ಮುರಳಿ ನುಡಿಸಿದವನ ಹುಡುಕಾಟದಲ್ಲಿ

4.875

ಕತ್ತಲಾಗಿದ್ದ ಬದುಕಿನಲ್ಲೀ ಬೆಳದಿಂಗಳ ಆರಿಸುತ್ತಿದ್ದೆ
ಬೆತ್ತಲಾಗಿದ್ದ ಮನಸ್ಸಿಗೆ ಉಡುಗೆ ಹುಡುಕುತ್ತಿದ್ದೆ
ಚೆಲ್ಲಾ ಪಿಲ್ಲಿ ಆಗಿದ್ದ ಕನಸು
ದಾರಿ ತಿಳಿಯದೇ ಆಗಿದೆ ಮುನಿಸು

ದೂರದೂರಿಂದ ಒಂದು ಮಧುರ ಮುರಳಿ
ಮತ್ತೆ ಮತ್ತೆ ಬಂದು ಕಿವಿಗೆ ತಲುಪಿ
ಬದುಕಿಗೆ ಬೆಳದಿಂಗಳಾಯಿತು
ಮನಸ್ಸಿಗೆ ಉಡುಗೆ ತೊಡಿಸಿತು

ಆ ಮುರಳಿಯ ರಾಗ ಯಾವುದೊ
ನನ್ನ ಬದುಕಿನ ಉತ್ತರವಾ?
ನನ್ನ ಕನಸಿನ ವಾಸ್ತವಾ?
ನನ್ನ ಮನಸಿನ ತಳಮಳವಾ?

ಕೊನೆಯಿರದ ಹುಡುಕಾಟದಲ್ಲಿ
ಉತ್ತರ ಹುಡುಕುವ ದಾರಿಯಲ್ಲಿ
ಆ ಮುರಳಿ ನುಡಿಸಿದ ಕೃಷ್ಣನ ನೆನಪಿನಲ್ಲಿ
ಕಾತುರದಿಂದ ಕಾದಿರುವ ನಾನು

ಶಮಿತಾ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.9 (8 votes)
To prevent automated spam submissions leave this field empty.