ಮನುಜನ ಹಸ್ತಕ್ಷೇಪ...ಪ್ರಕೃತಿ ವಿಕೋಪ

3

     ಮನುಜನ ಹಸ್ತಕ್ಷೇಪ...ಪ್ರಕೃತಿ ವಿಕೋಪ
ಮನುಜನ ಹಸ್ತಕ್ಷೇಪ ಪ್ರಕೃತಿಗೆ ತಂದಿತು ಕೋಪ 
ಜಗದುದ್ದಲಕ್ಕು ಸರಿಸಿ ಉರಿ ತಾಪ 
ಏರಿ ಪ್ರಕೋಪ ತಂದಿದೆ ಈ ವಿಕೋಪ
ಬಿರುಬಿಸಿಲ ಉರಿಗೆ 
ನದಿ ಸಾಗರದೊಡಲು ಕುದಿ ಆವಿಯಾಗಿ 
ಇಳೆಯ ಹವೆ ಬಿಸಿಯಾಗಿ 
ಕಾರ್ಮೋಡಗಳ ದಂಡು ಹಿಂಡು ಹಿಂಡಾಗಿ 
ದುಡು ದುಡನೆ ದೌಡಾಯಿಸಿ 
ಗಗನದಲಿ ಕೋಲ್ಮಿಂಚು ಕೋರೈಸಿ 
ದಡ ದಡ ಬರಸಿಡಿಲು ಬಡಿದು ಭುವಿಗೆ 
ಬರಿದಾದ ಅವನಿಯ ಹಸಿರೊಡಲು 
ತಡೆಯಲಾಗದೆ ಕುಸಿದು 
ಎಡಬಿಡದೆ ಸುರಿಮಳೆಯಬ್ಬರದ ಉಬ್ಬರ
ಸುಳಿಗೆ ಸಿಲುಕಿದ ತಿರೆ ನೆರೆ ಹಾವಳಿಯ ಮಾಡಿ 
ನದಿ ತೊರೆ ಸಾಗರಗಳ ಕಸಿದು 
ಭೋರ್ಗರೆವ ಜಲಪಾತವಾಗಿ 
ಸಿರಿ ಸಂಪತ್ತೆಲ್ಲವನು ಕೈಸೆರೆ ಮಾಡಿತು
ಮನೆ ಮಾಡು ಫಸಲೆಲ್ಲವನು ವಸೂಲಿ ಮಾಡಿ 
ಪಶು ಪಕ್ಷಿ ಮನು ಕುಲ ಎಲ್ಲವನು
ಗರಬಡಿದು ನಿಲಿಸಿತು 
ಅತಿಯಾದ ಆಸೆಯ ನಗರೀಕರಣ 
ಕರುಣಾಜನಕ ಸ್ಥಿತಿಗೆ ಆಗಿದೆ ಕಾರಣ 
ತಿದ್ದಿಕೊಳ್ಳದಿರೆ ಈ ತಪ್ಪು 
ಒಪ್ಪದು ನಿಸರ್ಗ ಓ ಬೆಪ್ಪು
ಅರಿತು ನಡೆದರೆ ಭೂಸ್ವರ್ಗ 
ಮಾಡಿದರೆ ಅತಿರೇಕ ಭೂ ನರಕ.
—-Rukku 
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.