಿಯಾದ ಅವಳ ಬಾಯಿಗೆ  ಹೆದರಿ ಮೋನಿ ತನ್ನ ಬಾಯಿ ಮುಚ್ಚಿಕೊಂಡಿದ್ದ.  ಅದೂ ಅಲ್ಲದೆ ಗಾದೆಯೇ ಇದೆಯಲ್ಲ  ‘ಹೆತ್ತವರಿಗೆ ಹೆಗ್ಗಣ ಮುದ್ದಾದರೆ ... ಕಟ್ಟಿ ಕೊಂಡವರಿಗೆ ಇನ್ನೇನೋ ಮುದ್ದು” ಅಂತ .

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾರಿನ ಮಾಲೀಕರು

 

ಮೋನಿ ಗಾಂಧಿ ಬಜಾರ್ ಕಾರ್ ಪಾರ್ಕಿಂಗ್ ಏರಿಯಾದಲ್ಲಿ ಕಾರ್ ಪಾರ್ಕ್ ಮಾಡಿ ಬರುತ್ತಿದ್ದಾಗ ಅವನ ಜಿಗ್ರಿ ದೋಸ್ತ್ ಚಡ್ಡಿ ಸತೀಶ ಎದುರಾದ.  “ಹಾಯ್ ...ಕಾರು ತುಂಬಾ ಚೆನ್ನಾಗಿದೆ ಗುರೂ... ನಿನ್ನದೇನಾ..?  ಯಾವಾಗ್ ತಗೊಂಡೆ ಗುರೂ ..?” ಎಂದು ಕೇಳಿದ.  ಅದಕ್ಕೆ ಮೋನಿ  “ಹೌದು ಮತ್ತು ಅಲ್ಲ..” ಎಂದು ಉತ್ತರ ಕೊಟ್ಟ.  ಚಡ್ಡಿ ಸತೀಶ   “ಏನು ಗುರೂ  ಹಾಗಂದರೆ” ಎಂದು ಕೇಳಿದಾಗ ಮೋನಿ ಸಪ್ಪೆ ದನಿಯಲ್ಲಿ “ಹೌದು ಗುರೂ... ಶಾಪಿಂಗ್ ಗೆ ಹೋಗೋವಾಗ ಅದು ನನ್ನ ಹೆಂಡತಿಯದು...., ಡಿಸ್ಕೋಗೆ ಹೋಗೋವಾಗ ನನ್ನ ಮಗಳದು.... ಪೆಟ್ರೋಲ್ ಹಾಕಿಸೋವಾಗ ನನ್ನದು...” ಎಂದಾಗ ಚಡ್ಡಿ ಸತೀಶ “ಅಂ...!” ಎಂದು ಬಾಯಿ ಕಳೆದು ನಿಂತ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಮೋನಿಯ ಜೋಕುಗಳು