ಮೊಸರನ್ನ

3.75
ಬೇಕಿರುವ ಸಾಮಗ್ರಿ: 

ಅಕ್ಕಿ – 1 ½ ಕಪ್, ಮೊಸರು – 1 ½ ಕಪ್, ಹಾಲು – 2 ಕಪ್, ಸೀಡ್ ಲೆಸ್ ದ್ರಾಕ್ಷಿ – 1 ಕಪ್, ದಾಳಿಂಬೆ ಹಣ್ಣು (ಬಿಡಿಸಿದ್ದು) – 1 ಕಪ್, ಹಸಿ ಮೆಣಸಿನ ಕಾಯಿ – ಖಾರಕ್ಕೆ ತಕ್ಕಂತೆ, ಕೊತ್ತಂಬರಿ ಸೊಪ್ಪು – 3 ಎಸಳು. ಉಪ್ಪು – ರುಚಿಗೆ ತಕ್ಕಷ್ಟು.
ಒಗ್ಗರಣೆಗೆ : ಎಣ್ಣೆ – ½ ಚಮಚ, ಸಾಸಿವೆ – ½ ಚಮಚ, ಗೋಡಂಬಿ – ೨೫ ಗ್ರಾಂ, ಕರಿಬೇವಿನ ಎಸಳು – 5 ಅಥವಾ 6, ಇಂಗು – 2 ಚಿಟಿಕೆ.

ತಯಾರಿಸುವ ವಿಧಾನ: 

ಅಗಲ ಬಾಯಿಯ ಪಾತ್ರೆಯಲ್ಲಿ 2 ½ ಕಪ್ ನೀರು ಹಾಕಿ ಒಲೆಯ ಮೇಲಿಡಿ. ನೀರು ಕುದಿ ಬಂದ ನಂತರ ಅಕ್ಕಿಯನ್ನು ಹಾಕಿ. ಅಕ್ಕಿ ಅರೆ ಬೆಂದಾಗ ಒಂದು ಕಪ್ ಹಾಲನ್ನು ಹಾಕಿ ಪುನಃ ಕುದಿಸಿ. ಅಕ್ಕಿ ಪೂರ್ತಿ ಬೆಂದ ನಂತರ ಕೆಳಗಿಳಿಸಿ. (ಹಾಲು ಪೂರ್ತಿ ಇಂಗಿರಬೇಕು). ಅನ್ನ ತಣ್ಣಗಾದ ನಂತರ ಅದಕ್ಕೆ ಮೊಸರು, ಉಳಿದ ಒಂದು ಕಪ್ ಹಾಲು, ಉಪ್ಪು, ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ, ಅರ್ಧ ಭಾಗ ಮಾಡಿದ ದ್ರಾಕ್ಷಿ ಮತ್ತು ದಾಳಿಂಬೆ ಹಣ್ಣಿನ ಕಾಳುಗಳನ್ನು ಹಾಕಿ ಚೆನ್ನಾಗಿ ಬೆರೆಸಿ. ಒಗ್ಗರಣೆಗೆ ಹೇಳಿದ ಪದಾರ್ಥಗಳನ್ನೆಲ್ಲ ಹಾಕಿ ಒಗ್ಗರಣೆ ಮಾಡಿ. (ಗೋಡಂಬಿಯನ್ನು ಕೊನೆಯಲ್ಲಿ ಹಾಕಿ ಇಲ್ಲದಿದ್ದರೆ ಕರಟಿ ಹೋಗುತ್ತದೆ). ಬಾಣಲೆ ಇಳಿಸಿದ ನಂತರ ಇಂಗನ್ನು ಹಾಕಿ. ಒಗ್ಗರಣೆ ಹಾಕಿದ ನಂತರ ಪುನಃ ಒಮ್ಮೆ ಕಲೆಸಿ. ನಂತರ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಸೂಚನೆ : ಒಗ್ಗರಣೆಗೆ ಒಣ ಮೆಣಸಿನಕಾಯಿ ಹಾಕಬೇಕಾಗಿಲ್ಲ. ಹಾಕಿದರೆ ಮೊಸರನ್ನ ಶುಭ್ರ ಬಿಳಿ ಬಣ್ಣವಿರುವುದಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಶೋಭರವರೆ ನೀವು ಬರೆಯುತ್ತಿರುವ‌ ಎಲ್ಲ ಹೊಸರುಚಿಯನ್ನು ಓದುತ್ತಿದ್ದೇವೆ. ಸ0ಪದದಲ್ಲಿ ರುಚಿ ವಿಭಾಗದಲ್ಲಿ ನಾನು, ಗಣೇಶರೆ ಬರೆದು ಎಲ್ಲರಿಗು ಬೇಸರವಾಗಿತ್ತು. ಸ್ತ್ರೀಯರು ಯಾರು ಹೆಚ್ಚಾಗಿ ಬರೆಯುತ್ತಲೆ ಇರಲಿಲ್ಲ. ನೀವು ಆ ಕೊರತೆ ನಿವಾರಿಸಿ, ಸತತವಾಗಿ ರುಚಿ ವಿಭಾಗ‌ ತು0ಬಿಸುತ್ತಿರುವಿರಿ. ಅಭಿನ0ದನೆಗಳು.

>>ಸ0ಪದದಲ್ಲಿ ರುಚಿ ವಿಭಾಗದಲ್ಲಿ ನಾನು, ಗಣೇಶರೆ ಬರೆದು ಎಲ್ಲರಿಗು ಬೇಸರವಾಗಿತ್ತು.!? :) ಶೋಭಾ ಅವರೆ, ಉಳಿದಂತೆ ಪಾರ್ಥ ಅವರ ಪ್ರತಿಕ್ರಿಯೆಗೆ ನನ್ನದೂ +೧

ನಮ್ಮ ಮನೆಯಲ್ಲಿ ಪ್ರತಿ ಮೂರನೇ ದಿನ ಇದೇ ತಿಂಡಿ...!!
ಚಿತ್ರಾನ್ನ -ದೋಸೆ -ಮೊಸರನ್ನ....
ಮತ್ತೆ ಉಪ್ಪಿಟ್ಟು (ಕಾಂಕ್ರೀಟು ) ಇಲ್ಲವೇ?
ಖಂಡಿತ ಇಲ್ಲ....!!
ಅಖಿಲ ಭಾರತ ಉಪ್ಪಿಟ್ಟು ದ್ವೇಷಿ ಸಂಘದ ಸ್ವಯಂ ಘೋಷಿತ ಅದ್ಯಕ್ಷ ನಾನು ...!
ನೀವ್ ಬರೆದ ಮೊಸರನ್ನದ ಬರಹ ಓದಿ ನಾಲಗೆಯಲ್ಲಿ ನೀರೂರಿತು...!!
ನಾಳೆ ಮನೆಯಲಿ ಅದೇ ತಿಂಡಿ..!!
ಬರಹದ ಜೊತೆಗೆ ಅದರ ಬಗೆಗಿನ ಚಿತ್ರವೂ ಸೇರಿಸಿದರೆ ಹೇಗೆ??

ಶುಭವಾಗಲಿ..

\|/