ಮತ್ತೆ ಕಡಡಿತೆ ಮನಸು?

4.666665

ಮತ್ತೆ ಕಡಡಿತೆ ಮನಸು
ಅತ್ತಿತ್ತ ಹರಿದಾಡಿ ,
ಮತ್ತೆ ಮುದುಡಿತೆ ಮನವು,
ನೋವು -ಚಿಂತೆಗಳ ಗಾಣಕ್ಕೆ ಸಿಲುಕಿ ??

ಅತ್ತಿತ್ತ ಎಲ್ಲೋ ಒಡೆದು ಹೋಗಿದೆ
ಮನವು ,
ಮತ್ತೊಮ್ಮೆ ಮಗದೊಮ್ಮೆ ಮೇಲೆದ್ದು ಬರಲು
ನೆನಪಿನಾಳದಿ ಕಸವು..!

ಕುಳಿತುಕೋ ಓ ಮನವೇ ಕೊಂಚ ವಿಶ್ರಮಿಸಿ ,
ಬಿಟ್ಟುಬಿಡು ಯೋಚನೆಗಳ ಕೊಂಚ ಪರಿಶ್ರಮಿಸಿ ...
ಹಣಿಯಾಗದೆ ಕದಡಿದ ಕೊಳವು ತಂತಾನೇ
ಬಿಟ್ಟುಬಿಡೆ ಕೊಂಚಹೊತ್ತು ಅದರಷ್ಟಕದನು..?!

ತಿಳಿಯಾಗುವದು ಮತ್ತೆ ಮನಸಿನಂಗಳವು ..!
ನಕ್ಕುಬಿಡು ಒಂದೊಮ್ಮೆ ಎಲ್ಲ ಭಾವಗಳ ಮೆಟ್ಟಿ ..
ಬಂದೆ ಬರುವದು ಶಾಂತಿ ಸಪ್ತಸಾಗರ ದಾಟಿ !!
                             

                                      -ದೇವೇಂದ್ರ ಭಾಗ್ವತ್

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.