ಮಾಯಜಾಲ

ಕವಿ

ಕವಿ

ಓರ್ವ ಕಾವ್ಯ ಬರೆದರೆ ಕವಿಯಾದಂತೆ
ಈ ಲೋಕ ಕವಿಗಳದೆ ಸಂತೆ
ಕವಿಯ ಉದ್ಧಾರದಿಂದ ಕನ್ನಡದ ಉದಯವಾದಂತೆ
ಕನ್ನಡದ ಉದಯದಿಂದ ತಾಯಿಗೆ ಸಂತಸವಂತೆ…

ಜಗವೇ ನೀನು , ಮಗುವೇ ನೀನು
ಕನ್ನಡಕ್ಕೇನಾದರೂ ಮಾಡು ನೀನು
ಸುಮ್ಮನೆ ಕುಳಿತಿದ್ದರೆ ಪ್ರಯೋಜನವೇನು
ಬರಿ ಕಾವ್ಯ ಸವಿ ಹಾಲು ಜೇನು…

ಕವಿಯೇ ಕಾವ್ಯ , ಕಾವ್ಯವೇ ಸಿರಿ
ಇವುಗಳೇ ತಾಯಿ ನಿನ್ನ ಸಿರಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಗಟೊಳಗಿನ ನಿಘಂಟು

ಒಗಟೊಳಗಿನ ನಿಘಂಟು

ನಿಲ್ಲದ ಮಂಗ ಇಂಗು ತಿಂದನಂತ
ನಿಲ್ಲದ ಮಂಗ ಇಂಗು ತಿಂದನಂತ
ಇಂಗುತಿಂದ ಮ್ಯಾಲೆ ತಿರಾರಗೇಡಿಯಂತ
ಮಾತು ಬೆಳ್ಳಿಯಂತ ಮೌನ ಚಿನ್ನವಂತ
ಗಾದಿ ಇದ್ದಷ್ಟು ಕಾಲು ಸಾಕಂತ

ಕೈ ಕೆಸರಾದರೆ ಬಾಯಿ ಮೊಸರಂತ
ಹಣ ಮುಂದಿಟ್ಟರೆ ಹೆಣ ಬಾಯಿ ಬಿಟ್ತಂತ
ಕಪ್ಪಿ ವಟಗುಟ್ಟರ ಮಳೆ ಬಂತಂತ
ಚುಲು ಮನಸಿನಾಗ ಹುಳಿ ಹಿಂಡಿದಂತ
ನಾಳೆ ಅಂದವನ ಮನಿ ಹಾಳಂತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಮಾಯಜಾಲ