ಭಾವನೆಗಳ ಬಯಲಿನಲಿ

3.75
ಕನಸಿನ ಕಾಗದದಲಿ ಅಕ್ಷರಗಳ ಪಯಣ ನನ್ನ ಮನದಲಿ ನಿನ್ನ ನೆನಪುಗಳ ರಿಂಗಣ ನೆನಪಿನ ಪುಟದಲಿ ಪದಗಳ ಜಾತ್ರೆ ನನ್ನ ಪುಟ್ಟ ಹೃದಯದಲಿ ನಿನ್ನದೇ ಯಾತ್ರೆ ಭಾವನೆಗಳ ಬಯಲಿನಲಿ ಅಕ್ಷರಗಳ ಸಂತೆ ನನ್ನ ಒಡಲಿನಲಿ ನೀನಾಡಿಹೋದ ಸುಮಧುರ ಕ್ಷಣಗಳ ಕಂತೆ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೇತನ ಕೋಡುವಳ್ಳಿ ಯವರಿಗೆ ವಂದನೆಗಳು ಕವನ ಸರಳ ಹಾಗೂ ಸುಂದರವಾಗಿ ಮೂಡಿ ಬಂದಿದೆ. ....... ಭಾವನೆಗಳ ಬಯಲಿನಲಿ ಅಕ್ಷರಗಳ ಸಂತೆ....... ಎಂತಹ ಸುಂದರ ರೂಪಕ ಸರಳ ಶಬ್ದಗಳಲ್ಲಿ ಭಾವನೆಗಳ ಮಹಾಪೂರ. ಕವನ ಸಾರ್ಥಕ್ಯ ವಾಗುವುದು ಶಬ್ದಗಳ ಸಮರ್ಪಕ ಬಳಕೆಯಿಂದ , ಇಲ್ಲಿ ಅದು ಸಾಧ್ಯವಾಗಿದೆ.ಧನ್ಯವಾದಗಳು.

ಭಾವನೆಗಳ ಬಯಲಿನಲಿ ನಿಮ್ಮ ಕವನದ ಜಯವಾಗಿದೆ ಭಾವನೆಗಳು ಖುಷಿಯಿಂದ ನಗುತ ನಲಿದಾಡಿವೆ.. ಸುಂದರ ಕವನ ನಿಮ್ಮದು.. ತುಂಬ ಚೆನ್ನಾಗಿದೆ ಭಾವನೆಗಳ ಹಾಗೆ.

ಚೇತನ್ ಕವನ ಚೆನ್ನಾಗಿದೆ... ನೀವ್ ಬರಹ್ಗಳಸ್ತೆ ಸೊಗಸಾಗಿ ಕವನವನ್ನು ಬರೆಯಬಲ್ಲಿರಿ... ಪುಟ್ಟ ಕವನವೇ ಆದರೂ ಪದಗಳ ಬಳಕೆ ಒಂಥರಾ rhyming ನೆನಪಿಸುವಂತಿದೆ.. ಪಯಣ- ರಿಂಗಣ ಪುಟದಲಿ ಜಾತ್ರೆ ಹೃದಯದಲಿ ಯಾತ್ರೆ ಬಯಲಿನಲಿ ಸಂತೆ ಒಡಲಿನಲಿ ಕಂತೆ >>> ಜೊತೆಗೆ ಸೇರ್ಸಿದ ಆ ಮರಗಳ ಮಧ್ಯದ ಚಂದಿರನ ಚಿತ್ರವೂ ಸೊಗಸಾಗಿದೆ........