ಮಧ್ಯ ವಯಸ್ಸು

0

ಮಧ್ಯ ವಯಸ್ಸು
ಈ ಮಧ್ಯ ವಯಸ್ಸಿನ ಜೀವನವೇ ವಿಚಿತ್ರ, ಎದುರಿಸಲು ನಾವಾಗಬೇಕು ಸಜ್ಜು,
ಕೂತು, ನಿಂತು, ಎಣೆಯಿಲ್ಲದೆ ತಿಂದು, ವ್ಯಾಯಾಮವಿಲ್ಲದೆ, ಶೇಖರಣೆಯಾಗಿದೆ ಬೊಜ್ಜು,
ಕಾಲದ ಹೊಡೆತಕ್ಕೆ ಸಿಕ್ಕು, ಮಾಯವಾಗಿದೆ ಮುಖದ ಮೇಲಿದ್ದ ಕಾಂತಿ,
ಸಂಸಾರದ ತಾಪತ್ರಯದ ನಡುವೆ ಎಲ್ಲಿ, ಹುಡುಕಲಿ  ಮರೆಯಾಗಿರುವ ಶಾಂತಿ.
ಮೊನ್ನೆ, ಮೊನ್ನೆವರೆಗೂ ಹುಡುಗನಾಗಿದ್ದ ನನಗೆ ಇಂದು, ಅಂಕಲ್ ಎಂಬ ಪಟ್ಟ ದೊರಕಿದೆ,
ಇರಲಿ, ಅದನ್ನು ನುಂಗಿಕೊಳ್ಳುತೇನೆ, ತೀರಾ ಅಲ್ಲದಿದ್ದರೂ ಸ್ವಲ್ಪ ಮನಸ್ಸು, ಹಣ್ಣಾಗಿದೆ, ಮಾಗಿದೆ,
ಹೆಂಡತಿಯ ಸಮಯದ ಮೇಲೆ ಸಾಧಿಸಿದ್ದ ಏಕಸ್ವಾಮ್ಯ, ಇಂದು ಮಕ್ಕಳಿಂದ ಧೂಳಿಪಟವಾಗಿದೆ,
ನಿಧಾನವಾಗಿ, ಕಾಲಿಟ್ಟ ರಕ್ತದೊತ್ತಡ, ಸಕ್ಕರೆ ಖಾಯಿಲೆಗೆ, ದೇಹ ಹೊಂದಿಕೊಂಡಿದೆ,
ಸಮಾಧಾನವೇನೆಂದರೆ, ಪ್ರೀತಿ ನನ್ನಲ್ಲಿ ಬತ್ತಿಲ್ಲ, ಕುಂಠಿತಗೊಂಡಿಲ್ಲ, ಬದಲಾಗಿಲ್ಲ, ಕಾಣೆಯಾಗಿಲ್ಲ,
ಆವತ್ತಿಗೂ ಒಬ್ಬ ತುಂಟ ಹುಡುಗ ನನ್ನಲ್ಲಿದ್ದ, ಇಂದಿಗೂ ಇದ್ದಾನೆ, ಆದ್ರೆ ಸಾರ್ವಜನಿಕವಾಗಿ ಕಾಣ್ತಿಲ್ಲ
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.