ಟ್ರಾಫಿಕ್

ತರಚು ಗಾಯ

ಬೈಕ್‍ನಲ್ಲಿ ಹೋಗುವಾಗ
ಕಾಲಿಗೆ
ತರಚು ಗಾಯವಾಯ್ತೆಂದು
ತನಗೆ ತಗುಲಿಸಿದ
ಟಾಕ್ಸಿ ಡ್ರೈವರ್ ಜೊತೆ
ರಸ್ತೆ ಮಧ್ಯೆ
ವಾಗ್ವಾದಕ್ಕಿಳಿದ
ಟಪೋರಿಗೆ
ಒಂದು ಕಿಲೋಮೀಟರ್ ಉದ್ದದ

ಟ್ರಾಫಿಕ್ ಜ್ಯಾಮ್ ಹಿಂದೆ
ಆಂಬುಲೆನ್ಸ್‍ನಲ್ಲಿದ್ದ
ಪ್ರಾಣಪಕ್ಷಿ
ಹಾರಿಹೋಯ್ತೆಂಬ ಅರಿವಿರಲಿಲ್ಲ...

--ಶ್ರೀ
(೬-ಫೆಬ್ರವರಿ-೨೦೧೧)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಬನ್ನಿ, ಕಳೆದುಹೋದ ಬೆಂಗಳೂರನ್ನು ಹುಡುಕೋಣ

ಏಷ್ಯದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿರುವ ಬೆಂಗಳೂರು ತನ್ನ ಬೆಳವಣಿಗೆಯ ಜೊತೆಗೇ ಮಾಲಿನ್ಯ, ರಸ್ತೆ ಅಪಘಾತಗಳು ಇವನ್ನೂ ತರುತ್ತಿದೆ. ನಮ್ಮ ತೆರಿಗೆಯಿಂದ ಬಂದ ಕೋಟ್ಯಂತರ ರುಪಾಯಿಗಳನ್ನು ವ್ಯಯಿಸಿ ಮಾಡಿದ ಪ್ಲೈ ಒವರ್ ಗಳಾಗಲೀ, ರಸ್ತೆ ಅಗಲೀಕರಣವಾಗಲೀ, ಬಸ್ಸುಗಳಾಗಲೀ ನಮ್ಮ ಪ್ರಯಾಣದ ಸಮಯವನ್ನು ಕಮ್ಮಿ ಮಾಡಿಲ್ಲ. ಅಪಘಾತಗಳಂತೂ ದಿನನಿತ್ಯದ ಸುದ್ದಿಯಾಗಿಬಿಟ್ಟಿದೆ. ಪಿಂಚಣಿದಾರರ ಸ್ವರ್ಗ, ಉದ್ಯಾನ ನಗರಿ ಬೆಂಗಳೂರು ಎಲ್ಲಿ ಕಳೆದು ಹೋಯಿತು?ಇದೇ ರೀತಿ ಮುಂದುವರಿದರೆ ಬೆಂಗಳೂರಿನ ಭವಿಶ್ಯವೇನು?

ಇವೆಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಸಮಯ ಈಗ ಒದಗಿ ಬಂದಿದೆ.
ಬೆಂಗಳೂರನ್ನು ಕಾಡುತ್ತಿರುವ ಟ್ರಾಫಿಕ್ ಸಮಸ್ಯೆಯ ಮತ್ತು ಅದರ ಪರಿಹಾರಗಳ ಬಗ್ಗೆ ಅಧಿಕಾರಿಗಳು ಮತ್ತು ಪ್ರಜೆಗಳ ನಡುವೆ ಮುಕ್ತ ಸಂವಾದವನ್ನು ನವೆಂಬರ್ ೨೧ರಂದು IISCಯ ಸುವರ್ಣ ಮಹೋತ್ಸವ ಸೆಮಿನಾರ್ ಹಾಲ್ ನಲ್ಲಿ ಏರ್ಪಡಿಸಲಾಗುತ್ತಿದೆ. ಮೊಬಿಲಿಸಿಟಿ ಎಂಬ ಈ ಮುಕ್ತ  unfonference ಅಥವಾ barcampನಲ್ಲಿ ಭಾಗವಹಿಸಲು ಸಂಪದದ ಬಳಗದ ನಿಮಗೆಲ್ಲರಿಗೂ ಸ್ವಾಗತ.
ಈ ಸಂವಾದವು ಪ್ರಜಾ ಮತ್ತು IISCಯ CIsTUP ನ ಸಯಯೋಗದಲ್ಲಿ ನಡೆಯುತ್ತಿದೆ. ಇಂಗ್ಲೀಶಿನ ಆಹ್ವಾನ ಪತ್ರಿಕೆ ಕೆಳಗೆ ಇದೆ. ಹೆಚ್ಚಿನ ಮಾಹಿತಿಗಾಗಿ http://mobilicity.praja.in/ ಗೆ ಭೇಟಿ ಕೊಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಸ್ತೆಗಿಂತ platform ಚೆಂದ

ಅಕ್ಕಪಕ್ಕದ ಬಸ್ಸು ಕಾರು ಮೋಟರ್ ಸೈಕಲ್ಲುಗಳ ಹೊಗೆ ಕುಡಿಯುತ್ತ ಫ್ಲೈ ಓವರ್ ಹತ್ತಿದ ಮೋಟರ್ ಸೈಕಲ್ ಸವಾರನಿಗೆ ಕಂಡದ್ದು ಸ್ನೇಹಿತರೊಬ್ಬರು ನೆನಪಿಸಿದ್ದ 8th wonder. ಸರಿಯಾಗಿ ಫ್ಲೈ ಓವರ್ ಮಧ್ಯದಲ್ಲೊಂದು ಸಿಗ್ನಲ್ - ಎಲ್ಲುಂಟು ಎಲ್ಲಿಲ್ಲ?
ಆಗಲೇ ಸಿಗ್ನಲ್ಲಿಗೆ ಮತ್ತೊಂದು ಹೆಸರಿಡಬೇಕಾಗಿತ್ತು ಅನ್ನಿಸಿದ್ದು - ಹೊಗೆ ಕುಡಿಸುವ ಕೇಂದ್ರ ಎಂಬುದಾಗಿ. ಸಿಗ್ನಲ್ ಬಂದರೆ ಸಾಕು ನಿಂತ ಜಾಗದಿಂದ ಕದಲಲು ಆಗದೆ ಬಲವಂತವಾಗಿ ಹೊಗೆ ಕುಡಿಯಬೇಕು ಎಂದು ಗೊಣಗಿಕೊಂಡ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಟ್ರಾಫಿಕ್