ಮನುಸ್ಮೃತಿ

ಭಾಗ - ೯ ಮನುವಿನ ಧರ್ಮ: ಜಾತಿಯೇ ಬೇರೆ..... ವರ್ಣವೇ ಬೇರೆ!

         ಜಾತಿಭೂತವೆನ್ನುವುದು ಹಿಂದೂ ಸಮಾಜಕ್ಕೆ ಅಂಟಿದ ಶಾಪ.
         ಇಂದಿನ ಹಿಂದೂ ಸಮಾಜದ ದುರಾಚಾರಗಳಿಗೆಲ್ಲಾ ಕಾರಣವಾಗಿರುವುದು ಅದರಲ್ಲಿ ಕಂಡುಬರುವ ನಿಕೃಷ್ಟವಾಗಿರುವ ಜಾತಿ ವ್ಯವಸ್ಥೆ. 
         ನನ್ನ ಜಾತಿ ದೊಡ್ಡದು, ನಿನ್ನ ಜಾತಿ ಚಿಕ್ಕದು ಎಂಬ ಅಹಂಕಾರವೇ ಜಿಗುಪ್ಸೆ ಹುಟ್ಟಿಸುವಂತಹುದು. ಸಂಕುಚಿತವಾದ ಜಾತಿಬುದ್ಧಿಯಿಂದ ವ್ಯವಹರಿಸುವುದು, ಕೆಳಜಾತಿಗಳವರನ್ನು ತುಳಿಯಬೇಕೆನ್ನುವ ಹುನ್ನಾರ ಮಾಡುವುದು, ಮೇಲ್ಜಾತಿಯವರೆಂಬ ಮದದಿಂದ ನಿಮ್ನ ಜಾತಿಗಳನ್ನು ಅಸ್ಪೃಶ್ಯರಾಗಿ ಕಂಡು ಅವಮಾನಿಸುವುದು, ಜಾತಿಭೇದ ಮಾಡುತ್ತಾ ಅವರನ್ನು ನೀಚವಾಗಿ ಕಾಣುವುದು, ನಿಜಕ್ಕೂ ಅಮಾನುಷವಾದುದು. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಭಾಗ - ೮ ಮನುವಿನ ಧರ್ಮ: ಪುಕ್ಕಟೆಯಾಗಿ ಸಿಕ್ಕಿರುವುದು ಹಿಂದೂಗಳು ಮಾತ್ರವೇ?

       Let your women keep silence in the churches: for it is not permitted unto them to speak; but they are commanded to be under obedience, as also saith the law..... and if they will leave anything let them ask their husbands at home; for it is a shame for women to speak in the church. (1Corinthians, 14/34,35) 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಭಾಗ - ೭ ಮನುವಿನ ಧರ್ಮ: ಯಾವುದು ಅಶುದ್ಧ? ಯಾವುದು ಪರಿಶುದ್ಧ?

  1. ಪುರುಷರನ್ನು ಹಾಳು ಮಾಡುವುದು ಸ್ತ್ರೀಯರ ಸ್ವಭಾವ. ಪುರುಷನು ಎಂತಹ ವಿದ್ವಾಂಸನಾದರೂ ಸಹ ಸ್ತ್ರೀಯರ ಬಲೆಗೆ ಬೀಳುವುದು ಸಹಜ.
  2. ವ್ಯಭಿಚಾರವು ಸ್ತ್ರೀಯರ ಲಕ್ಷಣ.
  3. ಸ್ತ್ರೀಯರು ದುಷ್ಟ ಬುದ್ಧಿಯುಳ್ಳವರು ಮತ್ತು ಚಂಚಲ ಸ್ವಭಾವವನ್ನು ಹೊಂದಿರುವುದರಿಂದ ಪತಿಯು ಅವರನ್ನು ಎಷ್ಟು ಚೆನ್ನಾಗಿ ನೋಡಿಕೊಂಡರೂ ಸಹ ಅವನ ಮೇಲಿನ ದುಷ್ಟ ಭಾವನೆಯಿಂದ ಅವರು ಹಾಳಾಗುತ್ತಾರೆ. 
  4. ಶಯನ, ಆಸನ, ಕಾಮಕ್ರೋಧಗಳು, ಕಪಟ ಸ್ವಭಾವ, ದ್ರೋಹಬುದ್ಧಿ, ಕೆಟ್ಟ ನಡವಳಿಕೆಗಳು ಸ್ತ್ರೀಯರಿಗೆ ಸಹಜವಾದವುಗಳು.
  5. ಮದ್ಯಪಾನ, ಕೆಟ್ಟ ಸಹವಾಸ, ಅಕ್ಕ-ಪಕ್ಕದ ಮನೆಗಳಿಗೆ ಹೋಗುವುದು ಸ್ತ್ರೀಯರನ್ನು ಕುಲಗೆಡಿಸುತ್ತವೆ. 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಭಾಗ - ೬ ಮನುವಿನ ಧರ್ಮ: ಮನು ಸ್ತ್ರೀಯರಿಗೆ ಮಿತ್ರನೋ, ಶತ್ರುವೋ?

ಮದುವೆಯಾಗುವವರಗೆ ತಂದೆಯ ಅಧೀನದಲ್ಲಿ -
ಮದುವೆಯಾದ ನಂತರ ಪತಿಯ ಅಧೀನದಲ್ಲಿ -
ಮುದಿತನದಲ್ಲಿ ಮಗನ ಅಧೀನದಲ್ಲಿ - 
          ಗುಲಾಮಳಾಗಿರು. ಅವರ ದಯೆಯಿದ್ದರೆ ಅದು ನಿನ್ನ ಪುಣ್ಯ. ಇಲ್ಲದಿದ್ದರೆ ಅದು ನಿನ್ನ ಕರ್ಮ, ನಿನ್ನ ಹಣೆಬರಹ!  ನಿನಗೆ ಜೀವನದಲ್ಲಿ ಸ್ವತಂತ್ರವಾಗಿ ಇರುವ ಅವಕಾಶವಿಲ್ಲ! 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಭಾಗ - ೫ ಮನುವಿನ ಧರ್ಮ: ಮನು ಸ್ತ್ರೀಯರಿಗೆ ಶತ್ರುವೆ?

           ಮನುವು ದುಷ್ಟ ಮೇಧಾವಿ. "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎಂದು ಹೇಳುತ್ತಾ ಸ್ತ್ರೀಯರಿಗೆ ಎಲ್ಲಾ ಹಂತಗಳಲ್ಲಿ ಎಲ್ಲಿಯೂ ಸ್ವಾತಂತ್ರ್ಯವನ್ನು ಕೊಡದೆ ಅವರನ್ನು ಗುಲಾಮರಾಗಿರುವಂತೆ ಆದೇಶಿಸಿದ್ದಾನೆ. ಅದು ಸ್ತ್ರೀಯರ ಅಭಿವೃದ್ಧಿಗೆ ಕೊಡಲಿಪೆಟ್ಟಿನಂತಹುದು ಎಂದು ....... ಮಲ್ಲಾದಿ ಸುಬ್ಬಮ್ಮ ಎನ್ನುವ (ತೆಲುಗಿನ) ಮಹಿಳಾ ಹಕ್ಕುಗಳ ಹೋರಾಟಗಾರ್ತಿಯೊಬ್ಬರು ಹೇಳಿದ್ದಾರೆ. (ಇದಕ್ಕೆ ನಮ್ಮ ಕನ್ನಡದ ಸ್ತ್ರೀಪರ ಸಂಘಟನೆಗಳ ಮಹಿಳಾಮಣಿಗಳೂ ಸಹ ಹೊರತೇನಲ್ಲ ಬಿಡಿ). 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಭಾಗ - ೪ ಮನುವಿನ ಧರ್ಮ: ಪರಂಗಿಗಳು ತಂದಿಟ್ಟ ಪಜೀತಿ

          ಒಂದೇ ಸಮಾಜಕ್ಕೆ ಸೇರಿದ ಮನುಷ್ಯರ ಮಧ್ಯೆ ಉಚ್ಚ, ನೀಚ ಭೇದಗಳನ್ನು ಸೃಷ್ಟಿಸಿ ಪೋಷಿಸಿದ್ದು ಹಿಂದು ಧರ್ಮವೊಂದೇ...... ಅದು ಮಾಡದೇ ಇರುವ ಘೋರವಾದ ತಪ್ಪುಗಳಿಲ್ಲ. ರಾಜರಿಂದ ಮಾಡಿಸದೇ ಇರುವ ಘೋರವಾದ ಅಪರಾಧಗಳಿಲ್ಲ. ಸಾವಿರಾರು ವರ್ಷಗಳ ಪರ್ಯಂತ ಸಾಗಿದ ಆ ದುರಂತಗಳ ಛಾಯೆಯು ಇಂದಿಗೂ ಹಿಂದು ಸಮಾಜವನ್ನು ಆವರಿಸಿ ಪೀಡೆಯಂತೆ ಹಿಡಿದು ಅಲುಗಾಡಿಸುತ್ತಿದೆ. ಈ ಪರಿಸ್ಥಿತಿಯನ್ನು ಹುಟ್ಟುಹಾಕಿದ ಗ್ರಂಥಗಳಲ್ಲಿ ಮನುಸ್ಮೃತಿಯದೇ ಅಗ್ರಸ್ಥಾನ..... ಕಡೇ ಪಕ್ಷ ಒಂದು ಸಾವಿರ ವರ್ಷಗಳ ಕಾಲವಾದರೂ ಮನುಸ್ಮೃತಿ ಜಾರಿಯಲ್ಲಿತ್ತು.....ಸ್ಮೃತಿಗಳ ಅಧಿಕಾರವು ಅಲ್ಪ-ಸ್ವಲ್ಪ ವಿದೇಶಿ ಮತ ಪಾಲಕರ ಕಾಲದಲ್ಲಿ ತಗ್ಗುತ್ತಾ ಕ್ರಮೇಣ ಕನಿಷ್ಠ ಸ್ಥಾಯಿಗೆ ಸೇರಿತು........

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಭಾಗ - ೩ ಮನುವಿನ ಧರ್ಮ: ಮನುಸ್ಮೃತಿಯನ್ನು ಸುಟ್ಟು ಹಾಕಲೇಬೇಕೆ?

        ಸ್ತ್ರೀ ಸ್ವಾತಂತ್ರ್ಯವನ್ನು ಕುರಿತು ತೆಲುಗಿನ ರಂಗನಾಯಕಮ್ಮ ಎನ್ನುವ ಲೇಖಕಿ ಒಂದು ವಿಧವಾಗಿ ಹೇಳಿದರೆ ರಾಂಗೋಪಾಲ್ ವರ್ಮ ಎನ್ನುವ ಮತ್ತೊಬ್ಬ ಲೇಖಕರು ಇನ್ನೊಂದು ವಿಧವಾಗಿ ಹೇಳುತ್ತಾರೆ. ಅವರಿಬ್ಬರ ಬರಹಗಳಲ್ಲಿ ಎಲ್ಲಿಯೂ ಸಮನ್ವಯವಿರದು. ಆದರೆ ಒಬ್ಬರೇ ಬರೆದಿರುವ ವಿಷಯಗಳಲ್ಲಿ ಒಂದಕ್ಕೊಂದು ಸಂಬಂಧವಿರುತ್ತದೆಯಲ್ಲವೇ? 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಭಾಗ - ೨ ಮನುವಿನ ಧರ್ಮ: ಇದೆಲ್ಲಿಯ ನ್ಯಾಯ?

        ಅನುಮಾನವೇ ಬೇಡ, ಇಂತಹ ಮಾತುಗಳನ್ನು ಒಪ್ಪಿಕೊಳ್ಳಲು ಎಂಥವರಿಗೂ ಯಾವುದೇ ವಿಧವಾದ ಅಭ್ಯಂತರ ವ್ಯಕ್ತಪಡಿಸುವ ಅವಶ್ಯಕತೆಯಿಲ್ಲ; ಇವು ಖಂಡಿತವಾಗಿಯೂ ಖಂಡನಾರ್ಹವೇ! 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
Subscribe to ಮನುಸ್ಮೃತಿ