ಭಾಷೆ

ಸಂಬಂಧಗಳು! ಸಂಬಂಧಗಳು!

ಈಚೆಗೆ ಏನೋ ಯೋಚಿಸುತ್ತಾಗ ಕನ್ನಡದಲ್ಲಿ ಹತ್ತಿರದ ಸಂಬಂಧಗಳನ್ನು ತೋರಿಸುವ ಪದಗಳನ್ನು ನೋಡುತ್ತಿದ್ದಾಗ ಹೊಳೆದಿದ್ದಿದು:
 
ಕನ್ನಡದಲ್ಲಿ ಗಂಡು ಸಂಬಂಧಗಳಿಗಿರುವ ಪದಗಳನ್ನು ನೋಡಿ:- ಅಪ್ಪ, ಅಣ್ಣ, ತಮ್ಮ, ಮೈದುನ, ಮಾವ, ಚಿಕ್ಕಪ್ಪ, ಗಂಡ, ಮಗ, ಅಜ್ಜ - ಇವೆಲ್ಲವೂ ’ಅ’ಕಾರದಲ್ಲಿ ಕೊನೆಗೊಳ್ಳುತ್ತವೆ.ಇನ್ನು ಹೆಣ್ಣು ಸಂಬಂಧಿಗಳಿಗೆ ತಂಗಿ, ನಾದಿನಿ, ಓರಗಿತ್ತಿ , ಹೆಂಡತಿ, ನೆಗೆಣ್ಣಿ, ಚಿಕ್ಕಿ (ಚಿಕ್ಕಮ್ಮನಿಗೆ) - ಇವೆಲ್ಲವೂ ಇಕಾರದಲ್ಲಿ ಮುಗಿಯುತ್ತವೆ. ಎಲ್ಲವೂ ಹೀಗೇ ಇದ್ದರೆ ಎಷ್ಟು ಸೊಗಸಲ್ಲವೇ ? ಕನ್ನಡವನ್ನು ಕಲಿಯುವವರಿಗೆ, ಕನ್ನಡ ಒಂದೇ ಏಕೆ, ಯಾವ ಭಾಷೆಯನ್ನಾದರೂ ಕಲಿಯುವವರಿಗೆ ಇಂತಹ ಸರಳವಾದ ಕಟ್ಟುಪಾಡುಗಳು ಇದ್ದರೆ ಎಷ್ಟು ಸಲೀಸು ಅಂತ ಅನ್ನಿಸೋದೇನೋ ನಿಜ. 
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ

    ಇನ್ಫೋಸಿಸ್‍ನ ನಾರಾಯಣ ಮೂರ್ತಿಯವರು ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ನಿಯುಕ್ತರಾದಾಗ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಇದಕ್ಕೆ ಆಕ್ಷೇಪಿಸಿ, "ಕರ್ನಾಟಕದಲ್ಲಿ ಪ್ರಾಥಮಿಕ ಹಂತದಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ಜಾರಿಗೆ ತರಬೇಕೆನ್ನುವ ನಾರಾಯಣ ಮೂರ್ತಿಯವರು ವಿಶ್ವಮಟ್ಟದ ಕನ್ನಡ ಸಮ್ಮೇಳನವನ್ನು ಉದ್ಘಾಟಿಸುವುದು ಯಾವ ನ್ಯಾಯ? ಇವರನ್ನು ಯಾವುದಾದರೂ ವಾಣಿಜ್ಯ ಮೇಳಗಳ ಉದ್ಘಾಟನೆಗೆ ಸರ್ಕಾರ ಬೇಕಾದರೆ ಬಳಸಿಕೊಳ್ಳಲಿ" ಎಂದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಭಾಷೆ