ಮುಂಬೈನಲ್ಲಿ ೮ ನೆಯ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ-೨೦೧೧

4

 ಸಹಕಾರ : ಕರ್ನಾಟಕ ಸರ್ಕಾರ, ಕನ್ನಡ ಇಲಾಖೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ.ಮತ್ತು ಮುಂಬೈ ಕನ್ನಡ ಸಂಘ (ರಿ) ಹೃದಯವಾಹಿನಿ, ಇವರ ಜಂಟಿ ಆಶ್ರಯದಲ್ಲಿ ಮುಂಬೈನಗರದ ಸಾಂತಾಕೃಜ್ ನ ಭಿಲ್ಲವ ಭವನದ 'ವಿ. ಕೃ. ಗೋಕಾಕ್ ವೇದಿಕೆ' ಯಲ್ಲಿ ಆಗಸ್ಟ್ ೬ ಮತ್ತು ೭ ರಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕನ್ನಡ ಪ್ರೇಮಿಗಳು ಸಾಕಷ್ಟು ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಆನಂದವನ್ನು ಆಸ್ವಾದಿಸಿದರು. ಶನಿವಾರ ೬ ಆಗಸ್ಟ್ ೨೦೧೧ ರಂದು ಸಾಯಕಾಲ ೫-೩೦ ಕ್ಕೆ ಕಾರ್ಯಕ್ರಮ ಪ್ರಾರಂಭವಾಯಿತು.  ತಲೆತುಂಬಾ ಗುಂಗರು ಕೂದಲಿನ ಯುವ ಪ್ರತಿಭೆ, ಎಸ್. ಕೆ. ಪದ್ಮನಾಭ ಶೆಟ್ಟಿಯವರ ಪ್ರಾರ್ಥನಾಗೀತೆ ಸೊಗಸಾಗಿ
ಮೂಡಿಬಂತು. 
ಅಮೃತ ಮಹೊತ್ಸವದ ಹೊಸ್ತಿಲಿನಲ್ಲಿ ಸಂಭ್ರಮಿಸುತ್ತಿರುವ,  ಮುಂಬೈ ಕನ್ನಡ ಸಂಘದ  ಅಧ್ಯಕ್ಷ, ಗುರುರಾಜ ನಾಯಕ್ ರವರು ಎಲ್ಲರನ್ನೂ ತುಂಬು ಹೃದಯದಿಂದ ಸ್ವಾಗತಿಸಿದರು.
ಸಮ್ಮೇಳನಾಧ್ಯಕ್ಷ, 'ನಾಗತಿಹಳ್ಳಿ ಚಂದ್ರಶೇಖರ್' , ದೀಪ ಪ್ರಜ್ವಲಿಸುವುದರ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು.  ಕನ್ನಡವನ್ನು ಮಕ್ಕಳ ಕಿವಿಗಳಲ್ಲಿ ಹಾಕಿ ಅವರಿಗೆ ಪ್ರೀತಿಮೂಡಿಸುವಲ್ಲಿ ಹೆತ್ತವರ ಪಾತ್ರ ಹೆಚ್ಚಿನದೆಂದು ಹೇಳಿದರು. ಇಂದಿನ ಶರವೇಗದ ಬದುಕಿನಲ್ಲಿ ನಮ್ಮನ್ನೇ ತೆರೆದುಕೊಂಡು ಮುನ್ನುಗ್ಗುತ್ತಿರುವ ನಾವು ನಿಂತು ಯೋಚಿಸುವ ಮುಕ್ತಮನಸ್ಸನ್ನು ಕಳೆದುಕೊಳ್ಳುತ್ತಿರುವುದೇ ಹಲವಾರು ಸಮಸ್ಯೆಗಳಿಗೆ ನಾವು ನಮ್ಮನ್ನು ಒಡ್ಡಿಕೊಂಡಿದ್ದೇವೆ.  ಬಿಜಾಪುರದ ಪೋಲಿಸ್ ಅಧಿಕಾರಿ, ಡಾ.ರಾಜಪ್ಪನವರು, ಕನ್ನಡದಲ್ಲಿ ಅತ್ಯುತ್ತಮವಾಗಿ ಮಾತನಾಡಿ ಎಲ್ಲರಗಮನ ಸೆಳೆದರು.  ಇನ್ನಿತರ ಗಣ್ಯರೂ ತಮ್ಮ ಅಂತರಾಳದ ದನಿಗಳನ್ನು ಸಭಿಕರೊಂದಿಗೆ ಹಂಚಿಕೊಂಡರು. ಮಂಜುನಾಥ ಸಾಗರ್ ರವರ ' ಪ್ರಾಸ್ತಾವಿಕ ಭಾಷಣ' ಬಹಳ ಸ್ಫೂರ್ತಿದಾಯಕವಾಗಿಯೂ ಅರ್ಥಗರ್ಭಿತವಾಗಿಯೂ ಇತ್ತು.

ಮುಖ್ಯ ಅತಿಥಿಗಳು :

* ಎಲ್.ವಿ.ಅಮೀನ್, ಉದ್ಯಮಿ ಮುಂಬೈ

* ಐಕಳ ಹರೀಶ್ ಶೆಟ್ಟಿ ಅಧ್ಯಕ್ಷರು,ಮುಂಬೈ ಬಂಟ್ ಸಂಘ,

* ಡಾ. ಡಿ. ಸಿ. ರಾಜಪ್ಪ ಐ.ಪಿ.ಎಸ್;  ಎಸ್. ಪಿ. ಬಿಜಾಪುರ,

* ಧರ್ಮಪಾಲ ದೇವಾಡಿಗ ಗೌರವಾಧ್ಯಕ್ಷ, ಸಮ್ಮೇಳನ ಸಮಿತಿ,

* ಸುರೇಶ್ ಭಂಡಾರಿ ಅಧ್ಯಕ್ಷರು, ಭಂಡಾರಿ ಸಮಾಜ, ಮುಂಬೈ,

* ಅರವಿಂದ ಪಾಟೀಲ್, ಪೂರ್ವಾಧ್ಯಕ್ಷ, ಕರ್ನಾಟಕ ಸಂಘ ಕತಾರ್

* ಕೆ.ಪಿ .ಮಂಜುನಾಥ ಸಾಗರ್, ಅಧ್ಯಕ್ಷ ಸಮ್ಮೇಳನ ಸಮಿತಿ,

* ಗುರುರಾಜ ಎಸ್. ನಾಯಕ್, ಅಧ್ಯಕ್ಷರು, ಮುಂಬೈ ಕನ್ನಡ ಸಂಘ,

ಅಭಿನಂದನೆ :
* ಡಾ. ಜೆ.ಡಿ ಜೋಶಿ,
* ಪಿ.ಎಸ್.ಕಾರಂತ್ ವಿಶ್ವಸ್ಥರು, ವಾಪಿ ಕನ್ನಡ ಸಂಘ,
*  ಕಾಸರಗೋಡು ಅಣ್ಣಪ್ಪ, ಕಾಗೋಡು ರಂಗಮಂಚ ಸಾಗರ,

-ಸ್ವರ್ಣ ಮಯೂರ ಪ್ರಶಸ್ತಿ ಪ್ರದಾನ :

* ತಿ. ರಾಮಕೃಷ್ಣಯ್ಯ ಹಾಸನ,
* ವಿ. ಲಕ್ಷ್ಮಿ ಮೂರ್ತಿ,

* ಪ್ರೇಮ್ ನಾಥ್ ಶೆಟ್ಟಿ,  ಮುಂಡ್ಕೂರ್,

* ಲತಾ ಪೂಜಾರಿ, ಮುಂಬೈ

ತುಮಕೂರಿನ ಸಾಯಿರಾಮ ವಿದ್ಯಾ ಕೇಂದ್ರ ಕಲಾವಿದರಿಂದ :
ನಿರ್ದೆಶಕ ಟಿ.ಎಸ್.ಸಾಗರ ಪ್ರಸಾದ

ಹೊರನಾಡು ಕನ್ನಡಿಗರ ಗೋಷ್ಠಿ :

* ಅಧ್ಯಕ್ಷತೆ,  ದಯಾನಂದ ಬೋಂಟ್ರ ಬರೋಡ,
* ಇಲಿಯಾನ್ ಸ್ಯಾಂಕ್ವಿಸ್, ಕುವೈಟ್,
* ಎಸ್ಕ ಹಳೆಯಂಗಡಿ, ಬರೋಡ
* ಬಿ. ನಾಗಭೂಷಣ ಮುಂಬೈ,
* ನಿತ್ಯಾನಂದ ಕೋಟ್ಯಾನ್, ಮುಂಬೈ,
* ದಿವಾಕರ್ ಪೂಜಾರಿ ಕತಾರ್,

ಶೀ ಜಯ ನಾಟ್ಯ ಕಲಾ ಅಕಾಡೆಮಿ (ರಿ) ಕೋಲಾರ :

  ನಾಡಗೀತೆಗೆ ನೃತ್ಯ :

* ನಿರ್ದೇಶಕ ವಿದ್ವಾನ್ ಶೀ ಕೋಲಾರ್ ರಮೇಶ್, ಮತ್ತು ಕಲಾವಿದರು.

ಶ್ರೀಮತಿ ಸುಚೇತನಾ ನಾಯ್ಕ್, ಭರತನಾಟ್ಯ :  ಸುಚೇತರವರ ನೃತ್ಯಕಾರ್ಯಕ್ರಮ ಸುಂದರವಾಗಿ ಮೂಡಿಬಂತು. ನೃತ್ಯದ ಸಿ.ಡಿ. ಬಹಳ ಕೆಟ್ಟದಾಗಿದ್ದರೂ, ಏನೂ ಆಗದೆ ಇದ್ದಂತೆ ಮುಖದಲ್ಲಿ ಮಂದಹಾಸಮಿಂಚಿಸುತ್ತಾ ಮಾಡಿದ ನೃತ್ಯ ಒಂದು ಅನನ್ಯ ಅನುಭವವನ್ನು ತಂದುಕೊಟ್ಟಿತು !

ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ (ರಿ)

ಕೆ. ಆರ್. ಪುರಂ ಬೆಂಗಳೂರು, ಜಾನಪದ ನೃತ್ಯ ಕಲಾವಿದರು, ಮತ್ತು ಅವರ ತಂಡ ನಡೆಸಿಕೊಟ್ಟ ಕಾರ್ಯಕ್ರಮ ಎಲ್ಲರಿಗೂ ಪ್ರಿಯವಾಯಿತು.

ಹಾಸ್ಯಗೋಷ್ಠಿ-೧ :

* ಅಧ್ಯಕ್ಷತೆ ಡಾ. ಬಸವರಾಜ್ ಬೆಣ್ಣೆ

* ರಾಜಗೋಪಾಲ್ ಕೋಲಾರ,

* ಅದೃಷ್ಯಪ್ಪ ಕರಮಲ್ಲನವರ್,

* ಮಂಜುನಾಥ ಪಾಂಡವಪುರ,

ಕೊನೆಯಲ್ಲಿ ವಂದನಾರ್ಪಣೆಯನ್ನು ಜಯಪ್ರಕಾಶರಾವ್ ಪುತ್ತೂರ್, ಚಿಕ್ಕದಾಗಿಯೂ  ಚೊಕ್ಕವಾಗಿಯೂ, ನೆರವೇರಿಸಿದರು.

 

 


 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.