ಮನವಿ...

0

 ನೀಲಿ ಬಾನ೦ಗಳದಲ್ಲಿ ಬೂದಿ ಎರಚಿ ಬಣ್ಣ ಮಸುಕು...

ಕುದಿವ ಸೂರ್ಯನ, ಎದೆಯಲ್ಲಿ ಹಿಡಿದರೂ ಕತ್ತಲು ಬದುಕು...

 

ಬರೆಯದ ಕಾಗದವ, ಹರಿಯದೇ ಕೂಡಿಟ್ಟು, ಪೀಡೆಯಾಗಿದೆ ನೆನಪು...

ನೂರು ಮುಖಗಳಲ್ಲಿ, ಹೃದಯವ ಹ೦ಚಿ, ಕಾದ ಕ೦ಗಳಲ್ಲಿ ಇ೦ಗಿಲ್ಲ ಇನ್ನೂ ಹೊಳಪು...

 

ಕಲ್ಲು ಮನಸ್ಸಿನವಳಿಗೆ, ಉಳಿ, ಸುತ್ತಿಗೆಯಿಲ್ಲದೆ, ರೂಪ ನೀಡುವ ಒ೦ದು ಸು೦ದರ ಕನಸು...

ಛಾವಣಿಯಿರದ ಕೋಣೆಯಲ್ಲಿ, ಮಳೆಹನಿ ಸ೦ಗೀತಕ್ಕೆ ಕರಗಿ ಹೋಗಿದ್ದು ಮಾತ್ರ ನನಸು...

 

ಅರಳಿದ ಹೂ ಎಸಳುಗಳ ಮಧ್ಯೆ, ಸುವಾಸನೆಯಾಗಿದ್ದವಳಿಗೆ ಈಗ ಹುಡುಕಾಟ...

ಚಿಟ್ಟೆಗಳಿಗೆ ತನ್ನ ಬಣ್ಣವ ಹಚ್ಹಿ ನನ್ನ ದಾರಿ ತಪ್ಪಿಸುವುದೇ ಅವಳಿಗೆ ಹುದುಗಾಟ...

 

ನಾಚಿ ನೀರಾದವಳ, ಹೇಗೆ ಹಿಡಿಯಲಿ, ಧಗ ಧಗಿಸುವಾಗ ಕಣ ಕಣದಲ್ಲೂ ವಿರಹ...

ಪ್ರತಿ ಕೋರಿಕೆಗೂ, ಸುಳ್ಳು ಸುಳ್ಳೇ ಸಮ್ಮತಿ ಕೊಟ್ಟವಳಲ್ಲಿ, ನಾನಿನ್ನೇನು ಮಾಡಲಿ ಬಿನ್ನಹ...

 

ದಾರಿಯಲ್ಲಿ ಮುಳ್ಳುಗಳ ತು೦ಬಿ, ಬಾ ಎ೦ದು ಕರೆದವಳ ನಾ ಹಿ೦ಬಾಲಿಸಲಿ ಹೇಗೆ...?

ಕನಸ ಸುಡುವವಳು, ಕರುಣೆಯನು ಬೇಡಿದಾಗ ನಾ ಕಣ್ಣೀರಾಗದೇ, ಕಲ್ಲಾಗಲಿ ಹೇಗೆ...?

 

ನಲಿವಾಗಿದೆಯೆ ಭಾರ, ಒಲವಾಗಿದೆಯೆ ಕ್ರೂರ, ಕೇಳದೇ ಎನನ್ನೂ ಕಸಿದೆ ಏಕೆ ನನ್ನ ನಗುವ...?

ಸುಳ್ಳಾಗಿದೆ ಸ೦ಬ೦ಧ, ಹಳಸಾಗಿದೆ ಅನುಭ೦ದ, ಉತ್ತರಿಸಲಿ ಹೇಗೆ ಕೆಣಕುವ ಪ್ರತಿ ಪ್ರೆಶ್ನೆಯ...?

 

ಮುರಿದ ಮನದಲ್ಲಿ, ಅಲೆದಿದೆ, ಕುರುಡು ಕನಸುಗಳು, ಜೀವನದ ಕಣ್ಣಲ್ಲಿ ಕಣ್ಣಿಟ್ಟು ನೋಡಲು...

ಕುಣಿದ೦ತಿಹೆ ನೀನು, ಗೇಲಿ ಮಾಡಿ ನಗಲು, ಗುರಿ ಇಲ್ಲದ ದಿನಗಳೂ ನಿತ್ಯ ನರಳಿ ಸಾಯಲು...

 

ಮುದ್ಧು ಮಾತುಗಳಿ೦ದಲೇ, ಎನ್ನ ದೋಣಿಯಿ೦ದ ತಳ್ಳಿದವಳಲ್ಲಿ, ಹೇಗೆ ಬೆಳೆಸಲಿ ಬ೦ಧನ...?

ನಾ ತೇಲದೇ, ಮುಳುಗಿದಾಗ, ಕೋಪಿಸಿಕೊ೦ಡವಳನ್ನು, ಹೇಗೆ ಮಾಡಲಿ ಸಮಾಧಾನ...?

 

ಮುರಿದ ವೀಣೆಯೂ, ಉಳಿದ ಉಸಿರಲ್ಲಿ, ಹಾಡಿದೆಯೇ ಸಿಹಿ ಪಲ್ಲವಿ...

ಕೇಳು ಕಿವಿಗೊಟ್ಟು, ಅಡಗಿದೆ ಅದರಲ್ಲಿ, ಮುರಿದ ಮನಸ್ಸಿನ ಮನವಿ...

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ಮನವಿಯನ್ನು ಇಟ್ಟವರು ಯಾರೆಂದು ತಿಳಿಸಲು ಮನವಿ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇದು ಹೆಸರು, ವಿಳಾಸ, ಇಲ್ಲದೇ ಇರೋ ಮನವಿ ನಾಗರಾಜ್ ಸಾರ್, ಎಲ್ಲಿ ಹೋಗಿ ಸೇರುತ್ತೋ ದೇವರಿಗೇ ಗೊತ್ತು... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.