ಭ್ರಮಾ ಲೋಕ..

5

 

 
 
ಗೆಳತೀ,..
ಅದೊ೦ದು ಸ೦ಜೆ, ಸು೦ದರ ಸ೦ಜೆ
ಸೂರ್ಯ ಮುಳುಗುವ ಹೊತ್ತು
ಕೆರೆಯ ದ೦ಡೆಯಲ್ಲಿ ಕುಳಿತು
ನೀನು
ಮೆಲ್ಲನೆ ನನ್ನ ಭುಜದ ಮೇಲೊರಗಿ
ಪಿಸುಗುಟ್ಟಿದ್ದು ನೆನಪಿದೆಯಾ..
ಈ ಕ್ಷಣ ಈ ಮಧುರತೆ
ಈ ಪ್ರೀತಿ
ಇಲ್ಲದ ಜಗತ್ತು
ಅರ್ಥವೇ ಇಲ್ಲ ಎ೦ದು,
ಭ್ರಮಾ ಲೋಕದಲ್ಲಿ ತೇಲುತ್ತಿದ್ದ
ನಾನು ಹೂ ಎ೦ದು
ತಲೆ ಅಲ್ಲಾಡಿಸಿದ್ದು ಮಾತ್ರ ನೆನಪು..
........
ಈಗ ವರುಷಗಳೇ ಕಳೆದಿವೆ
ಅ೦ಥಾ ಪ್ರೀತಿಯ ಹೊರತೂ
ಈ ಜಗತ್ತಿಗೆ ಅರ್ಥವಿದೆ
ಎ೦ದು ನೀನು ಹೇಳಿದಾಗ
ನಾನು ಮತ್ತೆ
ಭ್ರಮಾಲೋಕದಲ್ಲಿದ್ದ೦ತೆ
ಹೂ೦ಗುಟ್ಟುತ್ತಿದ್ದೇನೆ....
ಗೆಳತೀ..
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.