ಮರಳಿ ಬಾರದೆ ಹೋಗುತ್ತಿರುವೆಯಲ್ಲಾ..!

0
ನಿಲ್ಲು ಎಂದರೂ ನಿಲ್ಲದೆ ಹೋಗುತ್ತಿರುವೆಯಲ್ಲಾ ಅಸಂಖ್ಯ ನೋವು ನಲಿವುಗಳನ್ನು ಕೊಟ್ಟುಹೋಗಿರುವೆಯಲ್ಲಾ ಭಾವನೆಗಳ ಮಹಾಪೂರವನ್ನೇ ಹರಿಸಿಹೋಗಿರುವೆಯಲ್ಲಾ ಪ್ರಕೃತಿಯ ವೈಚಿತ್ರ್ಯಗಳಿಗೆ ಸಾಕ್ಷಿಯಾಗಿಹೋಗಿರುವೆಯಲ್ಲಾ ವಿಸ್ಮಯದ ವಿದ್ಯಮಾನಗಳಿಗೆ ಮೂಕ ಪ್ರೇಕ್ಷಕಳಾಗಿದ್ದೆಯಲ್ಲಾ ಕಾಲಗರ್ಭದಲ್ಲಿ ನಿನ್ಹೆಸರನ್ನ ಬರೆದು ಮೌನವಾಗಿ ಸಾಗುತ್ತಿರುವೆಯಲ್ಲಾ ಮರೆಯದ ನೆನಪುಗಳಿಗೆ ಸಾಕ್ಷಿಯಾಗಿರುವೆಯಲ್ಲಾ ಕಾಲದ ಸೆಳೆತಕೆ ಸಿಲುಕಿ ಸದ್ದಿಲ್ಲದೆ ಸರಿಯುತ್ತಿರುವೆಯಲ್ಲಾ ನಿನ್ನ ನೆನಪುಗಳ ಮೆರವಣಿಗೆಯಲ್ಲಿ ಸಾಗುತ್ತಿರುವೆವು ನಾವೆಲ್ಲಾ ಹೊಸ ಹೆಜ್ಜೆ ಹೊಸ ಕನಸುಗಳಿಗೆ ಕಾತರರಾಗಿರುವೆವೆಲ್ಲಾ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೇತನ ಕೋಡುವಳ್ಳಿ ಯವರೆ ವಂದನೆಗಳು ಇದೊಂದು ಸುಂದರ ಅಭಿವ್ಯಕ್ತಿಯ ಕವನ, ಪ್ರತಿ ಶಬ್ದ ಮತ್ತು ಸಾಲುಗಳಲ್ಲಿ ಅರ್ಥವೆ ತುಂಬಿದೆ, ಚಿತ್ರ ಕವನ ಒಂದಕ್ಕೊಂದು ಪೂರಕ ವಾಗಿವೆ, ಧನ್ಯವಾದಗಳು.

>> ಇದೊಂದು ಸುಂದರ ಅಭಿವ್ಯಕ್ತಿಯ ಕವನ, ಪ್ರತಿ ಶಬ್ದ ಮತ್ತು ಸಾಲುಗಳಲ್ಲಿ ಅರ್ಥವೆ ತುಂಬಿದೆ, ಚಿತ್ರ ಕವನ ಒಂದಕ್ಕೊಂದು ಪೂರಕ ವಾಗಿವೆ, ಧನ್ಯವಾದಗಳು. +1

ಹೊಳೆನರಸೀಪುರ ಮಂಜುನಾಥ ಅವ್ರ ಕವನ 'ಕಳೆದು ಹೋಗಿರಿ ಈಗ'............... http://sampada.net/blog/%E0%B2%95%E0%B2%B3%E0%B3%86%E0%B2%A6%E0%B3%81-%E0%B2%B9%E0%B3%8B%E0%B2%97%E0%B2%BF%E0%B2%B0%E0%B2%BF-%E0%B2%88%E0%B2%97/01/01/2012/34930#comment-158540 ಮತ್ತು ನಿಮ್ಮ ಈ ಕವನ ಓದಿಯಾದ ಮೇಲೆ ನಂಗೆ ನೀವು ಇಬ್ಬರೂ ಒಂದೊಂದರ ಬಗ್ಗೆ ವಿರುದ್ಧವಾಗಿ ಬೇರೆಯದೇ ಅರ್ಥದಲ್ಲಿ ಬರೆದದ್ದ್ದು ನನಗೆ ಅಚ್ಚರಿಯಾಯ್ತು... ಕವನದಲ್ಲಿ ನೀವು ಉಪಯೋಗಿಸಿದ ಹಲ ಸಾಲುಗಳಿಗೆ ಅದರದೇ ಆದ ಅರ್ಥ ಇದೆ... ಕವನ ಹಿಡಿಸಿತು... >>>> ನೀವು ಭಲೇ ಅಧ್ರುಸ್ಟವಂತರಪ್ಪ ಸದಾ ಕಾಫೀ ಲೋಟ ಹಿಡಿದೇ ಇರ್ತೀರಾ...:)