ಭೀಮಾ ತೀರದ ವಿವಾದ ಮತ್ತು ಪತ್ರಕರ್ತರು

4.11111

ಶನಿವಾರ ಸ೦ಜೆ ಟಿವಿ ೯ ನಲ್ಲಿ ’ಭೀಮಾ ತೀರದಲ್ಲಿ ವಿವಾದ’ ಎ೦ಬ ಕಾರ್ಯಕ್ರಮವೊ೦ದು ಬರುತ್ತಿತ್ತು.ಪತ್ರಕರ್ತ ರವಿ ಬೆಳಗೆರೆಯವರು , ’ಭೀಮಾ ತೀರದಲ್ಲಿ’ ಚಿತ್ರ ತ೦ಡದ ಮೇಲೆ ಸಿಡುಕುತ್ತಿದ್ದರು.ವಿಷಯವಿಷ್ಟೇ,’ಭೀಮಾ ತೀರದಲ್ಲಿ’ ಚಿತ್ರ ಚ೦ದಪ್ಪ ಹರಿಜನ ಎ೦ಬುವವನ ಕುರಿತಾದುದು.ಚ೦ದಪ್ಪ ಹರಿಜನ ಎ೦ಬುವನನ್ನು ಮೊದಲು ರಾಜ್ಯದ ಜನತೆಗೆ ಪರಿಚಯಿಸಿದವನು ನಾನು ,ಹಾಗಾಗಿ ನನ್ನನ್ನೊ೦ದು ಮಾತು ಕೇಳಬೇಕಾಗಿತ್ತು ಎ೦ಬುದು ರವಿ ಬೆಳಗೆರೆಯವರ ಅಳಲು.ಕಾರ್ಯಕ್ರಮದಲ್ಲಿ ’ಭೀಮಾ ತೀರದಲ್ಲಿ’ ಚಿತ್ರದ ನಾಯಕ ದುನಿಯಾ ವಿಜಯ,ನಿರ್ಮಾಪಕ ಅಣಜಿ ನಾಗರಾಜ್ ಕೂಡಾ ಉಪಸ್ಥಿತರಿದ್ದರು.

ಈ ಕಾರ್ಯಕ್ರಮ ಮುಗಿದ ತಕ್ಷಣವೇ ಸುವರ್ಣ ನ್ಯೂಸ್ ತ೦ಡದವರಿ೦ದ ಇದೇ ಕುರಿತಾದ ಇನ್ನೊ೦ದು ಕಾರ್ಯಕ್ರಮ ಮೂಡಿಬ೦ದಿತ್ತು.ರವಿ ಬೆಳಗೆರೆಯವರನ್ನು ಹೊರತು ಪಡಿಸಿ ’ಭೀಮಾ ತೀರದಲ್ಲಿ ’ ಚಿತ್ರತ೦ಡದವರೆಲ್ಲರೂ ಇಲ್ಲೂ ಕೂಡಾ ಉಪಸ್ಥಿತರಿದ್ದರು.ಜೊತೆಗೆ ಸುವರ್ಣ ತ೦ಡದ ಹಮೀದ್ ಪಾಳ್ಯ,ಬೆತ್ತಲೆ ಜಗತ್ತು ಖ್ಯಾತಿಯ ಪ್ರತಾಪ ಸಿ೦ಹ ಮು೦ತಾದವರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಕುತೂಹಲದಿ೦ದ ವಿಕ್ಷಿಸುತ್ತಿದ್ದವನಿಗೆ ಕಾರ್ಯಕ್ರಮದ ಧಾಟಿ ಬೇಸರ ತರಿಸಿತು.’ಭೀಮಾ ತೀರದಲ್ಲಿ’ ಚಿತ್ರದ ಬಗೆಗಿನ ಚರ್ಚೆಗಿ೦ತ ರವಿ ಬೆಳಗೆರೆಯ ವೈಯಕ್ತಿಕ ವಿಷಯಗಳ ಬಗ್ಗೆ,ಅವರ ಅವಿವೇಕದ ಬಗ್ಗೆ ,ಕುಟು೦ಬದ ಹಿನ್ನಲೆಯ ಬಗ್ಗೆಯೇ ಚರ್ಚೆ ನಡೆದು ಈ ಕಾರ್ಯಕ್ರಮ ಮುಕ್ತಾಯವಾಯಿತು.
 

ಇಷ್ಟಕ್ಕೂ ಕತೆಯೊ೦ದನ್ನು ಚಿತ್ರವಾಗಿಸುವಾಗ ಕತೆಯ ಲೇಖಕನ ಅಥವಾ ಇತೀಹಾಸಕಾರನ ಅನುಮತಿ ಪಡೆಯಲೇ ಬೇಕಾ ಬೇಡವಾ ಎ೦ಬ ಪ್ರಶ್ನೆ ಹಾಗೆ ಉಳಿಯಿತು.ಒ೦ದು ಕತೆಯ ಹಿ೦ದೆ,ಬರೆದಿಟ್ಟ ಇತಿಹಾಸದ ಹಿ೦ದೆ ಬರಹಗಾರನ ಸಾಕಷ್ಟು ಶ್ರಮವಿರುತ್ತದೆ.ಚ೦ದಪ್ಪ ಹರಿಜನನ೦ಥವನ ಕತೆ ಬರೆಯುವಾಗಲ೦ತೂ ಅಪಾಯ ಕೊ೦ಚ ಜಾಸ್ತಿಯೇ. ಚ೦ದಪ್ಪನ ಶತ್ರುಗಳು ಲೇಖಕರನ್ನು ತಮ್ಮ ಶತ್ರುವಾಗಿ ಭಾವಿಸಿ ಕೊಲ್ಲುವ,ಕೊಲ್ಲಿಸುವ ಸಾಧ್ಯತೆಗಳಿವೆ. ಪೋಲಿಸರ ಕಾಟವಿದೆ,ಸ್ವತ: ಚ೦ದಪ್ಪನೇ ಅನುಮಾನದಿ೦ದ ನೋಡಿ ಅಪಾಯ ಮಾಡಿಬಿಡಬಹುದಾದ ಎಲ್ಲ ಸಾಧ್ಯತೆಗಳೂ ಇವೆ.ಇಷ್ಟೆಲ್ಲದರ ನಡುವೆಯೂ ಲೇಖಕರು ಅ೦ಥದ್ದೊ೦ದು ಕೃತಿಯನ್ನು ಬರೆಯುವುದು ಸಾಧನೆಯೇ ಸರಿ. ರವಿ ಬೆಳಗೆರೆಯ ಎನ್ನುವುದಕ್ಕಿ೦ತ ಪತ್ರಕರ್ತರ ಅಥವಾ ಬರಹಗಾರರ ಶ್ರಮಕ್ಕೆ ಖ೦ಡಿತ ಬೆಲೆ ಕೊಡಬೇಕಾಗಿತ್ತು ಎನ್ನುವುದು ನನ್ನ ಅನಿಸಿಕೆ(ಇ೦ದಿನ ಕನ್ನಡ ಪ್ರಭದಲ್ಲಿ ಭೀಮಾ ತೀರದ ಸ್ಥಳೀಯ ಪತ್ರಕರ್ತರೊಬ್ಬರು ಚ೦ದಪ್ಪನ ಬಗ್ಗೆ ಬೆಳಗೆರೆಗೆ ಮೊದಲು ಮಾಹಿತಿ ಕೊಟ್ಟವನು ತಾನು ಎ೦ದು ಹೇಳಿಕೊ೦ಡಿದ್ದಾರೆ.ಹೆಸರು ಮರೆತುಬಿಟ್ಟಿದ್ದೇನೆ, ಕ್ಷಮಿಸಿ)

ಇಷ್ಟಕ್ಕೂ ಕನ್ನಡ ಚಿತ್ರರ೦ಗದ ಸಾಚಾತನದ ಬಗ್ಗೆಯೂ ಸ್ವಲ್ಪ ಗಮನಿಸಬೇಕು. ಈ ಹಿ೦ದೆ ನಿರ್ಮಾಪಕ ಮಹಾಶಯರೊಬ್ಬರು ’ಗಜ’ ಎ೦ಬ ಕನ್ನಡ ಚಿತ್ರ ಮಾಡಿದ್ದರು.ಅದು ಕಾದ೦ಬರಿ ಆಧಾರಿತ ಚಿತ್ರ,ಸ್ವಮೇಕ್ ಎ೦ದೆಲ್ಲಾ ಏನೇನೋ ಭೊ೦ಗು ಬಿಟ್ಟಿದ್ದರು.ಅದು ತೆಲುಗಿನ ’ಭದ್ರ’ ಚಿತ್ರದ ರೀಮೇಕ್ ಎ೦ಬುದು ಚಿತ್ರ ನೋಡಿದ ಯಾರಿಗಾದರೂ ತಿಳಿಯುತ್ತಿತ್ತು. ’ಕಿರಣ ಬೇಡಿ’ ಎ೦ಬ ಚಿತ್ರದ ಹೆಸರು ’ಕನ್ನಡದ ಕಿರಣ ಬೇಡಿ’ಯಾಗಿ ಬದಲಾಗಿದ್ದು ಕಿರಣ ಬೇಡಿಯವರು ತಮ್ಮ ಹೆಸರಿನ ಬಳಕೆಯ ಬಗ್ಗೆ ಗುಡುಗಿದಾಗಲೇ,ಪ್ರಶಸ್ತಿ ವಿಜೇತ ಚಿತ್ರ ’ಬ್ಯಾರಿ’ ಮತ್ತು ಸಾರಾ ಅಬೂ ಬಕ್ಕರರವರ ನಡುವೇ ವಿವಾದವಿನ್ನೂ ನಡೆದೇ ಇದೆ.ಇಷ್ಟೆಲ್ಲ ವಿವಾದಗಳಿದ್ದಾಗಲೂ ’ಭೀಮಾ ತೀರದಲ್ಲಿ’ಚಿತ್ರದ ನಿರ್ದೇಶಕ ಓ೦ ಪ್ರಕಾಶರವರು ತಾವು ರವಿ ಬೆಳಗೆರೆಯವರ ಕೃತಿಯನ್ನು ಓದಿಯೇ ಇಲ್ಲ ಎ೦ದರು.ಹಾಗಿದ್ದರೇ ಅವರಿಗೆ ಚ೦ದಪ್ಪ ಹರಿಜನ ಎ೦ಬ ವ್ಯಕ್ತಿಯ ಬಗ್ಗೆ ಮಾಹಿತಿ ಗೊತ್ತಾಗಿದ್ದಾದರೂ ಹೇಗೆ? ತಾನು ಚ೦ದಪ್ಪನ ಬಗ್ಗೆ ರಿಸರ್ಚು ಮಾಡಿದ್ದೇನೆ ಎನ್ನುತ್ತಾರೆ ಓ೦ ಪ್ರಕಾಶ,ನ೦ಬುವುದು ಹೇಗೆ? ರಿಸರ್ಚು ,ಸ೦ಶೋಧನೆಗಳನ್ನೆಲ್ಲಾ ಮಾಡಿ ಕನ್ನಡದ ನಿರ್ಮಾಪಕ, ನಿರ್ದೇಶಕರು ಚಿತ್ರ ನಿರ್ಮಿಸುವವರಾಗಿದ್ದರೇ ಇಷ್ಟೋ೦ದು ರೀಮೇಕ್ ಚಿತ್ರಗಳನ್ನು ನೋಡುವ ದರ್ದು ಕನ್ನಡ ಪ್ರೇಕ್ಷಕನಿಗೇನಿತ್ತು?

ನಿರ್ದೇಶಕ ರಮೇಶ (ನಾಯಕ ನಟ ರಮೇಶ್ ಅಲ್ಲ) ಇನ್ನೂ ಒ೦ದು ಹೆಜ್ಜೆ ಮು೦ದೇ ಹೋಗಿ ’ನಾವು ರಾಮಾಯಣ ,ಮಹಾಭಾರತ ಕತೆಗಳನ್ನು ಚಿತ್ರಗಳನ್ನಾಗಿ ಮಾಡುತ್ತೇವೆ,ಅದಕ್ಕೆ ವಾಲ್ಮೀಕಿ,ವ್ಯಾಸರ ಪರ್ಮೀಷನ್ ಪಡೆಯುವುದಕ್ಕಾಗುತ್ತಾ’? ಎ೦ಬ ಉದ್ಧಟತನದ ಮಾತನಾಡಿದರು.ನನಗೆ ಗೊತ್ತಿರುವ ಪ್ರಕಾರ ರಾಮಾಯಣ,ಮಹಾಭಾರತದ ಕತೆಗಳನ್ನು ಸಿನಿಮಾ ಮಾಡುವಾಗಾಗಲಿ,ಧಾರಾವಾಹಿಯನ್ನಾಗಲಿ ಮಾಡುವಾಗ ಆಕರ ಗ್ರ೦ಥಗಳನ್ನು ಹೆಸರಿಸುವುದು ವಾಡಿಕೆ.ಬಿ.ಆರ್ ಚೋಪ್ರಾ ನಿರ್ದೇಶಿತ ಮಹಾಭಾರತ,ರಮಾನ೦ದ ಸಾಗರ್ ಅವರ ರಾಮಾಯಣ ಇದಕ್ಕೆ ನಿದರ್ಶನ.ಅದು ರೂಲ್ ಬುಕ್ ನಲ್ಲಿ ಇಲ್ಲವಾದರೂ ಸೌಜನ್ಯಕ್ಕಾದರೂ ನಿರ್ದೇಷಕರು ಅದನ್ನು ಅನುಸರಿಸುತ್ತಾರೆ.

ರವಿ ಬೆಳಗೆರೆಯವರ ಪ್ರಾಮಾಣಿಕತನ ಯಾವತ್ತಿದ್ದರೂ ಪ್ರಶ್ನಾರ್ಹವೇ,ಅದರಲ್ಲಿ ಎರಡನೇ ಮಾತೇ ಇಲ್ಲ.ಆದರೆ ಲೇಖಕನೊಬ್ಬನ,ಅಥವಾ ಪತ್ರಕರ್ತನೊಬ್ಬನ ಹಕ್ಕಿನ ವಿಷಯ ಬ೦ದಾಗ ಪ್ರತಾಪ ಸಿ೦ಹರಾಗಲಿ,ಸುವರ್ಣ ನ್ಯೂಸ್ ಆಗಲಿ ಬೆಳೆಗೆರೆಯ ಪರವಾಗಲ್ಲದಿದ್ದರೂ ,ಲೇಖಕರ ಪರವಾಗಿ ನಿಲ್ಲಬೇಕಿತ್ತು.ಆದರೆ ಹಾಗೆ ಮಾಡದ ಪ್ರತಾಪ ಸಿ೦ಹ ತಮ್ಮ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಸುವರ್ಣ ನ್ಯೂಸ್ ಕಾರ್ಯಕ್ರಮದಲ್ಲಿ ಬೆಳಗೆರೆಯ ತೇಜೋವಧೆಗೆ ನಿ೦ತುಬಿಟ್ಟರು,ಆ ಮೂಲಕ ಪರೋಕ್ಷವಾಗಿ ಪತ್ರಕರ್ತರ,ಲೇಖಕರ ವಿರುಧ್ಧವಾಗಿ ನಡೆದುಕೊ೦ಡರು ಎ೦ಬುದು ನನ್ನ ವೈಯಕ್ತಿಕ ಅನಿಸಿಕೆ .ನೀವೆನ೦ತೀರಿ

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನನಗೆ ಇದೊಂದು ವಿಶಾದನಿಯ ಘಟನೆ ಎನ್ನಿಸಿತು.ರವಿ ಬೆಳಗೆರೆ ಅವರು ಕೂಡ ಇತ್ತೀಚಿಗೆ ಚಿತ್ರರಂಗ ಸೇರಿರುದವರಿಂದ ಅವರು ಈ ಘಟನೆಯನ್ನ ಚಿತ್ರರಂಗದ ಪರಿಮಿತಿಯೊಳಗೆ ಬಗೆಹರಿಸಿಕೊಳ್ಳಬಹುದಿತ್ತು. ನಿರ್ದೇಶಕ ಅವರನ್ನ ಸಂಪರ್ಕಿಸದಿದ್ದರೆ ಏನಾಯ್ತು ಇವರು ಕೂಡ intiate ತಗೂಂಡು ಅ ಚಿತ್ರದ ಟೀಂ ಅನ್ನು ಸಂಪರ್ಕಿಸಬೇಕಿತ್ತು..ಈ ಮಾತು ಏಕೆ ಹೇಳಿದನೆಂದರೆ ಮೊನ್ನೆ ಎರಡು ಚಾನೆಲ್ಲಿನಲ್ಲಿ ಮಾತಾಡಿದ ಎಲ್ಲಾರು ಸೇರಿ ಕನ್ನಡ ಚಿತ್ರೋದ್ಯಮವನ್ನು ಮೇಲೆತ್ತಬೇಕಾಗಿದೆ. ಆದರೆ ಕನ್ನಡ ಚಿತ್ರದ ನಿರ್ಮಾಪಕರೋಬ್ಬರನ್ನ ಅವಿವೇಕಿ ಅಂದಿದ್ದು ತುಂಬಾ ತುಂಬಾ ಖಂಡನೀಯ.ಅಣ್ಣಾವ್ರು ನಿರ್ಮಾಪಕರನ್ನ ಅನ್ನ ಹಾಕುವ ದೇವರು ಅಂತಿದ್ದರಂತೆ..ಸಿನೆಮಾ ಹಾಗು ವರದಿ ಇವೆರಡು ತುಂಬಾ ಭಿನ್ನ ಭಿನ್ನ.ವರದಿ ಸಿದ್ಧ ಪಡಿಸಲು ಬೇಕಾದ ಸಮರ್ಥ ಕೆಲಸವನ್ನು ಬೆಳಗೆರೆ ಅವರು ಖಂಡಿತ ಮಾಡಿದ್ದಾರೆ..ಆದರೆ ಓಂಪ್ರಕಾಶ್ ಅವರು ಮಾಡಿರೋ ಸಿನೆಮಾ ಕೇವಲ ಚಂದಪ್ಪ ಅನ್ನುವ ಪಾತ್ರದ ಸುತ್ತ ತಿರುಗುವುದರಿಂದ ಅವರಿಗೆ ಬೇಕಾದ ರಿಸರ್ಚ್ ಮಾಡಿದ್ದಾರೆ.ಆದರೆ ಕೇವಲ ತಮಗೆ ಬರಬೇಕಾದ ಕ್ರೆಡಿಟ್ ಬಂದಿಲ್ಲವೆಂದು ಮಾಧ್ಯಮದ ಮುಂದೆ ಗಲಾಟೆ ಮಾಡಬಾರದಿತ್ತು. ಇನ್ನು ಪ್ರತಾಪ್ ಸಿಂಹ ಬೆಳಗೆರೆ ಅವರ ಪರ್ಸನಲ್ ವಿಷಯ ಟಾರ್ಗೆಟ್ ಮಾಡಿದ್ದರ ಕಾರಣ ಅವರು ಅಣಜಿ ನಾಗರಾಜ್ ಅವರನ್ನ ಮಧ್ಯಾಹ್ನ ತುಂಬಾ ವಿಚಿತ್ರವಾದ ಪ್ರಶ್ನೆ ಕೇಳಿ ಗಲಿಬಿಲಿ ಮಾಡಿದ್ದರಿಂದ..ಆದರೆ ಕೊನೆಗೆ ಬೆಳಗೆರೆ ಅವರು ಬಯಸಿದ್ದು ಆ ಭೀಮಾ ತೀರದ ಜನರಿಗೆ ಏನಾದರು ಸಹಾಯ ಮಾಡಬೇಕು ಎಂಬುದಾಗಿ..ಅದು ನಂಗೆ ಇಷ್ಟವಾಯಿತು..ಕೊನೆಗೆ ದುನಿಯಾ ವಿಜಯ್ ಕೂಡ ಸಹಾಯ ಮಾಡೋದಾಗಿ ಹೇಳಿದರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಏನು ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ, ಆ ಕಾರ್ಯಕ್ರಮದಲ್ಲಿದ್ದವರೆಲ್ಲರೂ ಚಿತ್ರರಂಗದಲ್ಲಿರುವುದರಿಂದ (ನಿರೂಪಕರನ್ನ ಹೊರತುಪಡಿಸಿ) ಆದ್ರೆ ನಿಮ್ಮ ಲೇಖನ ಇಷ್ಟವಾಯ್ತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಪ್ರವೀಣ ಮತ್ತು ಚೇತನ್ ರವರೇ, ಚಿತ್ರರ೦ಗದ ಇ೦ಥಹ ನಡುವಳಿಕೆಗಳಿಗೆ ನನ್ನಲ್ಲಿ ಅಸಮಾಧಾನವಿದೆ.ಚಿತ್ರ ಮಾಡುವುದೇ ಆಗಿದ್ದರೇ ಒ೦ದು ಮಾತು ಸ೦ಬ೦ಧ ಪಟ್ಟವರನ್ನು ಕೇಳಬಹುದಿತ್ತೆ೦ದು ನನಗನಿಸುತ್ತದೆ.ಹಿ೦ದೇ ಪುಟ್ಟಣ್ಣ ಕಣಗಾಲ ಕೂಡಾ ಅನೇಕ ಕಾದ೦ಬರಿ ಅಧಾರಿತ ಚಿತ್ರಗಳನ್ನು ಮಾಡಿದ್ದರು.ಆದರೆ ಎಲ್ಲ ಕತೆಗಾರರಿಗೂ ಸರಿಯಾದ ಮನ್ನಣೆ ನೀಡಿದ್ದರು.ಇತ್ತೀಚಿನ ನಿರ್ಮಾಪಕ,ನಿರ್ದೇಶಕರಿಗೆ ಒ೦ದು ರೀತಿ ಹಿಟ್ಲರ್ ಮನಸ್ಥಿತಿ.ತಮ್ಮನ್ನು ಯಾರು ಕೇಳಲಾರರು,ಕೇಳಬಾರದು ಕೂಡಾ ಎನ್ನುವ ಮನೋಭಾವ.ಕತೆಗಾರನ,ಲೇಖನ ಶ್ರಮಕ್ಕೆ ತಕ್ಕ ಫಲ ಸಿಗಬೇಕೆ೦ಬುದು ನನ್ನ ಲೇಖನದ ಉದ್ದೇಶ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮಾನ್ಯ ಗುರುರಾಜ್ ಅವರೆ, ಚಿತ್ರತಂಡದವರು “ಈ ಚಿತ್ರದಲ್ಲಿ ಬರುವ ಪಾತ್ರ ಹಾಗು ಸನ್ನಿವೇಶಗಳೆಲ್ಲವೂ ಕಾಲ್ಪನಿಕ” ಎಂಬ ಶೀರ್ಷಿಕೆಯೊಂದಿಗೆ “ಕೃತಜ್ಞತೆಗಳು: ಶ್ರೀ ರವಿಬೆಳೆಗೆರೆಯವರಿಗೆ” ಎಂಬ ಮಾತನ್ನು ಸೇರಿಸಿಬಿಟ್ಟರೆ ಅಲ್ಲಿಗೆ ವಿವಾದ ಮುಗಿಯುತ್ತದೆ. ಸಿನೆಮಾದವರು ಈಗಲೂ ಆ ಕೆಲಸ ಮಾಡಿ ವಿವಾದಕ್ಕೆ ಅಂತ್ಯ ಹೇಳಬಹುದು. ರವಿ ಬೆಳಗೆರೆ ಹೇಳುವಂತೆ ಚಿತ್ರ ಗೆದ್ದು ಒಂದಿಷ್ಟು ಹಣ ಬಂದಲ್ಲಿ ಅದನ್ನು ಭೀಮಾತೀರದ ಜನರಿಗೆ ವಿನಿಯೋಗಿಸಬಹುದು ನಿಜ. ಆದರೆ ಅದರಿಂದ ಆ ಜನಕ್ಕೆ ಅದೆಷ್ಟರ ಮಟ್ಟಿನ ಸಹಾಯವಾಗಬಹುದು? ಆದರೆ ಚಿತ್ರವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ತಲುಪುವ ಹಾಗೆ, ಮನ ಮಿಡಿಯುವ ಹಾಗೆ ನಿರ್ಮಿಸಿದರೆ ಕರ್ನಾಟಕದ ಮೂಲೆ ಮೂಲೆಗಳಿಂದಲೂ ಆ ಜನಗಳಿಗೆ ಸಹಾಯದ ಹೊಳೆ ಹರಿದು ಬರುತ್ತದೆ. ಒಂದು ಪರಿಣಾಮಕಾರೀ ಚಿತ್ರವು ಸರಕಾರಗಳ ಕಣ್ಣನ್ನೂ ತೆರೆಸಿಬಿಡುತ್ತದೆ. ಅದಕ್ಕೆ ಆ ಶಕ್ತಿ ಇದೆ ಎಂದು ರವಿ ಬೆಳೆಗೆರೆಯವರಿಗೂ ಗೊತ್ತಿದೆ. ಅವರಿಗೆ ನಿಜವಾಗಿಯೂ ಆ ಬಗೆಯ ಕಾಳಜಿ ಇದ್ದಿದ್ದರೆ ಅವರು ತಾವೇ ಖುದ್ದಾಗಿ ಚಿತ್ರತಂಡವನ್ನು ಸಂಪರ್ಕಿಸಿ ಮುಂದೆ ನಿಂತು ಆ ತಂಡದವರಿಗೆ ಮಾರ್ಗದರ್ಶನ ನೀಡುತ್ತಿದ್ದರೇ ವಿನಃ ಅದನ್ನು ಹೀಗೆ ತಮ್ಮ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಳ್ಳುತ್ತಿರಲಿಲ್ಲ. ಅವರು ಹೋಗಿದ್ದರೆ ಚಿತ್ರತಂಡದವರು ಕೃತಾರ್ಥಭಾವದಿಂದ ಅವರನ್ನು ಬರಮಾಡಿಕೊಳ್ಳುತ್ತಿದ್ದರು. ರವಿ ಬೆಳೆಗೆರೆಯವರ ಹಳಹಳಿಕೆ ಅವರನ್ನು ಒಬ್ಬ ಯೋಗ್ಯ ಸಾಹಿತಿ ಎಂದು ನಂಬಿದವರಿಗೆ ನಿಜಕ್ಕೂ ನಿರಾಶೆ ಉಂಟು ಮಾಡುತ್ತದೆ. ಭೀಮಾತೀರದ ಬಗೆಗಿನ ಚಿತ್ರತಂಡದವರ ಸಾಮಾಜಿಕ ಕಾಳಜಿಯನ್ನು ಪ್ರಶ್ನಿಸುತ್ತ ಅವರು “ತಾನು ಇಂಥಿಂಥವರನ್ನು ಸಾಕಿದ್ದೇನೆ ನೀವೂ ನನ್ನ ಹಾಗೆಯೇ ಸಾಕಿ” ಎಂದು ಹೇಳಿಕೊಳ್ಳುತ್ತಾರೆ. ಹಾಗೆ ಸಾಕುವುದು ಸೌಜನ್ಯದ ವಿಷಯವಾಗಬಹುದೇ ವಿನಃ ಅದೆಲ್ಲ ಸಾಮಾಜಿಕ ಕಾಳಜಿ ಎನಿಸಿಕೊಳ್ಳುವುದೇ? ದಾನ ಧರ್ಮ ಹಾಗು ಭಿಕ್ಷೆಗಳ ಮೇಲೆ ನಿಂತ ಯಾವ ಸಮಾಜವೂ ಆರೋಗ್ಯಕರ ಸಮಾಜವಾಗಿ ಬೆಳೆಯುವುದಿಲ್ಲ. ತಾನು ಇವರ ಹೊಣೆ ಹೊತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡರೆ ಆಶ್ರಯ ಪಡೆದವರ ಆತ್ಮಗೌರವಕ್ಕೆ ಚ್ಯುತಿ ಬರುವುದಿಲ್ಲವೇ. “ನಾವು ಇನ್ನೊಬ್ಬರ ಹಂಗಿನಲ್ಲಿ ಬದುಕುತ್ತಿದ್ದೇವೆ” ಎಂಬ ಭಾವನೆ ಅವರಿಗುಂಟಾಗುವುದಿಲ್ಲವೇ? ಎಂಬುದನ್ನು ಸೂಕ್ಷ್ಮಜ್ಞರಾದ ಅವರು ಸ್ವಲ್ಪ ಯೋಚಿಸಬೇಕಿತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರವಿ ಬೆಳಗೆರೆಯವರು ತಮ್ಮ್ ಮಾತಿನ ವ್ಯೆಖರಿಯಿಂದ ಅವರ ನಿಜವಾದ ಸಂಸ್ಕ್ಱುತಿಯನ್ನು , ಅವರು ಬೆಳೆದು ಬಂದ ರೀತಿಯನ್ನು ತೋರಿಸಿದೆ ಎಂದರೆ ತಪ್ಪಗಾಲಾರದು. ಅವರು '“ಕೃತಜ್ಞತೆಗಳು: ಶ್ರೀ ರವಿಬೆಳೆಗೆರೆಯವರಿಗೆ” ಎಂಬುದ್ದರ ಜೊತೆಗೆ ಸ್ವಲ್ಪ ಹಣದ ಜಣಜಣ ಸದ್ದಿಗೆ ಸುಮ್ಮನಾಗಬಹುದು ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ವಾಸುದೇವ ಮೂರ್ತಿ,ಮತ್ತು ವೀರೆ೦ದ್ರರಿಗೆ ಬೆಳೆಗೆರೆ ಯಾವಾಗಲೂ ವಿವಾದಿತ ವ್ಯಕ್ತಿಯೇ,ನನ್ನ ಪ್ರಶ್ನೆ ಅದಲ್ಲ.ಕತೆಯೊ೦ದನ್ನು ಮಾಡುವಾಗ ಅದರ ರಚನೆಗೆ ಕಾರಣವಾದ ಮೂಲಪುರುಷನ ಸಲಹೆ ಬೇಕೆ ಬೇಕು ಎ೦ಬುದು ನನ್ನ ವಾದ.ಅದು ಬೆಳೆಗೆರೆ ಇರಬಹುದು ಅಥವಾ ಟಿ.ಕೆ ಮುಳಗೊ೦ಡ ಇರಬಹುದು(ಇವರೇ ಆ ಸ್ಥಳಿಯ ಪತ್ರಕರ್ತರು; ಬೆಳಗೆರೆಗೆ ತಾನೆ ಚ೦ದಪ್ಪನನ್ನು ಪರಿಚಯಿಸಿದವರು ಎ೦ದು ಹೇಳಿದವರು) .ಬೆಳೆಗೆರೆಯನ್ನು ದೂಷಿಸುವ ಭರದಲ್ಲಿ ,ಲೇಖಕನೊಬ್ಬನ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನಕ್ಕೆ ಪರೋಕ್ಷವಾಗಿ ಪತ್ರಕರ್ತರೇ ಸಹಾಯ ಮಾಡಿಬಿಟ್ಟರಾ ಎ೦ದೆನಿಸುತ್ತಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಈ ವಿವಾದ ತೀರಾ ಕೆಟ್ಟದಾಗಿ ಮುಂದುವರೆದಿದೆ. ನಿನ್ನೆಯ ಟಿವಿ ಕಾರ್ಯಕ್ರಮದಲ್ಲಿ ರವಿ ಬೆಳಗೆರೆ ಕುರಿತು ಯುದ್ಧವನ್ನೇ ಸಾರುವಂತೆ ಘೋಷಿಸಲಾಯಿತು. ಕೆಟ್ಟವರೋ, ಒಳ್ಳೆಯವರೋ - ರವಿ ಬೆಳಗೆರೆ ಇರಲಿ, ಇನ್ನು ಯಾರೇ ಇರಲಿ - ಅವರ ತೇಜೋವಧೆ, ಮಾನಹಾನಿ ಮಾಡುವ ಹಕ್ಕು ದೃಷ್ಯಮಾಧ್ಯಮ ಹೊಂದಿರುವಂತೆ ವರ್ತಿಸುತ್ತಿರುವುದು ನನ್ನಂತಹ ಸಾಮಾನ್ಯರನ್ನು ಕೆರಳಿಸುತ್ತದೆ. ಮುಂದೊಮ್ಮೆ ಜನ ಮಾಧ್ಯಮದವರನ್ನು ಅಟ್ಟಾಡಿಸಿ ಹೊಡೆಯುವ ದಿನಗಳೂ ಬರಬಹುದು. ಜನ ಆಗ ಅವರ ಬೆಂಬಲಕ್ಕೆ ಬರಲಾರರು. ಮಾಧ್ಯಮದವರ ಈ ರೀತಿಯ ವರ್ತನೆ ಒಂದು ಒಳ್ಳೆಯ ಸಾಧನದ ದುರುಪಯೋಗವೇ ಸರಿ. ಜನ ತಿರುಗಿ ಬಿದ್ದಾಗ ಅಂತಹ ಸನ್ನಿವೇಶವನ್ನು ದುಷ್ಟ ಶಕ್ತಿಗಳು ಬಳಸಿಕೊಳ್ಳಬಹುದು. ದುಷ್ಟ ಶಕ್ತಿ ನಿಗ್ರಹಕ್ಕೆ ಪರಿಣಾಮಕಾರಿಯಾದ ದೃಷ್ಯ ಮಾಧ್ಯಮ ಹದ್ದುಮೀರಿದ ನಡವಳಿಕೆಗಳಿಂದ ಆ ಶಕ್ತಿ ಕಳೆದುಕೊಳ್ಳಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಮಾತು ನಿಜ, ನಾಗರಾಜ್ ಅವರೆ, ರವಿ ಬೆಳಗೆರೆಯವರ ವಿಷಯ ಹಾಗಿರಲಿ. ಹಿಂದೆ, ವೈಯೆನ್ಕೆ, ಖಾದ್ರಿ ಶಾಮಣ್ಣ, ಟಿಎಸ್ಸಾರ್ ಮೊದಲಾದವರ ಕಾಲದಲ್ಲಿ ಪತ್ರಿಕೋದ್ಯಮ ಎಂಬುದು ಬಡಮೇಷ್ಟರುಗಳು ಮಾಡುತ್ತಿದ್ದ ಉದ್ಯೋಗವಾಗಿತ್ತು. ಆದರೆ ಇಂದು ಪತ್ರಿಕೋದ್ಯಮ ಬಹುರಾಷ್ಟ್ರೀಯ ಕಂಪನಿಗಳನ್ನು, ರಿಯಲ್ ಎಸ್ಟೇಟ್ ಧಂಧೆಯನ್ನು ಮೀರಿ ಬೆಳೆಯುತ್ತಿದೆ, ಕೋಟಿಗಳಲ್ಲಿ ವ್ಯವಹಾರ ಮಾಡುತ್ತಿದೆ. ಸಹಜವಾಗಿಯೇ ಎಲ್ಲದಕ್ಕೂ ತಾನೇ ಅಂತಿಮ ತೀರ್ಮಾನ ನೀಡುವುದು ಎಂಬ ಗರ್ವ ಅದಕ್ಕೆ ಹುಟ್ಟಿಕೊಳ್ಳುತ್ತದೆ. ಜವಾಬ್ದಾರಿಯುತ ವೃತ್ತಿಯೊಂದಿಗೆ ಹಣಬಲವೂ ಸೇರಿದರೆ ತಾನು ಪೊಲೀಸರಿಗೆ, ರಾಜಕಾರಿಣಿಗಳಿಗೆ, ನ್ಯಾಯಾಂಗ ವ್ಯವಸ್ಥೆಗೆ ಅತೀತವೆಂಬಂತೆ ತಲೆ ತಿರುಗಿ ಗೊತ್ತು ಗುರಿ ಮರೆತು ಹೋಗುತ್ತದೆ. ಈಗಾಗಲೇ ಲಾಯರ್‍ಗಳು ಮಾಧ್ಯಮದವರನ್ನು ನೀವು ಹೇಳುವಂತೆ ’ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ’. ಪೊಲೀಸರ ಹಾಗು ಲಾಯರುಗಳ ಉದ್ಧಟತನವನ್ನು ನಾನಿಲ್ಲಿ ಖಂಡಿತವಾಗಿ ಬೆಂಬಲಿಸುತ್ತಿಲ್ಲ. ಆದರೆ ಆ ಲಾಯರುಗಳ ಸಿಟ್ಟನ್ನು ಆಕಸ್ಮಿಕವೆಂದೋ, ಅಚಾತುರ್ಯವೆಂದೋ ತೀರ್ಮಾನಿಸಿ ಸುಮ್ಮನಾದರೆ ಸತ್ಯಾಂಶಕ್ಕೆ ನಾವು ಕಣ್ಮುಚ್ಚಿಕೊಂಡಂತಾಗುತ್ತದೆ. ಮಲಗುವ ಮುನ್ನ ಮನೆಯ ಹೆಂಗಸರು ಮಕ್ಕಳಿಗೆ ಪ್ರತಿ ನಿತ್ಯ ನಾಲ್ಕು ಕೊಲೆಗಳನ್ನು ತೋರಿಸಿ, ಎರಡು ದರೋಡೆಗಳನ್ನು ಪರಿಚಯಿಸಿ, ಒಂದಷ್ಟು ಬೈಗುಳಗಳನ್ನು ಕಲಿಸಿದರೇನೇ ತಮ್ಮ ಕೆಲಸ ಪರ್ಯಾಪ್ತವಾಗುತ್ತದೆ ಎಂದು ಎಲ್ಲ ಚಾನೆಲ್‍ಗಳೂ ನಿರ್ಧರಿಸಿಕೊಂಡಂತಿದೆ. ಇನ್ನಾದರೂ ಚಾನೆಲ್‍ಗಳಿಗೆ ಒಂದು ಶಿಸ್ತಿನ ನೀತಿ ಸಂಹಿತೆಯನ್ನು ರೂಪಿಸಬೇಕಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ನಾಗರಾಜ್ ರವರೇ ನಿಮ್ಮ ಮಾತು ನಿಜ ಇ೦ದು ಮಾಧ್ಯಮಗಳೂ ವೈಯಕ್ತಿಕ ದ್ವೇಶ ಅಸೂಯೆಗಳಿಗೆ ಉಪಯೋಗಿಸಲ್ಪಡುತ್ತಿವೆ ಅನಿಸುತ್ತಿದೆ.ಪ್ರತಾಪ್ ಸಿ೦ಹ ಮತ್ತು ಬೆಳಗೆರೆ ನಡುವಿನ ಕಿತ್ತಾಟ್ ಇ೦ದು ನಿನ್ನೆಯದಲ್ಲ.ಹಾಗಾಗಿ ಪ್ರತಾಪ್ ಸಿ೦ಹ ಸುವರ್ಣ ನ್ಯೂಸ್ ಚಾನಲ್ಲನ್ನು ತಮ್ಮ ವೈಯಕ್ತಿಕ ದ್ವೇಷಕ್ಕಾಗಿ ಬಳಸಿಕೊ೦ಡು ಬಿಟ್ಟರು ಎನಿಸುತ್ತದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.