ಪರಿಸರ

ತೇಜಸ್ವಿ ಅವರ "ಪರಿಸರದ ಕತೆ"

 


ಕನ್ನಡದ ಸಾರ್ವಕಾಲಿಕ ಶ್ರೇಷ್ಟ ಪುಸ್ತಕಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರ "ಪರಿಸರದ ಕತೆ"ಯೂ ಒಂದು ಎನ್ನಲು ಯಾವುದೇ ಹಿಂಜರಿಕೆ ಬೇಡ ಅನ್ನಿಸುತ್ತದೆ. ಪರಿಸರದ ಮೇಲೆ ಸ್ವಲ್ಪವಾದರೂ ಆಸಕ್ತಿ ಇರುವವರಿಗಂತೂ, ಈ ಪುಸ್ತಕವನ್ನು ಎಷ್ಟು ಬಾರಿ ಓದಿದರೂ ತೃಪ್ತಿ ಸಿಗಲಾರದು. ಅಥವಾ ನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ಪುಸ್ತಕದಲ್ಲಿ ತೇಜಸ್ವಿಯವರು ಗುರುತಿಸಿ, ದಾಖಲಿಸಿರುವ ಪರಿಸರದ ವ್ಯಾಪಾರಗಳನ್ನು ಎಷ್ಟು ಬಾರಿ ಓದಿದರೂ ಬೇಸರವಾಗದು. ಬದಲಿಗೆ ಒಂದೊಂದು ಹೊಸ ಓದಿನಲ್ಲೂ, ಹೊಸ ಹೊಸ ಅರ್ಥಗಳು ಸ್ಪುರಿಸುವಂತಹ ಸಂದರ್ಭ ಈ ಪುಸ್ತಕದ ಓದಿನಲ್ಲಿ ಎದುರಾದೀತು.


ಮೂಲತ: ವಾರಕ್ಕೊಮ್ಮೆ ಬರೆದ ಲೇಖನಗಳ ಸಂಗ್ರಹವೇ "ಪರಿಸರದ ಕತೆ". ಇದರಲ್ಲಿ ಹಲವು ಬರಹಗಳು "ಲಂಕೇಶ್ ಪತ್ರಿಕೆ" ಯಲ್ಲಿ ಆಗಾಗ ಪ್ರಕಟವಾದವುಗಳು. ಆದ್ದರಿಂದಲೇ ಇರಬಹುದು, ಒಂದಕ್ಕೊಂದು ಅಷ್ಟೇನೂ ಸಂಬಂಧ ಹೊಂದಿರದ ಬಿಡಿ ಬರಹಗಳ ಸ್ವರೂಪ ಇಲ್ಲಿನ ಬರಹಗಳಿಗಿದೆ. ಆದರೆ, ಪರಿಸರದ ದೃಷ್ಟಿಯಿಂದ ನೋಡಿದರೆ, ಎಲ್ಲವೂ ಒಂದು ಹಂದರದೊಳಗೆ ಅಡಕವಾಗುವ ಗುಣವನ್ನು ಹೊಂದಿವೆ ಇಲ್ಲಿನ ಬರಹಗಳು. ಯಾವುದಕ್ಕೂ ಸಂಬಂಧಪಡದಂತೆ ಕಾಣುವ, ಅನುಭವ ಕಥನದ ರೂಪದಲ್ಲಿರುವ "ಕಿವಿಯೊಡನೆ ಒಂದು ದಿನ" ಲೇಖನವನ್ನೇ ತೆಗೆದುಕೊಳ್ಳಿ. ತನ್ನ ನಾಯಿಯಾದ "ಕಿವಿ"ಯ ಜೊತೆ ಲೇಖಕರು ಒಂದು ದಿನ ಕಳೆದ ಅನುಭವದ ವಿವರಗಳು ಅಲ್ಲಿವೆ. ಗೆಳೆಯರೊಡನೆ ನಡೆಸಿದ ಹಂದಿಬೇಟೆಯ ವಿವರಗಳೇ ಈ ಲೇಖನದ ತಿರುಳು. ಕಿವಿ ಎಂಬ ನಾಯಿಯನ್ನು ಮನುಷ್ಯನಿಗೆ ಸಮಾನವಾಗಿ ಪರಿಗಣಿಸುವ ವಿಚಾರ ಇಲ್ಲಿ ಮುಖ್ಯವಾಗಿ ಕಾಣಬರುತ್ತದೆ. ತೇಜಸ್ವಿಯವರು ಬೇರೊಂದು ಕಡೆ ಸಹಾ, ತನ್ನ ನಾಯಿಯನ್ನು ಮನುಷ್ಯನ ರೀತಿಯೇ ನೋಡುತ್ತಿದ್ದೆ ಎಂದು ಬರೆದುಕೊಂಡಿರುವರು. "ಹಂದಿಯನ್ನು ಹೊರಿಸಿದ್ದೇ ತಡ, ಶ್ರೀ ರಾಮ್ ಮತ್ತು ಕಿವಿ ಇಬ್ಬರೂ ಮಾಯವಾದರು. . . . . ನಾನು ವಾಪಸ್ ಹೋದಾಗ ದಾರಿಯಲ್ಲಿ ಕಿವಿ, ಶ್ರೀ ರಾಮ್ ಇಬ್ಬರೂ ಕಂಡರು. ಭೂತನ ಕಾಡು ತೋಟದ ಬೇಲಿ ಒಳಗೆ ಹಂದಿಯನ್ನು ಹೊತ್ತು ಹಾಕಿ, ಮರದ ನೆರಳಿನಲ್ಲಿ ನಿದ್ದೆ ಮಾಡುತ್ತಾ ಮಲಗಿದ್ದರು." ಇಲ್ಲಿ ಮನುಷ್ಯನನ್ನು ಮತ್ತು ಕಿವಿ ಎಂಬ ನಾಯಿಯನ್ನು ಸಂಬೋಧಿಸುವಾಗ ಸಮಾನರೀತಿಯಲ್ಲಿ ಪರಿಗಣಿಸಿದ್ದು ಸ್ಪಷ್ಟವಾಗಿ ಕಾಣುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕುಂಡದಲ್ಲೊಂದು ಗೂಡು ಕಟ್ಟಿ....

ಅಂದು ಭಾನುವಾರ (10-ಜುಲೈ-2005). ಬೆಳಿಗ್ಗೆ ತಡವಾಗಿ ಎದ್ದೆ. ಅಲ್ಲ ಎಚ್ಚರಿಸಿದ್ದು ಒಂದು ಪಕ್ಷಿಯ ಕೂಗು. ನಮ್ಮ ಮನೆಯ ತಾರಸಿಯಲ್ಲಿ ಎರಡು ಕೋಣೆಗಳಿವೆ ಹಾಗು ಬಟ್ಟೆ ಒಗೆಯಲು ಮತ್ತು ಒಣಗಿಸಲು ಸ್ವಲ್ಪ ತೆರೆದ ಜಾಗ. ಇಲ್ಲಿ ಹಲಾವಾರು ಗಿಡಗಳನ್ನು ಪಾಟ್ಗಳಲ್ಲಿ ಬೆಳೆಸಿದ್ದೇವೆ. ಆ ಕೂಗು ಬಂದಿದ್ದು ಅದೇ ಜಾಗದಿಂದ. ತಕ್ಷಣವೆ ಎದ್ದು ಹೋಗಿ ಕಿಟಕಿಯಿಂದ ಇಣುಕಿ ನೋಡಿದೆ. ಅಲ್ಲಿ ಕುಳಿತಿತ್ತು ಆ ಪಕ್ಷಿ. ಮೆಟ್ಟಿಲುಗಳ ಮೇಲಿದ್ದ ಒಂದು ಹಳೆಯ ಬಟ್ಟೆಯಿಂದ, ದಾರವೊಂದನ್ನು ತೆಗೆಯಲು ಯತ್ನಿಸುತಿತ್ತು. ಆಗಲೆ ನನಗೆ ಹೊಳೆಯಿತು ಈ ಪಕ್ಷಿ ಎಲ್ಲೋ ಗೂಡು ಕಟ್ಟುತ್ತಿದೆಯೆಂದು. ತುಂಬಾ ಪ್ರಯಾಸ ಪಟ್ಟು ಹೇಗೊ ಒಂದು ಎಳೆಯನ್ನು ಹೊರಗೆಳೆದ ಪಕ್ಷಿ, ನಾನಿದ್ದ ಕಿಟಕಿಯದುರಿನ ಗಿಡವೊಂದಕ್ಕೆ ಪುರ್ರನೆ ಹಾರಿ, ಅಲ್ಲಿ ಏನನ್ನೊ ಮಾಡಿ ಮತ್ತೆ ಹಾರಿ ಹೊರಟು ಹೋಯಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಸು - ಕುರ್ಚಿಯ ಖಾದಿಗಳ ನಡುವೆಯೊಬ್ಬ...

 Jai Ram Ramesh            ಕುಮಾರಸ್ವಾಮಿ ಸರಕಾರವಿದ್ದಾಗ ರೇವಣ್ಣ,ಯಡ್ಯೂರಪ್ಪನವರ ಕಾಲದಲ್ಲಿ ಈಶ್ವರಪ್ಪ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವಿನಾಶಕಾಲೇ...

ಮತ್ತೊಂದು ಭೂಕಂಪ ಚಿಲಿಯಲ್ಲಿ! ಮೊನ್ನೆಯ ಹೈಟಿ ಭೂಕಂಪದ ಪರಿಣಾಮಗಳಿಂದ ಸಾವರಿಸಿಕೊಳ್ಳುವ ಮುನ್ನವೇ ಮತ್ತೊಂದು ಭೂಕಂಪ. ಅಷ್ಟು ಸಾಲದು ಅಂತ ಸುನಾಮಿಯ ನಿರೀಕ್ಷೆ...ಇಂದು ಮಧ್ಯಾಹ್ನಕ್ಕೆ ಜಪಾನಿಗೆ ಅಪ್ಪಳಿಸುತ್ತದೆಯಂತೆ. ಸಾವಿರಗಟ್ಟಲೆ ಜನರನ್ನು ಸ್ಥಳಾಂತರಿಸುತ್ತಿದ್ದಾರೆ. ಇನ್ನೂ ಎಷ್ಟಿದೆಯೋ ಇಂತದ್ದು...

 

ಆದರೆ ನಮ್ಮ ಸರ್ಕಾರಗಳಿಗೆ ಮಾತ್ರ ಚಿಂತೆಯೇ ಇಲ್ಲ. ಇರುವ ಅಲ್ಪ ಸ್ವಲ್ಪ ಅರಣ್ಯವನ್ನೂ ನಾಶ ಮಾಡಿ, ಭೂಮಿಯನ್ನು ಬಗೆದು ಅದಿರು ತೆಗೆಯುವ ಮಹತ್ತರ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇನ್ನು ಹೆಚ್ಚು ಅಗೆಯುವ-ಬಗೆಯುವ ಕೆಲಸವೇ ಬೇಡ...ಭೂಮಿಯೇ ಎಲ್ಲೆಡೆಯೂ ಬಾಯಿ ಬಿಡುತ್ತದೆ..ಆಪೋಶನ ತೆಗೆದುಕೊಳ್ಳುತ್ತದೆ ಬಿಡಿ. ಆಗ ಯಾವ ಅದಿರು, ವಜ್ರ, ಚಿನ್ನ ಬೇಕೋ ಒಳ ಹೋಗಿ ತೆಗೆದುಕೊಳ್ಳಿ...!

 

ಮಾನವನ ದುರಾಸೆಗೆ ಅಂತ್ಯವಿಲ್ಲ ಎಂದಿಲ್ಲ...ಆದರೆ ಅದು ಒಂದೇ ಬಾರಿ...!!!

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪಶ್ಚಿಮ ಘಟ್ಟದ ಸುತ್ತ..


"ಲಕ್ಷಾಂತರ ವರ್ಷದಲ್ಲಿ ರೂಪುಗೊಂಡ ಪಶ್ಚಿಮ ಘಟ್ಟವನ್ನು ಕೆಲವೇ ವರ್ಷಗಳಲ್ಲಿ ನಾಶಮಾಡಬಹುದು. ಆದರೆ ಮತ್ತೆ ಬೇಕೆಂದರೆ ಇದನ್ನೆಲ್ಲಾ ಸೃಷ್ಟಿಸಲು ಸಾಧ್ಯವಿದೆಯೇ?"


  ಸುಂದರಲಾಲ್ ಬಹುಗುಣ ಗುಂಡ್ಯ ಜಲವಿದ್ಯುತ್ ಯೋಜನೆ ವಿರೋದಿಸಿ ಹೇಳಿದ ಮಾತು, ವಿಜಯ ಕರ್ನಾಟಕದ(೨೨-೧೨-೦೯) ೧೩ನೇ ಪುಟದಲ್ಲಿತ್ತು.


ಇದನ್ನು ಮೊದಲ ಪುಟದಲ್ಲಿ ಹಾಕಿ, ವಿಧಾನ ಪರಿಷತ್ ಕಸರತ್ ರಿಸಲ್ಟನ್ನು ೧೪ನೇ ಪುಟದಲ್ಲಿ ಹಾಕಬೇಕಿತ್ತು.


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತಗೋಬೇಕು ಟಿಕೇಟು

ಉದ್ಯಾನ ನಗರಿ ಬೆಂಗಳೂರು,
ಇಲ್ಲಿ  ಹೈದರಾಲಿ ಕಟ್ಸಿದ್ ಲಾಲ್ಬಾಗು
ಕಬ್ಬನ್   ಸಾಹೇಬ್ರ ಹೆಸ್ರಲ್ಲೊಂದು  ಪಾರ್ಕು.
ತಣ್ಣಗಿರಲಿ ಅಂತ ಬೆಂಗ್ಳೂರು
ಮಾಡಿಟ್ಟು ಹೋದ್ರು  ದೊಡ್ಡೋರು 
ಕೆಲ್ಸ ಸಿಕ್ಕದ್  ಕೆಲ್ಸದೋರು,
ಪ್ರೇಮಿ ಕಳ್ಕೊಂಡ್ ವಿರಹಿಗಳು,
ಬೈಸಿಕೊಂಡ್  ಮನೆ ಬಿಟ್ ಓಡ್ ಬಂದೋರು,
ಕಾಸಿಲ್ಲದೆ  ಬಿದ್ರೂ ಬೆಂಗಳೂರು,
ತಂಪಾಗ್ ಮಲ್ಗಕ್ಕೆ  ಇತ್ತು  ಪಾರ್ಕುಗಳು.
ಕೋಳೀಕೆ    ರಂಗ   ಬಂದಿದ್ದ
ಲಾಲ್ಬಾಗ್ ತೋಟದಲ್   ನಡ್ದಿದ್ದ
ಹುಲಿ ಕಂಡ್ ಬೆಕ್ಕಂತ ತಿಳಿದಿದ್ದ.
ಐಟಿ, ಬಿಟಿ    ಬಂತಂತೆ
ಬೆಂಗಳೂರು  ಬೆಳೀತಂತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಧರೆಯ ಕರೆ

ಮಾತೆಯೆ೦ದು ಮಾತಿನಲ್ಲಿ ನೀವು ನನ್ನ ಕರೆವಿರಿ
ಮರುಕ್ಷಣದಲಿ ನನಗೆ ಜೀವವಿರುವುದ ಮರೆವಿರಿ
ಹಣದ ಮೋಹದಿ೦ದ ನನ್ನ ಒಡಲನ್ನೇ ಬಗೆವಿರಿ
ನಾ ತೊಟ್ಟ ಹಸಿರು ಉಡುಗೆಯ ಕಿತ್ತು ಬಿಸುಟಿರಿ
ನನ್ನ ನರನಾಡಿ ನದಿಗಳನ್ನು ಮಲಿನಗೊಳಿಸಿದಿರಿ
ಸೂರ್ಯನಿ೦ದ ನನ್ನ ರಕ್ಷಿಸಿದ್ದ ಸೂರಿಗೆ ಕನ್ನ ಕೊರೆದಿರಿ

ಬರಿ ಮಾತಲಿ ಮಾತೆಯ ಪಟ್ಟ ಕಟ್ಟದಿರಿ
ನನಗೂ ಜೀವವಿರುವುದ ನೆನೆಯಿರಿ
ಹಸಿರು ಉಡುಗೆಯ ಮತ್ತೆ ನನಗೆ ತೊಡಿಸಿರಿ
ಲೋಭವನ್ನು ತೊರೆಯಿರಿ ಮಾಲಿನ್ಯವ ಅಳಿಸಿರಿ
ನಿಜ ಅರ್ಥದಲಿ ಈ ಮಾತೆಯನ್ನು ಗೌರವಿಸಿರಿ
ನೀವೆಲ್ಲ ಸುಖದಿ೦ದ ಬಾಳಿರಿ
-amg

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರ ಉಳಿಸಿ, ಮೆಟ್ರೋ ಕಳಿಸಿ

ಗಾರ್ಡನ್ ಸಿಟಿನಾ.... ? ಮೆಟ್ರೋ ಸಿಟಿನಾ......??

 ನೆನ್ನೆ ಸಂಜೆ ಇದನ್ನ ಕೇಳೇ ಬಿಡೋಣ ಅಂತ ಹೊರಟಿದ್ದು ಲಾಲ್-ಭಾಗ್ ಗೆ.  ಅಲ್ಲಿ ಜೇಸ್ ತೆಗೆದ ಕೆಲವು ಚಿತ್ರ ಚಿತ್ರಗಳು ಈ ಕೊಂಡಿಯಲ್ಲಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗಾರ್ಡನ್ ಸಿಟಿನಾ.... ? ಮೆಟ್ರೋ ಸಿಟಿನಾ......??

ನಮಸ್ಕಾರ ಸ್ನೇಹಿತರೇ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಈ ಸಲ ನಿಮ್ಮ ಮತ ಭೂತಾಯಿಗಿರಲಿ,

ಅದ್ಯಾರು ಡೆಮಾಕ್ರಸಿ ಅಂತ ಮಾಡಿದರೋ ಪುಣ್ಯಾತ್ಮರು, ನಮ್ಮ ಜನ ಎಲ್ಲದಕ್ಕೂ ಮತ ಕೇಳಲು
ಆರಂಭಿಸಿಬಿಟ್ಟಿದ್ದಾರೆ. ರಿಯಾಲಿಟಿ ಶೋಗಳಂತೂ ಮತ ಚಲಾವಣೆ ಇಲ್ಲದೆ ನಡೆಯುವುದೇ ಇಲ್ಲ.
ಇನ್ನು ಮ್ಯೂಸಿಕ್ ಚಾನಲ್ ಗಳು, ನಿಮಗೆ ಬೇಕಾದ ಹಾಡಿಗೆ ತಕ್ಷಣ ಮತ ಚಲಾಯಿಸಿ, ಮರುಕ್ಷಣ
ಹಾಡು ಕೇಳಿ ಎಂದು ರೇಡಿಯೋನಲ್ಲಿ ಟಿ.ವಿ ನಲ್ಲಿ ಕಿರುಚುತ್ತಿವೆ. ಒಟ್ಟಿನಲ್ಲಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಸಂಪದ ಮಿತ್ರರೇ ಗಮನಿಸಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ,

ಆದ್ದರಿಂದ ಎಲ್ಲೂ ಸಹ ತ್ಯಾಜ್ಯ ವಸ್ತುಗಳನ್ನು ಬಿಸಾಡದಿರಿ,

ಪ್ಲಾಸ್ಟಿಕನ್ನು ಬಳಸದಿರಿ,

ಮರುಬಳಕೆ ಮಾಡುವಂತಹ ವಸ್ತುಗಳನ್ನು ಹೆಚ್ಚಾಗಿ ಬಳಸಿ,

ಪರಿಸರ ರಕ್ಷಿಸಿ...........

 

ಇದು ಯಾಕೆ ಈ ತರ ಬರಿದಿದ್ದೇನೆ ಅಂತ ಭಾವಿಸ್ತಾ ಇದ್ದೀರಾ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (17 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರಗಳು ಧರೆಗೆ ಉರುಳುವುದೋ? ಹಸಿರು ಕಂಗಳಿಸುವುದೋ??

ಕಳೆದ ಕೆಲವು ದಿನಗಳಿಂದ, ಮೇಖ್ರಿ ವೃತ್ತದಿಂದ ಟಿ.ವಿ.ಗೋಪುರಕ್ಕೆ ಮುಟ್ಟುವ ದಾರಿಯನ್ನು ಅಗಲಿಸುವ ಕೆಲಸ ಶುರು ಮಾಡಿದ್ದಾರೆ ಎಂದು ಕಾಣುತ್ತದೆ. ಇಲ್ಲಿಯವರೆಗೂ, ರಸ್ತೆಯ ಪಕ್ಕದ ಜಾಗದಲ್ಲಿ ಪಾದಚಾರಿಗಳಿಗೆಂದು ಸುಮಾರು ಅಗಲವಾದ ಜಾಗವನ್ನೇ ಬಿಟ್ಟಿದ್ದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಆ ಮರ !

ವರ್ಷಗಳ ಹಿಂದೆ ನೆಟ್ಟಿದ್ದ ಗಿಡ
ಇವತ್ತು ಮರ

ಅಕ್ಕರೆಯಿಂದ ನೀರೆರೆದು, ಬೇಲಿ ಹಾಕಿ
ಅದಕ್ಕೊಂದು ಬೋರ್ಡು ಬಿಗಿದು
ಬೀಗಿದ್ದರು

ನಿತ್ಯ ಕಣ್ಣಾಡಿಸಿ, ನೀರು ಹನಿಸಿ
ಮೇಯಲು ಬಂದ ಪಶುಗಳ ಓಡಿಸಿ
ಕಾಯ್ದಿದ್ದರು

ಗಿಡ ಮರವಾಯಿತು
ರಸ್ತೆ ಪಕ್ಕ ಸಮೃದ್ಧವಾಯಿತು
ಕತ್ತೆತ್ತಿ ವಿದ್ಯುತ್‌ ತಂತಿ
ನೆಕ್ಕಲು ಹೊರಟಿತು

ತೋಳಗಲಿಸಿ ಬೆಳೆದು
ರಸ್ತೆಯ ಮೇಲೆ ಇಣುಕಲು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎಳನೀರು ಮಾರುವವರ ಸಾಮಾಜಿಕ ಕಳಕಳಿ

ಎಳನೀರು ಮಾರುವವರ ಸಾಮಾಜಿಕ ಕಳಕಳಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪರಿಸರ ರಕ್ಷಣೆ: ಗಾಂಧೀಜಿ ಚಿಂತನೆ

ಅಭಿವೃದ್ಧಿ
ಸಾಧಿಸುವ ಭರದಲ್ಲಿ ಪರಿಸರ ನಾಶವಾಗುತ್ತಲೇ ಇದೆ. ಹೀಗಾಗಿ ಇವತ್ತು ಪರಿಸರ ಸಂರಕ್ಷಣೆ ಒಂದು ದೊಡ್ಡ
ಸವಾಲಾಗಿ ಪರಿಣಮಿಸಿದೆ. ಮಹಾತ್ಮ ಗಾಂಧೀಜಿ ಅವರು ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಇಂದಿಗೂ
ಪ್ರಸ್ತುತವಾದವರು. ಪರಿಸರದ ಬಗೆಗಿನ ಗಾಂಧೀಜಿಯವರ ಕಾಳಜಿ ಅನುಕರಣೀಯ, ಅಷ್ಟೇ ಅಲ್ಲ ಸಮಸ್ಯೆಗೆ
ಸುಲಭ ಪರಿಹಾರ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೂಗು... ಎನ್ನ ಮನುಕುಲಕೆ!!!

ಚಂದಿನ
ಕೂಗು... ಎನ್ನ ಮನುಕುಲಕೆ!!!
www.koogu.blogspot.com

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಪರಿಸರ