ನಲ್ನುಡಿ

ಶ್ರೀ ಸಾಮಾನ್ಯ

ಹಿರಿಯರೊಬ್ಬರು ಹೇಳಿದ ಮಾತು-

 

ಇತರರಿಗೆ ಉಪಯೋಗವಾಗದ ವಿಷಯಗಳನ್ನು ಮಾತನಾಡುವುದು,ತನಗೆ ಅಗತ್ಯವಲ್ಲದ ವಿಷಯಗಳನ್ನು ಕೇಳುವುದು ನಿನ್ನ ಕಾಲವನ್ನು ವ್ಯರ್ಥವಾಗಿಸುತ್ತದೆ.ಇವು ಬಹಳಷ್ಟು ಆನಂದವನ್ನು ಕೊಡುತ್ತ ನಿನ್ನನ್ನು ಸಾಮಾನ್ಯನನ್ನಾಗಿ ಮಾಡುತ್ತವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಏಕೆ ಓದಬೇಕು?

ತಮ್ಮದೇ ನುಡಿಗಳನು ಕೇಳಿ ನಲಿವರಿಗರೂ*
ಪರರ ಕವಿತೆಗಳನೂ ಓದಿ ಸಂತೋಷಿಪರು
ಹೂಗಳಲೆ ಜೇನು ತುಂಬಿರುವ ಮಾವಿನ ಮರವು
ಕೊಡತುಂಬ ನೀರುಣಿಸ ಬಯಸದೇನು?

ಸಂಸ್ಕೃತ ಮೂಲ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹನಿಹನಿಗೂಡಿದರೆ ಹಳ್ಳ

 ಈಚೆಗೆ ಒಂದು ಬ್ಲಾಗ್ ಬರಹವನ್ನೋದಿದಾಗ, ಅಲ್ಲೊಂದು ಟಿಪ್ಪಣಿ ಹಾಕಿದೆ. ಆಮೇಲೆ, ಆ ಟಿಪ್ಪಣಿ ಎಲ್ಲಕಾಲಕ್ಕೂ, ಎಲ್ಲ ದೇಶಕ್ಕೂ ಹೊಂದುವಂತಹದ್ದು ಎನ್ನಿಸಿ, ಅದನ್ನೇ ಇಲ್ಲಿ ಬರೆಯುತ್ತಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತನ್ನಂತೆ ಪರರು

ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದಡೆ ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ!

ಸರ್ವಜ್ಞನ ಈ ವಚನ ಬಹಳ ಜನರಿಗೆ ತಿಳಿದದ್ದೇ. ಆದರೆ ತನ್ನಂತೆ ಪರರು ಎಂದು ಬಗೆಯುವುದರಲ್ಲಿ ಮಾತ್ರ ಸ್ವಲ್ಪ ಹಿಂದೇಟು ಹಾಕುತ್ತೇವಷ್ಟೇ!

ಈ ರೀತಿ ಒಳ್ಳೆಯ ಮಾತುಗಳು ಎಲ್ಲಾ ಭಾಷೆಗಳಲ್ಲಿಯೂ ಬಂದಿರುವಂತಹವೇ. ಹೇಳುವ ಪರಿಯಲ್ಲಿ ತುಸು ವ್ಯತ್ಯಯವಿರಬಹುದಷ್ಟೇ. ಇವತ್ತು ಬೆಳಗ್ಗೆ ಸಂವೇದನೆ ಕಾರ್ಯಕ್ರಮದಲ್ಲಿ (ಉದಯ ಟಿವಿ) ಈಶ್ವರ ದೈತೋಟ ಅವರು ಮತ್ತೂರು ಕೃಷ್ಣಮೂರ್ತಿ ಅವರೊಡನೆ ಮಾತಾಡುತ್ತಿದ್ದರು. ಆಗ ಕೃಷ್ಣಮೂರ್ತಿ ಅವರು ಹೇಳಿದ ಒಂದು ಸುಭಾಷಿತಕ್ಕೂ, ಸರ್ವಜ್ಞನ ವಚನಕ್ಕೂ ಇರುವ ಹೋಲಿಕೆ ಕಂಡು ಬರೆಯೋಣವೆನ್ನಿಸಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ನಲ್ನುಡಿ