ಹಾಗೆ ಸುಮ್ಮನೆ

ವಿದಾಯ !!!

ಆಗಸದಲ್ಲಿ ಮೋಡ ಮುಚ್ಚಿತ್ತು !!!
ನನ್ನ ಕಣ್ಗಳು ಕಂಬನಿಯಿಂದ ಮಂಜಾಗಿತ್ತು.
ಮನಸಿನ ಭಾವಕ್ಕೆ ಬಾನು ಕನ್ನಡಿ ಹಿಡಿದಂತಿತ್ತು.

ಮಳೆ ಜೊತೆ ಕಣ್ಣೀರು ಕೂಡ ಧಾರೆಯಾಗಿ ಹರಿದಿತ್ತು.
ಮೋಡಕ್ಕೂ ದುಃಖ ಆಗಿತ್ತೇನೋ ?? ಅಥವಾ ನನ್ನ ಕಣ್ಣೀರಿಗೆ ಉತ್ತರವಾಗಿತ್ತೋ ??

ಮನಸ್ಸಿನ ಪುಟಗಳಲ್ಲಿ ನಿನ್ನ ನೆನಪುಗಳನ್ನು ಮೆಲುಕುಹಾಕುತ್ತಿದ್ದೆ. ದುಃಖ ಮತ್ತೆ ಮತ್ತೆ ಒತ್ತರಿಸಿ ಬಂದಿತ್ತು.

ನನ್ನ ಪ್ರೀತಿಯಾಳನ ಹೇಗೆ ಅಳೆದು ತೋರಿಸಲಿ ನಿನಗೆ ??
ಆಕಾಶ ನೋಡು ಎಷ್ಟು ವಿಶಾಲವಾಗಿದೆ !!! ನನ್ನ ಪ್ರೀತಿನೂ ಕೂಡ ಅಷ್ಟೇ ಅನಂತವಾಗಿದೆ.
ನಿನಗೆ ಇದನ್ನ ಹೇಗೆ ತಿಳಿಹೇಳಲಿ???
ನಿನಗೇನು ತಿಳಿಯದೇ ಇಲ್ಲ. ಆದರೂ ಮೌನವಾಗಿದ್ದೀಯ......

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಿಮಗೂ ಹೀಗೆ ಅನ್ನಿಸುತ್ತ?

                 " ಹಿಡ್ಕೊಂಡು ೨ ಬಾರಿಸಬೇಕು " , " ಎಷ್ಟು ಉರಿಸ್ತಾಳೆ ನೋಡು " , ಪಾಪ ಈಗ ಏನ್ ಮಾಡ್ತಾಳೋ , ......... ಹೀಗೆ ಈ ಮೆಗಾ ಧಾರವಾಹಿ ನೋಡುವವರ ಗೋಳು ನೋಡೋಕಾಗೋಲ್ಲ ಹಾಗಿರುತ್ತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪಟ್ಟಿ ಬೆಳೆಯುತ್ತಲೇ ಇದೆ ವರ್ಷದಿಂದ ವರ್ಷಕ್ಕೆ

ನಾಳೆ ಏನಾದರಾಗಲಿ ವಾಚ್‍ಮೆನ್ನ ಕರೆದು ಬಾಲ್ಕನಿ ಕ್ಲೀನ್ ಮಾಡಿಸಬೇಕು. ಈ ಭಾನುವಾರ  ತಲೆ ಮೇಲೆ ಆಕಾಶ ಬೀಳಲಿ ಬಟ್ಟೆ ಜೋಡಿಸಿಡಬೇಕು.  ಸೇವಂತಿಗೆ ಗಿಡದ ಸುತ್ತಾ ಇರುವ ಕಳೆ ಕೀಳಬೇಕು.ನಾಳೆಯಿಂದ ವಾಕ್ ಮಾಡಬೇಕು. ಯಶಿತಾನ ಕರಾಟೆ ಕ್ಲಾಸಿಗೆ ಸೇರಿಸಬೇಕು


ಹೀಗೆಲ್ಲ ಹತ್ತು ಹಲವು ಪುಟ್ಟ ಹೆಚ್ಚು ಸಮಯ ಬೇಡದ ಕೆಲಸಗಳ್ ಪಟ್ಟಿ ಮಾಡಿ ಒಂದು ವರ್ಷವಾಗುತ್ತಾ ಬಂದಿದೆ. 2008ರ ಕೊನೆಯಲ್ಲಿ 2007 ರ ಬಾಕಿ ಪಟ್ಟಿಗಳ ಜೊತೆಗೆ 2009ರ ಡೈರಿಯಲ್ಲಿ  ಬರೆದಿಟ್ಟುಕೊಂಡದ್ದು . ಇನ್ನೂ ಒಂದುಕೆಲಸವೂ ಮುಂದ್ಸಾಗುತಿಲ್ಲ. ಯಾವುದಕ್ಕೂ ಟಿಕ್ ಮಾಡಿಲ್ಲ


ಬಾಲ್ಕನಿಯಲ್ಲಿನ ಗಲೀಜು ಹಾಗೆ ಇದೆ . ಬಟ್ಟೆ ಇನ್ನಷ್ಟು ಹರಡಿದೆ. ಸೇವಂತಿಗೆಯ ಸುತ್ತಾ ಕಳೆಗಳು ತುಂಬ ಗಿಡವೇಕಾಣದಂತಾಗಿವೆ. ವಾಕರನಲ್ಲಿ ವಾಕ್ ಮಾಡುವುದಿರಲಿ  ಅದನ್ನು ಕ್ಲೀನ್ ಸಹಾ ಮಾಡಿಲ್ಲ. ಇನ್ನು ಯಶಿತಾ ಕರಾಟೆ ಕ್ಲಾಸಿಗೆ ಅಡ್ಮಿಷನ್ ಮಾಡಿಸಿಲ್ಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಾಗೆ ಒಮ್ಮೆ,- 2

ಮಾತು ಮೌನದ ಮೆರವಣೆಗೆ,
ಮಾತಿನೊಂದಿಗೆ ಮೌನದ ಮೆರವಣೆಗೆ
ಮಾತಿನ ಮೇಲೆ ಮೌನದ ಸವಾರಿ
ಬೆಳ್ಳಿಯ ಮೇಲೆ ಬಂಗಾರದ ಸವಾರಿ
ಮಾತು ಮುಗಿಯಲಿಲ್ಲ, ಮೌನ ಹರಿಯಲಿಲ್ಲ,
ಮಾತು ಎಂದಿದ್ದರು ಮಾತೇ
ಮಾತಿನ ಮೇಲೆ ಮೌನದ ಸವಾರಿ,
ಮಾತಿನ ಮೇಲೆ ಮೌನದ ಸವಾರಿ.
******************************

ಕನಸುಗಳವು ನಿನ್ನವು ನನಸಾಗಿಸದಿರಲಿ ಹೇಗೆ ?
ಕಣ್ಣುಗಳವು ನಿನ್ನವು ಕಣ್ಣರೆಪ್ಪೆ ನಾನಾಗದಿರಲಿ ಹೇಗೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಾಗೆ ಒಮ್ಮೆ-1

ಇರಲಿರಲಿ ಒಲವು
ಚಿತ್ತಾರದ ಚೆಲುವು
ಚಂದ್ರಮನ ಚಂದ್ರಿಕೆಯ
ಸವಿಸವಿಯ ನೆನಪು.
*************
ಮಾತು ಮುಗಿದು, ಮೌನವರಳಿ
ಹೇಳದೆ ಉಳಿದಿದ್ದೇನೋ,
ಮನದಲ್ಲೇ ಉಳಿಯಿತಲ್ಲ,
ಏನದು?

****************

ಚಂದ್ರನ ಚದುರಿಕೆಯ, ಕಮಲದ ಕಮರಿಕೆಯ
ಕಂಡು ಕನಲಲಿಲ್ಲ ಗೆಳತಿ ಮನವು,
ನಿನ್ನೊಂದು ಕಣ್ಣ ಬಿಂದುವಿಗೆ ಕಾರ್ಮೋಡದೆ ಸಿಡಿಲು ಸಿಡಿದಂತಾಯ್ತು,
ಏಕೆ ಮನವು ?

----------------
ಹಾರಿ ಹೋಗಿತ್ತು ಉಲ್ಕೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಸೋಮಾರಿಯೊಬ್ಬನ ಯುಗಾದಿಯ ಶುಭಾಶಯಗಳು

ಯುಗಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ


ಎಂಬ ಮಾತು ಕೇಳಿ ನಾನು

ಮತ್ತೆ ಹೊದ್ದು ಮಲಗಿದೆ

 

ಸಂಪದಿಗ ಮಿತ್ರರೆಲ್ಲರಿಗೆ ಸೋಮಾರಿಯೊಬ್ಬನ ಯುಗಾದಿಯ ಶುಭಾಕಾಂಕ್ಷೆಗಳು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾವು ಹುಡುಗಿಯರೇ ಹೀಗೆ ಮುಂದುವರೆದ ಭಾಗ

ಹುಡುಗರಾ ನೀವು ಸಿಕ್ಕಾಗ ದಾರಿಯಲಿ
ತಾಯಿ ಇದ್ದರೆ ನಮ್ಮೊಡನಲಿ
ನಗದಿದ್ದರೂ ,ಮಾತ ಆಡುತ್ತೇವೆ ಮನಸಿನಲಿ

ಮೆಚ್ಚುಗೆ ಕಾಣಬಯಸುತ್ತೇವೆ ನಿಮ್ಮ ಕಣ್ಣಲ್ಲಿ
ಕಂಡರೆ ಸಂತಸ ಮನದೂರಿನಲ್ಲಿ
ಬೀಳದಿದ್ದರೂ ಸರಿ ಪ್ರೀತಿ ಬಲೆಯಲಿ

ನಾವೇನು ಸ್ಥಿತ ಮನದವರಲ್ಲ್ಲ,
ನಿಮ್ಮನ್ನು ಕಂಡೂ ಕಾಣದ ಹಾಗೆ ದೂರವಿರಲು
ನಾವೇನು ಸನ್ಯಾಸಿನಿಯರಲ್ಲ ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನ ಹಾಗು ನನ್ನ ಮಗಳ ಮೊದಲ ಕದನ

ನೆನ್ನೆ ಭಾನುವಾರ ನನ್ನ ಮಗಳಿಗೆ ಡ್ಯಾನ್ಸ್ ಹೇಳಿಕೊಡ್ತಿದ್ದೆ, ಅವಳ ಸ್ಟೆಪ್ಸ್ ಸರಿಯಾಗಿ ಬರ್ತಾ ಇಲ್ಲ ಅಂತನ್ನಿಸಿ ಒಂದೆರೆಡು ಬಾರಿ ಹೇಳಿಕೊಟ್ಟೆ , ಕೊನೆಗೆ ಬೈದೆ. ಒಂದು ಹೊಡೆದೂ ಹೊಡೆದೆ.ಅವಳು ಅದೇ ತಾಳ ಅದೇ ರಾಗ
ಕೊನೆಗೆ " ನೋಡು ಹೀಗೆ ಮಾಡಿದರೆ ಪುಷ್ಪ(ಕೆಲಸದ ಹುಡುಗಿ)ಗೆ ಹೇಳಿಕೊಡ್ತೀನಿ " ಎಂದು ಹೆದರಿಸುತ್ತಿದೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೆನಪುಗಳು

ಕಣ್ಣ ಮುಚ್ಚುವುದಿಲ್ಲ, ಕನಸು ಕಾಣುವುದಿಲ್ಲ,
ತಂಗಾಳಿಯ ತಂಪನ್ನ ಸವಿಯುವುದಿಲ್ಲ,
ಹುಣ್ಣೆಮೆ ಚಂದ್ರನ ಎದುರಲ್ಲಿ ನಿಲ್ಲುವುದಿಲ್ಲ,
ನಡೆವಾಗ ಹೆಜ್ಜೆಯ ಸಪ್ಪಳ ಕೇಳುವುದಿಲ್ಲ,
ದೇವರನ್ನು ಕಣ್ಣಮುಚ್ಚಿ ಪ್ರಾರ್ಥಿಸುವುದಿಲ್ಲ,
................................................ಆದರೆ
ಹೇಗೆ ಗೆಳೆಯ ಉಸಿರಾಡುವುದ ನಿಲ್ಲಿಸಲಿ,

ಕಾಡಬೇಡ ಹೀಗೆ, ಬೇಡ ನಿನ್ನ ನೆನಪುಗಳ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನಸಾ,,,,,,,,,,,,,,,,

ಬಯಸಿದ್ದಲ್ಲ, ತಾನಾಗೆ ದೊರಕಿದ್ದು ,
ತಾನಾಗೆ ದೂರವಾಗೆ ಅಸಹಜತೆ ಎನಿಲ್ಲ,

ತನ್ನದಲ್ಲ, ತನ್ನದು ಆಗಿರಲಿಲ್ಲ,
ತನ್ನದಾಗೆ ಉಳಿಯುವ ಬಯಕೆಯನ್ನು ಕೊಟ್ಟಿರಲಿಲ್ಲ,

ನನ್ನವ ನೀ ನಾಗಲಾರೆ,
ಗೆಳೆಯನಾಗಿ ಬಯಸಿದ್ದೆ, ಇನಿಯನಾಗಲ್ಲ,

ಸ್ನೇಹ ಹಸ್ತವ ಚಾಚಿದ್ದೆ, ಪ್ರೇಮದ್ದಲ್ಲ,
ದೂರಾಗೆ ನೋವಾಗುವುದು ಸಹಜ,

ಈ ಬದುಕಲಿ ಎಲ್ಲ ನಿಜ ನಿಜ ನಿಜ ಅಷ್ಟೆ ಅಲ್ಲವ, ಗೆಳೆಯ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಂತೂ ಇಂತೂ ಥ್ರೆಡ್ ಮಿಲ್ ಬಂತು

ಹೋದ ತಿಂಗಳು ನೆಂಟರೊಬ್ಬರು ಬಂದಿದ್ದರು
"ರೂಪ ಬರ್ತಾ ಬರ್ತಾ ತುಂಬಾ ಗುಂಡು ಗುಂಡುಗೆ ಆಗ್ತಾ ಇರೋ ಹಾಗಿದೆ, ಸ್ವಲ್ಪ ಕೆಲಸ ಮಾಡ್ಬೇಕು" ಎಂದಿದ್ದರು ಅವರಿಗೆ ಅದು ಹೇಗೆ ನಾನು ಕೆಲಸ ಮಾಡುವುದಿಲ್ಲ ಎಂಬ ಅರಿವು ಉಂಟಾಯ್ತೋ ನಾ ಕಾಣೆ
ಅಮ್ಮ "ರೂಪ ಸ್ವಲ್ಪ ವಾಕ್ ಮಾಡು ದಪ್ಪ ಆಗ್ತಾ ಇದ್ದೀಯಾ " ಅಂತ ಆದೇಶಿಸಿದರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ

ಚಕ್ರವತ್ಪರಿವರ್ತಂತೇ ದು:ಖಾನಿ ಚ ಸುಖಾನಿ ಚ ಅನ್ನೋದು ಸಂಸ್ಕೃತದ ಪ್ರಸಿದ್ಧ ಮಾತು. ಅಂದರೆ, ಸೋವು ನಲಿವುಗಳೆರಡೂ ಚಕ್ರದಂತೆ ಮತ್ತೆ ಮತ್ತೆ ತಿರುಗಿ ತಿರುಗಿ ಮರಳಿ ಮರಳಿ ಬರುತ್ತಿರುತ್ತವೆ ಎಂದರ್ಥ. ಚಕ್ರದಂತೆ ಬರೋದು ಬರೀ ಸುಖದು:ಖಗಳು ಮಾತ್ರ ಅಲ್ಲ ಅನ್ನೋದು ಮಾತ್ರ, ಚಿಕ್ಕ ಮಕ್ಕಳಿಗೂ ಗೊತ್ತಿರೋ ಸಂಗತಿ. ಹಗಲು ರಾತ್ರಿಯ ಚಕ್ರಕ್ಕಿಂತ ಬೇಕೇ ಮರಳಿ ಮರಳಿ ಸುತ್ತುವ ಚಕ್ರ? ಅದೇ ರೀತಿ ಆಕಾಶದಲ್ಲಿ ಇನ್ನೊಂದು ಕಾಲಕಾಲಕ್ಕೆ ಮರಳಿ ಬರೋ ಚಕ್ರ ಇದೆ - ಆದರೆ ಇದು ಸಾಧಾರಣವಾಗಿ ಎಲ್ಲರಿಗೂ ತಿಳಿದಿರಲ್ಲ, ಅಷ್ಟೇ. ಇದೇ ಗ್ರಹಣ ಚಕ್ರ (Saros cycle- ಸೆರಾಸ್ ಚಕ್ರ. ಇದಕ್ಕೆ ನಮ್ಮ ದೇಶದಲ್ಲಿ, ನಮ್ಮ ಭಾಷೇಲಿ ಬೇರೆ ಹೆಸರಿದೆಯೋ ಇಲ್ಲವೋ ತಿಳಿಯದು. ಅದಕ್ಕೆ ಅರ್ಥ ಗೊತ್ತಾಗೋ ಹಾಗೆ ಗ್ರಹಣಚಕ್ರ ಅನ್ನೋ ಭಾವಾನುವಾದವನ್ನು ಮಾಡಿದೀನಿ. ತಪ್ಪಿದ್ದ್ರೆ ತಿದ್ದಿ! ತಿದ್ಕೋತೀನಿ.)

ಕೆಲವು ದಿನದ ಮೊದಲು ರಾಹು-ಕೇತು ಕಾಟ ಅಂತ ಸ್ವಲ್ಪ ಗಳಹಿದ್ದೆ.ಮತ್ತೆ ಇವತ್ತು ಅದನ್ನ ಮುಂದುವರ್ಸೋಣ ಅಂತ ..ಅಲ್ಲದೆ, ಗ್ರಹಣಚಕ್ರ ಅರ್ಥ ಆಗ್ಬೇಕಾರೆ ರಾಹು ಕೇತು ವಿಷ್ಯ ಸ್ಪಷ್ಟ ಆಗ್ಬೇಕು ಮೊದಲು.

ನಮಗೆಲ್ಲ ಸೂರ್ಯನ ಸುತ್ತ ಭೂಮಿ ಸುತ್ತೋದೂ, ಭೂಮಿ ಸುತ್ತ ಚಂದ್ರ ಸುತ್ತೋದೂ ಗೊತ್ತೇ ಇದೆ. ಆ ಮೇಲೆ, ಒಂದು ಕಾಕತಾಳೀಯವಾದ ಒಂದು ವಿಚಾರದಿಂದ ಗ್ರಹಣಗಳನ್ನು ನಾವು ನೋಡ್ತೀವಿ. ಅದೇನಂದ್ರೆ, ನಮಗೆ ಭೂಮಿಯಿಂದ ನೋಡೋವಾಗ ಸೂರ್ಯನ ಗಾತ್ರವೂ, ಚಂದ್ರನ ಗಾತ್ರವೂ ಸರಿಸುಮಾರು ಒಂದೇ. ಚಂದ್ರನಿಗಿಂದ ಸೂರ್ಯ ಸುಮಾರು ನಾನೂರರಷ್ಟು ದೊಡ್ಡವ್ನು. ಹಾಗೇ ಸುಮಾರು ನಾನೂರರಷ್ಟು ಹೆಚ್ಚು ದೂರ್ದಲ್ಲೂ ಇದಾನೆ. ಅದಕ್ಕೆ ನಮ್ಗೆ ಅಪರೂಪಕ್ಕಾದ್ರೂ ಪೂರ್ಣ ಸೂರ್ಯಗ್ರಹಣ ಕಾಣ್ಸುತ್ತೆ. ಹತ್ತು, ಇಪ್ಪತ್ತು ಚಂದ್ರಗಳಿರೋ ಗುರು, ಶನಿಗಳ ಮೇಲೆ ಈ ರೀತಿ ಗ್ರಹಣಗಳು ಕಾಣೋಲ್ಲ. ಗ್ರಹಣ ಸಾಧ್ಯವಾಗೋಕೆ ಬೇಕಾದ ಇನ್ನೊಂದು ವಿಷಯಏನೂಂದ್ರೆ, ಭೂಮಿ ಸೂರ್ಯನ ಸುತ್ತ ಸುತ್ತೋ ಪಾತಳೀನೂ,ಚಂದ್ರ ಭೂಮಿ ಸುತ್ತ ಸುತ್ತೋ ಸಮಪಾತಳೀನೂ ಸುಮಾರಾಗಿ ಒಂದೇ. ಹಾಗಾಗಿ, ಒಂದೊಂದು ಸಲ ಸೂರ್ಯ ಭೂಮಿ ನಡುವೆ ಚಂದ್ರನೂ, ಕೆಲವೊಮ್ಮೆ ಸೂರ್ಯ ಚಂದ್ರ ನಡುವೆ ಭೂಮಿಯೂ ಬರತ್ತೆ. ಆಗ ಒಂದರ ನೆರಳು ಒಂದರ ಮೇಲೆ ಬಿದ್ದು ಗ್ರಹಣ ಆಗತ್ತೆ. ಇದು ಬಿಡಿ, ಚಿಕ್ಚಿಕ್ ಮಕ್ಕಳ್ಗೂ ಗೊತ್ತಿರೋ ವಿಷ್ಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.7 (3 votes)
To prevent automated spam submissions leave this field empty.

ರಸ್ತೆಗಿಂತ platform ಚೆಂದ

ಅಕ್ಕಪಕ್ಕದ ಬಸ್ಸು ಕಾರು ಮೋಟರ್ ಸೈಕಲ್ಲುಗಳ ಹೊಗೆ ಕುಡಿಯುತ್ತ ಫ್ಲೈ ಓವರ್ ಹತ್ತಿದ ಮೋಟರ್ ಸೈಕಲ್ ಸವಾರನಿಗೆ ಕಂಡದ್ದು ಸ್ನೇಹಿತರೊಬ್ಬರು ನೆನಪಿಸಿದ್ದ 8th wonder. ಸರಿಯಾಗಿ ಫ್ಲೈ ಓವರ್ ಮಧ್ಯದಲ್ಲೊಂದು ಸಿಗ್ನಲ್ - ಎಲ್ಲುಂಟು ಎಲ್ಲಿಲ್ಲ?
ಆಗಲೇ ಸಿಗ್ನಲ್ಲಿಗೆ ಮತ್ತೊಂದು ಹೆಸರಿಡಬೇಕಾಗಿತ್ತು ಅನ್ನಿಸಿದ್ದು - ಹೊಗೆ ಕುಡಿಸುವ ಕೇಂದ್ರ ಎಂಬುದಾಗಿ. ಸಿಗ್ನಲ್ ಬಂದರೆ ಸಾಕು ನಿಂತ ಜಾಗದಿಂದ ಕದಲಲು ಆಗದೆ ಬಲವಂತವಾಗಿ ಹೊಗೆ ಕುಡಿಯಬೇಕು ಎಂದು ಗೊಣಗಿಕೊಂಡ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇದಲ್ಲವೇ ಬ್ಲಾಗ್?

ನಿತ್ಯ thoughts ಹಂಚಿಕೊಳ್ಳದೇ ಹೋದರೆ ಕರಗಿ ಅದು ಮರೆವಿನ ಸುಳಿಯಲ್ಲಿ ಕಳೆದುಹೋಗುವುದು.
ಅವನ್ನು ಲಾಗ್ ಮಾಡಲು ಅಲ್ಲವೇ ಇರೋದು ಈ ಬ್ಲಾಗ್?
ಸೀರಿಯಸ್ ಆಗಿ ರಿಸರ್ಚ್ ಮಾಡಿ ಬರೆದದ್ದು ಲೇಖನ; ನಿತ್ಯ ಬರೆಯೋಕೆ ಒಂದೆರಡು ಕನ್ನಡ ಪದ, ಇದು ಸಾಕು.
ಇಲ್ಲಿ ದಿನ ದಿನವೂ ಬರೆಯಲೇಬೇಕೆಂಬ obligation ಇಲ್ಲ, ವಾರಕ್ಕೊಮ್ಮೆ ಕಾಲಂ ಮುಗಿಸಬೇಕೆಂಬ tension ಇಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಹಾಗೆ ಸುಮ್ಮನೆ